ಭಾರತೀಯ ಬಾಹ್ಯಾಕಾಶದ ಮೇರುವ್ಯಕ್ತಿತ್ವಕ್ಕೆ ಕಾಂಗ್ರೆಸ್ ಸರ್ಕಾರದಿಂದ ಅವಮಾನ-ಅಗೌರವ ..!

ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಯಾವ ಮಹಾನ್ ವ್ಯಕ್ತಿತ್ವ-ಮೇರು ಪ್ರತಿಭೆಯನ್ನು ಗುರುತಿಸಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ರೋ ಅಂಥವರನ್ನು ಬದುಕಿದ್ದಾಗ ಲಂತೂ ಅಲ್ಲ, ಅಟ್ಲೀಸ್ಟ್ ಸತ್ತ ಮೇಲಾದ್ರೂ ಗೌರವಯುತವಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಸೌಜನ್ಯಕ್ಕಾದ್ರೂ ಸರ್ಕಾರದಿಂದ ಸೂಕ್ತ ಗೌರವ-ವಿದಾಯ ಸಲ್ಲಿಸಬಹುದಿತ್ತೇನೋ..? ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬೇರೆಯದೇ ರಾಜಕೀಯ ವಿಚಾರಗಳಲ್ಲಿ ಮುಳುಗೋಗಿಬಿಟ್ಟಿತ್ತು..ಇದು, ಇಸ್ರೋದ ದೀರ್ಘಕಾಲದ ಅಧ್ಯಕ್ಷರು,ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಭಾರತದ ಹೆಮ್ಮೆಯ ಸಾಕ್ಷಿಪ್ರಜ್ನೆ, ಹಲವು ಪ್ರಥಮಗಳ ರೂವಾರಿ… ಗರಿಷ್ಠ ಸಾಧನೆಗಳ ಪ್ರವರ್ತಕ ಡಾ.ಕಸ್ತೂರಿ ರಂಗನ್ ಅವರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದ … Read more

ಶೈಕ್ಷಣಿಕ ನಿಯಮ ಉಲ್ಲಂಘಿಸಿ “ಡೆಲ್ಲಿ ಪಬ್ಲಿಕ್‌ ಸ್ಕೂಲ್‌” ನಿರ್ಮಾಣ..!?

ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿರುವ “ಕೈ“ಮುಖಂಡ ರೆಹಮಾನ್ ಖಾನ್ ಮಾಲೀಕತ್ವದ ಪ್ರತಿಷ್ಟಿತ ಡೆಲ್ಲಿ ಪಬ್ಲಿಕ್ ಸ್ಕೂಲ್ ಅಕ್ರಮನಾ..?! ಬೆಂಗಳೂರು:ಈ ನೆಲದಲ್ಲಿನ ಕಾನೂನು ಎಲ್ಲರಿಗೂ ಒಂದೇ ರೀತಿಯಾಗಿ ಅಪ್ಲೈ ಆಗಬೇಕು ಅಲ್ವಾ…? ಪ್ರತಿಷ್ಟಿತರು,ಬಲಾಢ್ಯರಿಗೊಂದು ಜನಸಾಮಾನ್ಯರಿಗೇ ಇನ್ನೊಂದು ಎನ್ನುವಂತ ಗೊಂದಲಕಾರಿ ವ್ಯವಸ್ಥೆ ಏನಾದ್ರೂ ಜಾರಿಯಲ್ಲಿದೆಯೇ..? ಇಂತದ್ದೊಂದು ಅನುಮಾನ ಸಹಜವಾಗಿ ಕಾಡೊಕ್ಕೆ ಕಾರಣ, ಎಲ್ಲಾ ನಿಯಮಗಳ ಮಾಹಿತಿ-ಅರಿವು ಇದ್ದ ಹೊರತಾಗ್ಯೂ ಕಾಂಗ್ರೆಸ್‌ ನ ಪ್ರಭಾವಿ ಮುಖಂಡನ ಮನೆತನ ಶೈಕ್ಷಣಿಕ ಅಕ್ರಮ ನಡೆಸಿರೋದು… ಅಂದ್ಹಾಗೆ ಇಂತದ್ದೊಂದು ಆಪಾದನೆ ಕೇಳಿಬಂದಿರೋದು ಕಾಂಗ್ರೆಸ್‌ ನ ಪ್ರಭಾವಿ ಮುಸ್ಲಿಂ … Read more

ಮಹಿಳಾ ದಿನಾಚರಣೆಯಂದು ಮಹಿಳಾ ಸಮುದಾಯಕ್ಕೆ ಗಿಪ್ಟ್.. ರಾಜ್ಯಸಭೆಗೆ ಸುಧಾಮೂರ್ತಿ ನೇಮಕ

ಬೆಂಗಳೂರು: ಮಹಿಳಾ ದಿನಾಚರಣೆಯಂದೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಮಹಿಳಾ ಸಮುದಾಯಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ.ಕರ್ನಾಟಕದ ಮಹಿಳಾ ಸಮುದಾಯದ ಐಕಾನ್ ( ಮಾದರಿ,ಆದರ್ಶ) ಎನಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಟಾನದ ಅಧ್ಯಕ್ಷೆ ಹಾಗೂ ಲೇಖಕಿ,ಸಮಾಜಸುಧಾರಕಿ ಸುಧಾಮೂರ್ತಿ ಅವರನ್ನು  ರಾಷ್ಟ್ರಪ್ರತಿ ದ್ರೌಪತಿ ಮುರ್ಮು ನಾಮನಿರ್ದೆಶಕ ಮಾಡಿದ್ದಾರೆ.ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು    ತಮ್ಮ ಎಕ್ಸ್ ಅಕೌಂಟ್ ನಲ್ಲಿ ಪ್ರಕಟಿಸಿದ್ದಾರೆ. ರಾ್ಜ್ಯದ ಜನತೆ ಮಟ್ಟಿಗೆ ತೀವ್ರ ಅಶ್ಚರ್ಯಕರ ಹಾಗೂ ಸಂತೋಷದಾಯಕ ಬೆಳವಣಿಗೆ ಎಂದೇ ಕರೆಯಿಸಿಕೊಂಡಿರುವ ಸುಧಾಮೂರ್ತಿ ಅವರ ರಾಜ್ಯಸಭೆಗೆ ನಾಮನಿರ್ದೇಶನ … Read more