advertise here

Search

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುರುವಾಯ್ತಾ ನಿರಂಜನ್ ದರ್ಬಾರ್..!


ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದವರಂತೆ ತಮ್ಮ ಅತ್ಯಾಪ್ತ ನಿವೃತ್ತಿ ಅಧಿಕಾರಿಗೆ ಆಯಕಟ್ಟಿನ ಹುದ್ದೆ ದಯಪಾಲಿಸಿದ ಅಧ್ಯಕ್ಷ ನರೇಂದ್ರಸ್ವಾಮಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವುದು ತಿಳಿದೇ ಇದೆ.ಯಾವ ರೀತಿ ನಿಯಮಗಳನ್ನು ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು ಕೂಡ. ಮಾಡಿರೋ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರಾ ಎಂದು ಕಾದರೂ ಯಾವುದು ಬದಲಾದಂಗೆ ಕಾಣುತ್ತಿಲ್ಲ.ಅಧ್ಯಕ್ಷರ ತಾಂತ್ರಿಕ ಸಲಹೆಗಾರ ಡಾ.ನಿರಂಜನ್ ಅವರು ಮಂಡಳಿಯಲ್ಲಿ ಅಂದಾದರ್ಬಾರ್ ಶುರುಮಾಡಿದ್ದಾರೆನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಡಾ.ನಿರಂಜನ್ ಅವರನ್ನು ನೇಮಕ ಮಾಡಿರುವುದೇ ಅಕ್ರಮ.ಅವರನ್ನು ಏಕಾಏಕಿ ಅಧ್ಯಕ್ಷರು ನಿರ್ದರಿಸಿದ್ದಾರೆಂದಾಕ್ಷಣ ನೇಮಕ ಮಾಡಲಾಗದು.ಮಂಡಳಿ ಸಭೆ ನಡೆಸಿ ತೀರ್ಮಾನವನ್ನು ಸರ್ಕಾರಕ್ಕೆ ಕಳುಹಿಸಬೇಕು.ಸರ್ಕಾರವೇ ಅಂತಿಮವಾಗಿ ಮಾನದಂಡಗಳ ಮೇಲೆ ನೇಮಕ ಮಾಡಲು ಅವಕಾಶಗಳಿವೆ ಎನ್ನುವುದನ್ನು ಖಚಿತಪಡಿಸಿಕೊಂಡ ಮೇಲೆಯೇ ಆಯಕಟ್ಟಿನ ಹುದ್ದೆಗಳ ನೇಮಕವನ್ನು ಅಧಿಕೃತಗೊಳಿಸುತ್ದೆ.ಆದರೆ ನಿರಂಜನ್ ಅವರ ನೇಮಕಾತಿಯಲ್ಲಿ ಇಂಥದ್ದ್ಯಾವುದೆ ನಿಯಮ ಪಾಲನೆ ಆಗಿಲ್ಲ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಸವಿವರವಾಗಿ ತಿಳಿಸಿತ್ತು.ಇದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತಂತೆ.

ಇದು ಬೇರೆಯದೆ ಸಮಸ್ಯೆಗೆ ಎಡೆ ಮಾಡಿಕೊಡಬಹುದೆನ್ನುವ ಕನಿಷ್ಟ ತಿಳುವಳಿಕೆಯು ಇಲ್ಲದವರಂತೆ ಡಾ.ನಿರಂಜನ್ ತಾಂತ್ರಿಕ ಸಲಹೆಗಾರರ ಹುದ್ದೆಯಲ್ಲಿ ಮುಂದುವರೆದಿದ್ದಾರಂತೆ. ಮಂಡಳಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರದ ಮಟ್ಟದಲ್ಲಿ ಆದೇಶ ಹೊರಬರುವವರೆಗು ನೈತಿಕವಾಗಿ ಹುದ್ದೆಯಲ್ಲಿರುವುದು ಸರಿಯಲ್ಲ ಎನ್ನುವ ವಿವೇಚನೆ ಅವರಿಗಿರಬೇಕಿತ್ತೇನೋ..? ಆದರೆ ನಿರಂಜನ್ ಅವರು ಮಾತ್ರ ಆರಂಭದ ದಿನದಿಂದಲೇ ಕಚೇರಿಗೆ ಬಂದು ಕೆಲಸ ಮಾಡಲು ಶುರುಮಾಡಿದ್ದಾರಂತೆ. ಮಂಡಳಿಯಲ್ಲಿ ಅತ್ಯಂತ ಲವಲವಿಕೆಯಿಂದ ಅಡ್ಡಾಡುತ್ತಾ ಕಡತಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದಾರೆನ್ನುವ ಮಾಹಿತಿ ಹೊರಬಿದ್ದಿದೆ.ನಿವೃತ್ತರಾದ ಮೇಲೆಯೂ ಮಂಡಳಿಯಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಬೇಕೆನ್ನುವ ಖಯಾಲಿ ನಿರಂಜನ್ ಅವರಿಗೆ ಏನಿದೆಯೋ ಗೊತ್ತಾಗುತ್ತಿಲ್ಲ.

ALSO READ :  "ರಿಪಬ್ಲಿಕ್ ಕನ್ನಡ"ದಲ್ಲಿ ಮತ್ತೆ  ಉದ್ಯೋಗ ಕಡಿತ..! ಮತ್ತಷ್ಟು ಉದ್ಯೋಗಿಗಳಿಗೂ  ಕೆಲಸ ಕಳೆದುಕೊಳ್ಳುವ ಆತಂಕ.!

ಸರ್ಕಾರದಿಂದ ಅನುಮೋದನೆ ಸಿಗುವವರೆಗೂ ಡಾ.ನಿರಂಜನ್ ಅವರು ಹುದ್ದೆಯಲ್ಲಿರುವುದು ಸರಿಯಲ್ಲ.ಅದು ಅವರ ನೈತಿಕತೆಯೂ ಅಲ್ಲ.ನನಗೆ ಹುದ್ದೆಯ ಆಸೆಯೇ ಇಲ್ಲ..ಅಧ್ಯಕ್ಷರೇನೇ ಕರೆದರು ಅದಕ್ಕೆ ಬಂದೆಯಷ್ಟೆ ಎಂದುಕೊಂಡು ಅಡ್ಡಾಡುತ್ತಿದ್ದಾರಂತೆ ನಿರಂಜನ್.ಅವರಿಗೆ ಹುದ್ದೆಯ ಆಸೆ ಇರಲಿಲ್ಲ ಎನ್ನುವುದಾದ್ರೆ ತಮ್ಮನ್ನು ನಿಯೋಜಿಸಿಕೊಳ್ಳುವಂತೆ ಅಧ್ಯಕ್ಷರ ಮೇಲೆ ಏಕೆ ಒತ್ತಡ ಹೇರಿದ್ರು..ಹುದ್ದೆ ನನಗೆ ಬೇಡ..ಮಂಡಳಿಯಲ್ಲಿರುವ ಅರ್ಹರಿಗೆ ಕೊಡಿ ಎಂದು ಏಕೆ ಹೇಳಲಿಲ್ಲ ಎನ್ನುವ ಪ್ರಶ್ನೆ ಕಾಡುತ್ತದೆ.ಹುದ್ದೆಯ ಮೇಲೆ ಆಸೆ ಇರುವುದರಿಂದಲೇ ಅಧ್ಯಕ್ಷರ ಮೇಲೆ ಒತ್ತಡ ತಂದು ಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆನ್ನುವುದು ಮಂಡಳಿಯಲ್ಲಿರುವ ಕೆಲವರ ಆರೋಪ.

ನಿರಂಜನ್ ಅವರ ಹುದ್ದೆ ಹಾಗು ನೇಮಕಾತಿ ವಿಚಾರದಲ್ಲಿ ಇಷ್ಟೆಲ್ಲಾ ಗೊಂದಲಗಳಾದ ಮೇಲೆಯೂ ಅದಕ್ಕೂ ನನಗೂ ಸಂಬಂಧವಿಲ್ಲ ಎನ್ನುವಂತಿರುವುದರ ಹಿಂದಿನ ಉದ್ದೇಶವೇನು.? ಅಧ್ಯಕ್ಷರು ಅವರನ್ನು ಯಾವ ಉದ್ದೇಶದಲ್ಲಿ ಕರೆದುಕೊಂಡು ಬಂದಿದ್ದಾರೆ.? ಮಂಡಳಿಯಲ್ಲಿ ಅನೇಕ ಅನುಭವಿಗಳಿದ್ರೂ ಇವರೇ ಬೇಕೆಂದು ಪಟ್ಟುಹಿಡಿದು ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರ ಹಿಂದಿನ ಮರ್ಮವೇನು ಎನ್ನುವುದು ಅನೇಕ ರೀತಿಯಲ್ಲಿ ಪ್ರಶ್ನೆಗೀಡಾಗುತ್ತಿದೆ.ಕೆಲವು ಮೂಲಗಳ ಪ್ರಕಾರ ಮಂಡಳಿಗೆ ಎಲ್ಲೆಲ್ಲಿಂದ ದುಡ್ಡು ಹರಿದು ಬರುತ್ತೆ. ಆರ್ಥಿಕ ಸಂಪನ್ಮೂಲಗಳು ಎಲ್ಲೆಲ್ಲಿಂದ ಪೂರೈಕೆಯಾಗುತ್ತವೆ ಎನ್ನುವುದು ಚೆನ್ನಾಗಿ ಗೊತ್ತಿರುವುದು ಡಾ.ನಿರಂಜನ್ ಅವರಿಗಂತೆ,.ಹಾಗಾಗಿ ಅಧ್ಯಕ್ಷರ ಮೊದಲ ಆಯ್ಕೆಯೇ ನಿರಂಜನ್ ಎನ್ನಲಾಗ್ತಿದೆ.ಇದಕ್ಕೆ ಅಧ್ಯಕ್ಷರು ಮತ್ತು ಡಾ.ನಿರಂಜನ್ ಅವರೇ ಕೊಡಬೇಕು.

ಡಾ.ನಿರಂಜನ್ ಅವರ ನೇಮಕಾತಿ ಬಗ್ಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಯಾವುದೇ ಆಕ್ಷೇಪಗಳಿಲ್ಲ.ಅವರ ಹಿರಿತನ ಮತ್ತು ಅನುಭವದ ಬಗ್ಗೆ ನಮಗೆ ಅಪಾರ ಗೌರವವಿದೆ.ಆದರೆ ತಾಂತ್ರಿಕ ಸಲಹೆಗಾರರ ನೇಮಕ ನಿಯಮಕ್ಕೆ ತದ್ವಿರುದ್ದವಾಗಿ ನಡೆದಿದೆ ಎನ್ನುವುದಷ್ಟೇ ನಮ್ಮ ಆಕ್ಷೇಪ. ಈ ಗೊಂದಲ ಮತ್ತು ಸಮಸ್ಯೆಯನ್ನು ನೀಗಿಸಿಕೊಂಡು ಅವರು ಹುದ್ದೆಗೆ ಬಂದರೆ ಅದು ಸ್ವಾಗತಾರ್ಹ.ಅದನ್ನು ಮಾಡದೆ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಲಿಕ್ಕೆ ಆದೇಶಿಸಿರುವುದು ಅಧ್ಯಕ್ಷರ ದುಡುಕು ಹಾಗು ದೋಷ-ಲೋಪಕ್ಕೆ ಕೈಗನ್ನಡಿ ಹಿಡಿದಂತಾಗಿದೆ.


Political News

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

ದಾವಣಗೆರೆ ದಕ್ಷಿಣದಲ್ಲಿ ಜಮೀರ್ ಗೈರುಹಾಜರಿ: ಸಮರ್ಥ್ ಶಾಮನೂರು ಗೆಲುವಿಗೆ ಮುಸ್ಲಿಂ ಮತಗಳೇ ಅಡ್ಡಿ?

‘ಪರಿಶ್ರಮ’ದ ಹೆಸರಲ್ಲಿ ಪ್ರದೀಪ್ ಈಶ್ವರ್ ರಾಜಕೀಯ ಪಾರುಪತ್ಯ? – ತೆರೆ ಮರೆಯ ಕರಾಳ ಸತ್ಯ ಬಯಲು!

ವಿಶ್ವ ರಾಜಕಾರಣದಲ್ಲಿ ಹೊಸ ಸಮೀಕರಣ: ಟ್ರಂಪ್-ಮೋದಿ ಕಾಲ್‌ನಲ್ಲಿ ಎಲಾನ್ ಮಸ್ಕ್ ಎಂಟ್ರಿ!

ನೇಪಾಳ:  ‘ಜೆನ್ ಜಿ’ ಪ್ರತಿಭಟನೆ ಹತ್ತಿಕ್ಕಿದ್ದ ಮಾಜಿ ಪ್ರಧಾನಿ ಓಲಿ ಸೆರೆ

ಜನಸಾಮಾನ್ಯರಿಗೆ ಕ್ಯೂ.. ಶಾಸಕರಿಗೆ ವಿಐಪಿ ವ್ಯೂ! ಇದು ‘ಹಸ್ತ’ ಸರ್ಕಾರದ ಅಸಲಿ ಮುಖವೇ?

Scroll to Top