advertise here

Search

ಕೆಎಸ್‌ಪಿಸಿಬಿ ನೌಕರರ ಸಂಘದ ‘ರೆಸಾರ್ಟ್’ ಕರಾಮತ್ತು; ಅಕ್ರಮಗಳ ಸರಮಾಲೆ, ಸೂರಿ ಪಯಾಲ್ ಆಯ್ಕೆ ಅಸಿಂಧು!

kspcb employees union election

ಬೆಂಗಳೂರು: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೌಕರರ ಸಂಘದ ಇತ್ತೀಚಿನ ವಿದ್ಯಮಾನಗಳು ಕೇವಲ ವಿವಾದಕ್ಕಷ್ಟೇ ಸೀಮಿತವಾಗಿಲ್ಲ; ಇದು ವ್ಯವಸ್ಥೆಯನ್ನೇ ಪ್ರಶ್ನಿಸುವಂತಹ ಗಂಭೀರ ಸ್ವರೂಪದ ಕಾನೂನು ಉಲ್ಲಂಘನೆಯಾಗಿದೆ. ಮಾರ್ಚ್ 3, 2026ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಲ್ಲಿಕೆಯಾಗಿರುವ ದೂರು, ಸಂಘದಲ್ಲಿ ನಡೆದಿದೆ ಎನ್ನಲಾದ ‘ಅಕ್ರಮಗಳ ಮಹಾಪೂರ’ವನ್ನು ಬಯಲಿಗೆಳೆದಿದೆ.

ಸಾಮಾನ್ಯ ಸಭೆಯ ನೆಪದಲ್ಲಿ ‘ಚುನಾವಣಾ ದರೋಡೆ’!

ಅಂದು ನಡೆಯಬೇಕಿದ್ದದ್ದು ಕೇವಲ ಒಂದು ಸಾಮಾನ್ಯ ಸಭೆ (General Body Meeting). ಆದರೆ, ಆ ಸಭೆಯನ್ನು ಬಳಸಿಕೊಂಡು ಆತುರಾತುರವಾಗಿ, ಯಾವುದೇ ಮುನ್ನೆಚ್ಚರಿಕೆ ಅಥವಾ ನಿಯಮ ಪಾಲನೆಯಿಲ್ಲದೆ ಸೂರಿ ಪಯಾಲ್ ಅವರನ್ನು ನೂತನ ಅಧ್ಯಕ್ಷರೆಂದು ಘೋಷಿಸಲಾಗಿದೆ. ಇದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆ. ಚುನಾವಣೆ ನಡೆಯಬೇಕಿದ್ದರೆ ಅಧಿಸೂಚನೆ ಹೊರಡಿಸಬೇಕು, ನೌಕರರಿಗೆ ಸರ್ಕ್ಯೂಲರ್ ಹೋಗಬೇಕು, ಆದರೆ ಇಲ್ಲಿ ಯಾವುದೂ ಪಾಲನೆಯಾಗಿಲ್ಲ. ಸಹಕಾರ ಇಲಾಖೆಯನ್ನೇ ಕತ್ತಲಲ್ಲಿಟ್ಟು, ಕೇವಲ ಕೆಲವೇ ಕೆಲವು ಆಪ್ತರನ್ನು ಸೇರಿಸಿಕೊಂಡು ಈ ನಾಟಕ ಆಡಲಾಗಿದೆ.

ನಗರದ ಮಧ್ಯದಲ್ಲಿ ಅಥವಾ ಕಚೇರಿ ಆವರಣದಲ್ಲಿ ನಡೆಸಬಹುದಾಗಿದ್ದ ಸಭೆಯನ್ನು ನೆಲಮಂಗಲದ ದೂರದ ‘ಗೋಲ್ಡನ್ ಪಾಮ್ ರೆಸಾರ್ಟ್’ನಲ್ಲಿ ನಡೆಸಿದ್ದರ ಹಿಂದಿನ ಉದ್ದೇಶವೇನು? ಇದು ಕೇವಲ ಒಂದು ಸಭೆಯಾಗಿರಲಿಲ್ಲ; ಬದಲಾಗಿ, ಬಹುಪಾಲು ನೌಕರರು ಪಾಲ್ಗೊಳ್ಳದಂತೆ ತಡೆಯಲು ಹೆಣೆದ ಸಂಚು. ನೌಕರರನ್ನು ದೂರವಿಟ್ಟು, ತಮಗೆ ಬೇಕಾದವರನ್ನು ಮಾತ್ರ ಇಟ್ಟುಕೊಂಡು, ಉಳಿದವರನ್ನು ವಾಪಸ್ ಕಳುಹಿಸಿ, ಸೂರಿ ಪಯಾಲ್ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.

ಕರ್ನಾಟಕ ಕೋ-ಆಪರೇಟಿವ್ ಆಕ್ಟ್ 1959ರ ಸ್ಪಷ್ಟ ಉಲ್ಲಂಘನೆ

ದೂರುದಾರರು ಎತ್ತಿರುವ ಕಾನೂನು ಅಂಶಗಳು ಸೂರಿ ಪಯಾಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಷ್ಟರ ಮಟ್ಟಿಗೆ ಗಂಭೀರವಾಗಿವೆ:

ಸೆಕ್ಷನ್ 27 & 30ರ ಉಲ್ಲಂಘನೆ: ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಿಲ್ಲ, ಕ್ಯಾಲೆಂಡರ್ ಆಫ್ ಇವೆಂಟ್ಸ್ ಇಲ್ಲ, ಚುನಾವಣಾಧಿಕಾರಿ ನೇಮಕವಾಗಿಲ್ಲ, ನಾಮಪತ್ರ ಸಲ್ಲಿಕೆ ಅಥವಾ ಪರಿಶೀಲನೆಯ ಪ್ರಕ್ರಿಯೆಯೇ ನಡೆದಿಲ್ಲ. ಗೌಪ್ಯ ಮತದಾನವಂತೂ ದೂರದ ಮಾತು. ಈ ಎಲ್ಲಾ ಪ್ರಕ್ರಿಯೆಗಳನ್ನು ಬದಿಗೊತ್ತಿ ಘೋಷಣೆ ಮಾಡಿದ್ದು ಸೆಕ್ಷನ್ 27 ಮತ್ತು 30ರ ಸ್ಪಷ್ಟ ಉಲ್ಲಂಘನೆಯಾಗಿದೆ ಎನ್ನಲಾಗುತ್ತಿದೆ.

ಸಂಘದ ನಿಷ್ಕ್ರಿಯತೆ (ಸೆಕ್ಷನ್ 28 & 29): ಕಳೆದ ಮೂರು ವರ್ಷಗಳಿಂದ ನೌಕರರ ಸಂಘ ಸಂಪೂರ್ಣ ನಿಷ್ಕ್ರಿಯವಾಗಿತ್ತು. ಯಾವುದೇ ವಾರ್ಷಿಕ ಸಭೆ ನಡೆದಿಲ್ಲ, ಆಡಿಟ್ ನಡೆದಿಲ್ಲ. ಇಂತಹ ಸ್ಥಿತಿಯಲ್ಲಿರುವ ಸಂಘಕ್ಕೆ ಚುನಾವಣೆ ನಡೆಸುವ ಅರ್ಹತೆಯೇ ಇರುವುದಿಲ್ಲ ಎಂಬುದು ಕಾನೂನಿನ ಸ್ಪಷ್ಟ ನಿಲುವು.

ALSO READ :  PLEASE ALLOW TO X'MAS MIDNIGHT HOLY MASS..."ಮಧ್ಯರಾತ್ರಿ" ಕ್ರಿಸ್ಮಸ್‌ ಆಚರಣೆಗೇಕೆ ನಿರ್ಬಂಧ,ಕಾಂಗ್ರೆಸ್‌ ಸರ್ಕಾರಕ್ಕೆ ಕ್ರೈಸ್ತರ ಪ್ರಶ್ನೆ:ಅವಕಾಶ ನೀಡದಿದ್ದರೆ ಉಗ್ರ ಪರಿಣಾಮ..!

ಸದಸ್ಯತ್ವವೇ ಇಲ್ಲದವರಿಗೆ ಅಧ್ಯಕ್ಷ ಪಟ್ಟ?

ಅತ್ಯಂತ ಆಘಾತಕಾರಿ ವಿಷಯವೆಂದರೆ, ಸೂರಿ ಪಯಾಲ್ ಅವರು ಈವರೆಗೂ ನೌಕರರ ಸಂಘದ ಸದಸ್ಯರೇ ಆಗಿಲ್ಲವಂತೆ ! ಸದಸ್ಯತ್ವವೇ ಇಲ್ಲದ ವ್ಯಕ್ತಿ, ಸಂಘದ ಚಟುವಟಿಕೆಗಳೊಂದಿಗೆ ಯಾವುದೇ ಸಂಬಂಧವಿಲ್ಲದವರು, ದಿಢೀರನೆ ಅಧ್ಯಕ್ಷರಾಗುವುದು ಹೇಗೆ? ಎನ್ನುವ ಪ್ರಶ್ನೆ ಎದ್ದಿವೆ. ಇವರು ಸರ್ಕಾರದ ವಿರುದ್ಧವೇ ನಿಂತು, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿಯನ್ನೇ ಪ್ರಶ್ನಿಸಿ ಪ್ರಕರಣ ದಾಖಲಿಸಿದ್ದಾರೆ. ಇಂತಹವರನ್ನು ನೌಕರರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನೌಕರರ ಹಿತಾಸಕ್ತಿಗೆ ಮಾಡುವ ದ್ರೋಹವಲ್ಲವೇ?.

ಈ ಅಕ್ರಮದ ಹಿಂದೆ ನಿಕಟಪೂರ್ವ ಅಧ್ಯಕ್ಷ ಡಾ. ರಾಜು ಅವರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ. ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಂದ ಮುಕ್ತಿ ಪಡೆಯಲು ಸಂಘವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಈ ಪ್ರಯತ್ನದಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಮತ್ತು ಖಜಾಂಚಿ ರಾಘವೇಂದ್ರ ಅವರೂ ಶಾಮೀಲಾಗಿದ್ದಾರೆ.

ದೂರಿನಲ್ಲಿರುವ ಪ್ರಮುಖ ಬೇಡಿಕೆಗಳು:

*ಸೂರಿ ಪಯಾಲ್ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯನ್ನು ತಕ್ಷಣವೇ ರದ್ದುಗೊಳಿಸಬೇಕು.

*ಡಾ. ರಾಜು, ಅಶೋಕ್ ಕುಮಾರ್ ಮತ್ತು ರಾಘವೇಂದ್ರ ಅವರ ವಿರುದ್ಧ ಸೆಕ್ಷನ್ 64ರ ಅನ್ವಯ ವಿಚಾರಣೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು.

*ಚುನಾವಣೆ ಹೊಸದಾಗಿ ನಡೆಯುವವರೆಗೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು.

ಇದನ್ನೂ ಓದಿ | ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದಲ್ಲಿ ‘ಲಂಚಾವತಾರ’: ತನಿಖೆಯಲ್ಲಿ ಆರೋಪ ಸಾಬೀತಾದರೂ ಮೌನವೇಕೆ?

ಕನ್ನಡ ಫ್ಲ್ಯಾಶ್ ನ್ಯೂಸ್ ಎಚ್ಚರಿಕೆ

ಈ ಪ್ರಕರಣ ಕೇವಲ ನೌಕರರ ಸಂಘಕ್ಕೆ ಸೀಮಿತವಾಗಿಲ್ಲ. ಇದು ವ್ಯವಸ್ಥೆಯೊಳಗೆ ನಡೆಯುತ್ತಿರುವ ಭ್ರಷ್ಟಾಚಾರದ ಸಂಕೇತ. ಡಾ. ರಾಜು ಅವರ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ‘ಕನ್ನಡ ಫ್ಲ್ಯಾಶ್ ನ್ಯೂಸ್’ ಈಗಾಗಲೇ ಮಾಹಿತಿಯನ್ನು ಕಲೆಹಾಕುತ್ತಿದ್ದು, ಶೀಘ್ರವೇ ಆ ದಾಖಲೆಗಳನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ. ಸಂಘದ ಅಸ್ತಿತ್ವ ಮತ್ತು ಪಾರದರ್ಶಕತೆ ಉಳಿಯಬೇಕೆಂದರೆ, ಈ ತನಿಖೆ ಸತ್ಯವನ್ನು ಹೊರಗೆ ತರಬೇಕಿದೆ.


Political News

ಯುದ್ಧಪೀಡಿತ ಪ್ರದೇಶಗಳಿಂದ ಕನ್ನಡಿಗರ ಸುರಕ್ಷಿತ ವಾಪಸಾತಿಗಾಗಿ ಕೇಂದ್ರದ ಸಿದ್ಧತೆ

ಕಚ್ಚಾ ತೈಲ ದರ ಏರಿಕೆ: ಭಾರತದ ಆರ್ಥಿಕತೆಗೆ ಎದುರಾಗಿರುವ ಸವಾಲುಗಳೇನು?

ಯುಎಇಯಲ್ಲಿ ಅಮೆಜಾನ್ ಡೇಟಾ ಸೆಂಟರ್ ಮೇಲೆ ಇರಾನ್ ಡ್ರೋನ್ ದಾಳಿ

ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಹೈಕಮಾಂಡ್ ಮಧ್ಯಪ್ರವೇಶಕ್ಕೆ ಸತೀಶ್ ಜಾರಕಿಹೊಳಿ ಆಗ್ರಹ

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ನಲ್ಲಿ ಅಮೆರಿಕ-ಇಸ್ರೇಲ್ ಜಂಟಿ ದಾಳಿ: 48 ನಾಯಕರ ಹತ್ಯೆ, ಖಮೇನಿ ಸಾವು ದೃಢ

ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ ಸಂಗೀತಾ

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ‘ರೆಸಾರ್ಟ್’ ರಾಜಕಾರಣ: ಈ ಮೀಟಿಂಗ್‌ನ ಹಿಂದಿರುವ ಅಸಲಿ ಮರ್ಮವೇನು?

Scroll to Top