ಎಲ್ಲಿಯ “ವಿಜಯ್”…! ಎಲ್ಲಿಯ “ಉಪೇಂದ್ರ”..! ಇಬ್ಬರ  ಹೋಲಿಕೆ ಸರಿನಾ..?


ತಮಿಳ್ನಾಡು(tamilnadu) ರಾಜಕೀಯದಲ್ಲಿ ಬಹುದೊಡ್ಡ ಕ್ರಾಂತಿ ನಡೆದು ಸಿನೆಮಾ ನಟ(cinema star) ವಿಜಯ್‌ (vijay)  ಸಿಎಂ ಆಗುತ್ತಿದ್ದಂತೆ ನಮ್ಮ ಕರ್ನಾಟಕದಲ್ಲಿ  ಮಾದ್ಯಮಗಳಿಗೆ (karnataka medais)ಅದ್ಹೇಕೆ, ರಿಯಲ್‌ ಸ್ಟಾರ್‌ ಹಾಗೂ ಬುದ್ದಿವಂತ ನಟ ಉಪೇಂದ್ರ (real star upendra) ಅವರ ಬೆನ್ನು ಹತ್ತಿ ಕಾಡುವ ಕೆಟ್ಟ ಛಟ-ಚಾಳಿ ಮೈ ಗಂಟಿದೆಯೋ ಗೊತ್ತಾಗ್ತಿಲ್ಲ ನೋಡಿ.ತಮಿಳ್ನಾಡಿನಲ್ಲಿ ವಿಜಯ್‌ ರಂತೆ ಕರ್ನಾಟಕದಲ್ಲಿ ಉಪೇಂದ್ರನಾ ಎನ್ನುವ ರೇಂಜ್‌ ನಲ್ಲಿ ತಾಳೆ ಹಾಕಿ ನೋಡುವ ಪ್ರವೃತ್ತಿ ಯಾಕೆ ಶುರುವಾಗಿದೆಯೋ ಗೊತ್ತಾಗ್ತಿಲ್ಲ.ಆದರೆ ಹಾಗೆ ತುಲನೆ ಮಾಡುವ ಮಾದ್ಯಮಗಳಿಗೂ ಗೊತ್ತಿರುವ ಸತ್ಯ ಏನು ಗೊತ್ತಾ..?ತಮಿಳ್ನಾಡಿನ ವಿಜಯ್‌ ಎಲ್ಲಿ..ಕರ್ನಾಟಕದ ಉಪೇಂದ್ರ ಎಲ್ಲಿ.? ಪಕ್ಷ ಕಟ್ಟಿದ ದಿನದಿಂದಲೇ ಕಾಲಿಗೆ ಚಕ್ರ ಕಟ್ಟಿಕೊಂಡು ತಮಿಳ್ನಾಡಿನಾದ್ಯಂತ ಅಡ್ಡಾಡಿದ ವಿಜಯ್‌ ಎಲ್ಲಿ,,ಪ್ರಜಾಕೀಯ ಕಟ್ಟಿದಾಗಿನಿಂದ ಮನೆಯಲ್ಲೇ ಕೂತು ರಾಜಕೀಯ ಬದಲಾವಣೆ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುವ ಉಪೇಂದ್ರ ಎಲ್ಲಿ ಎಂದು…?

ಉಪೇಂದ್ರ ಒಳ್ಳೆಯ ಮಾತುಗಾರ, ನಟ, ನಿರ್ದೇಶಕ.. ಎಲ್ಲವೂ  ಸರಿ..ಆದರೆ ರಾಜಕೀಯವಾಗಿ ತನ್ನನ್ನು ಪ್ರೂವ್‌ ಮಾಡಬಲ್ಲ ನಾಯಕನಾ..? ಈ ಅನುಮಾನ-ಪ್ರಶ್ನೆ ನಮಗೆಲ್ಲರಿಗಿಂತ ಹೆಚ್ಚು ಉಪೇಂದ್ರರಿಗೇ ಇದ್ದಂತಿದೆ.ಏಕಂದ್ರೆ ನೀವು ಉಪೇಂದ್ರ ಪ್ರಜಾಕೀಯ ಕಟ್ಟಿದಾಗಿನಿಂದ ಈವರೆಗಿನ ಪಕ್ಷದ ಬೆಳವಣಿಗೆ ಹಾಗೂ ಅವರ ನಿಲುವು-ಧೋರಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ರೇನೆ ಉಪೇಂದ್ರರ ಬಗ್ಗೆ ಸಾರ್ವಜನಿಕವಾಗಿ ಅಥವಾ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವಿಲ್ಲ..ಬದಲಿಗೆ ಉಪೇಂದ್ರರಿಗೇ ತಮ್ಮ ಪಕ್ಷದ ಬಗ್ಗೆ ಸ್ಷಷ್ಟ ಪರಿಕಲ್ಪನೆ ಇದ್ದಂತಿಲ್ಲ ಎಂಬ ಅನುಮಾನ ಕಾಡುತ್ತೆ. .ಕ್ಷಣ ಚಿತ್ತ.ಕ್ಷಣ ಪಿತ್ತ ಎನ್ನುವಂತೆ ಒಂದ್‌ ಕ್ಷಣಕ್ಕೆ ಮಾತನಾಡಿದ ಮಾತು, ಇನ್ನೊಂದ್‌ ಕ್ಷಣದಲ್ಲಿ ಇಲ್ಲವಾಗಿರುತ್ತೆ.ಇದು ಅವರೊಂದಿಗೆ ಕೆಲಸ ಮಾಡಲಾಗದೆ ಪಕ್ಷವನ್ನೇ ಬಿಟ್ಟ ಮಾಜಿ ಮುಖಂಡರು, ಕಾರ್ಯಕರ್ತರು ಹಾಗೂ ಹಾಲಿ ಕೆಲಸ ಮಾಡುತ್ತಿರುವ ಅನೇಕರಿಗೆ ಅನುಭವಕ್ಕೆ ಬಂದಿರದೆ ಇರಲಾರದೇನೋ.?

ಬದಲಾವಣೆಯಿಂದ ಮಾತ್ರ ರಾಜಕೀಯ ಹೊಸ ಸ್ವರೂಪ ಪಡೆಯಬಲ್ಲದು..ಜನರು ಮೊದಲು ಜಾಗೃತರಾಗಬೇಕು. ಯಾರು ಯೋಗ್ಯರೆಂದು ನಿರ್ದರಿಸಿ ಮತ ಚಲಾಯಿಸುವ ವಿವೇಚನೆ ಬರಬೇಕು.ಅಪ್ರಮಾಣಿಕರು-ಭ್ತಷ್ಟರನ್ನು ಗೆಲ್ಲಿಸಬಾರದು ಎಂದೆಲ್ಲಾ ಹೇಳೋ ಉಪೇಂದ್ರರ ಮಾತು ಎಲ್ಲವೂ ಸರಿಯಿದೆ..ಆದ್ರೆ ಜನರ ಬಳಿಗೆ ನಾವು ಹೋಗಿ ಇದನ್ನೆಲ್ಲಾ ಹೇಳಬಾರದು..ಜನರೇ ಅರ್ಥಮಾಡಿಕೊಳ್ಳಬೇಕು..ಅವರೇ ಮತ ಹಾಕಿ ಗೆಲ್ಲಿಸಬೇಕು.ಆ ಒಂದು ಜಾಗೃತಿ ಅವರಲ್ಲಿ ಮೂಡಬೇಕು ಎನ್ನುವ ಮಾತುಗಳು ಮಾತ್ರ ಅದೇಕೋ ಅವರದೇ ಎ ಚಿತ್ರದ ಅನುಭವ ಕೊಟ್ಟುಬಿಡುತ್ತೆ..

ಪಕ್ಷದ ಕಾರ್ಯಕರ್ತರನ್ನು ತೀವ್ರ ಭ್ರಮನಿರಸನಗೊಳಿಸುತ್ತಿರುವುದೇ ಇದು. ಅಭ್ಯರ್ಥಿಯನ್ನೇ ನೋಡದ  ಮತದಾರರು ಗೊಂದಲಕ್ಕೆ ಸಿಲುಕ್ತಿರುವುದು ಇದೇ ಕಾರಣಕ್ಕೆ ಅನ್ನಿಸುತ್ತೆ..ಮಾತನಾಡುವುದನ್ನೆಲ್ಲಾ ಬಿಟ್ಟು ಪ್ರಾಕ್ಟಿಕಲ್ಲಾಗಿ ಉಪೇಂದ್ರ ಪ್ರಜಾಕೀಯ ಪಕ್ಷವನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಧುಮುಕಿದ್ರೆ ಆಗ ಬದಲಾವಣೆ ನಿರೀಕ್ಷೆ ಮಾಡೋದರಲ್ಲಿ ಅರ್ಥವಿದೆ.ಅದನ್ನು ಬಿಟ್ಟು ನಾನು ಯಾರ ಪರವಾಗಿಯೂ ಬರೊಲ್ಲ.ಪ್ರಚಾರ ಮಾಡೊಲ್ಲ..ನಾನು ಚುನಾವಣೆಯಲ್ಲಿ ನಿಲ್ಲೊಲ್ಲ..ನೀವ್‌ ನಿಮ್‌ ನಿಮ್‌ ಕೆಪಾಸಿಟಿ ಮೇಲೆ ಗೆದ್ದು ತೋರಿಸಿ,,ಬದಲಾವಣೆ ತನ್ನಿ ಎಂದು ಹೇಳ್ತಾ ಬಂದಿರೋದು ಜನರನ್ನು ಮೈ ಪರಿಚಿಕೊಳ್ಳುವಂತೆ ಮಾಡಿದೆ

ಸಿನೆಮಾ ತೆಗೆದಷ್ಟು ಸಲೀಸಲ್ಲ..ಅನಾಯಾಸವಲ್ಲ ರಾಜಕೀಯ ಎನ್ನುವುದು ಉಪೇಂದ್ರಗೂ ಗೊತ್ತಿದೆ.ಯಾರೂ ಬೇಡ ಅವರದೇ ಪ್ರಜಾಕೀಯ ಪಕ್ಷದಲ್ಲಿರುವವರಿಗೆ ಉಪೇಂದ್ರರನ್ನು ಅರ್ಥ ಮಾಡಿಕೊಳ್ಳಲು ಆಗ್ತಿಲ್ಲ.ಅಷ್ಟೇ ಏಕೆ ಈ ವಿಷಯದಲ್ಲಿ ಸ್ವತಃ ಉಪೇಂದ್ರ ಅವರಿಗೆ ಕ್ಲಾರಿಟಿ ಇದ್ದಂತಿಲ್ಲ.ಹೀಗೆ ಹೇಳಿದ್ರೆ ಬಹುಷಃ ಅವರು ತಮಿಳ್ನಾಡಿನಲ್ಲಿ ಬದಲಾದ ರಾಜಕೀಯ ಸನ್ನಿವೇಶವನ್ನು ನಿದರ್ಶನವಾಗಿ ನೀಡಬಹುದು..ಆದರೆ ನೆನಪಿರಲಿ, ವಿಜಯ್‌ ಪಕ್ಷ ಕಟ್ಟಿ ಮನೆಯಲ್ಲಿ ಕೂರಲಿಲ್ಲ..ಕಾಲಿಗೆ ಚಕ್ರ ಹಾಕಿಕೊಂಡು ತಿಂಡಿ-ನಿದ್ದೆ ಎಲ್ಲವನ್ನು ಬಿಟ್ಟು ಅಡ್ಡಾಡಿದ್ರು.ಅದೊಂದು ತಪಸ್ಸು ಬಿಡಿ..ಆ ಕಠಿಣ ಪರಿಶ್ರಮ ಅಲ್ಲಿನ ಮತದಾರರಿಗೆ ಗೊತ್ತಾದ ಮೇಲೆಯೇ ಅವರನ್ನು ವಿಜಯ್‌ ಅವರನ್ನು ನಂಬಿದ್ದು, ಅಭೂತಪೂರ್ವ ಗೆಲುವನ್ನು ನೀಡಿದ್ದು..

ಆದರೆ ನಮ್ಮ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಮನಸ್ಥಿತಿ ಇದಕ್ಕೆ ಎಲ್ಲಿಯೂ ತಾಳೆ ಆಗುವುದಿಲ್ಲ ಬಿಡಿ..ಪ್ರಜಾಕೀಯ ಕಟ್ಟಿದ ಮೇಲೆ ಎಷ್ಟು ಬಾರಿ ಉಪೇಂದ್ರ ಸಾರ್ವಜನಿಕವಾಗಿ ತಮ್ಮ ಪಕ್ಷದ ಕಾರ್ಯಕ್ರಮ ಮಾಡಿದ್ದಾರೆ.ಸಮಾವೇಶ ನಡೆಸಿದ್ದಾರೆ.ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಿದ್ದಾರೆ ಎನ್ನುವುದನ್ನು ಅವರ ಬಳಿಯೇ ಕೇಳಿ.ಮುಖಂಡ ಎನಿಸಿಕೊಂಡಾತ ಬದಲಾವಣೆಯ ಬಗ್ಗೆ ಮನೆಯಲ್ಲಿ ಕೂತು ಕಂಠಶೋಷಣೆ ಮಾಡಿಕೊಳ್ಳುವುದಲ್ಲ. ಫೀಲ್ಡ್‌ ಗೆ ಇಳಿಯಬೇಕು..ಜನಸಾಮಾನ್ಯನ ಬಳಿ ಹೋಗ್ಬೇಕು.ತಮ್ಮ ವಿಚಾರಧಾರೆಗಳನ್ನು ತಿಳಿಸಿ ಜನರ ಮನವೊಲಿಸುವ ಕೆಲಸ ಮಾಡಬೇಕು.ಕೇವಲ ಸಿನೆಮಾ ಸ್ಟಾರ್‌ ಎನ್ನುವ ಕೊಂಬನ್ನು ಸಿಕ್ಕಿಸಿಕೊಂಡು, ಫಿಲ್ಮಿ ಡೈಲಾಗ್‌ ಹೊಡೆದುಕೊಂಡು ಮನೆಯಲ್ಲಿ ಕೂತು ಎಲ್ಲರನ್ನು ದೂಷಿಸುವುದಲ್ಲ..ಉಪೇಂದ್ರ ಅವರಿಂದ ಆಗುತ್ತಿರುವುದು ಅದೇ..ಇದರಿಂದ ಬದಲಾವಣೆ ಆಗಿಬಿಡುತ್ತೆ ಎಂದು ನಿರೀಕ್ಷಿಸುವುದು ಸಧ್ಯದ ಸ್ಥಿತಿಗಂತೂ ಮೂರ್ಖತನ ಎನಿಸುತ್ತದೆ.

ALSO READ :  ವನಿತೆಯರ ಟಿ-20 ವಿಶ್ವಕಪ್: 8 ಕ್ಯಾಚ್ ಬಿಟ್ಟು ಸೋತ ಪಾಕಿಸ್ತಾನ, ಹೊರಬಿದ್ದ ಭಾರತ!

ಉಪೇಂದ್ರ ಅವರಿಗೇ ಕೇಳಿ ನೋಡಿ..ಯಾಕೆ ನಿಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರ ಬಳಿಗೆ ಹೋಗಬಾರದು..ಪ್ರಚಾರ ಮಾಡಬಾರದು ಎನ್ನುತ್ತೀರಿ ಅಂಥ..ಅಲ್ರಿ.. ಸ್ವಾಮಿ ಬದಲಾವಣೆ ಮನೆಯಲ್ಲಿ ಕೂತು ಆದರ್ಶದ ದೊಡ್ಡ ದೊಡ್ಡ ಮಾತುಗಳನ್ನಾಡಿದಾಕ್ಷಣ ಆಗಿಬಿಡುತ್ತಾ.ಹಾಗೆ ನಿರೀಕ್ಷೆ ಮಾಡುವಂಥ ಸ್ಥಿತಿ ಸಧ್ಯಕ್ಕಿದೆಯೇ.? ನನ್ನಂತೆ ಅದೆಷ್ಟೋ ಜನರಿಗೆ ಈ ಬಗ್ಗೆ ನಂಬಿಕೆಯಿಲ್ಲ..ಕಾರ್ಯಕರ್ತರು ಕಳೆದ ಬಾರಿ ಎಲೆಕ್ಷನ್‌ ನಲ್ಲಿ ನಿಲ್ಲುವ ಮಾತನ್ನಾಡಿದಾಗ ನಾನು ಬರೊಲ್ಲ..ನೀವೆ ನಿಮ್ಮ ಕೆಪಾಸಿಟಿ ಮೇಲೆ ಜನರನ್ನು ಮನವೊಲಿಸಿ..ಪಕ್ಷದ ವಿಚಾರಧಾರೆಗಳ ಬಗ್ಗೆ ಹೇಳಿ..ಅವರು ಬದಲಾವಣೆ ನಿರ್ದಾರ ಮಾಡುವಂತೆ ಪ್ರೇರೇಪಿಸಿ  ಎಂದಿದ್ದರಂತೆ ಉಪೇಂದ್ರ.ಇದು ಹೇಗೆ ಸಾಧ್ಯ ಎಂದು ಕೇಳಿದ್ರೆ ಆ ಒಂದು ಆಲೋಚನೆ ಜನರಲ್ಲಿ ಬರುವವರೆಗೂ ಬದಲಾವಣೆ ಸಾಧ್ಯವಿಲ್ಲ ಎಂದಿದ್ರಂತೆ..ಇದನ್ನು ಕೇಳಿ ತಲೆ ಕೆರೆದುಕೊಂಡು ಹಿಡಿಶಾಪ ಹಾಕ್ಕೊಂಡು ಅದೆಷ್ಟೋ ಆಕಾಂಕ್ಷಿಗಳು ವಾಪಸ್‌ ಬಂದಿದ್ರಂತೆ.

ಜನರ ಬಳಿಗೆ ಹೋಗದೆ, ನಿಮ್ಮ ಪಕ್ಷದ ವಿಚಾರಗಳನ್ನು ತಿಳಿಸದೆ, ಅವರನ್ನು ಮನವೊಲಿಸಲು ಸಾಧ್ಯನಾ ಉಪೇಂದ್ರ ಅವರೇ..ನೀವು ಎಲ್ಲೂ ಹೋಗದೆ ನಿಮ್ಮ ಪಕ್ಷದ ವಿಚಾರಧಾರೆಗಳನ್ನು ಇಟ್ಟುಕೊಂಡೇ ಕಳೆದ ಬಾರಿಯ ಎಷ್ಟೋ ಚುನಾವಣೆಗಳಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಉತ್ತಮ ಸಾಧನೆ ಮಾಡಿದ್ರು ಒಪ್ಪೋಣ..ನೀವು ಒಂದಷ್ಟು ಜಡತ್ವ ಬಿಟ್ಟು ಫೀಲ್ಡ್‌ ಗೆ ಇಳಿದು ಪಕ್ಷದ ಪರ ಕೆಲಸ ಮಾಡಿದ್ರೆ ಬದಲಾವಣೆ ಆಗಿನಿಂದ ಚಿಗುರು ಹೊಡೆಯಬಹುದಲ್ಲವೇ..? ನೀವು ಇತರರಂತೆ ಸುಳ್ಳು ಭರವಸೆ ಕೊಡುವುದು ಬೇಡ…ಆಮಿಷ-ಪ್ರಲೋಭನೆ ಒಡ್ಡುವುದು ಬೇಡ..ಹಣ,ಹೆಂಡ ಹಂಚುವುದು ಬೇಡ.. ರಾಜಕೀಯದ ಪ್ರಸ್ತುತ ಹದಗೆಟ್ಟ ಸ್ಥಿತಿಯನ್ನು ನಿಮ್ಮದೇ ಸ್ಟೈಲ್‌ ನಲ್ಲಿ ಜನರಿಗೆ ತಿಳಿಸಿ ಅವರನ್ನು ಬದಲಿಸಿ..ಏಕೆಂದ್ರೆ ನಿಮಗೆ ಆ ಒಂದು ಶಕ್ತಿ-ಛಾತಿ ಎರಡೂ ಇದೆ.ನೀವೇ ಒಂದು ಕ್ಷೇತ್ರದಲ್ಲಿ ಗೆದ್ದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ..ಇದನ್ನೆಲ್ಲಾ ಮಾಡೋದನ್ನು ಬಿಟ್ಟು ಮನೆಯಲ್ಲಿ ಕೂತು ಚುನಾವಣೆ ಗೆಲ್ಲುವ ಮಾತನ್ನಾಡುವುದು ವಾಸ್ತವ ಸ್ಥಿತಿಯ ಹೋಲಿಕೆಯಲ್ಲಿ ಎಷ್ಟು ಸರಿ.

ತಮಿಳ್ನಾಡಿನಲ್ಲಿ ಆದಂಥ ರಾಜಕೀಯ ಕ್ರಾಂತಿಯನ್ನು ಮುಂದಿಟ್ಟುಕೊಂಡು ಉಪೇಂದ್ರರ ಪ್ರಜಾಕೀಯ ದಿಂದಲೂ ಹಾಗೆಯೇ ಆಗಿಬಿಡುತ್ತೆ ಎಂದು ಹೋಲಿಕೆ ಮಾಡುವುದು ಸರಿಯಲ್ಲ ಎನಿಸುತ್ತೆ. ವಿಜಯ್‌ ಗಿಂತಲೂ ಹೆಚ್ಚಿನ ಪ್ರೌಢಿಮೆ,ಸ್ಟಾರ್‌ ಡಮ್‌  ಇದ್ದರೂ ತಮಿಳ್ನಾಡಿನಲ್ಲಿ ರಜನಿಕಾಂತ್‌,ಕಮಲ ಹಾಸನ್‌ ಅವರಂಥವರಿಂದಲೇ ಏನೂ ಮಾಡಲಿಕ್ಕೆ ಆಗಲಿಲ್ಲ.ಅಂಥದ್ದರಲ್ಲಿ ಬದಲಾವಣೆ ಮತದಾರರಲ್ಲಿ ಬರಬೇಕು, ಅವರು ಅದರ ಬಗ್ಗೆ ಸಾರ್ವಜನಿಕವಾಗಿ ಜಾಗೃತಿ ಮೂಡಿಸಿ,ಮತಗಟ್ಟೆಗಳಿಗೆ ತೆರಳಿ ಮತ ಹಾಕಿ ಪ್ರಜಾಕೀಯ ಗೆಲ್ಲಿಸುವ ಮೂಲಕ ಪ್ರಜಾತಂತ್ರದಲ್ಲಿ ಭಾಗವಹಿಸಬೇಕು.ಯಾವಾಗ ಅಂಥಾ ದಿನಗಳು ಬರುತ್ತವೋ , ರಾಜಕೀಯದಲ್ಲಿ ಕ್ರಾಂತಿ ಆಗಲು ಸಾಧ್ಯ ಎಂದು ಮಾತನಾಡುವ ಉಪೇಂದ್ರರಿಂದ ಹಾಗೂ ಅಂಥಾ ಮನಸ್ತಿತಿ ಇರುವಂಥವರಿಂದ  ಏನನ್ನೂ ನಿರೀಕ್ಷಿಸಲಾಗದು..ನಿರೀಕ್ಷಿಸುವುದು ಕೂಡ ತಪ್ಪೆ..ಏಕೆಂದ್ರೆ ಈ ದೇಶದಲ್ಲಿ ಬದಲಾವಣೆ ಬೀದಿಗಿಳಿದು ಪ್ರತಿಭಟಿಸಿದರಷ್ಟೇ ಸಾಧ್ಯ..ಮನೆಯಲ್ಲಿ ಕೂತು ಕಂಠಶೋಷಣೆ ಮಾಡಿಕೊಳ್ಳುವುದರಿಂದ ಖಂಡಿತಾ ಅಲ್ಲ..ಇದು ಉಪೇಂದ್ರರಿಗೆ ಅರ್ಥವಾದರೆ ಸಾಕು.


Leave a Comment