ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?
ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ ದುಸ್ಸಾಹಸಕ್ಕೆ..! ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು ಮಾದ್ಯಮ ಉಳಿಸಿಕೊಂಡಿದೆ ಎನ್ನುವುದಾದ್ರೆ ಬೆರಳೆಣಿಕೆಯ ವಸ್ತುನಿಷ್ಟ ಪತ್ರಕರ್ತರೇ ಕಾರಣ..ಅಂಥಾ ಕೆಲವೇ ಕೆಲವು ಪತ್ರಕರ್ತರಲ್ಲಿ ಜಿ.ಮಹಾಂತೇಶ್ ಒಬ್ಬರು. ಅವರಲ್ಲಿ ಯಾವ ತರಹದ ವೃತ್ತಿನಿಷ್ಟೆಸತ್ಯಸಂದತೆಯಿನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪೋಟಕ ಸುದ್ದಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ದಿ ಫೈಲ್ … Read more