WOMEN JOURNALIST RADHA HIRAGAUDER JOINES SPEED NEWS.. “ಸ್ಪೀಡ್‌ ನ್ಯೂಸ್‌” ಗೆ ರಾಧಾ ಹಿರೇಗೌಡರ್‌ ಸಾರ‍ಥ್ಯ..ಇಂದಿನಿಂದಲೇ “ರಾಧಾ ದರ್ಬಾರ್‌” ಶುರು..


ಕನ್ನಡದ ಖ್ಯಾತ ನಿರೂಪಕಿ ರಾಧಾ ಹಿರೇಗೌಡರ್‌
ಕನ್ನಡದ ಖ್ಯಾತ ನಿರೂಪಕಿ ರಾಧಾ ಹಿರೇಗೌಡರ್‌

ಕನ್ನಡ ಸುದ್ದಿ ವಾಹಿನಿಗಳಲ್ಲಿ ಜ್ಞಾಪಕದಲ್ಲಿಡಬಹುದಾದ ಬೆರಳೆಣಿಕೆಯ ನಿರೂಪಕರಲ್ಲಿ ರಾಧಾ ಹಿರೇಗೌಡರ್‌ ಮುಂಚೂಣಿಯಲ್ಲಿ ನಿಲ್ಲಬಲ್ಲಂಥ ತೂಕ ಇರುವಂತ ಪತ್ರಕರ್ತೆ.ಕೇವಲ ಅಂದ ಚೆಂದ ಎನ್ನೋದೇ ನಿರೂಪಕರ ಮಾನದಂಡವಾಗಿರುವ ಸನ್ನಿವೇಶದಲ್ಲಿ ಇದೆಲ್ಲಕ್ಕೂ ಅಪವಾದ ಎನ್ನುವಂತೆ ಸ್ವಯಂ ಪ್ರತಿಭೆ-ಸಾಮರ್ಥ್ಯ-ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದಿಡುವಂಥ ಮಾತುಗಾರಿಕೆ ಮೂಲಕ ಜನಪ್ರಿಯರಾದವರು ರಾಧಾ ಹಿರೇಗೌಡರ್..ಟೆಲಿಪ್ರಾಂಪ್ಟರ್‌ ನಲ್ಲಿ ಬರೋದನ್ನಷ್ಟೇ ಗಿಳಿಪಾಠದಂತೆ ಪ್ರೇಕ್ಷಕರಿಗೆ ಒಪ್ಪಿಸುವುದೇ ಆಂಕರ್‌ ಗಳ ಕಾಯಕವಾಗಿರುವ ಸಂದರ್ಭದಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಜ್ಞಾನವನ್ನಿಟ್ಟುಕೊಂಡು ವಿಚಾರ ಮಂಡಿಸುವ ವಿಶಿಷ್ಟತನದಿಂದಲೇ ರಾಧಾ ಹಿರೇಗೌಡರ್‌  ಹೆಸರಾದವರು..ಇಂಥಾ ರಾಧಾ ಹಿರೇಗೌಡರ್‌ ಗ್ಯಾರಂಟಿ ನ್ಯೂಸ್‌ ನ ಪರದೆಯಿಂದ ದಿಢೀರ್‌ ಮಾಯವಾಗಿದ್ರು..ಎಲ್ಲಿ ಹೋದ್ರು ಎಂದುಕೊಳ್ಳುವಾಗಲೇ ಸ್ಪೀಡ್‌ ನ್ಯೂಸ್‌ ನಲ್ಲಿ ಪ್ರತ್ಯಕ್ಷವಾಗುತ್ತಿರುವ ಸುದ್ದಿ ಮಾದ್ಯಮ ಜಗತ್ತಿನೊಳಗಿಂದ ಕೇಳಿಬಂದಿದೆ.

ಯೆಸ್..ರಾಧಾ ಹಿರೇಗೌಡರ್‌ ಹಿರಿಯ ಹಾಗೂ ಅನುಭವಿ ಪತ್ರಕರ್ತ ಶಿವಸ್ವಾಮಿ ಹಾಗೂ ತಂಡ ರೂಪಿಸಿರುವ ಗ್ಯಾರಂಟಿ ನ್ಯೂಸ್‌ ನ ಪರದೆಯಿಂದ ಕೆಲ ತಿಂಗಳುಗಳಿಂದ ಮಾಯವಾಗಿದ್ದರು.ಎಲ್ಲಿ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಪಡೆಯೋಣ ಎಂದರೆ ಅವರೇ ಯಾರಿಗೂ ಸಿಗದಂತೆ ಭೂಗತರಾಗಿದ್ದರು. ಆದರೆ ಮಾದ್ಯಮ ಹಾಗೂ ಮಾದ್ಯಮ ಸ್ನೇಹಿತರ ವಿಚಾರಗಳನ್ನು ಎಲ್ಲರಿಗಿಂತ ಮೊದಲು ಬ್ರೇಕ್‌ ಮಾಡುವ ಎಕ್ಸ್‌ ಕ್ಲ್ಯೂಸಿವ್‌ ಸುದ್ದಿಗಳ ಹೆಡ್ ಕ್ವಾರ್ಟರ್ಸ್‌ ‌ ಆದ ಕನ್ನಡ ಫ್ಲ್ಯಾಶ್‌ ರಾಧಾ ಹಿರೇಗೌಡರ್‌ ಅವರ ವಿಚಾರವನ್ನು ಮೊದಲು ಬ್ರೇಕ್‌ ಮಾಡಿತ್ತು.ಅವರು ಎಲ್ಲಿಯೋ ಒಂದು ಕಡೆ ಸೆಟ್ಲ್‌ ಆಗುತ್ತಿರುವುದು ಸತ್ಯ..ಆದರೆ ಅದು ಯಾವ ತಾಣ,ಯಾರ ಚಾನೆಲ್‌ ಎನ್ನುವ ಪ್ರಶ್ನೆಗೆ ಉತ್ತರ ನೀಡಬೇಕಿತ್ತಷ್ಟೇ…ಈಗ ಎಲ್ಲಕ್ಕೂ ಉತ್ತರ ಸಿಕ್ಕಿದೆ..ರಾಧಾ ಹಿರೇಗೌಡರ್‌ ಅವರು ಸ್ಪೀಡ್‌ ನ್ಯೂಸ್‌ ನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎನ್ನುವುದು ಅಧೀಕೃತವಾಗಿದೆ..ಈ ವಿಷಯವನ್ನು ಅವರೇ ಒಪ್ಪಿಕೊಂಡಿದ್ದಾರೆ ಕೂಡ.

ಸ್ಪೀಡ್‌ ನ್ಯೂಸ್‌ ನ ಮಾಲೀಕರಾದ ವೀರೇಶ್
ಸ್ಪೀಡ್‌ ನ್ಯೂಸ್‌ ನ ಮಾಲೀಕರಾದ ವೀರೇಶ್

ರಾಧಾ ಹಿರೇಗೌಡರ್‌ ಯಾವುದೇ ಚಾನೆಲ್‌ ಸೇರಲಿ,ಅಲ್ಲೊಂದು ಖದರ್‌, ವೈಬ್‌, ವೈಭವ, ಸದ್ದು, ಗದ್ದಲ,ಅಬ್ಬರ, ಚೇತೋಹಾರಿ ವಾತಾವರಣ ಇದ್ದೇ ಇರುತ್ತದೆ.ಅದಕ್ಕೆ ಅವರು ಕೆಲಸ ಮಾಡಿದ ಚಾನೆಲ್‌ ಗಳೇ ಸಾಕ್ಷಿ. ಕಡಿಮೆ ಅವಧಿಯಲ್ಲಿ ಕೆಲಸ ಮಾಡಿದ್ರೂ ಅಲ್ಲೊಂದು ಛಾಪನ್ನು ಬಿಟ್ಟಿಯೇ ಬಂದಿರುತ್ತಾರೆ.ಗ್ಯಾರಂಟಿ ನ್ಯೂಸ್‌ ನಲ್ಲಿ ಅವರ ನಿರ್ಗಮನ ಅಚ್ಚರಿ ಹಾಗೂ ಗಾಬರಿ ಎರಡನ್ನೂ ಮೂಡಿಸಿದೆಯಾದ್ರೂ ಪತ್ರಿಕೋದ್ಯಮ ಹಾಗೂ ಪತ್ರಕರ್ತರು ಯಾವತ್ತೂ ನಿಂತ ನೀರಾಗಬಾರದು, ಚಲನಶೀಲವಾಗಿರಬೇಕೆನ್ನುವ ಮಾತಿನಂತೆ ಒಳ್ಳೆಯ ಸಂಬ‍ಂಧವನ್ನಿಟ್ಟುಕೊಂಡೇ ಗ್ಯಾರಂಟಿಯಿಂದ ಹೊರಬಿದ್ದಿದ್ದಾರೆ. ತನ್ನದೇ ಆದ ಸ್ವಂತದ್ದೊಂದು ಮಾಡೋಣ ಎಂದುಕೊಳ್ಳುತ್ತಿರುವಾಗಲೇ ಸ್ಪೀಡ್‌ ನ್ಯೂಸ್‌ ಮುಖ್ಯಸ್ಥರಿಂದ ಕರೆ ಬಂದ ಹಿನ್ನಲೆಯಲ್ಲಿ ತೂಗಿ ಅಳೆದು ಚಾನೆಲ್‌ ನ ಸಾರಥ್ಯ ವಹಿಸಿಕೊಳ್ಳುವ ನಿರ್ದಾರ ಮಾಡಿದರೆನ್ನುವುದು ಮಾದ್ಯಮ ಜಗತ್ತಿನಲ್ಲಿ ಹರಿದಾಡುತ್ತಿರುವ ವರ್ತಮಾನ.

ವೀರೇಶ್‌ ಅವರ ಮಾಲೀಕತ್ವದ ಸ್ಪೀಡ್‌ ನ್ಯೂಸ್‌ ಇವತ್ತು ಸ್ಯಾಟಲೈಟ್‌ ಚಾನೆಲ್‌ ಗಳಿಗೂ ಸೆಡ್ಡು ಹೊಡೆಯುವ ಮಟ್ಟದಲ್ಲಿ ತನ್ನನ್ನು ಗುರುತಿಸಿ‌ ಕೊಂಡಿದೆ.ನ್ಯೂಸ್‌ ಚಾನೆಲ್‌ ಗಳು ಮಾಡದಿರದಂಥ ಅದೆಷ್ಟೋ ಸುದ್ದಿಗಳು ಇಲ್ಲಿ ನಿರ್ಭೀತವಾಗಿ ಪ್ರಸಾರವಾಗುತ್ತವೆ.ಅಂತದ್ದೊಂದು ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ಚಾನೆಲ್‌ ನ  ರಾಜರಾಜೇಶ್ವರಿ ನಗರದಲ್ಲಿರುವ ಭವ್ಯ ಕಚೇರಿ ಬಹುಷಃ ಯಾವುದೇ ಸ್ಯಾಟಲೈಟ್‌ ಚಾನೆಲ್‌ ನಲ್ಲಿ ಇರಲಿಕ್ಕಿಲ್ಲವೇನೋ. .ವೈಯುಕ್ತಿಕ ಬದುಕನಿಷ್ಟೇ ವೃತ್ತಿ ಬದುಕು ಫ್ಯಾಷನೇಟ್‌ ಆಗಿ ಇರಬೇಕೆಂದು ಬಯಸುವ ವೀರೇಶ್‌ ಶೀಘ್ರದಲ್ಲೇ ಸ್ಪೀಡ್‌ ನ್ಯೂಸ್‌ ನ್ನು ಸ್ಯಾಟಲೈಟ್‌ ಆಗಿ ಪರಿವರ್ತಿಸುತ್ತಿದ್ದಾರಂತೆ.ಅದನ್ನು ಮುನ್ನಡೆಸಿಕೊಂಡು ಹೋಗುವ ದಿಟ್ಟ-ಬುದ್ದಿವಂತ ಎಲ್ಲಕ್ಕಿಂತ ಹೆಚ್ಚಾಗಿ ತೂಕದ ಪತ್ರಕರ್ತರ ಹುಡುಕಾಟದಲ್ಲಿದ್ದಾಗಲೇ ರಾಧಾ ಹಿರೇಗೌಡರ್‌ ಕಣ್ಣಿಗೆ ಬಿದ್ದಿದ್ದಾರೆ.ಅವರೊಂದಿಗೆ ಹಲವು ಸುತ್ತಿನ ಮಾತುಕತೆಗಳ ನಂತರ ರಾಧಾ ಮತ್ತು ವೀರೇಶ್‌ ನಡುವಿನ ಮಾತುಕತೆ ಫಲಪ್ರದವಾಗಿದೆ.ಎಲ್ಲಾ ಫಾರ್ಮಲಿಟಿಸ್‌ ಮುಗಿದ ಹಿನ್ನಲೆಯಲ್ಲಿ ಇಂದಿನಿಂದ ರಾಧಾ ಹಿರೇಗೌಡರ್‌ ಹೊಸ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ.

ALSO READ :  ಒಂದೇ ಫ್ಯಾನಿಗೆ ಕೊರಳೊಡ್ಡಿದ ತಾಯಿ-ಮಗಳು

ತಮ್ಮ ಖಡಕ್‌ ಹಾಗೂ ಅತ್ಯದ್ಭುತ ಆಂಕರಿಂಗ್‌ ನಿಂದಲೇ ಪ್ರೇಕ್ಷಕರನ್ನು ಸೆಳೆದಿಡುತ್ತಾ ಬಂದಿರುವ ರಾಧಾ ಹಿರೇಗೌಡರ್‌  ಬೇರೆ ಅದೆಷ್ಟೋ ಚಾನೆಲ್‌ ಗಳಿರುವಾಗ  ಏಕೆ ಸ್ಪೀಡನ್ನೇ ಆಯ್ಕೆ ಮಾಡಿಕೊಂಡರು ಎನ್ನುವು ದಕ್ಕೆ ಉತ್ತರ ಇನ್ನೂ ಸಿಕ್ಕಿಲ್ಲ.ಆದರೆ ಸ್ಪೀಡ್‌ ಸದ್ಯಕ್ಕೆ ಕೇಬಲ್‌ ಚಾನೆಲ್‌ ಎನ್ನುವ ಕಾರಣಕ್ಕೆ ತಾತ್ಸಾರ ಮಾಡದೆ ಎಂದಿನ ಬದ್ಧತೆ-ಪ್ರಾಮಾಣಿಕತೆಯಲ್ಲೇ ಕೆಲಸ ಮಾಡುವುದಾಗಿ ಅವರು ಆತ್ಮೀಯರ ಬಳಿ ಹೇಳಿಕೊಂಡಿದ್ದಾರಂತೆ.ಆದರೆ ಸ್ಪೀಡ್‌ ನ್ಯೂಸ್‌ ಗೆ ಹೊಸ ರೂಪ, ಹೊಸ ವೇಗ,ಹೊಸ ಆಯಾಮ ಕೊಡುವ ಕೆಲಸವನ್ನಂತೂ ಮಾಡುವುದಾಗಿ ಅವರು ಹೇಳಿದ್ದಾರೆ.ನನ್ನೊಂದಿಗೆ ಇಷ್ಟು ವರ್ಷಗಳ ಪ್ರಯಾಣದಲ್ಲಿದ್ದ ಪ್ರೇಕ್ಷಕರು,ಹಿತೈಷಿಗಳು ಹಾಗೂ ಅಭಿಮಾನಿಗಳ ನೆರವು, ಸಲಹೆ, ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಸಿಗಲಿ ಎನ್ನುವ ನಿರೀಕ್ಷೆ ಹಿರೇಗೌಡರ್‌ ಅವರದು.

ಇನ್ನು ರಾಧಾ ಹಿರೇಗೌಡರ್‌ ಆಗಮನದಿಂದ ಸ್ಪೀಡ್‌ ಗೆ ಹೊಸ ಖದರ್‌ ಬಂದಿರುವುದಾಗಿ ಮುಖ್ಯಸ್ಥ ವೀರೇಶ್‌ ಅವರೇ ಒಪ್ಪಿಕೊಂಡಿದ್ದಾರೆ.ಅವರಂತೂ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾರೆ.ಚಾನೆಲ್‌ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲು ನಾನು ಸಿದ್ದನಿದ್ದೇನೆ.ಅವರಿಗೆ ಈ ನಿಟ್ಟಿನಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ.ಅವರ ಮೇಲೆ ಸಂಪೂರ್ಣ ಭರವಸೆಯಿದೆ.ನನಗೂ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ.ಹೊಸದೇನನ್ನು ಮಾಡುತ್ತಾರೆನ್ನುವ ಕುತೂಹಲವೂ ಇದೆ..ಆದರೆ ಒಂದಂತೂ ಸತ್ಯ, ರಾಧಾ ಹಿರೇಗೌಡರ್‌ ಅವರಂಥ ದಿಟ್ಟ ಪತ್ರಕರ್ತೆ ನಮ್ಮ ಬಳಗ ಸೇರಿಕೊಂಡಿರುವುದು ನಮ್ಮ ಗೌರವ-ಪ್ರತಿಷ್ಟೆ ಹೆಚ್ಚಿಸಿದೆ. ಇನ್ನೊಂದಷ್ಟು ದಿನಗಳಲ್ಲಿ ಸ್ಯಾಟಲೈಟ್‌ ಆಗಿ ಪರಿವರ್ತಿತವಾಗಲಿರುವ ಸ್ಪೀಡ್‌ ನ್ಯೂಸ್‌ ಭವಿಷ್ಯದಲ್ಲಿ ರಾಧಾ ಹಿರೇಗೌಡರ್‌ ಅವರ ದಿಟ್ಟ ಮುಂದಾಳತ್ವದಲ್ಲಿ ಬಹಳಷ್ಟನ್ನು ಸಾಧಿಸಲಿದೆ.ಪತ್ರಿಕೋದ್ಯಮದಲ್ಲಿ ಮೈಲಿಗಲ್ಲಿನ ಚರಿತ್ರೆಯನ್ನು ಸ್ಪೀಡ್‌ ನಿರ್ಮಿಸಲಿದೆ ಎನ್ನುವ ಆತ್ಮವಿಶ್ವಾಸವನ್ನು ವೀರೇಶ್‌ ಹೊಂದಿದ್ದಾರೆ.

ತಿಂಗಳುಗಳ ಗ್ಯಾಪ್‌ ನ ನಂತರ ರಾಧಾ ಹಿರೇಗೌಡರ್‌ ಸ್ಪೀಡ್‌ ನ್ಯೂಸ್‌ ಸೇರುವ ಮೂಲಕ ಕಮ್‌ ಬ್ಯಾಕ್‌ ಮಾಡುತ್ತಿದ್ದಾರೆ.ಅವರಿಗೆ ಶುಭವಾಗಲಿ, ಅವರ ದಿಟ್ಟ ಸಂಪಾದಕತ್ವದಲ್ಲಿ ಬಹಳಷ್ಟನ್ನು ಸಾಧಿಸುವಂತಾಗಲಿ..ಆದರೆ ಅವರ ಬಗ್ಗೆ ಇರುವ ಒಂದೇ ಒಂದು ಸಾತ್ವಿಕವಾದ ಆಪಾದನೆ ಎಂದರೆ ತಾಳ್ಮೆ-ಸಂಯಮದ ಕೊರತೆ.ಅಂದುಕೊಂಡದ್ದು ಆ ಕ್ಷಣದಲ್ಲೇ ಆಗಿಬಿಡಬೇಕೆನ್ನುವ ಧಾವಂತವಂತೆ.ಅದನ್ನೊಂದಿಷ್ಟು ಕಲಿತುಕೊಂಡರೆ ರಾಧಾ ಪರಿಪೂರ್ಣವಾಗಬಲ್ಲರು.ಎನಿವೇ ಸ್ಪೀಡ್‌ ನ್ಯೂಸ್‌ ರಾಧಾ ಅವರ ದಕ್ಷ ಸಂಪಾದಕತ್ವದಲ್ಲಿ ಮಹತ್ವದ್ದನ್ನು ಸಾಧಿಸಲಿ,,ಪತ್ರಿಕೋದ್ಯಮವೇ ಬೆಚ್ಚಿ ಬೆರಗಾಗಿ ನೋಡುವಂತ ಸಾಧನೆ ಮಾಡುವಂತಾಗಲಿ ಎನ್ನುವುದೇ ಕನ್ನಡ ಫ್ಲ್ಯಾಶ್‌ ನ್ಯೂಸ್‌ ನ  ಹಾರೈಕೆ.


Leave a Comment