EXCLUSIVE…”BIG-BOSS SEASON-10″ IN TROUBLE.!…“ಬಿಗ್ ಬಾಸ್” ಗೆ” ಶಾಕ್…! “ದೊಡ್ಮನೆ” ಆಟಕ್ಕೆ ಬೀಳುತ್ತಾ ಬ್ರೇಕ್..! ಶೂಟಿಂಗ್ ಸೆಟ್ ವಿವಾದ ವಿರುದ್ಧ ದಾಖಲಾಯ್ತು ದೂರು..

EXCLUSIVE…”BIG-BOSS SEASON-10″ IN TROUBLE.!…“ಬಿಗ್ ಬಾಸ್” ಗೆ” ಶಾಕ್…! “ದೊಡ್ಮನೆ” ಆಟಕ್ಕೆ ಬೀಳುತ್ತಾ ಬ್ರೇಕ್..! ಶೂಟಿಂಗ್ ಸೆಟ್ ವಿವಾದ ವಿರುದ್ಧ ದಾಖಲಾಯ್ತು ದೂರು..

ಕೃಷಿ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆ..! ಬಿಗ್ ಬಾಸ್ ಮಾಹಿತಿನೇ DC ಗಿಲ್ವಂತೆ..! ರಾಮೋಹಳ್ಳಿ ಗ್ರಾಪಂನಿಂದಲೂ ನೋ ಪರ್ಮಿಷನ್..!  ಹಣದಾಸೆಗೆ ಸತ್ಯ ಬಚ್ಚಿಟ್ರಾ ಜಮೀನು ಮಾಲೀಕ..!

ಬೆಂಗಳೂರು:ಇಂತದ್ದೊಂದು ಆಪಾದನೆ ಸತ್ಯವೇ ಆಗಿ, ಅದು ಪ್ರೂವ್ ಆಗಿದ್ದೇ ಆದಲ್ಲಿ  “ಬಿಗ್ ಬಾಸ್” ನಂತ ಪ್ರತಿಷ್ಟಿತ ಶೋ ಗೆ ಹಿಂದೆಂದೂ ಅಂಟದಿ ದ್ದ ಕಳಂಕವೊಂದು ಮೆತ್ತಿಕೊಳ್ಳುವ ಸಾಧ್ಯತೆ ದಟ್ಟ ವಾಗಿದೆ. ಅಷ್ಟೇ ಅಲ್ಲ,ಬಿಗ್ ಬಾಸ್ ಎನ್ನುವಂತ ವರ್ಣರಂಜಿತ ಶೋನೇ ಸ್ಥಗಿತವಾಗೋ ಆತಂಕವ ನ್ನೂ ಅಲ್ಲಗೆಳೆಯು ವಂತಿಲ್ಲ.ಏಕೆಂದರೆ ಜಿಲ್ಲಾಡಳಿತ ದಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೂ ದೊಡ್ಮನೆಯ ಆಟ ಬಿಗ್ ಬಾಸ್ ವಿರುದ್ಧ ದೂರು ದಾಖಲಾಗಿದೆ.ಆ ದೂರು ದಾಖಲೆಯ ಪ್ರತಿಗಳು EXCLUSIVE ಆಗಿ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ಲಭಿಸಿದೆ.

ಬಿಗ್ ಬಾಸ್‌ 10 ಕಾರ್ಯಕ್ರಮಕ್ಕಾಗಿ ಹಾಕಲಾಗಿರುವ ಅದ್ದೂರಿ ಸೆಟ್‌ ನ ಚಿತ್ರ( ಸಂಗ್ರಹ ಚಿತ್ರ)
                                  ಬಿಗ್ ಬಾಸ್‌ 10 ಕಾರ್ಯಕ್ರಮಕ್ಕಾಗಿ ಹಾಕಲಾಗಿರುವ ಅದ್ದೂರಿ ಸೆಟ್‌ ನ ಚಿತ್ರ( ಸಂಗ್ರಹ ಚಿತ್ರ)

ಸಾಮಾಜಿಕ ಕಾರ್ಯಕರ್ತರೊಬ್ಬರು ಬಿಗ್ ಬಾಸ್ ಸೀಸನ್ 10ರ ಅದ್ದೂರಿ ಸೆಟ್ ಹಾಕಿರುವ ಸ್ಥಳದ ಹಿನ್ನಲೆಯನ್ನೇ ಕೆದಕಿ ಜಿಲ್ಲಾಡಳಿತ ಸೇರಿದಂತೆ ಅನೇಕ ಇಲಾಖೆಗಳಿಗೆ ಪತ್ರವನ್ನೂ ಬರೆದಿದ್ದಾರೆ.ಕೃಷಿ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವುದು ಎಷ್ಟು ಸರಿ..? ಇದು ನಿಯಮಗಳ ಉಲ್ಲಂಘನೆಯಲ್ಲ ವೇ..? ಕೃಷಿ ಜಮೀನಿನಲ್ಲಿ ಬಿಗ್ ಬಾಸ್ ನಂತ ವಾಣಿಜ್ಯಾಧಾರಿತ ಕಾರ್ಯಕ್ರಮ ನಡೆಸಲಿಕ್ಕೆ ಅನುಮತಿ ನೀಡಲು ಸಾಧ್ಯನಾ..? ಸಂಬಂದಪಟ್ಟ ಇಲಾಖೆಗಳಿಂದ ಅನುಮತಿ ಅಥವಾ ನಿರಪೇಕ್ಷಣಾ ಪತ್ರ ಪಡೆಯಲಾಗಿದೆಯೇ..?ಎನ್ನುವ ಅನೇಕ ಪ್ರಶ್ನೆಗಳನ್ನು ಮುಂದಿಟ್ಟು ದೂರನ್ನು ಸಲ್ಲಿಸಿದ್ದಾರೆ.

ಕೃಷಿ ಜಮೀನಿನಲ್ಲಿ ಬಿಗ್‌ ಬಾಸ್-10 ವಾಣಿಜ್ಯ ಕಾರ್ಯಕ್ರಮದ ಶೂಟೀಂಗ್‌ ಗೆ ಅವಕಾಶ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರು
ಕೃಷಿ ಜಮೀನಿನಲ್ಲಿ ಬಿಗ್‌ ಬಾಸ್-10 ವಾಣಿಜ್ಯ ಕಾರ್ಯಕ್ರಮದ ಶೂಟೀಂಗ್‌ ಗೆ ಅವಕಾಶ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರು

ಸಾಮಾಜಿಕ ಕಾರ್ಯಕರ್ತರು/ದೂರುದಾರರ ಆಪಾದನೆ ಏನು,,?: ಜಿಲ್ಲಾಧಿಕಾರಿಗಳ ಕಚೇರಿಗೆ ಬರೆದಿರುವ ದೂರಿನ ಪ್ರಕಾರ ಬಿಗ್ ಬಾಸ್ ಸೀಸಸ್ 10ರ ಶೂಟಿಂಗ್ ಸೆಟ್ ಹಾಕಿರುವುದು ಮಾಳಗೊಂಡನಹಳ್ಳಿಯ ಸರ್ವೆ ನಂಬರ್ 28/1ರ 7 ಎಕ್ರೆ 11 ಗುಂಟೆ ಪ್ರದೇಶದಲ್ಲಿಯಂತೆ.ಅಂದ್ಹಾಗೆ ಈ ಭೂಮಿ ಕೃಷಿ ಭೂಮಿಯಾಗಿದ್ದು ಇದರ ಮಾಲೀಕ ರಾಜಕೀಯ ಹಿನ್ನಲೆಯುಳ್ಳವರಾಗಿದ್ದಾರಂತೆ.

ಈ ಮಾಳಗೊಂಡನಹಳ್ಳಿ ರಾಮೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರರ್ವೆ ನಂಬರ್ 26ರ 247 ಎಕ್ರೆ ಸರ್ಕಾರಿ ಭೂಮಿಯ ವ್ಯಾಪ್ತಿಯ ಬರುತ್ತದೆಯಂತೆ.ಅಂದ್ಹಾಗೆ ರಾಜಕಾರಣಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬಿಗ್ ಬಾಸ್ ಆಯೋಜಕರು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕರಾರು ಮಾಡಿಕೊಳ್ಳುವ ಮುನ್ನ ಆ ಜಾಗದ ಪೂರ್ವಾಪರವನ್ನು ವಿಚಾರಿಸಬೇಕಿತ್ತು..ಅದನ್ನೇಕೆ ಮಾಡಲಿಲ್ಲ.ಆ ಅವಸವರೇ ಇವತ್ತು ಬಿಗ್ ಬಾಸ್ ನಡೆಯುತ್ತಿರು ವುದೇ ಅಕ್ರಮ ಎನ್ನುವಂತ ಸಂದೇಶವೊಂದನ್ನು ರವಾನಿಸುವಂತಿದೆ.

ಕೃಷಿ ಜಮೀನಿನಲ್ಲಿ ಬಿಗ್‌ ಬಾಸ್-10 ವಾಣಿಜ್ಯ ಕಾರ್ಯಕ್ರಮದ ಶೂಟೀಂಗ್‌ ಗೆ ಅವಕಾಶ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಎ.ಸಿ ಗೆ ನೀಡಿರುವ ದೂರು
ಕೃಷಿ ಜಮೀನಿನಲ್ಲಿ ಬಿಗ್‌ ಬಾಸ್-10 ವಾಣಿಜ್ಯ ಕಾರ್ಯಕ್ರಮದ ಶೂಟೀಂಗ್‌ ಗೆ ಅವಕಾಶ ಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ಎ.ಸಿ ಗೆ ನೀಡಿರುವ ದೂರು

ದೂರುದಾರರ ಪ್ರಕಾರ,ಭೂ ಪರಿವರ್ತನೆ ಆಗದ ಹೊರತು, ಯಾವುದೇ ಕೃಷಿ ಜಮೀನಿನಲ್ಲೂ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ ಎನ್ನುವ ನಿಯಮ ವಿದೆ.ಈ ನಿಯಮ ಬಿಗ್ ಬಾಸ್ ವಿಚಾರದಲ್ಲೂ ಅನ್ವಯವಾಗಬೇಕು..ಆದರೆ ಏಕೆ ಆಗಿಲ್ಲ..ಈ ವಿಚಾರವನ್ನು ಭೂಮಿಯ ಮಾಲೀಕರೇ  ಮುಚ್ಚಿಟ್ಟರೋ..? ಅಥವಾ ಬಿಗ್ ಬಾಸ್ ಆಡಳಿತಕ್ಕೆ ಈ ವಿಷಯ ಗೊತ್ತಾದಾಗ್ಯೂ ಯಾರ್ ತಾನೇ ಪ್ರಶ್ನಿಸ್ತಾರೆ ಬಿಡಿ ಎನ್ನುವ ಕಾರಣಕ್ಕೆ ಸುಮ್ನಾದ್ರೋ ಗೊತ್ತಿಲ್ಲ.ಆದರೆ ಇಬ್ಬರಿಗೂ ಈ ನಿಯಮ ಹಾಗೂ ಷರತ್ತುಗಳ ಮಾಹಿತಿ ಇರಲೇಬೇಕಿತ್ತೆನ್ನುವುದು ದೂರುದಾರರ ಅಭಿಪ್ರಾಯ ಅಷ್ಟೇ ಅಲ್ಲ ಸತ್ಯ ಕೂಡ. ಹಿರಿಯ ಕಂದಾಯಾಧಿಕಾರಿ ಯೊಬ್ಬರು  ಈ ವಿಚಾರದಲ್ಲಿ ಇಬ್ಬರೂ ತಪ್ಪಿತಸ್ಥರು ಕೂಡ ಹೌದೆನ್ನುತ್ತಾರೆ

ಹಣದಾಸೆಗೆ ಸತ್ಯ ಮುಚ್ಚಿಟ್ನಮಾಲೀಕ: ರಾಜಕಾರಣಿಯಾಗಿರುವ ಭೂಮಿ ಮಾಲೀಕನಿಗೆ ಇಂತದ್ದೊಂದು ವಿವಾದ ಸೃಷ್ಟಿಯಾದ್ರೆ ಏನೆಲ್ಲಾ ಆಗಬಹುದೆನ್ನುವುದರ ಅಪಾಯಗಳ ಅರಿವಿರಬೇಕಿತ್ತು.ಬಿಗ್ ಬಾಸ್ ಆಯೋಜಕರ ಜತೆ ಒಪ್ಪಂದ ಮಾಡಿಕೊಳ್ಳುವಾಗಲೇ ಎಲ್ಲವನ್ನು ಗಮನಕ್ಕೆ ತರಬೇಕಿತ್ತು.ಆದರೆ ಹಾಗೆ ಏಕೆ ಮಾಡಲಿಲ್ಲ ಎನ್ನುವುದೇ ದೂರುದಾರರ ಪ್ರಶ್ನೆ.ಎಲ್ಲ ಪರಿಣಾಮಗಳ ವಿವೇಚನೆ ಇದ್ದಿದ್ದರೆ ಇವತ್ತು ದೊಡ್ಮನೆ ಆಟವೇ ಅಡಕತ್ತರಿಗೆ ಸಿಲುಕಬೇಕಾದ ಆತಂಕ ಸೃಷ್ಟಿಯಾಗುತ್ತಿರಲಿಲ್ಲವೇನೋ..?ಬಹುಷಃ ಕೈ ತುಂಬಾ ಹಣ ಸಿಗುತ್ತೆನ್ನುವ ಆಸೆಗೆ ಎಲ್ಲಾ ಸತ್ಯ ಮುಚ್ಚಿಟ್ಟು ಒಪ್ಪಂದಕ್ಕೆ ಸಹಿ ಹಾಕಿಬಿಟ್ರಾ ಗೊತ್ತಿಲ್ಲ.

ಇದು ವಾಣಿಜ್ಯ ಚಟುವಟಿಕೆಯಲ್ಲ-ಸ್ಪಷ್ಟನೆ : ಕನ್ನಡ ಫ್ಲ್ಯಾಶ್ ನ್ಯೂಸ್ ಈ ವಿಚಾರದಲ್ಲಿ ಬಿಗ್ ಬಾಸ್ ಆಯೋಜಕರ ಮೂಲಗಳನ್ನು ಕೇಳಿದಾಗ ನಾವು ಮಾಡ್ತಿರುವುದು ನಮ್ಮ ಚಾನೆಲ್ ನ ಒಂದು ಶೂಟಿಂಗ್.ಅದನ್ನು ನೋಡೊಕ್ಕೆ ಟಿಕೆಟ್ ಇಟ್ಟು ದುಡ್ಡು ಮಾಡುತ್ತಿಲ್ಲವಲ್ವಾ..?  ಹೀಗಿರುವಾಗ ಅದ್ಹೇಗೆ ವಾಣಿಜ್ಯ ಚಟುವಟಿಕೆ ಆಗುತ್ತೆ ಹೇಳಿ ಎಂಬ ಉತ್ತರ ಬಂತು. ಆದರೆ ದೂರುದಾರರ ವಾದವೇ ಬೇರೆ.ಬಿಗ್ ಬಾಸ್ ನ್ನು ಶೂಟ್ ಮಾಡಿ ಪ್ರಸಾರ ಮಾಡಿದಾ ಗ ಅದರಿಂದ ಬರೋ ಕೋಟಿ ಕೋಟಿ ರೂ ಪ್ರಾಯೋಜಕತ್ವದ ಹಣದ ಮೂಲ ವಾಣಿಜ್ಯೀಕರಣವಲ್ಲವೇ.. ? ಕೇವಲ ತಪ್ಪು ಮರೆಮಾಚೊಕ್ಕೆ ಈ ರೀತಿ ವಿಷಯವನ್ನು ತಿರುಚುವ ಕೆಲಸ ಮಾಡೋದು ಬಿಟ್ಟು ತಪ್ಪನ್ನು ಮನವರಿಕೆ ಮಾಡಿಕೊಂಡು ಶೂಟಿಂಗ್ ನಿಲ್ಲಿಸಿ ಎನ್ನುವುದು ದೂರುದಾರರ ಮುಂದುವರೆದ ವಾದ.

ನನಗೆ ಗೊತ್ತೇ ಇಲ್ಲ..? ಇದೆಲ್ಲದರ ನಡುವೆ ಜಿಲ್ಲಾಡಳಿತವನ್ನು  ಪ್ರಶ್ನಿಸುವ ಪ್ರಯತ್ನ ಮಾಡಲಾಯಿತು. ಮಾದ್ಯಮಗಳು ಜಿಲ್ಲಾಧಿಕಾರಿ ಕಚೇರಿಯನ್ನು ಕೇಳಿದಾಗ ಮಾಳಗೊಂಡನಹಳ್ಳಿಯಲ್ಲಿ ಬಿಗ್ ಬಾಸ್ ನ ಶೂಟಿಂಗ್ ನಡೆಯುತ್ತಿದೆ ಎನ್ನುವುದೇ ಗೊತ್ತಿಲ್ಲವಂತೆ ಎನ್ನುವ ಉತ್ತರ ದೊರೆತಿದೆ.ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಅಲ್ವಾ..ಬಿಗ್ ಬಾಸ್ ಶೂಟಿಂಗ್ ನಡೆಯುತ್ತಿರುವುದು ಎಂದು ಅಧಿಕಾರಿಗಳು ಪರಸ್ಪರರನ್ನು ಕೇಳಿಕೊಂಡಿದ್ದಾರೆ.ಅಂದ್ರೆ ಜಿಲ್ಲಾಡಳಿತದಿಂದ ಶೂಟಿಂಗ್ ಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ.ಜಿಲ್ಲಾಧಿಕಾರಿಗಳೇ  ದೂರಿನ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ  ಹೇಳಿದ್ದಾರಂತೆ.

ಬಿಗ್‌ ಬಾಸ್‌ -10 ಕಾರ್ಯಕ್ರಮದ ಶೂಟಿಂಗ್‌ ಗಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವದೇ ಕಾರ್ಯಕ್ಕಾಗಲಿ ಅನುಮತಿಯನ್ನಾಗಲಿ, ನಿರಪೇಕ್ಷಣಾ ಪತ್ರವನ್ನಾಗಲಿ ನೀಡಿಲ್ಲ ಎಂದು ರಾಮೋಹಳ್ಳಿ ಗ್ರಾಪಂ ನೀಡಿರುವ ವಿವರಣೆ
ಬಿಗ್‌ ಬಾಸ್‌ -10 ಕಾರ್ಯಕ್ರಮದ ಶೂಟಿಂಗ್‌ ಗಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವದೇ ಕಾರ್ಯಕ್ಕಾಗಲಿ ಅನುಮತಿಯನ್ನಾಗಲಿ, ನಿರಪೇಕ್ಷಣಾ ಪತ್ರವನ್ನಾಗಲಿ ನೀಡಿಲ್ಲ ಎಂದು ರಾಮೋಹಳ್ಳಿ ಗ್ರಾಪಂ ನೀಡಿರುವ ವಿವರಣೆ

ರಾಮೋಹಳ್ಳಿ ಗ್ರಾಮ ಪಂಚಾಯ್ತಿಯಿಂದಲೂ ಅನುಮತಿ/ ನಿರಪೇಕ್ಷಣಾ ಪತ್ರ ನೀಡಿಲ್ಲವಂತೆ..? ಬಿಗ್ ಬಾಸ್ ಶೂಟಿಂಗ್ ಸೆಟ್ ಹಾಕಲಾಗಿರುವ ಮಾಳಗೊಂಡನಹಳ್ಳಿಯು ರಾಮೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೆ.ಅಟ್ಲೀಸ್ಟ್ ಗ್ರಾಮ ಪಂಚಾಯ್ತಿಯಿಂದ ಲೇನಾದ್ರೂ ಅನುಮತಿ ಪಡೆದಿದ್ದಾರಾ ಎಂದು ಪರೀಕ್ಷಿಸಲು ಮಾಹಿತಿ ಕೇಳಿ ಅರ್ಜಿ ಹಾಕಲಾಗಿದೆ.ದೂರುದಾರರಿಗೆ ಸ್ಪಷ್ಟವಾಗಿ ಮೇಲ್ಕಂಡ ಶೂಟಿಂಗ್ ಗೆ ನಮ್ಮಿಂದ ಅವರು ಅನುಮತಿಯನ್ನೂ ಕೇಳಿಲ್ಲ..ನಾವೂ ನಿರಪೇಕ್ಷಣಾ ಪತ್ರ ನೀಡಿರುವುದಿಲ್ಲ ಎನ್ನುವ ಉತ್ತರ ದೊರೆತಿದೆ.ಬಿಗ್ ಬಾಸ್ ಆಡಳಿತ ಮಂಡಳಿ, ಸ್ಥಳೀಯ ಆಡಳಿತ ವ್ಯವಸ್ಥೆಯಿಂದ ಅನುಮತಿ.ನಿರಪೇಕ್ಷಣಾ ಪತ್ರ ಪಡೆಯಬೇಕಿತ್ತೇನೋ ಎನಿಸುವುದು ಸುಳ್ಳಲ್ಲ.

ಬಿಗ್‌ ಬಾಸ್‌ -10 ಕಾರ್ಯಕ್ರಮದ ಶೂಟಿಂಗ್‌ ಗಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವದೇ ಕಾರ್ಯಕ್ಕಾಗಲಿ ಅನುಮತಿಯನ್ನಾಗಲಿ, ನಿರಪೇಕ್ಷಣಾ ಪತ್ರವನ್ನಾಗಲಿ ನೀಡಿಲ್ಲ ಎಂದು ರಾಮೋಹಳ್ಳಿ ಗ್ರಾಪಂ ನೀಡಿರುವ ವಿವರಣೆ
ಬಿಗ್‌ ಬಾಸ್‌ -10 ಕಾರ್ಯಕ್ರಮದ ಶೂಟಿಂಗ್‌ ಗಾಗಲಿ ಅಥವಾ ಅದಕ್ಕೆ ಸಂಬಂಧಿಸಿದ ಯಾವದೇ ಕಾರ್ಯಕ್ಕಾಗಲಿ ಅನುಮತಿಯನ್ನಾಗಲಿ, ನಿರಪೇಕ್ಷಣಾ ಪತ್ರವನ್ನಾಗಲಿ ನೀಡಿಲ್ಲ ಎಂದು ರಾಮೋಹಳ್ಳಿ ಗ್ರಾಪಂ ನೀಡಿರುವ ವಿವರಣೆ..

 ಅಗ್ನಿ ಅನಾಹುತಕ್ಕೆ ಬಿಗ್ ಬಾಸ್ ಸೆಟ್  ಭಸ್ಮವಾಗಿದ್ದ ಕಹಿ ಘಟನೆ ಮರೆತೋಯ್ತಾ..??!   ನಿಮಗೆ ನೆನಪಿರಲಿ ಎಂದು ಹೇಳ್ತೇವೆ ಕೇಳಿ..ಬಿಗ್ ಬಾಸ್ ಶೂಟಿಂಗ್ ಸೆಟ್ ಕಳೆದೆಲ್ಲಾ ವರ್ಷಗಳಲ್ಲೂ ಬಿಡದಿ ಸಮೀಪದ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲೇ ನಡೆಯುತ್ತಿತ್ತು.ಆದರೆ ಸೆಟ್ ಗೆ ಬೆಂಕಿ ಬಿದ್ದಿದ್ದರಿಂ ದಲೇ ಈ ಬಾರಿ ಅದನ್ನು ಮಾಳಗೊಂಡನಹಳ್ಳಿಗೆ ಸ್ಥಳಾಂತರ ಮಾಡಲಾಯ್ತು.ವಿಶಾಲವಾದ ಜಾಗ,ಏನೂ ಆಗೊಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಆಡಳಿತ ವ್ಯವಸ್ಥೆಗೆ ಇದ್ದಿರಬಹುದೇನೋ.? ಆದರೆ ಕಳೆದ ಬಾರಿ ಆದ ದುರ್ಘಟನೆಯನ್ನು ಮರೆಯೋದು ಕೂಡ ಸರಿಯಲ್ಲ..ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಒಂದಷ್ಟು ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ಆದರೆ ದೂರುದಾರರ ಪ್ರಕಾರ ಘಟನಾಸ್ಥಳದಲ್ಲಿ ಸುರಕ್ಷತೆಗೆ ಯಾವುದೇ ಕ್ರಮ ಜಾರಿಯಾಗಿಲ್ಲ.ಅಗ್ನಿಶಾಮಕ ಇಲಾಖೆಯಿಂದಲೂ ನಿರಪೇಕ್ಷಣಾ ಪತ್ರಪಡೆದಿಲ್ಲವಂತೆ.ಘಟನಾಸ್ಥಳದಲ್ಲಿ ತುರ್ತಾಗಿ ಒಂದು ಅಗ್ನಿಶಾಮಕ ವಾಹನ ಇರಬೇಕಿರುವುದು ನಿಯಮ.ಆದರೆ ಅದಕ್ಕೂ ಅಲ್ಲಿ ಆಧ್ಯತೆ ನೀಡಲಾಗಿಲ್ವಂತೆ.ಒಂದ್ವೇಳೆ ಏನಾದ್ರೂ ಅವಘಢ ಸಂಭವಿಸಿಬಿಟ್ರೆ ಯಾರ್ ಹೊಣೆ..? ಎನ್ನುವುದಷ್ಟೇ ನಮ್ಮ ಕಾಳಜಿ-ಕಳಕಳಿ-ಆತಂಕ ಎನ್ನುವುದು  ದೂರುದಾರರ ವಾದ.

ಬಿಗ್‌ ಬಾಸ್‌ ಕಾರ್ಯಕ್ರಮದ ಈ ಹಿಂದಿನ ಅದ್ದೂರಿ ಸೆಟ್‌ ಗೆ ಬೆಂಕಿ ಬಿದ್ದ ವೇಳೆ ಅದು ಹತ್ತಿ ಉರಿದಿದ್ದರ ಚಿತ್ರ( ಸಂಗ್ರಹ ಚಿತ್ರ)
ಬಿಗ್‌ ಬಾಸ್‌ ಕಾರ್ಯಕ್ರಮದ ಈ ಹಿಂದಿನ ಅದ್ದೂರಿ ಸೆಟ್‌ ಗೆ ಬೆಂಕಿ ಬಿದ್ದ ವೇಳೆ ಅದು ಹತ್ತಿ ಉರಿದಿದ್ದರ ಚಿತ್ರ( ಸಂಗ್ರಹ ಚಿತ್ರ)

ಬಿಗ್ ಬಾಸ್ ಶೂಟಿಂಗ್ ಸೆಟ್  ತೆರವು ಮಾಡಿ-ನ್ಯಾಯಾಲಯಕ್ಕೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ:.ಬಿಗ್ ಬಾಸ್ ಸೆಟ್ ಹಾಕೊಕ್ಕೆ ಏನೆಲ್ಲಾ ನಿಯಮ ಪಾಲನೆ ಮಾಡಬೇಕಿತ್ತೋ ಅದನ್ನೆಲ್ಲಾ ಆಯೋಜಕರು ಗಾಳಿಗೆ ತೂರಿದ್ದಾರೆನ್ನುವುದು ದೂರುದಾರರ ಆಪಾದನೆ.ನಿಯಮಗಳನ್ನೆಲ್ಲಾ ಪಾಲನೆ ಮಾಡಿ ಕಾರ್ಯಕ್ರಮ ಮಾಡಿಕೊಂಡಿದಿದ್ರೆ ಯಾರಿಗೂ ಆಕ್ಷೇಪ ಇರಲಿಲ್ಲ..ಆದರೆ ಯಾವುದನ್ನೂ ಪಾಲನೆ ಮಾಡದೆ ಕಾರ್ಯಕ್ರಮ ನಡೆಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿರುವ ದೂರುದಾರರು ತತ್ ಕ್ಷಣಕ್ಕೆ ಬಿಗ್ ಬಾಸ್ ಶೂಟಿಂಗ್ ಸೆಟ್ ನ್ನು ಅಲ್ಲಿಂದ ತೆರವು ಮಾಡಬೇಕು.ಈ ವಿಷಯದಲ್ಲಿ ನ್ಯಾಯಾಲಯಕ್ಕೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಚಿಂತನೆಯಲ್ಲಿದ್ದಾರಂತೆ.

ಬಿಗ್ ಬಾಸ್ ಆಡಳಿತ ಅಂದುಕೊಂಡಷ್ಟು ಈ ವಿಷಯ ಸಲೀಸೂ ಇಲ್ಲ .ಘನ ನ್ಯಾಯಾಲಯದ ಗಮನಕ್ಕೆ ಮಾಡಿರುವ ಆಪಾದನೆಗಳೆಲ್ಲಾ ಸತ್ಯವೆನಿಸಿದ್ರೆ ಬಿಗ್ ಬಾಸ್ ಆಟಕ್ಕೇನೆ ಬ್ರೇಕ್ ಹಾಕಲೂ ಬಹುದು.ಜತೆಗೆ ಆಯೋಜಕರಿಗೆ ಛೀಮಾರಿ ಹಾಕಬಹುದು.ಸತ್ಯಾಂಶವನ್ನು ಮುಚ್ಚಿಟ್ಟ ಭೂಮಿಯ ಮಾಲೀಕನ ವಿರುದ್ದವೂ ನಿರ್ದಾಕ್ಷಿಣ್ಯ ಕ್ರಮ ಜಾರಿ ಮಾಡಿ ಆದೇಶ ಹೊರಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.

ಎಲ್ಲಾ ವಿಷಯ ಗಮನಿಸಿದ್ರೆ ಬಿಗ್ ಬಾಸ್ ಶೂಟಿಂಗ್ ಹಾಕಿರುವ ವಿಶಾಲ ಪ್ರದೇಶದ ವಿವಾದ ಯಾವ ಆಯಾಮ ಪಡೆಯಲಿದೆ.ಯಾವೆಲ್ಲಾ ತಿರುವು ಪಡೆಯ ಲಿದೆ..? ಕಾನೂನಾತ್ಮಕ ಹೋರಾಟಕ್ಕೆ ತಿರುಗಿಕೊಳ್ಳುತ್ತೋ..? ಎನ್ನುವ ಪ್ರಶ್ನೆಗಳೆಲ್ಲಾ ಮೂಡಿದೆ.ಅಂತಿಮವಾಗಿ ದೊಡ್ಮನೆ ಆಟ ನಿಲ್ಲುತ್ತೋ..? ಭರ್ಜರಿ ಯಾಗಿ ಮುಂದುವರೆಯುತ್ತೋ ಎನ್ನುವುದೇ ಸಧ್ಯಕ್ಕಿರುವ ಕುತೂಹಲ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *