advertise here

Search

ಸ್ಯಾಂಡಲ್‌ವುಡ್ Vs ಮೀಡಿಯಾ – ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಜಯ’ದರ್ಬಾರ್: ಕೆಂಡಾಮಂಡಲವಾದ ಸಿನಿ ಪತ್ರಕರ್ತರು!

kfcc president jayamala

ಬೆಂಗಳೂರು: ಚಿತ್ರರಂಗ ಮತ್ತು ಮಾಧ್ಯಮಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಿಲ್ಲದೆ ಮತ್ತೊಂದರ ಅಸ್ತಿತ್ವ ಕಷ್ಟ. ಆದರೆ, ದಶಕಗಳ ಕಾಲ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ನಡೆದುಕೊಂಡು ಬಂದಿದ್ದ ಈ ಪವಿತ್ರ ಸಂಬಂಧಕ್ಕೆ ಈಗ ‘ಅಧಿಕಾರ’ದ ಗ್ರಹಣ ಹಿಡಿದಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಗಾಂಧಿನಗರದ ಗಲ್ಲಿಗಳಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ನೂತನ ಸಾರಥಿ ಜಯಮಾಲಾ (jayamala) ಅವರ ಸುತ್ತ ಎದ್ದಿರುವ ವಿವಾದದ ಬಿರುಗಾಳಿ.

‘ಅಮ್ಮ’ನಂತಿದ್ದವರೇ ಈಗ ಅಂತರ ಕಾಯ್ದುಕೊಂಡರೇ?

ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ‘ಬಂಡಾಯ’ ಈಗ ಶುರುವಾಗಿದೆ. ಅಧ್ಯಕ್ಷ ಸ್ಥಾನದ ಚುನಾವಣೆಗೂ ಮುನ್ನ ಪತ್ರಕರ್ತರನ್ನು ಕಂಡರೆ ಅಕ್ಕರೆ, ಸೌಜನ್ಯದಿಂದ ಮಾತನಾಡಿಸುತ್ತಿದ್ದ ಅದೇ ಜಯಮಾಲಾ ಅವರು, ಪಟ್ಟಕ್ಕೇರುತ್ತಿದ್ದಂತೆಯೇ ‘ಸರ್ವಾಧಿಕಾರಿ’ಯಂತೆ ವರ್ತಿಸುತ್ತಿದ್ದಾರೆ ಎಂಬುದು ಸಿನಿ ಪತ್ರಕರ್ತರ ಆಪಾದನೆ. ಎರಡು ಕ್ಷೇತ್ರಗಳ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಬೇಕಿದ್ದವರೇ, ಈಗ ಅಂತರ ಕಾಯ್ದುಕೊಳ್ಳುವ ಮೂಲಕ ಗೋಡೆ ಕಟ್ಟಲು ಹೊರಟಿದ್ದಾರಾ? ಎಂಬ ಅಸಮಾಧಾನ ಸ್ಫೋಟಗೊಂಡಿದೆ.

ಪತ್ರಕರ್ತರ ಶಪಥ: ಮಂಡಳಿಯ ಮೆಟ್ಟಿಲು ಹತ್ತೊಲ್ಲ!

ನೂತನ ಅಧ್ಯಕ್ಷೆಯ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತಿರುವ ಬಹುತೇಕ ಸಿನಿ ಪತ್ರಕರ್ತರು ಈಗ ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. “ಜಯಮಾಲಾ ಅಧ್ಯಕ್ಷರಾಗಿರುವವರೆಗೆ ನಾವು ವಾಣಿಜ್ಯ ಮಂಡಳಿಯ ಮೆಟ್ಟಿಲು ತುಳಿಯುವುದಿಲ್ಲ” ಎಂಬ ಶಪಥ ಮಾಡಿದ್ದಾರಂತೆ. ಮಂಡಳಿಯ ಯಾವುದೇ ಕಾರ್ಯಚಟುವಟಿಕೆಗಳನ್ನು ಕವರ್ ಮಾಡದಿರಲು ಅಥವಾ ಪ್ರಸಾರ ಮಾಡದಿರಲು (Boycott) ನಿರ್ಧರಿಸುವ ಮೂಲಕ ಮಾಧ್ಯಮ ಲೋಕ ತನ್ನ ಸ್ವಾಭಿಮಾನದ ಪಣವನ್ನಿಟ್ಟಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ | ಜೋಗಿಯಿಂದ ‘ಕೆಡಿ’ತನಕ್ಕೆ ಜಾರಿದರೇ ಪ್ರೇಮ್? ‘ಸರ್ಸೆ’ ಹಾಡಿನ ಅಶ್ಲೀಲತೆಗೆ ಕನ್ನಡಿಗರ ಧಿಕ್ಕಾರ!

ವಿವಾದಕ್ಕೆ ತುಪ್ಪ ಸುರಿದ ಆ ‘ಎಂಟು’ ಅಂಶಗಳಾವವು:

ಪತ್ರಕರ್ತರನ್ನು ತೀರಾ ನಿಕೃಷ್ಟವಾಗಿ ಮತ್ತು ಮುಜುಗರ ತರುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಈ ಕೆಳಗಿನ ಆಪಾದನೆಗಳು ಸಾಕ್ಷಿ ನುಡಿಯುತ್ತಿವೆ:

ಶೌಚಾಲಯಕ್ಕೂ ಬೀಗ!: ಪತ್ರಕರ್ತರು ಮಂಡಳಿಯ ಟಾಯ್ಲೆಟ್ ಬಳಸಬಾರದು ಎಂದು ಅದಕ್ಕೆ ಬೀಗ ಹಾಕಲು ಸೂಚಿಸಿರುವುದು ಅತ್ಯಂತ ಕೀಳುಮಟ್ಟದ ನಡೆ ಎಂದು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಂಚದ ಕಳಂಕ: ಸಮಾಜದ ಕಣ್ಣಾಗಿರುವ ಪತ್ರಕರ್ತರ ವಿರುದ್ಧವೇ ಲಂಚದ ಆಪಾದನೆ ಹೊರಿಸುವ ಮೂಲಕ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ.

ಮಾಧ್ಯಮಗಳಿಗೆ ‘ಫರ್ಮಾನ್’: ಮಂಡಳಿಯ ಯಾವುದೇ ಸಭೆ ಅಥವಾ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸದಂತೆ ಮೌಖಿಕ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

ಮಾಹಿತಿ ಹರಣ: ವಾಣಿಜ್ಯ ಮಂಡಳಿಯ ಒಳಗಿನ ಯಾವುದೇ ವಿಚಾರಗಳು ಹೊರಗೆ ಸೋರಿಕೆಯಾಗಬಾರದು ಎಂಬ ಗುಪ್ತಚರ ಮಾದರಿಯ ಕಠಿಣ ನಿಯಮ ಜಾರಿಗೆ ತರಲಾಗಿದೆ.

ಲಘು ಮಾತುಗಳ ಪ್ರಹಾರ: “ಪತ್ರಕರ್ತರು ಮಂಡಳಿಯಲ್ಲಿ ಊಟ ಮಾಡುತ್ತಾರೆ, ನೀರು ಕುಡಿಯುತ್ತಾರೆ, ಗೂಳಿಯಂತೆ ನುಗ್ಗುತ್ತಾರೆ” ಎಂಬ ಅವಹೇಳನಕಾರಿ ಮಾತುಗಳು ಪತ್ರಕರ್ತರ ಸ್ವಾಭಿಮಾನಕ್ಕೆ ಪೆಟ್ಟು ನೀಡಿವೆ.

ಚಾನೆಲ್ ಹೆಡ್‌ಗಳಿಗೆ ಚಾಡಿ: ಪತ್ರಕರ್ತರ ವೃತ್ತಿಜೀವನಕ್ಕೆ ಸಂಚಕಾರ ತರುವ ಉದ್ದೇಶದಿಂದ ನೇರವಾಗಿ ಅವರ ಚಾನೆಲ್ ಮುಖ್ಯಸ್ಥರಿಗೇ ಚಾಡಿ ಹೇಳುವ ಮೂಲಕ ಅವರ ಬಾಯಿ ಮುಚ್ಚಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಅಕ್ರಮಗಳ ಮುಚ್ಚಿಡುವ ತಂತ್ರವೇ?: ಮಂಡಳಿಯಲ್ಲಿ ನಡೆಯುತ್ತಿರುವ ಎನ್ನಲಾದ ಅಕ್ರಮಗಳು ಎಲ್ಲಿ ಮಾಧ್ಯಮಗಳ ಮೂಲಕ ಬಯಲಾಗುತ್ತವೋ ಎಂಬ ಭಯದಿಂದ ಮೇಡಂ ಈ ರೀತಿ ಮಾಡುತ್ತಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.

ಸ್ವಾಭಿಮಾನಕ್ಕೆ ಸವಾಲು: ಸಿನೆಮಾ ಪತ್ರಕರ್ತರ ದಿಟ್ಟ ಹೆಜ್ಜೆ

ಸಿನೆಮಾ ಪತ್ರಕರ್ತರೆಂದರೆ ಕೇವಲ ಸುದ್ದಿ ಬಿತ್ತರಿಸುವವರಲ್ಲ, ಅವರು ಚಿತ್ರರಂಗದ ಏಳುಬೀಳುಗಳ ಸಾಕ್ಷಿಗಳು. ಅಧಿಕಾರ ಬರುತ್ತದೆ, ಹೋಗುತ್ತದೆ; ಆದರೆ ವೃತ್ತಿಪರತೆ ಶಾಶ್ವತ. ಅಧ್ಯಕ್ಷರಾಗುವ ಮೊದಲು ತೋರಿದ ವಿನಯವಂತಿಕೆ ಮರೆಯಾಗಿ, ಈಗ “ನಾನು ಹೇಳಿದಂತೆ ಪತ್ರಕರ್ತರು ಕೇಳಬೇಕು” ಎನ್ನುವ ಮನಸ್ಥಿತಿ ಬೆಳೆಸಿಕೊಂಡಿರುವುದು ದುರಂತ. ಆದರೆ, “ನಾವು ಸ್ವಾಭಿಮಾನ ಮರೆತು ಬದುಕುವವರಲ್ಲ” ಎಂದು ಪತ್ರಕರ್ತರು ಸಿಡಿದೆದ್ದಿದ್ದಾರೆ.

ಮಾಜಿ ಅಧ್ಯಕ್ಷರ ಮಾತು

ಅಧ್ಯಕ್ಷರ ಬಗ್ಗೆ ಕೇಳಿಬಂದಿರುವ ಈ ಆಪಾದನೆ ನಿಜಕ್ಕೂ ಗಂಭೀರವಾದದ್ದು.  ಮಾದ್ಯಮ ಮತ್ತು ಸಿನೆಮಾರಂಗ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನಮ್ಮ ಸಿನೆಮಾ ರಂಗ ಉಸಿರಾಡುತ್ತಿರುವುದು, ಜೀವಂತಿಕೆ ಇರುವುದರಲ್ಲಿ ನಮ್ಮ ಸಿನಿ ಪತ್ರಕರ್ತರ ಪಾತ್ರ ಹಿರಿದು. ಇದನ್ನು ಅತ್ಯಂತ ಜತನ ಹಾಗೂ ಜವಾಬ್ದಾರಿಯಿಂದ ಕಾಯ್ದುಕೊಂಡು ಬಂದಿದ್ದೇವೆ. ಆದರೆ ಹೊಸ ಅಧ್ಯಕ್ಷರು ಬರುತ್ತಿದ್ದಂತೆ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಸರಿಯಲ್ಲ. ನಮ್ಮ ಸಿನೆಮಾ ರಂಗದ ಚಟುವಟಿಕೆಗಳನ್ನೇ ಬ್ಯಾನ್ ಮಾಡುತ್ತೇವೆ ಎಂದು ನಮ್ಮ ಮಾದ್ಯಮ ಮಿತ್ರರು ಬಂಡಾಯ ಸಾರಿರುವುದು ನಮಗೆ ಅಘಾತ ತಂದಿದೆ. ಕೆಲವು ಮಾದ್ಯಮ ಮಿತ್ರರು ಇದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ನಮ್ಮಿಬ್ಬರ ನಡುವಿನ ಸಂಬಂಧ ಹಳಸುವುದು ಒಳ್ಳೆಯ ಬೆಳವಣಿಗೆಯಲ್ಲ. ಈ ಕೂಡಲೇ ನಮ್ಮ ಮಂಡಳಿಯ ಹಿರಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಸಮಸ್ಯೆಯನ್ನು ಸೌಹಾರ್ಯತವಾಗಿ ಬಗೆಹರಿಸಲು ಯತ್ನಿಸುತ್ತೇವೆ. ಎಂದು ಹಿರಿಯ ನಿರ್ಮಾಪಕ ಹಾಗೂ ಮಾಜಿ ಅಧ್ಯಕ್ಷರಾದ ಭಾ.ಮ ಹರೀಶ್ ಹೇಳಿದ್ದಾರೆ.

ಸಿನೆಮಾ ರಂಗ ಮತ್ತು ಮಾಧ್ಯಮದ ನಡುವಿನ ಈ ಸಂಘರ್ಷ ಖಂಡಿತವಾಗಿಯೂ ಅಗತ್ಯವಿರಲಿಲ್ಲ. ಅಹಂಕಾರ ಮತ್ತು ಅಧಿಕಾರ ದರ್ಪದ ನಡುವೆ ಚಿತ್ರರಂಗದ ಹಿತಾಸಕ್ತಿ ಬಲಿಯಾಗುತ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯುವ ಮುನ್ನ, ಅಧ್ಯಕ್ಷರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳುತ್ತಾರಾ? ಅಥವಾ ಮಾಧ್ಯಮಗಳಿಲ್ಲದ ‘ಒಂಟಿ’ ಚಿತ್ರರಂಗದ ಪಯಣ ಮುಂದುವರಿಯುತ್ತಾ? ಕಾದು ನೋಡಬೇಕಿದೆ.

Hot Topics

Grid

england vs pakistan t20

ಹ್ಯಾರಿ ಬ್ರೂಕ್ ಶತಕದ ಆರ್ಭಟ: ಪಾಕ್ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್‌ವು ಪಾಕಿಸ್ತಾನದ ವಿರುದ್ಧ 2 ವಿಕೆಟ್‌ಗಳ ಅಂತರದ ಜಯ ದಾಖಲಿಸಿದೆ …
hoskote vr royal township

ಹೊಸಕೋಟೆಯಲ್ಲಿ ಬಿಲ್ಡರ್ಸ್‌ ಅಬ್ಬರ: ಕೆರೆ, ನಾಲಾ ನುಂಗಿ ಬಡಾವಣೆ ನಿರ್ಮಿಸಿದ ಕಿಶೋರ್!

ಸರ್ಕಾರಿ ಗೋಮಾಳ, ಕೆರೆ, ನಾಲಾ ಮತ್ತು ರಾಜಕಾಲುವೆಗಳನ್ನೂ ಬಿಡದೆ ನುಂಗುತ್ತಿರುವ ಭೂ ಕಬಳಿಕೆದಾರರ ದರ್ಬಾರ್ ಈಗ ಹೊಸಕೋಟೆ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆತ್ತಲಾಗಿದೆ …
operation epic fury iran

ಹೊಸ ನಾಯಕನ ಆಯ್ಕೆಯ ಬೆನ್ನಲ್ಲೇ ತೀವ್ರಗೊಂಡ ಯುದ್ಧ: ಆಪರೇಶನ್ ಎಪಿಕ್ ಫ್ಯೂರಿಗೆ 10ನೇ ದಿನ

ಇರಾನ್‌ನ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್, ಅಲಿ ಖಮೇನಿ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ದೇಶದ ಹೊಸ ಪರಮೋಚ್ಚ ನಾಯಕರನ್ನಾಗಿ ಘೋಷಿಸಿದೆ ಎಂದು ಮಾಧ್ಯಮಗಳ ವರದಿ ಮಾಡಿವೆ …

ಹೇಳ್ರಿ.. ಮಾರ್ವಾಡಿಗಳೇ..!  “ಪೂಜೆ-ವೃತ-ದಾನ-ಪ್ರಾಣಿಪಕ್ಷಗಳಿಗೆ ಆಹಾರ” ಯಾವ ಪುರುಷಾರ್ಥಕ್ಕೆ..!

ಬೆಂಗಳೂರಲ್ಲಿ ಹೆಚ್ಚಾಯ್ತು ಕೆಲವು ಮಾರ್ವಾಡಿಗಳ ರೌಡಿಯಿಸಂ- ಆಟಾಟೋಪ: ಅಟ್ಟಹಾಸಕ್ಕೆ ಕಡಿವಾಣ ಬೀಳದಿದ್ರೆ ಕನ್ನಡಿಗರಿಗೇನೆ ಅಪಾಯ..? ಬೆಂಗಳೂರಲ್ಲಿ ಕೆಲವು ಮಾರ್ವಾಡಿಗಳ ಆಟಾಟೋಪ-ಅಟ್ಟಹಾಸ ಅದೇಕೋ ಹೆಚ್ಚಾದಂತಿದೆ.(ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು …
huliyar lockup death kantaraju

ಹುಳಿಯಾರು ಲಾಕಪ್ ಡೆತ್ ಪ್ರಕರಣ: ಸಿಐಡಿ ತನಿಖೆಗೆ ಗೃಹ ಸಚಿವ ಪರಮೇಶ್ವರ್ ಆದೇಶ!

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಿಚಾರಣಾಧೀನ ಕೈದಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ …

ಹುಡುಕಿಕೊಡಿ.! ಪರಿಶಿಷ್ಟರ “ಅಭ್ಯುದಯ”ಕ್ಕೆ ನಿರ್ಮಿಸಬೇಕಿದ್ದ “ಸಮುದಾಯ ಭವನ”ವೇ ಮಿಸ್…!

ಬೆಂಗಳೂರು:ಇದು ನಿಜಕ್ಕೂ ಅನ್ಯಾಯದ ಹಾಗೂ ಅಮಾನವೀಯತೆಯ ಕೆಲಸವೇ ಸರಿ..ಯಾವ ಒಂದು ಯೋಜನೆ ನಿರ್ದಿಷ್ಟ ಸಮುದಾಯಕ್ಕೆ, ಅದರ ಬಳಕೆಗೆ , ಕಲ್ಯಾಣಕ್ಕೆ ಒದಗಿಬರ ಬೇಕಿತ್ತೋ… ಅದನ್ನೇ ಕಾಣೆಯಾಗುವಂತೆ ಮಾಡಲಾಗುತ್ತದೆ …

List

ಮಾಲೀಕರ “ಸ್ವಾರ್ಥ”ಕ್ಕೆ ಆ ವೃತ್ತಿಪರ “ನ್ಯೂಸ್‌ ಚಾನೆಲ್” ಬಲಿ..!?

ಕನ್ನಡ ಸುದ್ದಿಕ್ಷೇತ್ರದಲ್ಲಿ “ವಿಸ್ತಾರ” ಮರು ಲೋಕಾರ್ಪಣೆ(19-04-2026), ಫ್ರೀಡಂ ಚಾನೆಲ್‌ ಲೋಕಾರ್ಪಣೆ ಯಾಗುತ್ತಿರುವಂಥ ಸನ್ನಿವೇಶದಲ್ಲೇ ಅಘಾತಕಾರಿ ಎನ್ನುವಂತ ಮತ್ತೊಂದು ಸುದ್ದಿ ಕೇಳಿಬಂದಿದೆ. ಅಲ್ಲಿನ ಪರಿಸ್ಥಿತಿ ಗಮನಿಸಿದ್ರೆ ಸಧ್ಯಕ್ಕೆ ಅಲ್ಲದಿದ್ದರೂ …

ಏಪ್ರಿಲ್,18ಕ್ಕೆ “ವಿಸ್ತಾರ” ರೀ ಲಾಂಚ್…ಶೀಘ್ರವೇ “ಫ್ರೀಡಂ” ಲೋಕಾರ್ಪಣೆ

ಭವಿಷ್ಯದ ಪರಿಣಾಮಗಳೇನೇ ಇರಲಿ,ಕನ್ನಡ ಮಾದ್ಯಮ ಲೋಕ ಎರಡು ಬೆಳವಣಿಗೆಗಳಿಗೆ ಸಾಕ್ಷಿ ಆಗುತ್ತಿದೆ. ಒಂದು ಕೆಲ ವರ್ಷಗಳಿಂದೆ ಅಬ್ಬರದಲ್ಲಿ ಆರಂಭವಾದಷ್ಟೇ ವೇಗದಲ್ಲಿ ಬಾಗಿಲು ಮುಚ್ಚಿಕೊಂಡ ವಿಸ್ತಾರ ನ್ಯೂಸ್ ಚಾನೆಲ್ …

“ಅರ್ಹ”ರನ್ನು ಕಡೆಗಣಿಸ್ತಾ ಚಂದನವನ ಕ್ರಿಟಿಕ್‌ ಅವಾರ್ಡ್ಸ್‌?!

ಚಂದನವನದಲ್ಲಿ ನೀಡಲಾಗುವ ವಿಮರ್ಷಕರ ಪ್ರಶಸ್ತಿಗೆ ವಿವಾದದ ಕಳಂಕ ತಟ್ಟಿದಂತಿದೆ. ಚಿತ್ರರಂಗದ ವಿದ್ಯಾಮಾನಗಳನ್ನು ದಶಕಗಳಿಂದಲೂ ಗಮನಿಸುತ್ತಾ,ಅದರ ಒಳಹೊರಗನ್ನು ನೇರ-ನಿಷ್ಟೂರ-ತೀಕ್ಷ್ಣವಾಗಿ  ವರದಿ ಮಾಡುತ್ತಿದ್ದ ಬಹುತೇಕ ಹಿರಿಯ ಸಿನಿ ಪತ್ರಕರ್ತರನ್ನೇ ಪಕ್ಕ …

ಎಂತೆಂಥವರ ನಡುವೆ ಇಂಥವರು ನೆನಪಾಗೊಲ್ವಾ..!?

ಇವತ್ತು ಬೀದರ್‌ ನಲ್ಲಿ ನಡೆದ ಪತ್ರಿಕಾ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿಗೆ ನಿಜವಾಗ್ಲೂ ಯೋಗ್ಯವಾದ-ಸಮರ್ಥವಾದವರಿಗೆ ನಮ್ಮದೊಂದು ಪ್ರಾಮಾಣಿಕವಾದ ಮನಸಿನ ಅಭಿನಂದನೆ..ಪ್ರಶಸ್ತಿಗೆ ಅರ್ಹರೇ ಅಲ್ಲದ ಒಂದಷ್ಟು …

ಶಾಶ್ವತವಾಗಿ ಹಾಡು ನಿಲ್ಲಿಸಿದ ಆಶಾ ಬೋಸ್ಲೆ

ಪ್ರಣಯ ಗೀತೆಗಳು, ಪಾರ್ಟಿ ಸಾಂಗ್ಸ್ ಮತ್ತು ಐಟಂ ಸಾಂಗ್ಸ್, ಭಾವಪೂರ್ಣ ಗಜಲ್‌ಗಳು , ಭಕ್ತಿಗೀತೆಗಳು ,ಪಾಪ್ ಸಂಗೀತ..ಹೀಗೆ ಎಲ್ಲಾ ಗಾಯನ ಪ್ರಾಕಾರಗಳಲ್ಲಿ ತಮ್ಮ ಅತ್ಯದ್ಭುತ ಕಂಠಸಿರಿಯಿಂದ ಪ್ರಸಿದ್ದಿ …
ALSO READ :  ಇರಾನ್ ಮೇಲೆ ಯುದ್ಧಕ್ಕೆ ಇಸ್ರೇಲ್ ಸೇನೆ ಸಜ್ಜು: ಅಮೆರಿಕ ರಹಸ್ಯ ದಾಖಲೆ ಸೋರಿಕೆ!
Loading...

Advertised Here


Political News

ಗ್ಯಾರೆಂಟಿ ಹೊರೆಗಳಿಂದ ಮತ್ತಷ್ಟು ಬಡವಾಯ್ತೇ ರಾಜ್ಯ ಸರ್ಕಾರ?

ಬಾಗಲಕೋಟೆ ಉಪಚುನಾವಣೆ ಕಣದಲ್ಲಿ ರಾಜಕೀಯದ ಜಿದ್ದಾಜಿದ್ದಿ, ಮುನ್ನೆಲೆಗೆ ಬಂದ ದಶಕಗಳಿಂದ ಬಗೆ ಹರಿಯದ ಸಮಸ್ಯೆಗಳು

ಬಾಗಲಕೋಟೆ ಉಪಚುನಾವಣೆಯ ‘ಕೈ’ ಗ್ರೌಂಡ್ ರಿಪೋರ್ಟ್ ಬಹಿರಂಗ; ಯಾರಿಗೆ ಎಷ್ಟು ಪರ್ಸೆಂಟ್ ಗೆಲ್ಲುವ ಚಾನ್ಸ್?

ಪಂಚರಾಜ್ಯಗಳ ಚುನಾವಣಾ ಅಖಾಡದಲ್ಲಿ ಖಾಕಿ ಹದ್ದಿನ ಕಣ್ಣು: ಬರೋಬ್ಬರಿ ₹650 ಕೋಟಿ ಮೌಲ್ಯದ ನಗದು, ಮದ್ಯ, ಡ್ರಗ್ಸ್ ಸೀಜ್

ನಾಳೆ ಬಟಾಬಯಲಾಗಲಿದೆಯಂತೆ ಪರಿಶ್ರಮ ಗೋಲ್ಮಾಲ್‌ .! ಕಳಚಲಿದೆಯಂತೆ ಪ್ರದೀಪ್‌ ಈಶ್ವರ್‌ ಮುಖವಾಡ..!

ದಾವಣಗೆರೆ (ದಕ್ಷಿಣ) ದಂಗಲ್‌:ಮಾದ್ಯಮ-ರಿಪೋರ್ಟರ್‌ ಗಳು(ಕೆಲವು) ಮಾಲಾಮಾಲ್..! ಕ್ಯಾಮೆರಾಮನ್‌ ಗಳು ಕಂಗಾಲ್..!

ಕೇಜ್ರಿವಾಲ್ ಆಪ್ತ ಚಡ್ಡಾಗೆ ಬಿಗ್ ಶಾಕ್: ರಾಜ್ಯಸಭಾ ಉಪ ನಾಯಕನ ಸ್ಥಾನದಿಂದ ವಜಾ..!

ಯುದ್ಧ ಅಮೆರಿಕದ್ದು, ಹಣ ನಿಮ್ಮದು! ಅರಬ್ ರಾಷ್ಟ್ರಗಳಿಗೆ ಟ್ರಂಪ್ ನೀಡಿದ ಶಾಕಿಂಗ್ ಆಫರ್ ಏನು?

Scroll to Top