ನಾಳೆಯಿಂದ ಡಿಜಿಟಲ್ ಮಾದ್ಯಮದಲ್ಲಿ ಹೊಸ ಕ್ರಾಂತಿ, ನಾಲ್ವರು ಮಾದ್ಯಮಸ್ನೇಹಿತರ ಹೊಸ ಕನಸಿನ ಪಯಣ “ಫೋರ್ ಎವರ್(FOUREVER)..” ಕ್ಕೆ ಆಲ್ ದಿ ಬೆಸ್ಟ್.
ಬೆಂಗಳೂರು:ಇದು ಪತ್ರಿಕೋದ್ಯಮದಲ್ಲಿ ಸ್ವಂತದ್ದಾಗಿ ಏನನ್ನಾದರೂ ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ನಾಲ್ವರು ಮಾದ್ಯಮಮಿತ್ರರ ಹೊಸ ಕನಸಿನ ಕಥೆ..ಇವತ್ತಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ಎನ್ನುವುದು ಬಹುತೇಕ ವ್ಯಾಪಾರೀಕರಣವಾಗಿರುವ, ಇನ್ನೊಬ್ಬರ ಓಲೈಕೆಗೆ ಸೀಮಿತವಾಗಿರುವ, ಸ್ವಂತಿಕೆ-ಬದ್ಧತೆ ಕಳೆದುಕೊಂಡಿರುವ ಸನ್ನಿವೇಶದಲ್ಲಿ ಆ ನಿರ್ವಾತವನ್ನು ದೂರ ಮಾಡುವ ಸಂಕಲ್ಪ ಮಾಡಿಕೊಂಡಿರುವ ಈ ನಾಲ್ವರ ಪ್ರಯತ್ನ ಎಲ್ಲರ ಗಮನ ಸೆಳೆಯುತ್ತಿದೆ.ಸದಾ ಹೊಸ ಪ್ರಯತ್ನಗಳಿಗೆ ತುಡಿಯುವ ಮಾದ್ಯಮ ಮನಸುಗಳನ್ನು ಪ್ರೋತ್ಸಾಹಿಸುವ ಕನ್ನಡ ಫ್ಲ್ಯಾಶ್ ನ್ಯೂಸ್ ಈ ನಾಲ್ವರು ಮಾದ್ಯಮ ಮಿತ್ರರನ್ನು ಪರಿಚಯಿಸಲು ಹೆಮ್ಮೆ ಪಡುತ್ತದೆ. … Read more