ಮಾದ್ಯಮಗಳಿಗೆ ವಿಧಾನಸೌಧಕ್ಕೆ ನೋ ಎಂಟ್ರಿ..? ಮಂತ್ರಿಮಹೋದಯರ ಭದ್ರತೆಗೆ ಧಕ್ಕೆಯಾಗುವ ನೆವ..?!ಎಸಿಪಿ ಯಿಂದ ಆಡಳಿತ ಸುಧಾರಣಾ ಇಲಾಖೆಗೆ ಪತ್ರ..?!

ಕರೆದಾಗ ಬರಬೇಕಂತೆ…ಹೇಳಿದ್ದಲ್ಲಿ ಬೈಟ್ ತಗೋಬೇಕಂತೆ..ಹಿಂದೆಮುಂದೆ ಅಡ್ಡಾಡುವಂತಿಲ್ವಂತೆ..ಹೇಳಿದಷ್ಟನ್ನೇ ಕೇಳ್ಕೊಂಡು ಹೋಗ್ಬೇಕಂತೆ..ಏನಿದು ಇದೆಲ್ಲಾ..?! ಬೆಂಗಳೂರು: ಕುಣಿಯಲಿಕ್ಕಾಗದವಳು ನೆಲ ಡೊಂಕು ಎಂದಳಂತೆ ಎನ್ನುವಂತಾಗಿದೆ ರಾಜ್ಯ ಸರ್ಕಾರದ ಧೋರಣೆ. ತನ್ನಲ್ಲಿರುವ ಹುಳುಕುಗಳನ್ನು ಸರಿ ಮಾಡಲು ಸಾಧ್ಯವಾಗದೆ ಮಾದ್ಯಮಗಳ ಮೇಲೆ ನಿರ್ಬಂದ-ನಿಯಂತ್ರಣ ಹೇರೊಕ್ಕೆ ಮುಂದಾಗಿದೆ ಎನ್ನಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವ ರೀತಿಯಲ್ಲಿ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೆ ಮಾದ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.ಮಾದ್ಯಮಗಳಿಂದ ಮಂತ್ರಿ ಮಹೋದಯರ ಸುರಕ್ಷತೆ-ಭದ್ರತೆಗೆ ಧಕ್ಕೆ ಆಗುತ್ತಿದೆ. ಸಚಿವಾಲಯದ ಕೆಲಸ ಕಾರ್ಯಗಳಿಗೆ ತೀವ್ರತರದ ತೊಂದರೆ ಆಗುತ್ತಿದೆ ಎನ್ನುವ … Read more

ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ  ದುಸ್ಸಾಹಸಕ್ಕೆ..! ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು ಮಾದ್ಯಮ ಉಳಿಸಿಕೊಂಡಿದೆ ಎನ್ನುವುದಾದ್ರೆ ಬೆರಳೆಣಿಕೆಯ ವಸ್ತುನಿಷ್ಟ ಪತ್ರಕರ್ತರೇ ಕಾರಣ..ಅಂಥಾ ಕೆಲವೇ ಕೆಲವು ಪತ್ರಕರ್ತರಲ್ಲಿ ಜಿ.ಮಹಾಂತೇಶ್ ಒಬ್ಬರು. ಅವರಲ್ಲಿ ಯಾವ ತರಹದ ವೃತ್ತಿನಿಷ್ಟೆಸತ್ಯಸಂದತೆಯಿನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪೋಟಕ ಸುದ್ದಿಗಳನ್ನೇ ಪ್ರಧಾನವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ದಿ ಫೈಲ್ … Read more