ಮಾಲಿನ್ಯ ನಿಯಂತ್ರಣ ಮಂಡಳಿ(PCB) ಯಿಂದ “ಲಿಂಗರಾಜ್” ಔಟ್- ವಿವಾದಿತ IFS “ಗೋಕುಲ್” ಇನ್..

ಕೆಲವೇ ಕ್ಷಣಗಳ ಮುನ್ನ ಹೊರಬಿದ್ದ ಆದೇಶದಲ್ಲಿ ವಿವಾದಿತ ಐಎಫ್ ಎಸ್ ಅಧಿಕಾರಿ ಗೋಕುಲ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಇಷ್ಟು ದಿನ ಸದಸ್ಯ ಕಾರ್ಯದರ್ಶಿ ಯಾಗಿದ್ದ ಐಎಫ್ ಎಸ್ ಲಿಂಗರಾಜ್ ಅವರಿಗೆ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅಕ್ರಮ-ಹಗರಣ-ಭ್ರಷ್ಟಾಚಾರಗಳ ಗೂಡಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಲ್ಲಿ ಲಿಂಗರಾಜ್ ವರ್ಗಾವಣೆ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆ-ವ್ಯಾಖ್ಯಾನ ನೀಡಲಾಗುತ್ತಿದೆ.ಅಧ್ಯಕ್ಷ ನರೇಂದ್ರಸ್ವಾಮಿ ಅವರ ಜತೆ ಅಂಡರ್ ಸ್ಟ್ಯಾಂಡಿಂಗ್ ಸರಿಯಿರಲಿಲ್ಲ ಎನ್ನುವುದು … Read more

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಶುರುವಾಯ್ತಾ ನಿರಂಜನ್ ದರ್ಬಾರ್..!

ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದವರಂತೆ ತಮ್ಮ ಅತ್ಯಾಪ್ತ ನಿವೃತ್ತಿ ಅಧಿಕಾರಿಗೆ ಆಯಕಟ್ಟಿನ ಹುದ್ದೆ ದಯಪಾಲಿಸಿದ ಅಧ್ಯಕ್ಷ ನರೇಂದ್ರಸ್ವಾಮಿ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವುದು ತಿಳಿದೇ ಇದೆ.ಯಾವ ರೀತಿ ನಿಯಮಗಳನ್ನು ಅಧ್ಯಕ್ಷರು ಗಾಳಿಗೆ ತೂರಿದ್ದಾರೆ ಎನ್ನುವುದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು ಕೂಡ. ಮಾಡಿರೋ ತಪ್ಪನ್ನು ಸರಿಪಡಿಸಿಕೊಳ್ಳುತ್ತಾರಾ ಎಂದು ಕಾದರೂ ಯಾವುದು ಬದಲಾದಂಗೆ ಕಾಣುತ್ತಿಲ್ಲ.ಅಧ್ಯಕ್ಷರ ತಾಂತ್ರಿಕ ಸಲಹೆಗಾರ ಡಾ.ನಿರಂಜನ್ ಅವರು ಮಂಡಳಿಯಲ್ಲಿ ಅಂದಾದರ್ಬಾರ್ ಶುರುಮಾಡಿದ್ದಾರೆನ್ನುವ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ತಾಂತ್ರಿಕ ಸಲಹೆಗಾರರ ನೇಮಕವೇ ನಿಯಮಬಾಹಿರನಾ..?!

**ಡಾ.ಪಿ ನಿರಂಜನ್ ಅವರ ನೇಮಿಸಿಕೊಳ್ಳಲಿಕ್ಕೆ ಅಧ್ಯಕ್ಷ ನರೇಂದ್ರಸ್ವಾಮಿ  ನಿಯಮಗಳನ್ನೆಲ್ಲಾ ಗಾಳಿಗೆ ತೂರಿದ್ದೇಕೆ..?! **ಮಂಡಳಿಯಲ್ಲೇ ಅರ್ಹರಿರುವಾಗ ನಿವೃತ್ತರನ್ನೇ ನೇಮಿಸಿಕೊಳ್ಳುವ ಅಗತ್ಯವೇನಿದೆ..?! **ಮಂಡಳಿ ಸಭೆಯೇ ನಡೆದಿಲ್ಲ,ಅದ್ಹೇಗೆ ಡಾ.ಪಿ ನಿರಂಜನ್ ಅವರ ನೇಮಕಕ್ಕೆ ಅಂಕಿತ ಸಿಕ್ತು..!? **ಸರ್ಕಾರದ ಗಮನಕ್ಕೆ ತಾರದೆ ನೇಮಕ ನಡೆದಿದ್ದೇಗೆ..? ಸದಸ್ಯ ಕಾರ್ಯದರ್ಶಿ ಲಿಂಗರಾಜ್ ಸುಳ್ಳು ಹೇಳುತ್ತಿದ್ದಾರಾ..?! ಬೆಂಗಳೂರು:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(KARNATAKA POLLUTION CONTROLE BOARD) ಗೆ ನೂತನ ಸಾರಥಿಯಾಗಿರುವ ಮಳವಳ್ಳಿ ಶಾಸಕ ಎಂ.ನರೇಂದ್ರ ಸ್ವಾಮಿ(CHAIRMAN NARENDRASWAMY) ಅವಸರವಸರವಾಗಿ ತೆಗೆದುಕೊಳ್ಳುತ್ತಿರುವ ನಿರ್ದಾರಗಳು ಅವರಿಗೇನೆ ಮುಳುವಾಗುವ ಸಾಧ್ಯತೆಗಳಿವೆ ಎನ್ನಿಸುತ್ತೆ.ಈಗಾಗಲೇ … Read more

EXCLUSIVE…ಅಧಿಕಾರ ವಹಿಸಿಕೊಂಡ ದಿನವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ಬಿಗ್ ಶಾಕ್..!

*****ಆಯಕಟ್ಟಿನ ಹುದ್ದೆ  ಭರವಸೆ ಈಡೇರಿಸುವ ಭರಾಟೆಯಲ್ಲಿ  ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ.. *****ಅಧ್ಯಕ್ಷರಾಗಲು ಬೇಕಿರುವುದು ಬಿಇ( ಪರಿಸರ ವಿಜ್ನಾನ)-ನರೇಂದ್ರಸ್ವಾಮಿ ಓದಿರುವುದು ಬಿ.ಇ( ಸಿವಿಲ್) ಅಂತೆ.. ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿಯ ವಾಸ್ತುವೇ ಸರಿ ಇಲ್ಲ ಎನಿಸುತ್ತದೆ.ಯಾರೇ ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ.ಹೊಸ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದದ  ಹಿನ್ನಲೆಯಲ್ಲಿ ಇಂತದ್ದೊಂದು ಪ್ರಶ್ನೆ ಕಾಡುವುದು ಸಹಜ..ಆದರೆ ಇದು … Read more