ಮಾಲಿನ್ಯ ನಿಯಂತ್ರಣ ಮಂಡಳಿ(PCB) ಯಿಂದ “ಲಿಂಗರಾಜ್” ಔಟ್- ವಿವಾದಿತ IFS “ಗೋಕುಲ್” ಇನ್..

ಕೆಲವೇ ಕ್ಷಣಗಳ ಮುನ್ನ ಹೊರಬಿದ್ದ ಆದೇಶದಲ್ಲಿ ವಿವಾದಿತ ಐಎಫ್ ಎಸ್ ಅಧಿಕಾರಿ ಗೋಕುಲ್ ಅವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.ಇಷ್ಟು ದಿನ ಸದಸ್ಯ ಕಾರ್ಯದರ್ಶಿ ಯಾಗಿದ್ದ ಐಎಫ್ ಎಸ್ ಲಿಂಗರಾಜ್ ಅವರಿಗೆ ಹುದ್ದೆ ತೋರಿಸದೆ ವರ್ಗಾವಣೆ ಮಾಡಲಾಗಿದೆ. ಅಕ್ರಮ-ಹಗರಣ-ಭ್ರಷ್ಟಾಚಾರಗಳ ಗೂಡಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಯಲ್ಲಿ ಲಿಂಗರಾಜ್ ವರ್ಗಾವಣೆ ಬಗ್ಗೆ ಹಲವಾರು ರೀತಿಯ ವಿಶ್ಲೇಷಣೆ-ವ್ಯಾಖ್ಯಾನ ನೀಡಲಾಗುತ್ತಿದೆ.ಅಧ್ಯಕ್ಷ ನರೇಂದ್ರಸ್ವಾಮಿ ಅವರ ಜತೆ ಅಂಡರ್ ಸ್ಟ್ಯಾಂಡಿಂಗ್ ಸರಿಯಿರಲಿಲ್ಲ ಎನ್ನುವುದು … Read more

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಾನಕ್ಕೆ ಕುತ್ತು..!

ರಾಜ್ಯಪಾಲರಿಗೆ ಸಾಕ್ಷ್ಯ ಸಮೇತ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ(malal mahadeshwara wildlife sanctury) ದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ಸಂಭವಿಸಿದ್ದ ತಾಯಿ ಹುಲಿ ಮತ್ತು ಮರಿಗಳ ಅಸಹಜ ಸಾವಿನ ( mother tiger and its cubs un natural death)ಪ್ರಕರಣದ ಅದ್ಹೇಕೋ ಅರಣ್ಯ ಸಚಿವ ಈಶ್ವರ ಖಂಡ್ರೆ ( forest minister eshwar khandre)ಅವರ ಕೊರಳು ಸುತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ದುರಂತಕ್ಕೆ … Read more

ಪರಿಸರಾಧಿಕಾರಿ ಶಿವಕುಮಾರ್‌ ಗೆ “ಕ್ಲೀನ್‌ ಚಿಟ್‌” ಕೊಡುವ “ಧಾವಂತ”ದಲ್ಲಿ ಘಟನೆ ಹಿಂದಿನ “ವಾಸ್ತವ”ವನ್ನೇ ಮರೆಮಾಚಲಾಯ್ತಾ..?!

ಬೆಂಗಳೂರು:ಒಂದು ಗಂಭೀರ  ಪ್ರಕರಣದ ತನಿಖೆಯನ್ನು ಎಷ್ಟು ಜಾಳು..ಜಾಳಾಗಿ ಮಾಡಿ ಮುಗಿಸಬಹುದು.?..?! ಸತ್ಯವನ್ನು ಮರೆಮಾಚುವ ರೀತಿಯಲ್ಲಿ, ಸಾಕ್ಷ್ಯಗಳ ಕೊರತೆ ಎಂದು ನೆವ ನೀಡಿ ಅದಕ್ಕೆ ತಿಪ್ಪೆ ಸಾರಿಸುವ ರೀತಿಯಲ್ಲಿ ಸಮಾಧಿ ಮಾಡಬ ಹುದು ಎನ್ನುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದಿರುವ  ಪ್ರಕರಣದ ತನಿಖೆಯೇ ಸಾಕ್ಷಿಯಾಗಬಹು ದೇನೋ..?  ಆದ್ರೆ ತನಿಖೆಗೆಂದೇ ನಿಯೋಜನಗೊಂಡವರು ಕೊಟ್ಟ ವರದಿಯನ್ನೇ ಅಂತಿಮವಾಗಿ ನಂಬಿ ಕೂರುವಷ್ಟು ವ್ಯವಸ್ಥೆ ಹಾಗೂ ಸಮಾಜ ದುರ್ಬಲವಾಗಿಲ್ಲ ಎನ್ನೋದು ಕೂಡ ಸತ್ಯ..ಹಾಗಾಗಿನೇ ಕನ್ನಡ ಫ್ಲ್ಯಾಶ್‌ ನ್ಯೂಸ್‌, “ಕ್ಲೀನ್ ಚಿಟ್‌” ಕೊಟ್ಟಿ ರುವ … Read more