MAJOR OPERATION IN TV9 KANNADA DIGITAL…!? TV-9 ಕನ್ನಡ ಡಿಜಿಟಲ್ ಟೀಮ್ ನ 8 ಉದ್ಯೋಗಿಗಳ ಕೆಲಸಕ್ಕೆ ಕುತ್ತು..?! “ಮನಿ-9” ಬಳಿಕ “ಡಿಜಿಟಲ್” ಗೆ ಆಪರೇಷನ್..?!

ಬೆಂಗಳೂರು: ಇದು ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಡಿಜಿಟಲ್ ವಿಭಾಗದ ಆಡಳಿತ  ಅಮಾಯಕ ಹಾಗು ಪ್ರಾಮಾಣಿ ಕ  ಸಿಬ್ಬಂದಿಯನ್ನು ಅಮಾನವೀಯವಾಗಿ ನಡೆಸಿಕೊಂಡಿದೆ ಎನ್ನಲಾದ ನೋವಿನ ಕಥೆ.?  ವರ್ಷಗಳಿಂದಲೂ  ಕೆಲಸ ಮಾಡುತ್ತಿದ್ದವರನ್ನು ಏಕಾಏಕಿ, ನಾಳೆಯಿಂದ ನಿಮ್ಮ ಸೇವೆ ನಮಗೆ ಅಗತ್ಯವಿಲ್ಲ,ಕೆಲಸಕ್ಕೆ ಬರಬೇಡಿ ಎಂದ್ಹೇಳಿಬಿಟ್ಟರೆ ತಮ್ಮ ಕಸುವನ್ನೆಲ್ಲಾ ಒಗ್ಗೂಡಿಸಿ ಕೆಲಸ ಮಾಡಿದ ಸಿಬ್ಬಂದಿಯ ಸ್ಥಿತಿ ಹೇಗಾಗಬೇಡ. ಅವರ ವೃತ್ತಿಜೀವನ-ಸಮಾಜದಲ್ಲಿ ಕಾಯ್ದುಕೊಂಡ ಘನತೆ-ಪ್ರತಿಷ್ಠೆ, ವೈಯುಕ್ತಿಕ ಜೀವನ, ಹೆಂಡತಿ ಮಕ್ಕಳು… ಸಾಲ,ಇನ್ ಸ್ಟಾಲ್ಮೆಂಟ್.. ಹೀಗೆ ಕೆಲಸ ನಂಬಿಕೊಂಡು ಮೈ ತುಂಬಾ ಮಾಡಿಕೊಂಡ … Read more

ಭಾರತ ಜಾತ್ಯತೀತ ರಾಷ್ಟ್ರ ಆಗಿರೋದು ಇಷ್ಟ ಇಲ್ವಾ?: ಸುಪ್ರೀಂಕೋರ್ಟ್ ಪ್ರಶ್ನೆ

ಭಾರತ ಜಾತ್ಯಾತೀತ ರಾಷ್ಟ್ರ ಆಗಿರುವುದು ನಿಮಗೆ ಬೇಡವಾ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿಗೆ ಅವರನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸಮಾಜವಾದ ಮತ್ತು ಜಾತ್ಯತೀಯ ಭಾರತ ಸಂವಿಧಾನದ ಆಧಾರಸ್ತಂಭಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ಹಲವಾರು ಬಾರಿ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿದೆ ಎಂದು ಹೇಳಿತು. ನ್ಯಾಯಮೂರ್ತಿ ಸಂಜೀವ್ … Read more

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ: ಕಾಂಗ್ರೆಸ್ ನಿಂದ ಸ್ಪರ್ಧೆ?

ಬಿಜೆಪಿ ವಿಧಾನಪರಿಷತ್ ಸ್ಥಾನಕ್ಕೆ ಸಿಪಿ ಯೋಗೇಶ್ವರ್ ರಾಜೀನಾಮೆ ನೀಡುವ ಮೂಲಕ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಕುತೂಹಲ ಘಟ್ಟ ತಲುಪಿದೆ. ಚನ್ನಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಸ್ಪರ್ಧಿಸಲು ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಜೆಡಿಎಸ್ ನಿಂದ ಸ್ಪರ್ಧಿಸಿದರೆ ಗೆಲುವು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದ ಬೆನ್ನಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸ್ಪೀಕರ್ ಭೇಟಿ ಮಾಡಿ ಸೋಮವಾರವೇ ರಾಜೀನಾಮೆ ಸಲ್ಲಿಸುವ … Read more

ಇರಾನ್ ಮೇಲೆ ಯುದ್ಧಕ್ಕೆ ಇಸ್ರೇಲ್ ಸೇನೆ ಸಜ್ಜು: ಅಮೆರಿಕ ರಹಸ್ಯ ದಾಖಲೆ ಸೋರಿಕೆ!

ಇರಾನ್ ಮೇಲೆ ಯುದ್ಧ ಸಾರಲು ಇಸ್ರೇಲ್ ಸೇನಾ ಸಿದ್ಧತೆ ಆರಂಭಿಸಿದ್ದು, ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕದ ಅತ್ಯಂತ ರಹಸ್ಯ ದಾಖಲೆ ಸೋರಿಕೆಯಾಗಿದೆ. ಅಮೆರಿಕದ ಅತ್ಯಂತ ಬಲಿಷ್ಠ ಗುಪ್ತಚರ ಸಂಸ್ಥೆಯಾದ ನ್ಯಾಷನಲ್ ಜಿಯೊಸ್ಪೆಟಲ್ ಇಂಟಲಿಜೆನ್ಸ್ ಏಜೆನ್ಸಿ (ಎನ್ ಜಿಎ) ನಮಗೆ ಅಮೆರಿಕದ ಗುಪ್ತಚರ ಸ್ಯಾಟಲೈಟ್ ಗಳು ಸಂಗ್ರಹಿಸಿದ ಛಾಯಾಚಿತ್ರಗಳ ವಿಮರ್ಶೆ ಮಾಡಲಾಗುತ್ತಿದ್ದು, ಇಸ್ರೇಲ್ ಸೇನಾ ತರಬೇತಿ ಆರಂಭಿಸಿದ್ದು, ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ತಿಳಿಸಿದೆ. ಅಕ್ಟೋಬರ್ … Read more

ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊ ಡೆಲಿವರಿ ಕಂಪನಿಗಳ ವಿರುದ್ಧ ತನಿಖೆಗೆ ಆಗ್ರಹ

ಜೊಮೊಟೊದ ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಸಂಸ್ಥೆಗಳು ಫುಡ್ ಡೆಲಿವರಿ ವಿಧಿಸುತ್ತಿರುವ ಶುಲ್ಕದ ಬಗ್ಗೆ ತನಿಖೆ ನಡೆಸಬೇಕು ಎಂದು ದೇಶದ ಅತೀ ದೊಡ್ಡ ಚಿಲ್ಲರೆ ಸಾಗಾಟದಾರರ ಒಕ್ಕೂಟ ಭಾರತೀಯ ಸ್ಪರ್ಧಾತ್ಮಕ ಆಯೋಗವನ್ನು ಆಗ್ರಹಿಸಿದೆ. ಆಹಾರ ಧಾನ್ಯಗಳಿಂದ ಹಿಡಿದು ಎಲೆಕ್ಟ್ರಾನಿಕ್ ವಸ್ತುಗಳನ್ನು ಕೇವಲ 10 ನಿಮಿಷದಲ್ಲಿ ತಲುಪಿಸುತ್ತೇವೆ ಎಂಬ ಭರವಸೆ ನೀಡುವ ಡೆಲಿವರಿ ಕಂಪನಿಗಳು ಖರೀದಿ ವ್ಯವಸ್ಥೆಯನ್ನೇ ಬದಲಿಸಿವೆ. ಅಮೆಜಾನ್ ಕಂಪನಿ ಇ-ಕಾಮರ್ಸ್ ಕಾಲಿಟ್ಟ ನಂತರ ಪ್ರತಿಯೊಂದು ವಸ್ತುಗಳು ಮನೆ ಬಾಗಿಲಿಗೆ ಡೆಲಿವರಿ ನೀಡುತ್ತಿವೆ. ನೆಸ್ಟ್ಲೆ, ಹಿಂದೂಸ್ತಾನ್ ಯುನಿಲಿವರ್ ನಂತಹ … Read more

ನ್ಯೂಜಿಲೆಂಡ್ ವನಿತೆಯರ ಟಿ-20 ಚಾಂಪಿಯನ್: ದ.ಆಫ್ರಿಕಾಗೆ 32 ರನ್ ಸೋಲು

ನ್ಯೂಜಿಲೆಂಡ್ ತಂಡ 32 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡ ವಿರುದ್ಧ ಸುಲಭ ಜಯ ಸಾಧಿಸಿ ವನಿತೆಯರ ಟಿ-20 ಚಾಂಪಿಯನ್ ಆಗಿ ಹೊರಹೊಮ್ಮಿದೆ. ಓಮನ್ ನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 129 ರನ್ ಗಳಿಸಲಷ್ಟೇ ಶಕ್ತವಾಯಿತು. … Read more

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ವೈದ್ಯ ಮತ್ತು 6 ವಲಸೆ ಕಾರ್ಮಿಕರ ಹತ್ಯೆ

ಸ್ಥಳೀಯ ವೈದ್ಯ ಹಾಗೂ 6 ವಲಸಿಗ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆ ಜಮ್ಮು ಕಾಶ್ಮೀರದ ಗಂಡ್ರೇಬೆಲ್ ಜಿಲ್ಲೆಯ ಸೋನಾಬರ್ಗ್ ನಲ್ಲಿ ನಡೆದಿದೆ. ಭಾನುವಾರ ಸಂಜೆ ನಿರ್ಮಾಣ ಹಂತದ ಸುರಂಗದ ಮೇಲೆ ದಾಳಿ ಮಾಡಿದ ಉಗ್ರರು 6 ಮಂದಿಯನ್ನು ಹತ್ಯೆಗೈದಿದ್ದಾರೆ. ಭಾರತೀಯ ಸೇನೆ ಘಟನೆ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಜೆಡ್-ಮಾರ್ಥ್ ಸುರಂಗದ ಕಾಮಗಾರಿ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದು, ನಾಗರಿಕರ … Read more

ಶಿಗ್ಗಾಂವಿ, ಸಂಡೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರಕಟ: ಚನ್ನಪಟ್ಟಣ ಜೆಡಿಎಸ್ ಪಾಲು!

ಕರ್ನಾಟಕ 3 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ 2 ಕ್ಷೇತ್ರಗಳಿಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದ್ದು. ಚನ್ನಪಟ್ಟಣದ ಟಿಕೆಟ್ ಗೌಪ್ಯವಾಗಿರಿಸಲಾಗಿದೆ. ಸಂಡೂರು ಕ್ಷೇತ್ರದಿಂದ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹಾಗೂ ಶಿಗ್ಗಾಂವಿ ಕ್ಷೇತ್ರದಿಂದ ಭರತ್ ಬಸವರಾಜ್ ಬೊಮ್ಮಾಯಿ ಸ್ಪರ್ಧಿಸಲಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿಲ್ಲ. ಮೂಲಗಳ ಪ್ರಕಾರ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಾಗಿದ್ದು, ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲಿದ್ದಾರೆ. ಶಿಗ್ಗಾಂವಿ ಕ್ಷೇತ್ರದಿಂದ ಮಾಜಿ … Read more

ಉದಯೋನ್ಮುಖರ ಏಷ್ಯಾಕಪ್ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತ `ಎ’ಗೆ ರೋಚಕ 7 ವಿಕೆಟ್ ಜಯ

ಸಂಘಟಿತ ಪ್ರದರ್ಶನ ನೀಡಿದ ಭಾರತ `ಎ’ ತಂಡ 7 ರನ್ ಗಳಿಂದ ಪಾಕಿಸ್ತಾನ ಶಹೀನ್ಸ್ ತಂಡದ ವಿರುದ್ಧ ರೋಚಕ ಜಯ ಸಾಧಿಸಿ ಉದಯೋನ್ಮುಖ ತಂಡಗಳ ಏಷ್ಯಾಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಓಮನ್ ನ ಅರ್ಮೆತ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 8 ವಿಕೆಟ್ ಕಳೆದುಕೊಂಡು 183 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ಶಹೀನ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ … Read more

ಏಕಾಂತ್ ಶಿಂಧೆ ಬಣದ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾದ ಗೌರಿ ಲಂಕೇಶ್ ಹತ್ಯೆಯ ಆರೋಪಿ!

ಜಾಮೀನಿನ ಮೇಲೆ ಬಿಡುಗಡೆ ಆಗಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮಹಾರಾಷ್ಟ್ರ ಮುಖ್ಯಮಂತ್ರಿ ಏಕಾಂತ್ ಶಿಂಧೆ ಬಣದ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶ್ರೀಕಾಂತ್ ಪಂಗಾರ್ಕರ್ 2001ರಿಂದ 2008ರ ಅವಧಿಯಲ್ಲಿ ಶಿವಸೇನೆಯ ಜಲ್ನಾ ವಾರ್ಡ್ ಪಾಲಿಕೆ ಸದಸ್ಯರಾಗಿದ್ದರು. 2017. ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪೊಲೀಸರು ಬಂಧಿಸಿದ್ದರು. ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆದ ಶ್ರೀಕಾಂತ್ ಪಂಗಾರ್ಕರ್ ಮಾಜಿ ಸಚಿವ ಅರ್ಜುನ್ ಖೋಡ್ಕರ್ ನೇತೃತ್ವದಲ್ಲಿ … Read more