ಹೀಗೊಂದು ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.ಇದರ ಸತ್ಯಾಸತ್ಯತೆ ಏನು ಎನ್ನುವುದಕ್ಕೆ ಆರ್ ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರೇ ಸ್ಪಷ್ಟನೆ ಕೊಡಬೇಕೇನೋ..?ಅಥವಾ ಯಾರು ಈ ಆಪಾದನೆಗೆ ಸಿಲುಕಿದ್ದಾರೋ ಅವರೇ ಉತ್ತರಿಸಬೇಕೇನೋ..? ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತ ಆ ಒಬ್ಬ ವ್ಯಕ್ತಿಯ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಅಂತಹದ್ದೇನೂ ಅನ್ನಿಸಲಿಲ್ಲ.ಆದರೆ ಅದರ ಬಗ್ಗೆ ನಂತರ ಕೇಳಿಬಂದ ವಿವರಗಳು ಆಶ್ಚರ್ಯ-ವಿಚಿತ್ರ ಎನಿಸಿದವು..ಹೀಗೂ ಆಗಲಿಕ್ಕೆ ಸಾಧ್ಯವಿದೆಯಾ ಎಂಬ ಪ್ರಶ್ನೆಯೂ ಮೂಡಿತು.ಏಕೆಂದರೆ ಅದು ತೀವ್ರತ ಚರ್ಚಗೆ ಗ್ರಾಸವಾಗಿದ್ದ ಪ್ರಕರಣವೊಂದರಲ್ಲಿ ಕೇಳಿಒಂದಿದ್ದ ವ್ಯಕ್ತಿಯ ಫೋಟೋ..

ವಿಷಯ ಇಷ್ಟೇ..ಶಾಸಕ ಮುನಿರತ್ನ ವಿರುದ್ಧ ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದರಂತೆ ಕೇಳಿಬಂದಿದ್ದ ಆಪಾದನೆಗಳ ಪಟ್ಟಿಗೆ ಸೇರಿದ್ದ ಮತ್ತೊಂದು ಆಪಾದನೆ ಅತ್ಯಾಚಾರದ್ದು.ಈ ಪ್ರಕರಣದಲ್ಲಿ 5 ನೇ ಆರೋಪಿಯಾಗಿದ್ದ ಎನ್ನಲಾದ ಅವರ ಗನ್ ಮ್ಯಾನ್ ವಿಜಯ್ ಕುಮಾರ್ ಆರ್ ಎಸ್ ಎಸ್ ನ ಶಕ್ತಿ ಕೇಂದ್ರ ಎಂದೇ ಕರೆಯಿಸಿಕೊಳ್ಳುವ ಚಾಮರಾಜಪೇಟೆಯ ಕೇಶವಕೃಪಾದ ಕಚೇರಿಯಲ್ಲಿ ಸೆಂಟ್ರಿಯಾಗಿ ಕೆಲಸ ಮಾಡುತ್ತಿದ್ದಾರೆನ್ನುವ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್ ಅವರದು ಎನ್ನಲಾಗುತ್ತಿರುವ ಫೋಟೋ ಕೂಡ ವೈರಲ್ ಆಗ್ತಿದೆ.

ಅತ್ಯಾಚಾರದಂಥ ಆರೋಪದಲ್ಲಿ ಸಿಕ್ಕಾಕೊಂಡಿದ್ದ ವಿಜಯ್ ಕುಮಾರ್ ಅವರದೇನಾ ಆ ಫೋಟೋ ಎನ್ನುವ ಕುತೂಹಲ ಎಲ್ಲೆಡೆ ಕೇಳಿಬಂದಿದೆ.
ಈ ಸುದ್ದಿ ಹಾಗೂ ಫೋಟೋದ ವ್ಯಕ್ತಿಗೆ ಸಂಬಂಧಿಸಿದ ವಿಚಾರ ದೊಡ್ಡಮಟ್ಟದ ಕೋಲಾಹಲವನ್ನೇ ಸೃಷ್ಟಿಸಿದೆ.ಗಂಭೀರ ಆರೋಪದಲ್ಲಿ ಸಿಕ್ಕಾಕೊಂಡವನಿಗೆ ಕೇಶವಕೃಪಾದಂಥ ಕಚೇರಿಗೆ ಸೆಂಟ್ರಿ ಡ್ಯೂಟಿ ಹಾಕಿದ್ದು..ಯಾರು..? ಹೇಗೆ..? ಎನ್ನುವುದೇ ಎಲ್ಲರ ಕುತೂಹಲದ ಪ್ರಶ್ನೆ.ಮೌಲ್ಯಾದರ್ಶ, ಚಾರಿತ್ರ್ಯ-ವೈಚಾರಿಕತೆ ಬಗ್ಗೆ ಮಾತನಾಡುವ ಆರ್ ಎಸ್ ಎಸ್ ಅಂಗಳದಲ್ಲಿ ವಿಜಯ್ ಕುಮಾರ್ ಪ್ರತ್ಯಕ್ಷವಾಗಿದ್ದು ಹೇಗೆ..? ಅವರನ್ನು ನೇಮಿಸಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಸಾರ್ವಜನಿಕವಾಗಿ ಮೂಡಿದೆ.

ಕೆಲವು ಮೂಲಗಳ ಪ್ರಕಾರ ಶಾಸಕ ಮುನಿರತ್ನರ ಗನ್ ಮ್ಯಾನ್ ಆಗಿದ್ದ ವಿಜಯ್ ಕುಮಾರ್ ಅವರನ್ನು ಕೇಶವಕೃಪದ ಕಚೇರಿಯಲ್ಲಿ ಕೆಲಸಕ್ಕೆ ನಿಯೋಜನೆ ಮಾಡಲಾಗಿದೆ.ಇದು ಪಕ್ಕಾ ಸುದ್ದಿ ಎನ್ನಲಾಗಿದೆ.ಆದರೆ ಇನ್ನು ಕೆಲವರು ಈ ಮಾಹಿತಿ ಸುಳ್ಳು..ಈ ಫೋಟೋ ಕೂಡ ಸುಳ್ಳು ಎನ್ನುತ್ತಿದ್ದಾರೆ. ಆದರೆ ವಿಜಯ್ ಕುಮಾರ್ ಅವರ ಈ ಫೋಟೋ ಕೇಶವಕೃಪಾದ ಬಳಿ ಡ್ಯೂಟಿಯಲ್ಲಿದ್ದಾಗ ಸೆರೆ ಹಿಡಿದಿರುವುದು ಎನ್ನುತ್ತಿದ್ದಾರೆ. ಕೆಲಸ ಕಳೆದುಕೊಂಡು ನಿರುದ್ಯೋಗಿಯಾಗಿದ್ದ ವಿಜಯ್ ಕುಮಾರ್ ಗೆ ಈ ಕೆಲಸವನ್ನು ಕೊಡಿಸಿದ್ದು ಮುನಿರತ್ನ ಎನ್ನುವ ಮಾತುಗಳಿವೆ.ಆದರೆ ವಿಜಯ್ ಕುಮಾರ್ ಕೇಶವಕೃಪಾದಲ್ಲೇ ಡ್ಯೂಟಿ ಮಾಡುತ್ತಿದ್ದಾರೆ ಎನ್ನುವುದಾಗಲಿ,ಇದಕ್ಕೆ ಮುನಿರತ್ನರ ಕೃಪಕಟಾಕ್ಷವೇ ಕಾರಣ ಎನ್ನುವುದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಮಾತ್ರ ಗೊತ್ತಾಗ್ತಿಲ್ಲ.

ರೇಪ್ ಕೇಸ್ ನಲ್ಲಿ 5ನೇ ಅಪರಾಧಿಯಾಗಿ ನಂತರ ಅಮಾನತ್ತು ಕೂಡ ಆಗಿದ್ದ ವಿಜಯ್ ಕುಮಾರ್ ಅವರು ಕೇಶವಕೃಪಾದ ಬಳಿ ಪ್ರತ್ಯಕ್ಷರಾಗಿದ್ದಾರೆನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಚಾಮರಾಜಪೇಟೆಯಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಯಲ್ಲಿ ಸೆಂಟ್ರಿಯಾಗಿ ಕೆಲಸ ಮಾಡುತ್ತಿದ್ದಾರೆನ್ನುವ ಸುದ್ದಿಗೆ ಇನ್ನೂ ಖಚಿತತೆ ಸಿಗಬೇಕಿದೆ.ಇದೆಲ್ಲದರ ನಡುವೆಯೇ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗೆ ಕೇಶವಕೃಪಾದಂಥ ಕಚೇರಿಯ ಗಸ್ತು ಕಾಯುವ ಕೆಲಸ ನೀಡಿದ್ದು ಎಷ್ಟರ ಮಟ್ಟಿಗೆ ಸರಿ..? ಯಾವ ಸೈದ್ಧಾಂತಿಕತೆ.? ಎಂದು ಅನೇಕ ಕಾಂಗ್ರೆಸ್ಸಿಗರು ಪ್ರಶ್ನೆ ಮಾಡಲಾರಂಭಿಸಿದ್ದಾರೆ.
ಅದೇನೇ ಇರಲಿ, ಗಂಭೀರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವಿಜಯಕುಮಾರ್ ನ್ನು ಕೇಶವಕೃಪಾದಂಥ ಕಚೇರಿಯಲ್ಲಿ ಸೆಂಟ್ರಿಯಾಗಿ ನಿಯೋಜನೆ ಮಾಡಿರುವುದು ರಾಜಕೀಯ ಪಡಸಾಲೆಯಲ್ಲಿ ಆಕ್ರೋಶದೊಂದಿಗೆ ಕೋಲಾಹಲವನ್ನೇ ಸೃಷ್ಟಿಸಿದೆ. ವಿಜಯ್ ಕುಮಾರ್ ನಿಜಕ್ಕೂ ಕೇಶವಕೃಪಾದಲ್ಲಿ ಸೆಂಟ್ರಿಯಾಗಿ ಕೆಲಸ ಮಾಡುತ್ತಿದ್ದಾರಾ..? ಕೆಲಸ ಮಾಡುತ್ತಿದ್ದರೆ ಅವರನ್ನು ಅಲ್ಲಿಗೆ ನಿಯೋಜಿಸಿದ್ದು ಯಾರು ಎನ್ನುವ ಪ್ರಶ್ನೆಗಳಿಗೂ ಉತ್ತರ ದೊರೆಯಬೇಕಿದೆ.ಒಂದು ವೇಳೆ ವಿಜಯ್ ಕುಮಾರ್ ಕೇಶವಕೃಪಾದಲ್ಲಿಯೇ ನಿಯೋಜನೆ ಗೊಂಡಿರುವುದು ಸತ್ಯವೇ ಆಗಿದ್ದರೆ ವಿಜಯ್ ಕುಮಾರ್ ಹಿನ್ನಲೆ ಹಾಗೂ ಪೂರ್ವಾಪರ ಗೊತ್ತಿದ್ದೂ ನಿಯೋಜನೆ ಮಾಡಿಕೊಂಡಿದ್ದು ಯಾರು..? ಅಂತದ್ದೊಂದು ಧೈರ್ಯ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಮೂಡುವುದು ಕೂಡ ಸಹಜ..
