ಶೀಘ್ರವೇ ರಾಜಕೀಯಕ್ಕೆ ಅಧೀಕೃತ ಎಂಟ್ರಿ…..ಜಿಬಿಎ ಎಲೆಕ್ಷನ್ ನಲ್ಲಿ ಸ್ಪರ್ದೆ ಖಚಿತ…..ಅಡಚಣೆ ಎದುರಾಗದಿರುವಂತೆ ಹರಿಸಿ ಆಶೀರ್ವದಿಸಿ ಎಂದು ಮನವಿ..
ಸೈಲೆಂಟ್ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ.

ಬೆಂಗಳೂರು ಪಾತಕ ಜಗತ್ತು ಕಂಡ ಅತ್ಯಂತ ನಟೋರಿಯಸ್ ಹೆಸರು ಸುನೀಲನದು.ಯಾವ ವ್ಯಕ್ತಿಯ ಹೆಸರು ಕೇಳಿದ್ರೆ ಒಂದು ಕ್ಷಣ ಅಲರ್ಟ್ ಆಗ್ತಿತ್ತೋ ಅದೇ ಹೆಸರು ಇವತ್ತು ಮತ್ತೊಂದು ಮಗ್ಗಲು ಬದಲಿಸಲಿಕ್ಕೆ ಯತ್ನಿಸುತ್ತಿದೆ. ಈ ಕಾರಣಕ್ಕೆ ಸೈಲೆಂಟ್ ಸುನೀಲ ಮತ್ತೆ ಸುದ್ದಿಯಲ್ಲಿದ್ದಾನೆ. ಒಂದಷ್ಟು ಅವಧಿಯಿಂದ ಯಾವುದೇ ಆಕ್ಟಿವಿಟಿಸ್ ಇಲ್ಲದೆ ಸೈಲೆಂಟ್ ಆಗಿದ್ದ ಸುನೀಲ ಸುದ್ದಿಯಾಗೊಕ್ಕೆ ಕಾರಣವೇ ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿ. ಅರರೆ. ಸೈಲೆಂಟ್ ಸುನೀಲಂಗೂ ರವಿಶಂಕರ್ ಗುರೂಜಿಗೂ ಏನ್ ಸಂಬಂಧನಾಪ್ಪಾ ಎಂದು ಅನೇಕರು ಅಚ್ಚರಿಯಿಂದ ಪ್ರಶ್ನಿಸಬಹುದು.. ಕಾರಣ ನಿಜಕ್ಕೂ ಇದೆ.ರವಿಶಂಕರ್ ಗುರೂಜಿ. ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯೋದ್ರ ಹಿಂದೆಯೂ ನಿರ್ದಿಷ್ಟ ಕಾರಣವಿದೆ.. . ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆಯೋದ್ರ ಹಿಂದೆ ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿರೋದಕ್ಕೆ ಯಶಸ್ಸು ಸಿಗಲಿ ಎನ್ನುವ ಉದ್ದೇಶವಿದೆ ಎನ್ನಲಾಗ್ತಿದೆ.
ಹೌದು, ರವಿಶಂಕರ್ ಗುರೂಜಿ ಅವರನ್ನು ಸೈಲೆಂಟ್ ಸುನೀಲ ಭೇಟಿ ಮಾಡಿದ್ದಲ್ಲದೇ ಅವರ ಜತೆ ಸುಮಾರು ನಿಮಿಷ ಮಾತನಾಡಿದ್ದಾನೆ.ಆ ಮಾತಿನ ಲಹರಿಯಲ್ಲಿ ತನ್ನ ಭವಿಷ್ಯದ ಯೋಜನೆ,ಯೋಚನೆಗಳ ಬಗ್ಗೆ ಚರ್ಚೆ ನಡೆಸಿದ್ದಾನೆ.ಅದಕ್ಕೆ ಗುರೂಜಿ ಅವರ ಆಶೀರ್ವಾದ.,ಸಲಹೆ ಬೇಕು ಎಂದು ಮನವಿ ಮಾಡಿದ್ದಾನಂತೆ.ಇದಕ್ಕೆ ಗುರೂಜಿ ಕೂಡ ತತಾಸ್ತು ಎಂದಿದ್ದಾರೆ.ಗುರೂಜಿ ಅವರ ಆಶೀರ್ವಾದದಿಂದ ಆನೆಬಲ ಬಂದಂತಾಗಿರುವ ಸುನೀಲನಲ್ಲಿ ಇವತ್ತು, ಎಂಥಾ ಯುದ್ದವನ್ನು ಬೇಕಾದ್ರೂ ಗೆಲ್ಲುವ ಆತ್ಮವಿಶ್ವಾಸ ಮೂಡಿಬಿಟ್ಟಿದೆಯಂತೆ..
“ನಿಮ್ಮಲ್ಲಿ ಸಾಕಷ್ಟು ಜನಕ್ಕೆ ಗೊತ್ತಿಲ್ಲ ಎಂದುಕೊಂಡಿದ್ದೇವೆ. ತಲಘಟ್ಟಪುರದಲ್ಲಿರುವ ಆರ್ಟ್ ಆಫ್ ಲೀವಿಂಗ್ ಕೇವಲ ಆದ್ಯಾತ್ಮ ಬೋಧನೆ-ಉಪಾಸನೆಗೆ ಮಾತ್ರ ಸೀಮಿತವಾಗಿಲ್ಲ.ಆ ಆಶ್ರಮದಲ್ಲಿ ಮತ್ತೊಂದು ಮಹತ್ವದ ಕಾರ್ಯ ಕೂಡ ನಡೆಯುತ್ತಿದೆ.ಯಾವುದೋ ಕೆಟ್ಟ ಘಳಿಗೆಯಲ್ಲಿ ಮಾಡಿದ ನಿರ್ದಾರದಿಂದ ಕತ್ತಲ ಕರಾಳ ಲೋಕಕ್ಕೆ ಸರಿದವರ ಬದುಕನ್ನು ಸುಧಾರಿಸಿ ಮನಪರಿವರ್ತಿಸುವ ಸಮಾಜದ ಮುಖ್ಯವಾಹಿನಿಗೆ ತರುವ ಅದ್ಭುತ ಕೆಲಸವನ್ನೂ ಮಾಡಲಾಗ್ತಿದೆ. ಇದರ ಉಸ್ತುವಾರಿಯನ್ನು ಸ್ವಯಂ ಮುತುವರ್ಜಿಯಿಂದ ಗುರೂಜಿ ಅವರೇ ನೋಡಿಕೊಳ್ಳುತ್ತಿದ್ದಾರೆ.ಇನ್ನೇನು ಬದುಕೇ ಮುಗಿದೋಯ್ತು ಎಂಬ ನಿರಾಶಾವಾದದ ಸ್ಥಿತಿಯಲ್ಲಿದ್ದವರಿಗೆ ಹೊಸ ಬದುಕನ್ನು ಕಲ್ಪಿಸಿಕೊಟ್ಟ ರವಿಶಂಕರ್ ಗುರೂಜಿ ಅವರನ್ನು ಇದೇ ಹೆಮ್ಮೆ-ಅಭಿಮಾನದಿಂದ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾನೆ ಸುನೀಲ.ಅದೇ ವೇಳೆ ತಾನು ತೆಗೆದುಕೊಳ್ಳಲು ಹೊರಟಿರುವ ನಿರ್ದಾರದ ಬಗ್ಗೆಯೂ ಚರ್ಚೆ ನಡೆಸಿದ್ದಾನಂತೆ.ಇದಕ್ಕೆ ಗುರೂಜಿ ಕೂಡ ಗೋ ಹೆಡ್ ಎಂದು ಆಶೀರ್ವದಿಸಿದ್ದಾರಂತೆ.”
ಅಂದ್ಹಾಗೆ ಸೈಲೆಂಟ್ ಸುನೀಲ ರವಿಶಂಕರ್ ಗುರೂಜಿ ಅವರ ಜತೆ ಚರ್ಚಿಸಿ ಆಶೀರ್ವಾದ ಪಡೆದುಕೊಂಡ ಹಿಂದಿನ ಉದ್ದೇಶವೇ ರಾಜಕೀಯ ಪ್ರವೇಶ ಎನ್ನಲಾಗ್ತಿದೆ. ಹೌದು,ಸೈಲೆಂಟ್ ಸುನೀಲ ರಾಜಕೀಯ ಪ್ರವೇಶಕ್ಕೆ ಸೀರಿಯಸ್ ಆಗಿ ಟ್ರೈ ಮಾಡ್ತಿದಾನಂತೆ.ಅಂದ್ಹಾಗೆ ಆತ ಈ ಹಿಂದೆ ರಾಜಕೀಯ ಪ್ರವೇಶಿಸುವ ಪ್ರಯತ್ನ ಮಾಡಿಯೇ ಇಲ್ಲ ಎಂದೇನಲ್ಲ..ಮಾಡಿದ್ರೂ ಸಕ್ಸಸ್ ಆಗಲಿಲ್ಲ ಅಷ್ಟೆ..ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿ ಕಾರ್ಪೊರೇಟರ್ ಎಲೆಕ್ಷನ್ ಗೆ ಕಂಟೆಸ್ಟ್ ಮಾಡಲು ಮುಂದಾಗಿದ್ದ. ಚಾಮರಾಜಪೇಟೆಯಲ್ಲಿ ಇದಕ್ಕಾಗಿ ಒಂದು ಕಾರ್ಯಕ್ರಮ ಕೂಡ ಆಯೋಜಿಸಿದ್ದ.ಆದರೆ ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿಬಿಡ್ತು.ಸಾರ್ವಜನಿಕ ಸೇವೆಗೆ ಎಂಟ್ರಿ ಕೊಡೊಕ್ಕೆ ಅವತ್ತಿನ ಕಾರ್ಯಕ್ರಮವನ್ನು ಒಂದು ಮೆಟ್ಟಿಲಾಗಿ ಬಳಸಿಕೊಳ್ಳೊಕ್ಕೆ ಯತ್ನಿಸಿದ ಸುನೀಲ,ಅವತ್ತಿನ ಕಹಿ ಘಟನೆಯಿಂದ ಸೈಲೆಂಟ್ ಆಗಿಬಿಟ್ಟ.ರಾಜಕೀಯ ಪ್ರವೇಶದ ಕನಸನ್ನು ಸ್ವಲ್ಪ ಅದುಮಿಡಿದುಕೊಂಡು ಬಿಟ್ಟ.
ನಿಮಗೆ ಗೊತ್ತಿರಲಿ ಎಂದು ಹೇಳ್ತೇವೆ ಕೇಳಿ, ಎಲ್ಲವೂ ನಿರೀಕ್ಷೆಯಂತೆ ಆಗಿದಿದ್ರೆ ಇವತ್ತಿಗೆ ಸೈಲೆಂಟ್ ಸುನೀಲ ಅಲಿಯಾಸ್ ಸುನೀಲ್ ಕುಮಾರ್ ಬಿಜೆಪಿ ಪಕ್ಷದೊಳಗೆ ಯಾವುದಾದ್ರೂ ಒಂದು ಸ್ಟ್ರಾಂಗ್ ಪೋಸ್ಟ್ ತೆಗೆದುಕೊಂಡು ತನ್ನದೇ ಆದ ಬೇಸ್ ಕ್ರಿಯೇಟ್ ಮಾಡಿಕೊಂಡಿರ್ತಿದ್ದನೇನೋ.? ಕಾರ್ಪೊರೇಷನ್ ಎಲೆಕ್ಷನ್ ಗೆ ಪ್ರಿಪೇರ್ ಆಗ್ತಿದ್ದನೇನೋ.? ಆದರೆ ಚಾಮರಾಜಪೇಟೆಯ ಅವತ್ತಿನ ಘಟನೆ ಅದಕ್ಕೆಲ್ಲಾ ತಣ್ಣೀರು ಸುರಿದುಬಿಡ್ತು.ಆ ವೇದಿಕೆ ಹಂಚಿಕೊಂಡ ಮುಖಂಡರನ್ನು ಸಮಾಜ ಪ್ರಶ್ನಿಸಿಬಿಡ್ತು.ಆದರೆ ಅವತ್ತಿಗೇ ಸುನೀಲ ಯಾಕೆ ನಾನು ಬದಲಾಗಬಾರ್ದಾ..? ಅದೇ ಫೀಲ್ಡ್ ನಲ್ಲಿ ಇರಬೇಕಾ..? ಎಲ್ಲವನ್ನು ಬಿಟ್ಟು ಸಾರ್ವಜನಿಕ ಜೀವನ ಪ್ರವೇಶಿಸಿ ಯಾರಿಗೆ ನಮ್ಮಿಂದ ತೊಂದರೆ ಆಗಿದೆಯೋ ಅವರಿಂದಲೇ ಜನಾನುರಾಗಿ ಅನ್ನಿಸಿಕೊಳ್ಳಬೇಕೆನ್ನುವ ಕನಸು ಇಟ್ಟುಕೊಳ್ಳೋದೇ ತಪ್ಪಾ..? ಎಂದು ಪ್ರಶ್ನಿಸಿದ್ದ.ರೌಡಿ ಬದಲಾಗಬೇಕು ಎಂದು ಹೇಳುವ ಈ ಸಮಾಜವೇ ಪ್ರಾಕ್ಟಿಕಲ್ಲಾಗಿ ಮುಂದಾದ್ರೆ ಅನುಮಾನದ ದೃಷ್ಟಿಯಿಂದ ನೋಡುವುದೇಕೆ..ಎಂದು ಪ್ರಶ್ನಿಸಿದ್ದು ತುಂಬಾ ಮಾರ್ಮಿಕ ಎನಿಸಿತ್ತು.
ಚಾಮರಾಜಪೇಟೆ ಇನ್ಸಿಡೆಂಟ್ ಆದ್ಮೇಲೆ ಸುನೀಲ್ ಗೆ , ಆಕ್ಟೀವ್ ಪೊಲಿಟಿಕಲ್ ಗೆ ಬರೊಕ್ಕೆ ಸ್ವಲ್ಪ ಸಮಸ್ಯೆಯಾದ್ರೂ ಅಂಡರ್ ಕರೆಂಟ್ ನಲ್ಲಿ ಆತ ರಾಜಕೀಯ ಕೆಲಸಗಳನ್ನು ಮಾತ್ರ ನಿಲ್ಲಿಸಲಿಲ್ಲ. ಸಮಸ್ಯೆ ಹೇಳಿಕೊಂಡು ಬರೋವ್ರಿಗೆ ತನ್ನದೇ ಆದ ರೀತಿಯಲ್ಲಿ ಹೆಲ್ಪ್ ಮಾಡ್ಲಿಕ್ಕೆ ಶುರುಮಾಡಿಕೊಂಡಿದ್ದ.ಸ್ವಲ್ಪ ಜನಪ್ರಿಯತೆ ಪಡೆದುಕೊಳ್ಳೊಕ್ಕೆ ಶುರುಮಾಡಿದ್ದ. ಚಾಮರಾಜಪೇಟೆಯನ್ನೇ ಗುರಿಯಾಗಿಸಿಕೊಂಡು ಸಾಕಷ್ಟು ಕೆಲಸದಲ್ಲಿ ಆಕ್ಟೀವ್ ಆಗಿದ್ದ.ತನ್ನ ಹಳೆಯ ಐಡೆಂಟಿಟಿಯ ಸೈಲೆಂಟ್ ಎನ್ನುವ ಟ್ಯಾಗ್ ಲೈನ್ ಕಳಚಿಟ್ಟು ಎಲ್ಲೇ ಫ್ಲೆಕ್ಸ್-ಬ್ಯಾನರ್ ಗಳಲ್ಲಿ ಸುನೀಲ್ ಕುಮಾರ್ ಎಂದು ಹೆಸರಾಕಿಸಿಕೊಂಡು ಕೆಲಸ ಮಾಡುತ್ತಿದ್ದ.ರಾಜಕೀಯ ಪಕ್ಷದ ಮುಖಂಡರ ಸಖ್ಯದಲ್ಲೇ ಇದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ.ಇದು ಪಕ್ಷದ ವರಿಷ್ಟರಲ್ಲೂ ಆತನ ಬಗ್ಗೆ ನಂಬಿಕೆ,ಆತ್ಮವಿಶ್ವಾಸ ಮೂಡಿಸ್ತು ಎನ್ನಿಸುತ್ತೆ..ಹಾಗಾಗಿ ಮುಂದಿನ ಜಿಬಿಎ ಎಲೆಕ್ಷನ್ ನಲ್ಲಿ ಚಾಮರಾಜಪೇಟೆಯಲ್ಲೇ ವಾರ್ಡ್ ಕೊಡುಸ್ತೇವೆ..ಪ್ರಿಪರೇಷನ್ ಶುರು ಮಾಡ್ಕೋ ಎಂದು ಅಭಯ ನೀಡಿರ್ಬೇಕು..ಹಾಗಾಗಿನೇ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿ ಶುಭಕಾರ್ಯದ ಮುನ್ನ ಹರಸಿ,ಆಶೀರ್ವದಿಸಿ ಎಂದು ಕೇಳಿಕೊಂಡಿದ್ದಾನೆ.ತಪ್ಪು ದಾರಿ ಹಿಡಿದು ಲೈಫ್ ನ್ನೇ ಬರ್ಬಾದ್ ಮಾಡಿಕೊಂಡ ಅದೆಷ್ಟೋ ಜನರ ಮನಪರಿವರ್ತನೆ ಮಾಡಿಸಿರುವ ರವಿಶಂಕರ್ ಗುರೂಜಿ ಅವರಿಗೂ ಸುನೀಲ ನಿಜವಾದ ಪರಿವರ್ತನೆಗೆ ಬಯಸಿದ್ದಾನೆ ಎಂದೆನಿಸಿರಬೇಕು..ಹಾಗಾಗಿ ಮನಪೂರ್ತಿ ಹರಸಿ ಆಶೀರ್ವದಿಸಿದ್ದಾರೆ ಎಂದೆನಿಸುತ್ತದೆ.
“ಅಂದ್ಹಾಗೆ ಸುನೀಲ ಈಗಾಗಲೇ ತಾನು ಯಾವ್ ವಾರ್ಡ್ ನಲ್ಲಿ ಸ್ಪರ್ದಿಸಬೇಕೆನ್ನುವ ನಿರ್ದಾರ ಮಾಡಿಕೊಂಡಿದ್ದಾ ಎಂದೆನಿಸುತ್ತದೆ.ಚಾಮರಾಜಪೇಟೆಯ ಅತ್ಯಂತ ಹಿಂದುಳಿದ, ಕೊಳಗೇರಿಗಳೇ ತುಂಬಿರುವ ಅತ್ಯಂತ ನಟೋರಿಯಸ್ ಏರಿಯಾ ಎಂತನೇ ಕರೆಯಿಸಿಕೊಳ್ಳುವ ಚೆಲುವಾದಿ ಪಾಳ್ಯವನ್ನೇ ಅದಾಗಲೇ ಸೆಲೆಕ್ಟ್ ಮಾಡಿಕೊಂಡು ಕೆಲಸ ಶುರು ಮಾಡಿಕೊಂಡಿದ್ದ..ಆತನ ನಂಬಿಗಸ್ಥ ಹುಡುಗರು ಕೂಡ ಅದಕ್ಕಾಗಿ ಫ್ಲಾಟ್ ಫಾರ್ಮ್ ನ್ನು ಅಣಿ ಮಾಡ್ತಿದ್ರು.ಸ್ವಲ್ಪ ಸೆಟ್ ಬ್ಯಾಕ್ ಆಯ್ತಾದ್ರೂ ಅದಕ್ಕೆ ತಲೆಕೆಡಿಸಿಕೋಳ್ಳದೆ ಇಂದಲ್ಲ ನಾಳೆ ಅಲ್ಲೇ ರಾಜಕೀಯ ನೆಲೆ ಕಂಡುಕೊಳ್ಳಬಹುದೆನ್ನುವ ನಿರೀಕ್ಷೆಯಲ್ಲಿ ಕೆಲಸ ಮುಂದುವರೆಸಿದ್ದಾನೆನ್ನುವ ಖಬರ್ ಇದೆ.ಜಿಬಿಎ ಡಿಲಿಮೇಟಷನ್ ನಲ್ಲಿ ಅದೇ ವಾರ್ಡ್ ಇದ್ರೆ ಅಲ್ಲಿಂದ್ಲೇ, ಬದಲಾದ್ರೆ ಪಕ್ಕದ ವಾರ್ಡ್ ಸೆಲೆಕ್ಟ್ ಮಾಡಿಕೊಂಡು ಕಂಟೆಸ್ಟ್ ಮಾಡುವುದಾಗಿ ಸುನೀಲ ಈಗಾಗಲೇ ಘೋಷಿಸಿಕೊಂಡಿದ್ದಾನೆನ್ನವ ಮಾತಿದೆ”
ರಾಜಕೀಯ ಪ್ರವೇಶವನ್ನು ಅಧೀಕೃತವಾಗಿ ಘೋಷಿಸಲಿಕ್ಕೆ ಸಿದ್ದತೆ ಮಾಡಿಕೊಂಡಿರುವ ಸುನೀಲ ಅಲಿಯಾಸ್ ಸುನೀಲ್ ಕುಮಾರ್ ಅದಕ್ಕೆ ಯಾವುದೇ ತೊಂದರೆ ತಾಪತ್ರೆಯ ಬರಬಾರದೆನ್ನುವ ಕಾರಣದಿಂದ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದಿದ್ದಾನೆ ಎನ್ನಲಾಗುತ್ತಿದೆ.ಈ ಪ್ರಯತ್ನವನ್ನು ಸ್ವಾಗತಿಸಬೇಕೋ..ಬಿಡಬೇಕೋ ಎನ್ನುವ ಗೊಂದಲದಲ್ಲಿ ಸಾಕಷ್ಟು ಜನ ಇದ್ದಾರೆ.ಆದರೆ ಒಬ್ಬ ಮಾಜಿ ರೌಡಿ,ಎಲ್ಲವನ್ನು ಬಿಟ್ಟುಬಿಡುತ್ತೇನೆ.ಬದಲಾಗಲಿಕ್ಕೆ ಒಂದು ಕೊನೆಯ ಚಾನ್ಸ್ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿರಬೇಕಾದ್ರೆ ಅದಕ್ಕೆ ಅವಕಾಶ ಕೊಡೋದು ಮನುಷ್ಯತ್ವ ಎನಿಸುತ್ತದೆ. ಖರಾಬ್ ಬ್ಯಾಕ್ ಗ್ರೌಂಡ್ ಇರುವ ಯಾವುದೇ ವ್ಯಕ್ತಿ ಅದೇ ಹಿನ್ನಲೆಯಲ್ಲಿ ಬದುಕನ್ನು ಕೊನೆಗಾಣಿಸಿಕೊಳ್ಳಬಾರದು, ಆತನಿಗೂ ಬದಲಾಗಲಿಕ್ಕೆ ಒಂದು ಅವಕಾಶ ಕೊಡಬೇಕೆನ್ನುವ ಸಮಾಜದ ಸಿದ್ದಾಂತವನ್ನೇ ಅವಲೋಕಿಸಿ ನೋಡಿದ್ರೆ, ಸುನೀಲನಿಗೆ ಸುನೀಲ ಕುಮಾರ್ ಆಗಿ ಬದುಕೊಕ್ಕೆ…ನಮ್ಮ ನಡುವೆ ಇರೊಕ್ಕೆ.. ಇವ್ನಾ ಆ ಸುನೀಲ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುವಂತಾಗಲಿಕ್ಕೆ..ಎಲ್ಲಕ್ಕಿಂತ ಹೆಚ್ಚಾಗಿ ಆತನಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಜನಾನುರಾಗಿ ಕೆಲಸ ಆಗೋದನ್ನು ನೋಡಲಿಕ್ಕೆ ಒಂದು ಚಾನ್ಸ್ ಕೊಡಲೇಬೇಕೆನಿಸುತ್ತದೆ..ಏನಂತೀರಾ..
ಅಂದ್ಹಾಗೆ ಸೈಲೆಂಟ್ ಸುನೀಲ, ಸುನೀಲ್ ಕುಮಾರ್ ಆಗಿ ಬದಲಾಗಲಿಕ್ಕೆ ಈ ಸಮಾಜ ಅವಕಾಶ ಕೊಡ್ಬೇಕಾ.? ಗಲ್ಲಿಗೆ ಏರಿಸುವ ಮುನ್ನ ಸಾಯೋವ್ರ ಕೊನೇ ಆಸೆ ಏನು ಎಂದು ಕೇಳಿ ಅದನ್ನು ಈಡೇರಿಸ್ಲಿಕ್ಕೆ ಕಾನೂನೇ ಅವಕಾಶ ಕೊಡುವಾಗ, ಬದಲಾಗ್ತೇನೆ ಒಂದು ಅವಕಾಶ ಕೊಡಿ ಎಂದು ಕೇಳಿಕೊಳ್ತಿರುವ ಸುನೀಲನಿಗೆ ಅವಕಾಶಕೊಡುವುದರಲ್ಲಿ ತಪ್ಪೇನಿದೆ ಎನ್ತೀರಾ..? ಅಥವಾ ಆತ ರಾಜಕೀಯಕ್ಕೆ ಬಂದ್ರೂ ತನ್ನ ಆಕ್ಟಿವಿಟಿಸ್ ನಡೆಸ್ಲಿಕ್ಕೆ ಅದನ್ನೇ ಸೇಫೆಸ್ಟ್ ಅಸ್ತ್ರವಾಗಿ ಬಳಸಿಕೊಳ್ಳೋ ಅಪಾಯ ಇದೆ ಎನ್ತೀರಾ..? ನಿಮ್ಮ ಪ್ರಾಮಾಣಿಕವಾದ ಕಾಮೆಂಟ್ ತಿಳಿಸಿ
