“ಕ್ಯಾಮೆರಾ”ದಿಂದ ಶಾಶ್ವತಕ್ಕೂ “ಔಟ್ ಆಫ್ ಫೋಕಸ್” ಆದ ಪತ್ರಿಕಾ ಛಾಯಾಗ್ರಾಹಕ “ಶಿವಮೊಗ್ಗ ನಂದನ್”
“ದೇಹದಿಂದ ಆತ್ಮ ಹೊರ ಹೋಗುವುದೆಂದರೆ ಫ್ರೇಮಿನಿಂದ ಫೋಟೋ ಹೊರ ಹೋದಂತೆ..” ಶಿವಮೊಗ್ಗ ನಂದನ್ ಅವರ ಸಾವನ್ನು ನೆನೆದು ಹಿರಿಯ ಮಾದ್ಯಮ ಮಿತ್ರರಾದ ಶಿವಮೊಗ್ಗದ ಶಿ.ಜು ಪಾಷಾ ಬರೆದಿರುವ ಈ ಕವಿಸಾಲು ನಂದನ್ ಅವರ ಸಂಪೂರ್ಣ ಬದುಕು-ವ್ಯಕ್ತಿತ್ವ-ವೃತ್ತಿಯನ್ನೇ ಬಿಂಬಿಸುತ್ತದೆ. ಹೌದು…ಶಿವಮೊಗ್ಗ ಕಂಡ ಅತ್ಯದ್ಭುತ ಹಾಗೂ ಅಗಾಧ ಪ್ರತಿಭಾಶಾಲಿ ಛಾಯಾಗ್ರಾಹಕ ದೈಹಿಕವಾಗಿ ಫ್ರೇಮ್ ನಿಂದ ಔಟ್ ಆಫ್ ಫೋಕಸ್ ಆಗಿದ್ದಾರೆ.ಮತ್ತೆಂದೂ ಕ್ಯಾಮೆರಾ ಹಿಡಿಯಲಾರರು. ಕ್ಯಾಮೆರಾ ಧೂಳು ಹಿಡಿಯಬಹದು.ಆದರೆ ಅವರು ತೆಗೆದ ಲಕ್ಷಾಂತರು ಫೋಟೋಗಳು ನಂದನ್ ಅವರ ಇರುವಿಕೆಯನ್ನು ಜೀವಂತವಾಗಿಡಲಿವೆ.. ಶಿವಮೊಗ್ಗದಲ್ಲಿ … Read more




