ಎಕ್ಸೆಲ್‌ ಪಿಯು ಕಾಲೇಜ್‌ ಕ್ಲೋಸ್..!‌ ಸಾಲು ಸಾಲು ಶೈಕ್ಷಣಿಕ ನಿಯಮ ಉಲ್ಲಂಘನೆ..ವಿದ್ಯಾರ್ಥಿಗಳ ಕಥೆ ಏನು.? ಪೋಷಕರ ಅಳಲು ಕೇಳೋರು ಯಾರು..!?


ಬೆಳ್ತಂಗಡಿ/ಬೆಂಗಳೂರು: ರಾಜ್ಯದ ಪ್ರತಿಷ್ಟಿತ ಕಾಲೇಜೊಂದರ ಬಗ್ಗೆ ಕೆಟ್ಟ ಸುದ್ದಿ ಹೊರಬಿದ್ದಿದೆ. ಶೈಕ್ಷಣಿಕ ನಿಯಮಗಳನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ಕಾಲೇಜ್‌ ಮಾನ್ಯತೆಯನ್ನೇ ರದ್ದು ಮಾಡಿ ೩೦ ದಿನಗಳೊಳಗೆ ಇಡೀ ಕಾರ್ಯಾಚರಣೆ ‍ಸ್ಥಗಿತಗೊಳಿಸಬೇಕೆನ್ನುವುದು ಆ ಸುದ್ದಿ.ಲಕ್ಷಾಂತರ ಹಣ ಕೊಟ್ಟು ಮಕ್ಕಳನ್ನು  ಕಾಲೇಜಿಗೆ ಸೇರಿಸಿರುವ ಪೋಷಕರು ಇದೀಗ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾರೆ.ಆದರೆ ಹಾಗೇನು ನಡೆದೇ ಇಲ್ಲ ಎನ್ನುವಂತೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡ್ತಿದೆ.ಯಾರ್‌ ಮಾತು ನಂಬಬೇಕು.. ಯಾರದ್ದು ಬಿಡಬೇಕೆನ್ನುವ ಗೊಂದಲ ಪೋಷಕರಲ್ಲಿದೆ.ಈ ನಡುವೆ ಇದ್ಯಾವುದರ ಮಾಹಿತಿಯೇ ಇಲ್ಲದ ಮಕ್ಕಳು ಕಾಲೇಜಿನ ಕಟ್ಟಡದಲ್ಲಿ ಎಂದಿನಂತೆ ಓದು ಮುಂದುವರೆಸಿದ್ದಾರೆ.

ಹೌದು..ಇದು ರಾಜ್ಯದ ಪ್ರತಿಷ್ಟಿತ ಎಕ್ಸೆಲ್‌ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ.ಸಾಲು ಸಾಲು ಶೈಕ್ಷಣಿಕ ನಿಯಮ ಉಲ್ಲಂಘಿಸಲಾಗಿದೆ ಎನ್ನುವುದು ಇದರ ಮೇಲಿರುವ ಆಪಾದನೆ.ಹಾಗಾಗಿನೇ ಎಲ್ಲಾ ಎಚ್ಚರಿಕೆ-ಸೂಚನೆ ಕೊಟ್ಟ ಮೇಲೂ ತಪ್ಪನ್ನು ಸುಧಾರಿಸಿಕೊಳ್ಳದೆ ಯಡವಟ್ಟು ಮಾಡಿದ ಕಾರಣಕ್ಕೆ ಶಾಶ್ವತವಾಗಿ ಅದರ ಮಾನ್ಯತೆಯನ್ನೇ ರದ್ದು ಮಾಡಿರುವುದಾಗಿ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.(DPUE-EST30SS(OTH)/1/2026-R AND G-DEPARTMENT OF PRE UNIVERSITY EDUCATION 10-06-2026 )

ಅಂದ್ಹಾಗೆ  ಮಾನ್ಯತೆ ರದ್ದತಿ ಆತಂಕ ಎದುರಿಸುತ್ತಿರುವ ಎಕ್ಸೆಲ್‌ ಪದವಿಪೂರ್ವ ಕಾಲೇಜು, ಧರ್ಮಸ್ಥಳದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಎನ್ನುವ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಾ ಬಂದಿದೆ.ಶೈಕ್ಷಣಿಕವಾಗಿ ಉತ್ತಮವಾದ ಪ್ರದರ್ಶನ ನೀಡುತ್ತಿದೆ ಎನ್ನುವುದು ಪ್ರತಿವರ್ಷದ ಫಲಿತಾಂಶದಲ್ಲೇ ಗೊತ್ತಾಗುತ್ತದೆ.ಆದರೆ ಇದೆಲ್ಲದರ ನಡುವೆ ಆಡಳಿತ ಮಂಡಳಿ ಇಲಾಖೆ ಪರ್ಮಿಷನ್‌ ಕೊಡಬೇಕಾದಾಗ ವಿಧಿಸಿದ್ದ ನಿಯಮಗಳನ್ನು ಪಾಲಿಸಬೇಕಿತ್ತು.ಆದರೆ ಅದನ್ನು ಮಾಡಿಲ್ಲ ಎನ್ನುವುದೇ ಇವತ್ತು ಕಾಲೇಜನ್ನೇ ಮುಚ್ಚಬೇಕೆನ್ನುವ ಆದೇಶಕ್ಕೆ ಕಾರಣವಾಗಿದೆ.

ಅಂದ್ಹಾಗೆ ಇನ್ಫಿನಿಟಿ ಲರ್ನಿಂಗ್‌ ಫೌಂಡೇಷನ್‌ ನ ಅಡಿಯಲ್ಲಿ ಎಕ್ಸೆಲ್‌ ಪಿಯು ಕಾಲೇಜು ಕೆಲಸ ಮಾಡುತ್ತಿದೆ..ಶಮಂತ ಕುಮಾರ್‌ ಜೈನ್‌ ಇದರ ಸಂಸ್ಥಾಪಕರು.ಉತ್ತಮವಾದ ರೀತಿಯಲ್ಲೇ ಕಾಲೇಜನ್ನು ನಡೆಸಿ ಕೊಂಡು ಹೋಗುತ್ತಿದ್ದಾರೆ.ಸೈನ್ಸ್-ಕಾಮರ್ಸ್‌ ನಲ್ಲಿ ಉತ್ತಮವಾದ ಫಲಿತಾಂಶ ಬರುತ್ತಿದೆ.ಆದರೆ ಕಾಲೇಜು ಆರಂಭ ಮಾಡುವಾಗ ಅವರು ಏನೆಲ್ಲಾ ದಾಖಲೆ ಸಲ್ಲಿಸಬೇಕಿತ್ತೋ..ಯಾವೆಲ್ಲಾ ಇಲಾಖೆಗಳಿಂದ ಅನುಮತಿ ಮತ್ತು ನಿರಪೇಕ್ಷಣಾ ಪತ್ರ ಪಡೆಯಬೇಕಿತ್ತೋ ಅದ್ಯಾವುದನ್ನು ಮಾಡಿಲ್ಲ..ಎಚ್ಚರಿಕೆ ನೋಟಿಸ್‌ ಗಳನ್ನು ಕೊಟ್ಟ ಮೇಲೆ ಒಂದಷ್ಟು ದಾಖಲೆ ಸಲ್ಲಿಸುವ ಕೆಲಸ ಆಯಿತು.ಆದರೆ ಆ ದಾಖಲೆಗಳನ್ನೆಲ್ಲಾ ಪರಿಶೀಲಿಸಿದಾಗ ಎಲ್ಲವೂ ಖೊಟ್ಟಿ ಎಂದು ತಿಳಿದುಬಂದಿತು.ಇದನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನಲೆಯಲ್ಲಿ ಕಾಲೇಜ್‌ ಮಾನ್ಯತೆ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

  • ಎಕ್ಸೆಲ್‌ ಕಾಲೇಜ್‌  ವಿರುದ್ಧದ ಉಲ್ಲಂಘನೆಗಳ ಪಟ್ಟಿ
  • -ನಕಲಿ ದಾಖಲೆ ಸೃಷ್ಟಿಸಿ ಶಿಕ್ಷಣ ಇಲಾಖೆಗೆ ವಂಚಿಸಿರುವ ಆಪಾದನೆ
  • -ಕಂಪ್ಲಿಷನ್‌ ಸರ್ಟಿಫಿಕೇಟ್‌ ಪಡೆದಿಲ್ಲ,ಎಸ್‌ ಟಿಸಿ,ಮಳೆನೀರು ಕೊಯ್ಲು ಅಳವಡಿಸಿಲ್ಲ
  • -ಅಗ್ನಿಶಾಮಕ ಇಲಾಖೆಯಿಂದ ಎನ್‌ ಓಸಿ ಪಡೆದಿಲ್ಲ
  • -ನಕ್ಷೆ ಅನುಮೋದನೆ ಪಡೆದಿಲ್ಲ.ಕಟ್ಟಡ ನಿರಪೇಕ್ಷಣಾ ಪತ್ರ ಪಡೆದಿಲ್ಲ.
  • ಶಾಲೆ ನಿರ್ಮಾಣಕ್ಕೆ ವಿಧಿಸಿದ್ದ ಷರತ್ತು ಉಲ್ಲಂಘಿಸಿರುವ ಆರೋಪ
ALSO READ :  ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿರುವುದು ದೃಢಪಟ್ಟಿರುವುದು ನಿಜವಾಗಿರುವುದರಿಂದ. ಆಡಳಿತ ಮಂಡಳಿ ವಂಚನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿರುವುದಂತು ಸತ್ಯ.ಹಾಗಾಗಿ ವಿದ್ಯಾರ್ಥಿಗಳು ಪೋಷಕರಿಗೆ ಎದುರಾಗಲಿರುವ ಸಮಸ್ಯೆ ನಿವಾರಿಸುವುದು ಕೂಡ ಆಡಳಿತ ಮಂಡಳಿ ಹೊಣೆಯಾಗಿರುತ್ತದೆ.ಇದನ್ನು ಸರಿಪಡಿಸಲು ಆಡಳಿತ ಮಂಡಳಿಗೆ ೩೦ ದಿನಗಳ ಕಾಲಾವಕಾಶ ನೀಡಲಾಗಿದೆ.ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಅವರನ್ನು ಹತ್ತಿರದ ಕಾಲೇಜುಗಳಿಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ.ಬೇರೆ ಕಾಲೇಜುಗಳಿಗೆ ಸೇರಿಸಿ ವಿದ್ಯಾರ್ಥಿಗಳ ಹಿತ ಕಾಯುವಂತೆ ಸೂಚನೆ ನೀಡಲಾಗಿದೆ.

ಈಗ ಏನು ಮಾಡಬಹುದು..? ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಬಹುದು..ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರ ದೆನ್ನುವ ಆಲೋಚನೆಯಿಂದ ಇಲಾಖೆ ಇದಕ್ಕೆ  ಷರತ್ತು ವಿಧಿಸಿ ಅವಕಾಶ ಕೊಡಬಹುದು..ಆದರೆ ಇದೆಲ್ಲವೂ ಮುಂದಿನ ಒಂದು ವರ್ಷಕ್ಕೆ ಮಾತ್ರ ಅನ್ವಯವಾಗಬಹುದೇನೋ,..? ಮುಂದಿನ ವರ್ಷದೊಳಗೆ ಈ ಎಲ್ಲಾ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯತೆಗಳಿವೆಯಾ ಎನ್ನುವುದು ಕೂಡ ಪ್ರಶ್ನೆ..

ಆತಂಕ-ಗೊಂದಲದಲ್ಲಿ ಮಕ್ಕಳು-ಪೋಷಕರು: ಮಾದ್ಯಮಗಳಲ್ಲಿ ಬರುತ್ತಿರುವ ಸುದ್ದಿಯಿಂದ ಹೆಚ್ಚು ಆತಂಕಕ್ಕೆ ಒಳಗಾಗಿರುವುದು ಪೋಷಕರು.ತಮ್ಮ ಮಕ್ಕಳನ್ನು ದುಡ್ಡು ಕೊಟ್ಟು ಕಾಲೇಜಿಗೆ ಅಡ್ಮಿಷನ್‌ ಮಾಡಿಸಿರುವ ಪೋಷಕರು ಹಾಗೂ ಅದಾಗಲೇ ಎರಡನೇ ಪಿಯುಸಿಯಲ್ಲಿ ನಿರತವಾಗಿರುವ ಮಕ್ಕಳ ಪೋಷಕರು ಈಗ ಚಿಂತಾಕ್ರಾಂತರಾಗಿದ್ದಾರೆ.ಅವರಿಗೆ ಆಡಳಿತ ಮಂಡಳಿಯ ಪೊಳ್ಳು ಭರವಸೆಗಳು ಬೇಕಿಲ್ಲ..ತಪ್ಪನ್ನು ಮರೆ ಮಾಚಲು,ಸಮಾಧಾನ ಪಡಿಸಲು ಸುಳ್ಳು ಆಶ್ವಾಸನೆ ಬಿಟ್ಟು ತಮ್ಮ ಮಕ್ಕಳಿಗೆ ಯಾವುದೇ ರೀತಿಯಲ್ಲೂ  ತೊಂದರೆ ಆಗದಂತೆ ಪರಿಹಾರ ಕೊಡಿ ಎಂದು ಹಠ ಹಿಡಿದು ಕೂತಿದ್ದಾರೆ.

“ಎಕ್ಸೆಲ್‌ ಪಿಯು ಕಾಲೇಜ್‌ ಆಡಳಿತ ಸಾಲು ಸಾಲು ಉಲ್ಲಂಘನೆ ಮಾಡಿರುವುದು ಸಾಬೀ ತಾಗಿದೆ.ಸುಳ್ಳು ದಾಖಲೆ ಕೊಟ್ಟು ವಂಚಿಸಿರುವುದು ದೃಢಪಟ್ಟಿದೆ. ಈ ವಿಷಯ ದಲ್ಲಿ ಇಲಾಖೆ ತೆಗೆದುಕೊಂಡಿರುವ ಕ್ರಮ ಸಮರ್ಪಕವಾಗಿದೆ.ಕಾಲೇಜು ಆರಂಭಿಸುವ ಮುನ್ನ ಸಾಕಷ್ಟು ನಿಬಂಧನೆ ಹಾಕಿರುತ್ತೇವೆ.ಅದನ್ನೆಲ್ಲಾ ಪಾಲಿಸಬೇಕಾ ಗುತ್ತದೆ.  ಎಕ್ಸೆಲ್‌ ಆಡಳಿತ ಅದನ್ನೆಲ್ಲಾ ಮಾಡಿಲ್ಲ.ಹಾಗಾಗಿ ಎಚ್ಚರಿಕೆ ರೀತಿಯಲ್ಲಿ ಕ್ಲೋಸಿಂಗ್‌ ಆರ್ಡರ್‌ ಇಶ್ಯೂ ಮಾಡಲಾಗಿದೆ.ಅವರಿಗೆ ಕೊಟ್ಟಿರುವ ಗಡುವಿನೊಳಗೆ ವಿದ್ಯಾರ್ತಿಗಳಿಗೆ ಪರ್ಯಾಯ ವ್ಯವಸ್ಥೆ ಅವರದೇ ದುಡ್ಡಿನಲ್ಲಿ ಮಾಡಬೇಕಾಗುತ್ತದೆ.”-ಡಿಡಿಪಿಯು ಸ್ಪಷ್ಟನೆ

ಏನೂ ಆಗಿಲ್ಲ..ಭಯಪಡಬೇಡಿ.. ಮಾದ್ಯಮಗಳಲ್ಲಿ ಶಿಕ್ಷಣ ಇಲಾಖೆ ಆದೇಶದ ಪ್ರತಿಯನ್ನು ಉಲ್ಲೇಖಿಸಿ ಈ ಬಗ್ಗೆ ಸುದ್ದಿ ಬರುತ್ತಿದ್ದರೆ ಕಾಲೇಜಿನ ಮುಖ್ಯಸ್ಥ ಶಮಂತಕುಮಾರ್‌ ಜೈನ್‌ ಏನೂ ಆಗಿಲ್ಲ..ಈ ಆದೇಶ ಲಾಗೂ ಆಗಿರುವುದು ನಾವು ಹೆಚ್ಚುವರಿಯಾಗಿ ಪರ್ಮಿಷನ್‌ ಕೇಳಿದ್ದ ಕಾಲೇಜುಗಳಿಗೆ ಮಾತ್ರ..ಪೋಷಕರು ಭಯಪಡಬೇಡಿ ಎನ್ನುತ್ತಾರೆ.ಆದರೆ ವಾಸ್ತವದಲ್ಲಿ ನೋಡಿದ್ರೆ  ಇದು ಕೇವಲ ಪೋಷಕರನ್ನು ಸಮಾಧಾನಪ ಡಿಸುವ ಯತ್ನ ಅಷ್ಟೆ..ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿದಿದ್ದರೆ ಇವತ್ತು ಕಾಲೇಜಿಗೆ ಇಂಥಾ ಪರಿಸ್ತಿತಿ ಬರುತ್ತಿತ್ತಾ..ಖಂಡಿತಾ ಇಲ್ಲ.

 

 


Leave a Comment