ಬಿಡಿಎ ಆರ್ಥಿಕ ಸದಸ್ಯ( FM ) ಡಾ.ಲೋಕೇಶ್ “ಖುರ್ಚಿ” ಅಲುಗಿಸುವ “ಧಮ್ಮು-ತಾಕತ್ತು” ಯಾರಿಗಿದೆ..?!


-ಬಿಡಿಎನಲ್ಲಿ ನಾಲ್ಕು ವರ್ಷಕ್ಕಿಂತ ಸುಧೀರ್ಘ ಅವಧಿಯಿಂದಲೂ ಖುರ್ಚಿಗೆ ಅಂಟಿಕೊಂಡಿದ್ದಾರಂತೆ ಡಾ.ಲೋಕೇಶ್‌

-ಎರಡು ಬಾರಿ ವರ್ಗಾವಣೆಯಾದಾಗ್ಲೂ ಸರ್ಕಾರವನ್ನೇ ಮ್ಯಾನೇಜ್‌ ಮಾಡಿ ರದ್ದುಮಾಡಿಸಿಕೊಂಡ ಆರೋಪ ಅವರ ಮೇಲಿದೆ

‌-ಇವತ್ತಿಗೆ  ಬಿಡಿಎನ ದಿ ಮೋಸ್ಟ್‌ ಪವರ್‌ ಫುಲ್‌ ಮ್ಯಾನ್‌ ಎಂದೇ ಹೆಸರಾಗಿದ್ದಾರಂತೆ ಡಾ.ಲೋಕೇಶ್

-ಅಧ್ಯಕ್ಷ ಹ್ಯಾರೀಸ್‌,ಕಮಿಷನರ್‌ ಮಣಿವಣ್ಣನ್‌ ವಿರುದ್ದವೇ ತೊಡೆ ತಟ್ಟಬಹುದಾದ ಕೆಪಾಸಿಟಿ ಇರುವ ಅಧಿಕಾರಿಯಂತೆ ಲೋಕೇಶ್‌

ಬಿಡಿಎ ಆರ್ಥಿಕ ಸದಸ್ಯ ಡಾ.ಎ ಲೋಕೇಶ್‌ ಅವರ ಜಬರ್‌ ದಸ್ತ್‌ ಫೋಸ್..
ಬಿಡಿಎ ಆರ್ಥಿಕ ಸದಸ್ಯ ಡಾ.ಎ ಲೋಕೇಶ್‌ ಅವರ ಜಬರ್‌ ದಸ್ತ್‌ ಫೋಸ್..

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ದಿ ಮೋಸ್ಟ್‌ ಪವರ ಫುಲ್‌ ಪರ್ಸನ್‌ ಯಾರು ಎಂದು ಕೇಳಿದ್ರೆ ಅಧ್ಯಕ್ಷ ಎನ್‌ ಎ ಹ್ಯಾರೀಸ್‌ ಮತ್ತು ಕಮಿಷನರ್‌ ಮಣಿವಣ್ಣನ್‌ ಹೆಸರು ಪ್ತಸ್ತಾಪವಾಗುವುದು ಸಹಜ.ಆದರೆ ಸಧ್ಯದ ಸನ್ನಿವೇಶದಲ್ಲಿ ಇವರಿಬ್ಬರೂ ಅಲ್ಲ ಎನ್ನಬೇಕಾಗ್ತದೆ.ಸಧ್ಯದ ಮಟ್ಟಿಗೆ ಅಂತದ್ದೊಂದು ಪವರ್‌ ಫುಲ್‌ ಪೊಸಿಷನ್‌ ನಲ್ಲಿ ಯಾರಾದ್ರೂ ಇದಾರೆ ಎಂದ್ರೆ ಅದು ಒನ್‌ ಎಂಡ್‌ ಒನ್ಲಿ ಡಾ.ಎ ಲೋಕೇಶ್‌ ಎನ್ನುವ ಅಧಿಕಾರಿ..ಅಂದ್ಹಾಗೆ ಬಿಡಿಎ ನಲ್ಲಿ ದಿ ಮೋಸ್ಟ್‌ ಪವರ್‌ ಫುಲ್‌ ಪೊಸಿಷನ್‌ ನಲ್ಲಿ ಮೂರನೇ ಸ್ಥಾನ ಪಡೆಯುವ ಆರ್ಥಿಕ ಸದಸ್ಯರ ಹುದ್ದೆಯಲ್ಲಿರುವ ಈ ಅಧಿಕಾರಿ  ತನ್ನ ವರ್ಗಾವಣೆ ವಿಚಾರದಲ್ಲಿ  ಸರ್ಕಾರವನ್ನೇ  ಮ್ಯಾನೇಜ್‌ ಮಾಡುತ್ತಾರೆಂದ್ರೆ ಅದಕ್ಕಿಂತ ಮೊಡ್ಡ ನಿದರ್ಶನ ಬೇಕಾ ಇವರ ಪವರ್‌ ಗೆ..ಅಂದ್ಹಾಗೆ ಆಗಿರುವುದೇನು..? ಇಲ್ಲಿದೆ ನೋಡಿ ಆ ಇಂಟರೆಸ್ಟಿಂಗ್‌ ಸ್ಟೋರಿ.

ಅಂದ್ಹಾಗೆ ಬಿಡಿಎ ನಲ್ಲಿ ಸಧ್ಯಕ್ಕೆ ಅಲ್ಲಿನ ಆರ್ಥಿಕ ಅಧಿಕಾರಿ( ಎಫ್‌ ಎಂ) ಡಾ.ಎ ಲೋಕೇಶ್‌ ಅವರದ್ದೇ ಸುದ್ದಿ.ಅದಕ್ಕೆ ಕಾರಣ,ತನಗೆ ಆಗಿದ್ದ ಟ್ರಾನ್ಸ್‌ ಫರ್‌ ನ್ನು ಸರ್ಕಾರದ ಮಟ್ಟದಲ್ಲಿರೋರನ್ನೇ ಮ್ಯಾನೇಜ್ ಮಾಡಿ ಆದೇಶವನ್ನು ರದ್ದು ಮಾಡಿಸಿಕೊಂಡ್ರಂತೆ ಎನ್ನೋದೇ ಸಧ್ಯಕ್ಕೆ ಗುಸುಗುಸು..ಬಿಡಿಎ ನಲ್ಲಿರುವ ಸಧ್ಯದ ಸ್ಥಿತಿಯಲ್ಲಿ ಆಗುತ್ತಿರುವ ಟಾಕ್ಸ್‌ ಗಮನಿಸಿದಾಗ ಅದು ಸತ್ಯವಿರಬೇಕೋ ಎನ್ನಿಸುತ್ತೆ.ಏಕಂದ್ರೆ ಡಾ.ಎ ಲೋಕೇಶ್‌ ಅವರ ವರ್ಗಾವಣೆ ಆರ್ಡರ್‌ ಬಂದಾಗ ಅದನ್ನು ಅನುಷ್ಟಾನಗೊಳಿಸಲು ಖುದ್ದು ಪ್ರಯತ್ನಿಸಿದವರು ಅಧ್ಯಕ್ಷ ಹ್ಯಾರೀಸ್‌ ಮತ್ತು ಕಮಿಷನರ್‌ ಮಣಿವಣ್ಣನ್‌ ಅವರಂತೆ.ಏಕೆಂದರೆ ಬಿಡಿಎಗೆ ಸಾಹೇಬರು ಬಂದು ನಾಲ್ಕು ವರ್ಷಗಳಾದರೂ ಇಲ್ಲಿಂದ ಕದಲುವ ಲಕ್ಷಣವೇ ತೋರುತ್ತಿರಲಿಲ್ಲ..

ಯಾರೇ ಕೇಳಿದ್ರೂ ಆರ್ಡರ್‌ ನ್ನು ಕ್ಯಾನ್ಸಲ್‌ ಮಾಡಿಸಿಕೊಂಡು ಬರುತ್ತೇನೆ.ಇಲ್ಲಿಯೇ ಮುಂದುವರೆಯುತ್ತೇನೆ..ಅದ್ಯಾರಿಗೆ ತಾಕತ್ತು-ಧಮ್ಮು ಇದೆಯೋ ಟ್ರೈ ಮಾಡಲಿ ಎಂದು ಹೇಳಿಕೊಂಡು ತಿರುಗುತ್ತಿ ದ್ದರೆನ್ನಲಾದ ಮಾತು ಈ ಇಬ್ಬರ ಕಿವಿಗೂ ಬಿದ್ದಿತ್ತಂತೆ.ಇದರಿಂದ ಉರಿದು ಹೋಗಿದ್ದ ಅವರಿಬ್ಬರು ತಮಗಿರುವ ಶಿಫಾರಸ್ಸು-ಪವರ್‌ ನ್ನು ಲೋಕೇಶ್‌ ಹಠಾವೋ ಆಂದೋಲನಕ್ಕೆ ಬಳಸಿದ್ರಂತೆ.ಆದರೆ ಲೋಕೇಶ್‌ ಅವರ ಪವರ್‌ ಮುಂದೆ ಠುಸ್‌ ಆಗಿದ್ರಿಂದ ಲೋಕೇಶ್‌ ಅವರೇ ಬಿಡಿಎ ನ ದಿ ಮೋಸ್ಟ್‌ ಪವರ್‌ ಫುಲ್‌ ಆಫೀಸರ್‌ ಎಂದು ಕರೆಯಿಸಿಕೊಳ್ಳಲಾರಂಭಿಸಿದ್ರು ಎನ್ನುವ ರಸವತ್ತಾದ ಕಥೆಗಳು ಬಿಡಿಎನಲ್ಲಿ ಸುಳಿದಾಡಲಾರಂಭಿಸಿವೆ.ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿಯೇ ಡಾ.ಲೋಕೇಶ್‌ ಅವರ ವರ್ತನೆ-ಆಟಿಟ್ಯೂಡ್‌ ಇದೆ ಎನ್ನುವ ಆರೋಪವೂ ಕೇಳಿಬರುತ್ತಿದೆ.

ಬಿಡಿಎ ಅಧ್ಯಕ್ಷ ಎನ್‌ ಎ ಹ್ಯಾರೀಸ್
ಬಿಡಿಎ ಅಧ್ಯಕ್ಷ ಎನ್‌ ಎ ಹ್ಯಾರೀಸ್
ಬಿಡಿಎ ಆಯುಕ್ತ ಕ್ಯಾ.ಮಣಿವಣ್ಭನ್‌
ಬಿಡಿಎ ಆಯುಕ್ತ ಕ್ಯಾ.ಮಣಿವಣ್ಭನ್‌

ನಿಮಗೆ ಗೊತ್ತಿರಲಿ ಎಂದು ಹೇಳ್ತೇವೆ ಕೇಳಿ.ಹಾಗೆ ನೋಡಿದ್ರೆ ಡಾ.ಎ ಲೋಕೇಶ್‌ ಬಿಡಿಎ ನ್ನು ತೊರೆದು ವರ್ಷಗಳ ಹಿಂದೆಯೇ ಹೋಗಬೇಕಿತ್ತಂತೆ.ಅವರಿಗೆ ಈ ಹಿಂದೆಯೇ ವರ್ಗವಾಗಿತ್ತಂತೆ.ಆದರೆ ಅದ್ಯಾವ ಕಾರಣಕ್ಕೆ ಇಲ್ಲಿನ ಖುರ್ಚಿಗಂಟಿಕೊಂಡರೋ ಗೊತ್ತಿಲ್ಲ.ಅವತ್ತು ಲಾಭಿ ಮಾಡಿ ಉಳಿದುಕೊಂಡರಂತೆ.ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಯಾಗಿದ್ರೆ ಇದಲ್ಲ ಇನ್ನೊಂದು..ಕೆಲಸ ಮಾಡೋದೇ ನಿಜ ಎಂದ ಮೇಲೆ ಇಲ್ಲಿ ಅಲ್ಲದಿದ್ರೆ ಇನ್ನೊಂದು ಕಡೆ ಎಂದುಕೊಂಡು ಹೋಗಬೇಕಿತ್ತು.ಆದರೆ ಹಾಗೆ ಮಾಡದಿರುವುದೇ ಲೋಕೇಶ್‌ ಅವರ ದಕ್ಷತೆ-ಪ್ರಾಮಾಣಿಕತೆ ಬಗ್ಗೆ ಅನುಮಾನಿಸುವಂತೆ ಮಾಡಿದೆ. ಅದಾದ ನಂತರ ಮೊನ್ನೆ ಅಂದ್ರೆ ಜೂನ್‌ ನಲ್ಲಿಯೇ ಡಾ.ಲೋಕೇಶ್‌ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ವರ್ಗವಾಗಿದೆ.ಅಲ್ಲಿ ಕೆಲಸ ಮಾಡ್ತಿದ್ದ ಅಮರೇಶ್‌ ಎನ್ನುವ ಅಧಿಕಾರಿಯನ್ನು ಇಲ್ಲಿಗೆ ವರ್ಗ ಮಾಡಲಾಗಿತ್ತು.ಆದರೆ ಆಗಲೂ ಅದೇ ಲಾಭಿ ಮುಂದುವರೆಸಿ ಅಲ್ಲಿಯೂ ಗೆದ್ದು ಬಂದರು.ಈಗ ಲೋಕೇಶ್‌ ಅವರ ಗತ್ತು ಹೇಗಿದೆ ಎಂದ್ರೆ ನನ್ನನ್ನು ಯಾರಾದರೊಬ್ಬರು ಇಲ್ಲಿಂದ ಕಳುಹಿಸಬೇಕು ಎಂದ್ರೆ ಅದು ಸಿಎಂ ಮಾತ್ರ ಎನ್ನುವ ಮಟ್ಟದ ಬಿಲ್ಡಪ್‌ ಕೊಟ್ಟಿಕೊಂಡು ಅಡ್ಡಾಡುತ್ತಿದ್ದಾರೆ.ಕಮಿಷನರ್‌ ಮತ್ತು ಅಧ್ಯಕ್ಷರಿಗೂ ಕ್ಯಾರೆ ಎನ್ನುತ್ತಿಲ್ಲವಂತೆ ಎನ್ನುವ ಮಾತುಗಳಿವೆ.

ALSO READ :  BBMP ನೌಕರರ ಸಂಘಕ್ಕೆ ಮಹತ್ವದ ಗೆಲುವು:ಅಧ್ಯಕ್ಷ ಅಮೃತರಾಜ್ ಗೆ 10 ಲಕ್ಷ ಮಾನನಷ್ಟ ನೀಡುವಂತೆ ನೌಕರ ಮಾಯಣ್ಣಗೆ ಆದೇಶ..

ಅಂದ್ಹಾಗೆ ಡಾ.ಎ ಲೋಕೇಶ್‌ ಅವರು ಬಿಡಿಎ ಗೆ ಬಂದು ನಾಲ್ಕು ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ ಎನ್ನುವ ಮಾತಿದೆ.ಇದು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗೆ ಸುದೀರ್ಘ ಅನಿಸಲೇಬೇಕು.ಆದರೆ ಡಾ.ಲೋಕೇಶ್‌ ಅವರ ಮನಸ್ಥಿತಿ ಹಾಗೂ ನಿರ್ದಾರ ಹೇಗಿದೆ ಎಂದರೆ ನಾನು ನಿವೃತ್ತಿ ಇಲ್ಲಿಯೇ ಆಗಬೇಕು.ಅಲ್ಲಿವರೆಗೂ ನನ್ನನ್ನು ಯಾರೊಬ್ಬರೂ ಅಲುಗಾಡಿಸಬಾರದೆಂಬ ಆಲೋಚನೆಯಲ್ಲಿರುವಂತಿದೆ.ಹಾಗಾಗಿನೇ ಯಾರೆಷ್ಟೇ ಪ್ರಯತ್ನ ಮಾಡಿದ್ರೂ ಯಾರಿಂದ ಅದನ್ನು ಕ್ಯಾನ್ಸಲ್‌ ಮಾಡಿಸಬೇಕೋ ಅವರಿಂದ ಅಚ್ಚುಕಟ್ಟಾಗಿ ಮಾಡಿಸಿಕೊಂಡು ಬರುತ್ತಿದ್ದಾರಂತೆ.ಖುದ್ದು ಸಿಎಂ ಅವರೇ  ನಿವೃತ್ತಿವರೆಗೂ ಡಾ.ಲೋಕೇಶ್‌ ಅವರ ತಂಟೆಗೆ ಯಾರೊಬ್ಬರೂ ಹೋಗಬಾರದು.ಅವರನ್ನು ಡಿಸ್ಟರ್ಬ್‌ ಮಾಡಬಾರದು.. ತಮ್ಮ ನಿವೃತ್ತಿಯನ್ನು ಅಲ್ಲಿಯೇ ಸುಗಮವಾಗಿ ಕಳೆಯಬೇಕು ಎಂದು ಫರ್ಮಾನ್‌ ಹೊರಡಿಸಿದ್ದಾರೆನ್ನುವ ಮಾತು ಬಿಡಿಎನಲ್ಲಿ ಲೋಕೇಶ್‌ ಅವರೇ ಹರಿಯಬಿಟ್ಟಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.ಇದಕ್ಕೆ ಲೋಕೇಶ್‌ ಅವರೇ ಸ್ಪಷ್ಟನೆ ಕೊಡಬೇಕಷ್ಟೆ.‌

ಡಾ.ಲೋಕೇಶ್‌ ಅವರ ವರ್ಗಾವಣೆ ಸಂಬಂಧದ ಆದೇಶ ಪ್ರತಿ
ಡಾ.ಲೋಕೇಶ್‌ ಅವರ ವರ್ಗಾವಣೆ ಸಂಬಂಧದ ಆದೇಶ ಪ್ರತಿ

ಬಿಡಿಎನ ಪವರ್‌ ಫುಲ್‌ ಖುರ್ಚಿಯಲ್ಲಿ ಕುಳಿತು ನಾಲ್ಕು ವರ್ಷಗಳಾದ್ರೂ ಡಾ.ಎ ಲೋಕೇಶ್‌ ಅಲ್ಲಿಂದ ಕದಲಿಲ್ಲ..ಕದಲುವ ಲಕ್ಷಣ ಸಧ್ಯಕ್ಕಂತೂ ಗೋಚರಿಸುತ್ತಿಲ್ಲ. ನಾನು ರಿಟೈರ್‌ ಆಗುವವರೆಗೂ ಇಲ್ಲಿಯೇ ಇರುತ್ತೇನೆ.ಅದ್ಯಾವನಿಗೆ ನನ್ನನ್ನು ಟಚ್‌ ಮಾಡುವ ಧಮ್ಮು-ತಾಕತ್ತಿದೆ ನೋಡುತ್ತೇನೆ ಎಂದು ಅವರೇ ಹೇಳಿಕೊಂಡಿದ್ದಾರಂತೆ. ಕೆಪಾಸಿಟಿ ಇದ್ದರೆ ನನ್ನ ಖುರ್ಚಿ ಅಲುಗಾಡಿಸಲಿ ನೋಡ್ತೇನೆ ಎಂದು ತೊಡೆ ತಟ್ಟಿದ್ದಾರಂತೆ.ಇದರಿಂದ ನಖಶಿಖಾಂತ ಉರಿದುಕೊಂಡಿದ್ದಾರೆ ಎನ್ನಲಾಗುತ್ತಿರುವ ಅಧ್ಯಕ್ಷರು-ಕಮಿಷನರ್‌  ಅವರು ಏನೇ ಪ್ರಯತ್ನ ಮಾಡಿದ್ರೂ ಅದು ವರ್ಕೌಟ್‌ ಆಗ್ತಿಲ್ಲವಂತೆ.ಏನ್‌ ಮಾಡ್ಬೇಕೆಂದು ತೋಚದೆ ಅಧ್ಯಕ್ಷ ಹ್ಯಾರೀಸ್‌,ಕಮಿಷನರ್‌ ಮಣಿವಣ್ಣನ್  ಇಬ್ಬರೂ ಕೈ ಕೈ ಹಿಸುಕಿಕೊಳ್ತಿದಾರೆ ಸರ್‌ ಅನ್ನತ್ತಾರೆ ಬಿಡಿಎನ ಅಧಿಕಾರಿಯೊಬ್ರು.

ಬಿಡಿಎ ಆರ್ತಿಕ ಸದಸ್ಯ ಡಾ.ಲೋಕೇಶ್‌ ಅವರನ್ನು ಆಹಾರ-ನಾಗರಿಕ ಸರಬರಾಜು ಇಲಾಖೆಗೆ ವರ್ಗಾವಣೆ ಮಾಡಿದ್ದ ಸಂಬಂಧದ ಆದೇಶ ಪ್ರತಿ
ಬಿಡಿಎ ಆರ್ಥಿಕ  ಸದಸ್ಯ ಡಾ.ಲೋಕೇಶ್‌ ಅವರನ್ನು ಆಹಾರ-ನಾಗರಿಕ ಸರಬರಾಜು ಇಲಾಖೆಗೆ ವರ್ಗಾವಣೆ ಮಾಡಿದ್ದ ಸಂಬಂಧದ ಆದೇಶ ಪ್ರತಿ

ಡಾ.ಎ ಲೋಕೇಶ್‌ ಅವರು ಖುರ್ಚಿಯಲ್ಲಿ ಕುತ್ಕೊಂಡು ಅಂದಾದರ್ಬಾರ್‌ ಮಾಡುತ್ತಿದ್ದಾರೆನ್ನುವುದು ಅವರ ಮೇಲಿನ ಆರೋಪ.ಬಿಡಿಎನಿಂದ ಯಾವುದೇ ನಯಾಪೈಸೆ ಖರ್ಚಾಗಬೇಕಂದ್ರೂ ಇವರ ಅನುಮತಿ ಬೇಕೇ ಬೇಕು.ಸಾವಿರಾರು ಕೋಟಿ ಬಜೆಟ್‌ ನ್ನು ಸರಿದೂಗಿಸಿಕೊಂಡು ಹೋಗುವ ಕೆಪಾಸಿಟಿ-ಕೇಪಬಿಲಿಟಿ ಎರರೂ ಅವರಲ್ಲಿದೆ.ಅವರು ಬಂದ ಮೇಲೆಯೇ ಬಿಡಿಎ ಆರ್ಥಿಕ ಸಂಕಷ್ಟದ ಪೊರೆ ಕಳಚಿಕೊಂಡು ಲಾಭದ ದಾರಣೆ ಮಾಡಿತೆನ್ನುವ ಮಾತಿದೆ.ಬಹುಷಃ ಅದೇ ಕಾರಣಕ್ಕೆ ಅವರನ್ನು ಯಾರು ಪ್ರಯತ್ನ ಮಾಡಿದ್ರೂ ಇಲ್ಲಿಂದ ಅಲುಗಾಡಿಸಲು ಸಾಧ್ಯವಾಗಿಲ್ಲವಂತೆ.ಸರ್ಕಾರದ ಮಟ್ಟದಲ್ಲಿ ತನ್ನ ಇಮೇಜನ್ನು ಡ್ಯಾಮೇಜ್‌ ಮಾಡಿಕೊಳ್ಳದಿರುವುದೇ ಡಾ.ಎ ಲೋಕೇಶ್‌ ಅವರಿಗೆ ಪ್ಲಸ್‌ ಆಗುತ್ತಿರುವ ಪಾಯಿಂಟ್.ಹಾಗಂತ ಅಕ್ರಮ ನಡೆದೇ ಇಲ್ಲವೆನ್ನುವ ಮಾತಿಲ್ಲ..ಹಾಗೆಂದು ನಡೆದಿರುವುದಕ್ಕೂ ಬಲವಾದ ಪುರಾವೆಗಳಿಲ್ಲ..ಡಾ.ಲೋಕೇಶ್‌ ಅವರಿಗೆ ಎಲ್ಲಿ..ಏನನ್ನು…ಯಾರನ್ನು ಏನೇನ್‌ ಮಾಡಬೇಕೆನ್ನುವ ಪರಿಜ್ಞಾನ-ಜಾಣ್ಮೆ ಇದೆಯಂತೆ.ಹಾಗಾಗಿನೇ ಎಲ್ಲಿಯೂ ಸಾಕ್ಷ್ಯ ಉಳಿಸದೆ ನಯನಾಜೂಕಿನಿಂದ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆನ್ನುವುದು ಬಿಡಿಎನಲ್ಲಿ ಕೇಳಿಬರುವ ಮಾತು.

ಡಾ.ಎ ಲೋಕೇಶ್‌ ಅವರನ್ನು ವರ್ಗಾವಣೆ ಮಾಡಿದ ಸರ್ಕಾರವೇ ಇದೀಗ ಅದನ್ನು ಕ್ಯಾನ್ಸಲ್‌ ಮಾಡಿ, ಅದೇ ಹುದ್ದೆಯಲ್ಲಿ ಮುಂದುವರೆಯುವಂತೆ ಆದೇಶಿಸಿದೆ ಎನ್ನುವುದಾದರೆ ಡಾ. ಲೋಕೇಶ್‌ ಅವರ ಕೆಪಾಸಿಟಿ ಇನ್ನೆಂತದ್ದು ಎನ್ನುವುದನ್ನು ಅಂದಾಜಿಸಿಕೊಳ್ಳಬಹುದು.ಆದರೆ ಯಾವ ಪುರುಷಾರ್ಥಕ್ಕಾಗಿ ಡಾ.ಲೋಕೇಶ್‌ ಹೀಗೆ ಮಾಡುತ್ತಿದ್ದಾರೆನ್ನುವುದೇ ಅನೇಕರ ಪ್ರಶ್ನೆ.ತಾವು ಪ್ರಾಮಾಣಿಕರು,ದಕ್ಷರು ಎನ್ನುವುದೇ ಆದಲ್ಲಿ ಬಿಡಿಎನಲ್ಲಿಯೇ ಏಕೆ ಮುಂದುವರೆಯಬೇಕು ಎಂದು ಹಠ ಹಿಡಿದು ಕೂತಿದ್ದಾರೋ ಗೊತ್ತಾಗುತ್ತಿಲ್ಲ.ಇದಕ್ಕೆ ಲೋಕೇಶ್‌ ಅವರನ್ನು ಕೇಳಲು ಕರೆ ಮಾಡಿದರೆ ನಾಟ್‌ ರೀಚಬಲ್. ಹಾಗೆಯೇ ಬಿಡಿಎನಲ್ಲಿ ಇಷ್ಟು ವರ್ಷಗಳವರೆಗೆ ಕೆಲಸ ಮಾಡುತ್ತಿರುವ ಲೋಕೇಶ್‌ ವಿರುದ್ಧ ಅನೇಕ ಆಪಾದನೆಗಳಿವೆ ಎನ್ನುವ ಮಾತಿದೆ.ಅದರ ಬಗ್ಗೆಯೂ ವಿವರಣೆ ಸಿಗುತ್ತಿಲ್ಲ.ಆದರೆ ದುರಾದೃಷ್ಟದ ವಿಚಾರ ಎಂದ್ರೆ ನಾಲ್ಕು ವರ್ಷಕ್ಕಿಂತ ಸುಧೀರ್ಘ ಅವಧಿವರೆಗೆ ಮುಂದುವರೆಯುತ್ತಾ ಬಂದಿರುವ ಡಾ.ಲೋಕೇಶ್‌ ಅವರಂಥ ಅಧಿಕಾರಿಗೆ ವರ್ಗಾವಣೆ ಮಾಡಿ ಮತ್ತೆ ಒತ್ತಡಕ್ಕೆ ಒಳಗಾಗಿ ತನ್ನ ಆದೇಶವನ್ನು ತಾನೇ ವಾಪಸ್‌ ತೆಗೆದುಕೊಳ್ಳುವ ಸರ್ಕಾರದ ಧೋರಣೆ ಇದೆಯೆಲ್ಲಾ ಅದು ಪ್ರಶ್ನಾರ್ಹ ಹಾಗೂ ಅಚ್ಚರಿದಾಯಕ.ಟ್ರಾನ್ಸ್‌ ಫರ್‌ ಮಾಡಿ ಅರಗಿಸಿಕೊಳ್ಳಲಿಕ್ಕೆ ತಾಕತ್ತು-ಧಮ್ಮು ಇಲ್ಲದಿದ್ದರೆ ವರ್ಗಾವಣೆಯಂಥ ನಾಟಕವನ್ನಾದ್ರೂ ಏಕೆ ಮಾಡಬೇಕು ಎನ್ನುವುದು ನಮ್ಮ ಪ್ರಶ್ನೆ.


Leave a Comment