ತಿಂಗಳೆಲ್ಲಾ ದುಡಿದ್ರೂ ಸುದ್ದಿಮನೆ ಮಿತ್ರರಿಗೇಕಿಲ್ಲ “ಸಂಪೂರ್ಣ” ಸಂಬಳ..!?
ಇದು… ಕನ್ನಡ ಸುದ್ದಿ ಚಾನೆಲ್ ಗಳ ಸಾಲಿಗೆ ಮತ್ತೊಂದಾಗಿ ಸೇರ್ಪಡೆಯಾಗುವ ಸಾಧ್ಯತೆ ಸೃಷ್ಟಿಸಿದ್ದ ಡಿಜಿಟಲ್ ಚಾನೆಲ್ ವೊಂದರ ಬೆಳವಣಿಗೆ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯ ಸುದ್ದಿಯಲ್ಲ.. ಏಕೆಂದರೆ ಕೆಲವು ವಿಶ್ವಸನೀಯ ಮೂಲಗಳ ಪ್ರಕಾರ, ಅಲ್ಲಿ ದುಡಿಯುತ್ತಿರುವ ಕೆಲವು ಮಾದ್ಯಮ ಸಿಬ್ಬಂದಿಗೆ ವೇತನವನ್ನೇ ನೀಡಿಲ್ಲ ಎನ್ನುವ ಮಾಹಿತಿ ಸುದ್ದಿಜಗತ್ತಿನಲ್ಲಿ ಪಸರ್ ಆಗಿದೆ. ಆರ್ಥಿಕವಾಗಿ ಆ ಡಿಜಿಟಲ್ ಚಾನೆಲ್ ನ ಸ್ತಿತಿ ಚೆನ್ನಾಗಿದ್ದರೂ ಸಿಬ್ಬಂದಿಯನ್ನು ಮಾತ್ರ ಸಂಬಳ ಕೊಡದೆ ಸತಾಯಿಸಲಾಗುತ್ತಿದೆಯಂತೆ. ಒಂದಷ್ಟು ಜನರಿಗೆ ಸಂಬಳ ಕೊಟ್ಟು ಇನ್ನೊಂದಷ್ಟು ಸಿಬ್ಬಂದಿ ವೇತನವನ್ನು ತಡೆಹಿಡಿದಿಟ್ಟುಕೊಳ್ಳಲಾಗಿದೆಯಂತೆ. … Read more