
ಬೆಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ಕಾಳಜಿ,ಒಳಿತಿಗೆ ಏನ್ ಕೆಲಸ ಮಾಡದಿದ್ರೂ ಪರ್ವಾಗಿಲ್ಲ.ನಿರ್ದಿಷ್ಟ ಅವಧಿ ಚುನಾವಣೆ ಹತ್ತಿರವಾಗ್ತಿದ್ದಂಗೆ ಪತ್ರಕರ್ತರ ಸಂಘದಲ್ಲಿ ಚಟುವಟಿಕೆ ಬಿರುಸುಗೊಳ್ಳುತ್ತವೆ. ಅದೇ ರೀತಿ ನವೆಂಬರ್ 9 ರಂದು( 09-11-2025) ನಡೆಯಲಿರುವ ರಾಜ್ಯವ್ಯಾಪಿ ಚುನಾವಣೆ ಕಣ ಕೂಡ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಘಟಕವಾರು ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.ಪತ್ರಕರ್ತರು ಅಧಿಕಾರದ ಚುಕ್ಕಾಣಿ ಹಿಡಿಯೊಕ್ಕೆ ಎಲ್ಲಾ ರೀತಿಯ ತಂತ್ರ-ಕುತಂತ್ರಗಾರಿಕೆ, ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ.

ರಾಜ್ಯದ ಎಲ್ಲಾ ಘಟಕಗಳದ್ದು ಒಂದು ಕೈಯಾದ್ರೆ ಬೆಂಗಳೂರು ನಗರ ಘಟಕದ ಚುನಾವಣೆಯದ್ದೇ ಇನ್ನೊಂದು ಕೈ ಎನ್ನಬಹುದು. ಏಕೆಂದ್ರೆ ಅಷ್ಟೊಂದು ಬಿರುಸಿನ ಮಟ್ಟದಲ್ಲಿ ಚುನಾವಣೆ ನಡೆಯುತ್ತದೆ.ಈ ಬಾರಿ ಕೂಡ ಅದೇ ಹಣಾಹಣಿ ಸೃಷ್ಟಿಯಾಗಿದೆ.ವಿವಿಧ ಸ್ಥಾನಗಳಿಗೆ ಅಭ್ಯರ್ಥಿಗಳು ಸ್ಪರ್ದೆ ಮಾಡಿದ್ದು ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.ವಿವಿಧ ಸ್ಥಾನಗಳಿಗೆ ಆಯ್ಕೆ ಕೋರಿ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಕೂಡ ಮುಗಿದಿದ್ದು ಅಖಾಡದಲ್ಲಿ ಉಳಿದಿರುವ ಅಭ್ಯರ್ಥಿಗಳ ಮಾಹಿತಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.
ಅಂದ್ಹಾಗೆ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಕೋರಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹಿರಿಯ ಪತ್ರಕರ್ತ ಸೋಮಶೇಖರ್ ಗಾಂಧಿ, ಮು.ವೆಂಕಟೇಶಯ್ಯ, ಎ.ಬಿ ಶಿವರಾಜ್ ಇದ್ದಾರೆ. ಹಾಗೆಯೇ ಉಪಾಧ್ಯಕ್ಷ ಸ್ಥಾನದ ಅಖಾಡದಲ್ಲಿ ಡಾ.ಕೆ.ಎಸ್ ಸ್ವಾಮಿ,ಎಚ್.ಕೆ ಬಸವರಾಜ್, ಬಿ.ಟಿ.ಶ್ರೀನಿವಾಸ್, ಪರಿಮಳ ಎಚ್.ಎಸ್,ಕೆ.ಎಂ ಜಕ್ರಿಯಾ ಉಳಿದಿದ್ದಾರೆ.
ಎಷ್ಟೇ ಚುನಾವಣೆಗಳಾಗಲಿ, ಯಾರೇ ಅಧ್ಯಕ್ಷರಾಗಿ ಆಯ್ಕೆ ಆಗಿ ಬರಲಿ, ಪತ್ರಕರ್ತರ ಸಮಸ್ಯೆಗಳು ಹಾಗೆಯೇ ಇವೆ. ಆಯ್ಕೆಯಾದವರು ಆಳುವ ಸರ್ಕಾರಗಳ ಹೊಗಳುಭಟ್ಟರಾಗುತ್ತಿರುವುದು ದುರಂತ.ಚಾನೆಲ್ ಹಾಗೂ ಪತ್ರಿಕೆ ಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಕೆಲಸ ಕಳೆದುಕೊಳ್ಳುತ್ತಿರುವ, ಸಂಬಳವಿಲ್ಲದೆ ಒದ್ದಾಡುವ, ಸೌಲಭ್ಯಗಳಿಲ್ಲದೆ ನರಳುವ ಪತ್ರಕರ್ತರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.ಪತ್ರಕರ್ತರಿಗೆ ಸಮಸ್ಯೆಗಳಾದಲ್ಲಿ ಅದನ್ನು ಪ್ರಶ್ನಿಸುವ ಪತ್ರಕರ್ತರ ಸಮಸ್ಯೆಗಳನ್ನು ಪ್ರತಿನಿಧಿಸುವ ಬದ್ಧತೆಯೇ ಪದಾಧಿಕಾರಿಗಳು ಮತ್ತು ಸಂಘದಲ್ಲಿ ಕಡಿಮೆ ಆಗುತ್ತಿದೆ.ಈ ಬಾರಿಯಾದರೂ ಆ ಕೆಟ್ಟ ಸಂಪ್ರದಾಯಕ್ಕೆ ಇತಿಶ್ರೀ ಹಾಡುವವರು ಆಯ್ಕೆ ಆಗಿ ಬರುತ್ತಾರಾ, ಕಾದು ನೋಡಬೇಕಿದೆ.
ಇನ್ನು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಬಯಿಸಿ ಅಂತಿಮ ಅಖಾಡದಲ್ಲಿ ಎಸ್.ಡಿ ಚಿಕ್ಕಣ್ಣ,ಟಿ.ಮೋಹನ್ ಉಳಿದಿದ್ದು ಕಾರ್ಯದರ್ಶಿ ಸ್ಥಾನಕ್ಕೆ ಕೆ.ಹರೀಶ್,ಕೆ.ಎಲ್ ಲೋಕೇಶ್,ಗೋದಾವರಿ ಅವರ ಹೆಸರುಗಳು ಅಂತಿಮಗೊಂಡಿವೆ.ಇನ್ನು ತಾಂತ್ರಿಕ ಕಾರಣಗಳಿಂದ ನಾಮಪತ್ರ ಸಲ್ಲಿಸಿದ ಹೊರತಾಗಿಯೂ ಅನೇಕ ದೋಷಗಳ ಕಾರಣದಿಂದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗೆ ಆಯ್ಕೆ ಬಯಿಸಿ ನರೇಂದ್ರ ಎಂ.ಪಾರಕೇಟ್ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕ್ರತವಾಗಿದೆ.

ಒಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ದೆ ಏರ್ಪಟ್ಟಿರುವುದಂತೂ ಸತ್ಯ.ಆದರೆ ಪ್ರತಿಬಾರಿಯ ಚುನಾವಣೆ ವೇಳೆಯೂ ಆಯ್ಕೆ ಬಯಸಿ ಕಣದಲ್ಲುಳಿವ ಅಭ್ಯರ್ಥಿಗಳು ಪತ್ರಕರ್ತರ ಏಳ್ಗೆ-ಅಭಿವೃದ್ಧಿ-ಪ್ರಗತಿ-ಕ್ಷೇಮಾಭಿವೃದ್ಧಿಗೆ ಹಲವಾರು ಯೋಜನೆ-ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರುತ್ತೇವೆ.ಅವರಿಗೆ ಎಲ್ಲೇ ಸಮಸ್ಯೆಯಾದ್ರೂ ಅದನ್ನು ಪ್ರಶ್ನಿಸಲು ಇರುತ್ತೇವೆ ಎಂದು ನೂರಾರು ಭರವಸೆ ಕೊಡ್ತಾರೆ.ಆದರೆ ಅವರ ಹಣೆಬರಹ ಆಯ್ಕೆಯಾದ ಮೇಲೆಯೇ ಗೊತ್ತಾಗುತ್ತದೆ.ಈ ಬಾರಿಯೂ ಅದೇ ಪುನರಾವರ್ತನೆಯಾದ್ರೆ ಚುನಾವಣೆ ನಡೆದೇನು ಪ್ರಯೋಜನ..ಆಯ್ಕೆಯಾಗಿ ಬಂದೇನು ಪ್ರಯೋಜನ ಎಂದು ಪತ್ರಕರ್ತರು ಪ್ರಶ್ನಿಸಲಾರಂಭಿಸಿದ್ದಾರೆ.











