“ನೈಜ ಆರೋಪಿಗಳನ್ನು ಬಂಧಿಸಿ, ಇಲ್ಲವಾದರೆ ಮಸೀದಿಗೆ ನುಗ್ಗುತ್ತೇವೆ”: ಪ್ರಮೋದ್ ಮುತಾಲಿಕ್


ಹುಬ್ಬಳ್ಳಿ: ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಜಯಂತೋತ್ಸವದ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. “ಕಲ್ಲು ತೂರಿದ ಜಿಹಾದಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು, ಇಲ್ಲವಾದರೆ ಮಸೀದಿಗೆ ನುಗ್ಗಿ ಹೊಡೆಯಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಬಾಗಲಕೋಟೆ ಘಟನೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸರ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಶಿವಾಜಿ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲು ಮತ್ತು ಚಪ್ಪಲಿ ಎಸೆದ ನೂರಾರು ಜನರ ಪೈಕಿ ಕೇವಲ ಎಂಟು ಮಂದಿಯನ್ನು ಮಾತ್ರ ಬಂಧಿಸಲಾಗಿದೆ. ಇದು ಕಣ್ಣೊರೆಸುವ ತಂತ್ರ. ನಿಜವಾದ ಆರೋಪಿಗಳು ಇನ್ನೂ ಹೊರಗಿದ್ದಾರೆ” ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ‘ತುಷ್ಟೀಕರಣ’ದ ಆರೋಪ

ರಾಜ್ಯದ ಕಾಂಗ್ರೆಸ್ ಸರ್ಕಾರದ ನೀತಿಗಳೇ ಇಂತಹ ಘಟನೆಗಳಿಗೆ ಕಾರಣ ಎಂದು ಮುತಾಲಿಕ್ ಕಿಡಿಕಾರಿದರು. “ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಅತಿಯಾದ ಸಲುಗೆ ನೀಡುತ್ತಿದೆ. ಸರ್ಕಾರದ ಈ ತುಷ್ಟೀಕರಣ ರಾಜಕಾರಣದಿಂದಾಗಿ ದುಷ್ಕರ್ಮಿಗಳಿಗೆ ಭಯವಿಲ್ಲದಂತಾಗಿದೆ. ಇದೇ ರೀತಿ ಮುಂದುವರೆದರೆ ನಾವು ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಮತ್ತು ಮಸೀದಿಗಳಿಗೆ ನುಗ್ಗಿ ಒಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ,” ಎಂದು ಗುಡುಗಿದ್ದಾರೆ.

ALSO READ :  ವಿಕ್ಟೋರಿಯಾದಲ್ಲಿ ಸ್ಕ್ಯಾನಿಂಗ್‌ ಭಾಗ್ಯವಿಲ್ಲ! ಬಡ ರೋಗಿಗಳ ಪಾಲಿಗೆ 'ನರಕ'ವಾದ ಮಹಾ ಆಸ್ಪತ್ರೆ

ಇದನ್ನೂ ಓದಿ | ತಾಯಿಯ ಪ್ರೀತಿಗಾಗಿ ಹಾತೊರೆದ ಮರಿ ಕೋತಿಗೆ ಆಸರೆಯಾದ ‘ಗೊಂಬೆ’: ಐಕಿಯಾ ಗೊಂಬೆಗೆ ಡಿಮ್ಯಾಂಡೋ ಡಿಮ್ಯಾಂಡ್!

ಇದು ಕೇವಲ ಆರಂಭಿಕ ಎಚ್ಚರಿಕೆ ಮಾತ್ರ ಎಂದ ಮುತಾಲಿಕ್, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ತಿಳಿಸಿದರು. ಬಾಗಲಕೋಟೆ ಘಟನೆಯಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.


Leave a Comment