GOOD NIGHT…ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾದ “ಸುದ್ದಿ ಮನೆ”ಯ “ಬ್ರೇಕಿಂಗ್‌ ನ್ಯೂಸ್‌” ಮಾಂತ್ರಿಕ ಶಿವಪ್ರಸಾದ್‌..

ಬೆಂಗಳೂರು:ರಾಜ್ಯದ ನಂಬರ್‌ ಒನ್‌ ನ್ಯೂಸ್‌ ಚಾನೆಲ್‌ ಟಿವಿ 9 ಸೇರಿದಂತೆ ಹಲವು ಮಾದ್ಯಮಗಳಲ್ಲಿ ಕೆಲಸ ಮಾಡಿದ್ದ ಅತ್ಯಂತ ಸೌಮ್ಯ ಹಾಗೂ ಸಂಭಾವಿತ ಪತ್ರಕರ್ತ ಮಿತ್ರ ಶಿವಪ್ರಸಾದ್‌ ಅನುಮಾನಸ್ಪದ ರೀತಿಯಲ್ಲಿ ದೂರದ ಕೋಲಾರದಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿ ನಿಗೂಢವಾಗಿ ನೇಣಿಗೆ ಶರಣಾಗಿದ್ದಾರೆ. 47 ವರ್ಷದ ಶಿವಪ್ರಸಾದ್‌ ಸಾವಿಗೆ ಕಾರಣವೇನೆನ್ನುವುದು ತಿಳಿದುಬಂದಿಲ್ಲ.ಕೆಲಸದ ನಿಮಿತ್ತ ಕೋಲಾರಕ್ಕೆ ತೆರಳಿದ್ದ ಶಿವಪ್ರಸಾದ್‌,ಅಪರೂಪಕ್ಕೆ ಅತ್ತೆ ಮನೆಗೆ ತೆರಳಿದ್ದರು.ತೆರಳುವಾಗ ಸ್ವೀಟ್ಸ್‌, ಹಣ್ಣುಗಳನ್ನು ತೆಗೆದುಕೊಂಡು ಹೋಗಿ ನಿನ್ನೆ ರಾತ್ರಿವರೆಗೂ ಎಲ್ಲರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ.ಮನೆಯ ಹೊರಗೊಂದು ಸಣ್ಣ ವಾಕ್‌ ಮಾಡಿ,ಎಲ್ಲರಿಗೂ … Read more

ವಾರದೊಳಗೆ ಅನ್ನಭಾಗ್ಯದ ಹಣ ಜಮೆ: ಆಹಾರ ಸಚಿವ ಕೆಎಚ್ ಮುನಿಯಪ್ಪ

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಡಿ ನೀಡುತ್ತಿರುವ ಅನ್ನಭಾಗ್ಯದ ಅಕ್ಕಿ ಹಣ ವಾರದೊಳಗೆ ಪಾವತಿಯಾಗಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ. ಕೋಲಾರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವರ್‌ ಸಮಸ್ಯೆಯಿಂದಾಗಿ 2 ತಿಂಗಳಿಂದ ಅಕ್ಕಿ ಹಣ ಬಿಡುಗಡೆ ಮಾಡಲು ಆಗಿರಲಿಲ್ಲ. ಇದೀಗ ಸಮಸ್ಯೆ ಬಗೆಹರಿದಿದ್ದು, ವಾರದೊಳಗೆ ಹಣ ಪಾವತಿಯಾಗಲಿದೆ ಎಂದರು. ಸಾಮಾನ್ಯವಾಗಿ ಪ್ರತಿ ತಿಂಗಳು 10ನೇ ತಾರೀಖಿನಿಂದ ಬಿಡುಗಡೆಯಾಗುತ್ತಿದ್ದು, ಸರ್ವರ್‌ ಸಮಸ್ಯೆಯಿಂದಾಗಿ ಅಕ್ಕಿ ಹಣ ಬಂದಿಲ್ಲ. ಸರಕಾರದಲ್ಲಿ ಹಣದ ಕೊರತೆಯಿಲ್ಲ. … Read more