advertise here

Search

ಶಿವಮೊಗ್ಗ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್  ಗೆದ್ದ ಪತ್ರಕರ್ತ ನಾಗೇಶನಾಯ್ಕ ಪುತ್ರಿ ದೀಪಿಕಾ..


ಶಿವಮೊಗ್ಗ: ನಮ್ಮ ಪತ್ರಕರ್ತರ ಮಕ್ಕಳಲ್ಲೂ ಸಾಧಕರಿಗೇನು ಕೊರತೆಯಿಲ್ಲ.ಆದರೆ ಕಾರ್ಯ ಒತ್ತಡದ ಕಾರಣಕ್ಕೆ ತಮ್ಮ ಮಕ್ಕಳ ಪ್ರತಿಯೊಂದು ಬೆಳವಣಿಗೆ ಮೇಲೆ ಕಣ್ಣು ಹಾಯಿಸೋದು ಸ್ವಲ್ಪ ಕಷ್ಟವೇ..ವಿಪರೀತ ಕೆಲಸಗಳಲ್ಲೇ ಮುಳುಗಿ ಹೋಗಿರುವ ಪತ್ರಕರ್ತರಿಗೆ ತಮ್ಮ ಮಕ್ಕಳು ಬೆಳೆಯೋದು ಗೊತ್ತಾಗುವುದಿಲ್ಲ..ಅವರು ಏನ್ ಸಾಧನೆ ಮಾಡಿದ್ದಾರೆ ಎನ್ನುವುದರ ಮಾಹಿತಿನೇ ಇರದಂಗಾಗಿರುತ್ತದೆ. ಮಕ್ಕಳು ಸಾಧನೆ ಮಾಡಿದ ಸುದ್ದಿ ಕೇಳಿದಾಗ ಹೌದಾ..ಎನ್ನುವ ಸಂತೋಷ-ಅಚ್ಚರಿಯ ಉದ್ಘಾರ ಮಾತ್ರ ಅವರಿಂದ ಹೊರಡುತ್ತದೆ.(ನಮ್ಮ ಹೆಮ್ಮೆಯ ಶಿವಮೊಗ್ಗದ ಪತ್ರಕರ್ತ ಮಿತ್ರರ ಮಕ್ಕಳು ಮಾಡಿರುವ ಸಾಧನೆ ಬೆಳೆಕಿಗೆ ಬಂದಿ್ಲ್ಲ ಅಷ್ಟೆ)

ಇದನ್ನೆಲ್ಲಾ ಏಕೆ ಹೇಳಬೇಕಾಯ್ತು ಎಂದ್ರೆ ಶಿವಮೊಗ್ಗದ ನಮ್ಮ ಆತ್ಮೀಯ ಪತ್ರಕರ್ತ ಸ್ನೇಹಿತ,ಈ ಪತ್ರಿಕೆ ಸಂಪಾದಕ ನಾಗೇಶನಾಯ್ಕನ ಮಗಳು ಬುದ್ದಿವಂತರ ಆಟ ಎಂದೇ ಕರೆಯಿಸಿಕೊಳ್ಳುವ ಚೆಸ್ ನಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾನೆ.ಆತನ ಮಗಳು ದೀಪಿಕಾ ಕೆ.ಎನ್ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಯೊಂದಿಗೆ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ ಎನ್ನುವುದನ್ನು ಆತನ ಬಾಯಲ್ಲಿ ಕೇಳಿ ನಮ್ಮ ಪತ್ರಕರ್ತರ ಮಕ್ಕಳು ಯಾರಿಗೇನು ಕಡಿಮೆ ಎಂಬ ಸಂತೋಷದ ಭಾವನೆ ವ್ಯಕ್ತವಾಯಿತು.

ಶಿಕಾರಿಪುರ ಜಿಲ್ಲೆಯ ಕುಂಚೇನಹಳ್ಳಿಯಲ್ಲಿ ವಾಸವಾಗಿರುವ ಪತ್ರಕರ್ತ ನಾಗೇಶನಾಯ್ಕ ಏನೇ ಕಷ್ಟವಿದ್ದರೂ ಮಕ್ಕಳ ಆರೈಕೆ-ಶಿಕ್ಷಣಕ್ಕೆ ಕೊರತೆ ಮಾಡಿದವನಲ್ಲ.ವೃತ್ತಿಯಲ್ಲಿ ಪರಿಶ್ರಮದ ಮೂಲಕ ಮೇಲೆ ಬಂದವನು.ಅವನ ಮಕ್ಕಳು ಬೆಳೆದು ಅದರಲ್ಲಿ ಒಬ್ಬಳಾದ ದೀಪಿಕಾ ಕೆ.ಎನ್ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗುವಷ್ಟರ ಮಟ್ಟಿಗಿನ ಸಾಧನೆ ಮಾಡಿರುವುದು ಕೇವಲ ಆತನೊಬ್ಬನೇ ಅಲ್ಲ ನಮ್ಮ ಇಡೀ ಪತ್ರಕರ್ತರ ಸಮೂಹ ಹೆಮ್ಮೆ ಪಡಲೇಬೇಕು.

ತೀರ್ಥಹಳ್ಳಿ ತಾಲೂಕಿನ  ಚಿಟ್ಟೆಬೈಲ್ ನಲ್ಲಿರುವ  ಪ್ರಜ್ಞಾಭಾರತಿ  ಪ್ರೌಡಶಾಲೆಯಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ ನಡೆಯಿತು.ಇದರಲ್ಲಿ  14 ವರ್ಷದ ವಯೋಮಿತಿ ಒಳಗಿನ  ವಿಭಾಗದಲ್ಲಿ  ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ದೀಪಿಕಾ ಕೆ.ಎನ್.  ತನ್ನ ಪ್ರತಿಸ್ಪರ್ದಿಯನ್ನು ನೇರ ಸುತ್ತುಗಳಲ್ಲಿ ಹಣಿದು  ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಆ ಮೂಲಕ ಆಕೆ ಓದುತ್ತಿರುವ ಶಾಲೆಗಷ್ಟೇ ಅಲ್ಲ ಪೋಷಕರು, ಶಿಕ್ಷಕರು, ತರಬೇತುದಾರರು ಮತ್ತು ಪತ್ರಿಕಾ ಸಮೂಹ ಹೆಮ್ಮೆ ಪಡುವಂತೆ ಮಾಡಿದ್ದಾಳೆ.ಈ ಗೆಲುವಿನ ಮೂಲಕ ರಾಜ್ಯಮಟ್ಟದ ಸ್ಪರ್ದೆಗೂ ಆಯ್ಕೆ ಆಗಿದ್ದಾಳೆ.

ALSO READ :  IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ...!

ದೀಪಿಕಾ ಕೆ.ಎನ್ ಗೆ ಮೊದಲಿಂದಲೂ ಚೆಸ್ ನಲ್ಲಿ ತೀವ್ರ ಕುತೂಹಲ ಹಾಗೂ ಆಸಕ್ತಿ.ಸಣ್ಣ ವಯಸ್ಸಿ ನಿಂದಲೇ ಚೆಸ್ ನ ಕಾಯಿಗಳೊಂದಿಗೆ ಕಾಲ ಕಳೆದಾಕೆ.ಹಾಗೆಂದು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದವಳಲ್ಲ. ಓದಿನೊಂದಿಗೆ ಆಟದಲ್ಲೂ ಸಮತೋಲನ ಕಾಯ್ದುಕೊಂಡವಳು.ಎರಡರಲ್ಲೂ ಆಸಕ್ತಿಯನ್ನು ಸಮನಾಂತರವಾಗಿ  ಕಾಯ್ದುಕೊಂಡು ಬಂದವಳು.ಏಕೆಂದರೆ ಕೇವಲ ಚೆಸ್ ನಲ್ಲಷ್ಟೇ ಅಲ್ಲ ಓದಿನಲ್ಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದಾಳೆ.ಇದು ಮತ್ತೊಂದು ಹೆಮ್ಮೆಯ ಸಂಗತಿ.

ಪತ್ರಕರ್ತಮಿತ್ರ  ನಾಗೇಶನಾಯ್ಕ ಹಾಗೂ ಶಕುಂತಲಾ ದಂಪತಿಯ ಪುತ್ರಿಯಾಗಿರುವ ದೀಪಿಕಾ ನ.10 ರಿಂದ ಮಂಡ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾಳೆ.ಆಕೆಯ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಕೂಡ ಅಭಿಮಾನದಿಂದ ಅಭಿನಂದಿಸಿದೆ.ಹಾಗೆಯೇ ಆಕೆಯ ಪ್ರತಿಯೊಂದು ಬೆಳವಣಿಗೆಯಲ್ಲೂ ಬೆನ್ನೆಲುಬಾಗಿ ನಿಂತಂತೆ ಮುಂದೆಯೂ ಪ್ರೋತ್ಸಾಹಿಸುವುದಾಗಿ ತಿಳಿಸಿದೆ.

ಕಷ್ಟದಿಂದ ಜೀವನದಲ್ಲಿ ಮೇಲೆ ಬಂದ ಪತ್ರಕರ್ತ ಮಿತ್ರ ನಾಗೇಶನಾಯ್ಕನಂತೆ ಆಕೆಯ ಮಗಳು ಕೂಡ ಸಾಧಕಿಯಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.ತಳ ಸಮುದಾಯದಲ್ಲಿ ಬೆಳೆದು ತನ್ನ ಸ್ವಂತ ಪರಿಶ್ರಮದಿಂದಲೇ ದೊಡ್ಡ ದೊಡ್ಡ ಸ್ಥಾನಗಳನ್ನು ಗಳಿಸಿ ಗ್ರಾಮ ಪಂಚಾಯ್ತಿ ಎಲೆಕ್ಷನ್ ನಲ್ಲೂ ಗೆದ್ದು ಅಲ್ಲಿಯೂ ತಳಸ್ಥರದವರ ಏಳ್ಗೆಗೆ ಕೆಲಸ ಮಾಡಿದಾತ.ಅನೇಕ ಸಂಘಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಹಾಗೂ ಇವತ್ತಿಗೂ ಮಾಡುತ್ತಿರುವ ನಾಗೇಶ ನಾಯ್ಕನ ಕುಟುಂಬಕ್ಕೆ ಮಗಳು ದೀಪಿಕಾ ಹೆಮ್ಮೆ ತರುವಂತ ಕೆಲಸ ಮಾಡಿದ್ದಾಳೆ ಎನ್ನುವುದು ಗಮನಾರ್ಹ.ಪತ್ರಕರ್ತ ಸ್ನೇಹಿತರ ಮಕ್ಕಳಲ್ಲಿ ಯಾರೇ ಸಾಧನೆ ಮಾಡಿದ್ರೂ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಬಳಗ ಅತ್ಯಂತ ಆತ್ಮೀಯತೆಯಿಂದ ಅಭಿನಂದಿಸುತ್ತದೆ ಹಾಗೆಯೇ ಸಂಭ್ರಮಿಸುತ್ತದೆ ಕೂಡ..ಎನಿವೇ ಬೆಸ್ಟ್ ಆಫ್ ಲಕ್ ದೀಪಿಕಾ.. ರಾಜ್ಯಮಟ್ಟದಲ್ಲೂ ಉತ್ತಮ ಸಾಧನೆ ಮಾಡಿ ಚೆಸ್ ರಂಗದಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಬೆಳೆಯುವಂತಾಗು ಎನ್ನುವುದು ಕನ್ನಡ ಫ್ಲ್ಯಾಶ್ ನ್ಯೂಸ್ ನ ಆಶಯ-ಹಾರೈಕೆ.


Political News

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ವಿರುದ್ಧ FIR

ಜೋಗ್-ಕಾರ್ಗಲ್ ನಲ್ಲಿ ಮಟ್ಕಾ ದಂಧಗೆ ಬಲಿಯಾಯ್ತು ಜೀವ…!

Scroll to Top