ದುಡುಕಿಬಿಟ್ರಾ ಸಚಿವ ಭೈರತಿ ಸುರೇಶ್..?”ಉಗುರಿ”ನಲ್ಲಿ ಹೋಗೋದಕ್ಕೆ “ಕೊಡಲಿ” ತಗೊಂಡ್ ಬಿಟ್ರಾ..?


ಸಾರಿಗೆ ಸಚಿವ ಭೈರತಿ ಸುರೇಶ್‌(TRANSPORT MINISTER BYRATHI SURESH) ಗೆ ಇದಕ್ಕಿಂತ ದೊಡ್ಡ  ಮುಖಭಂಗ ಮತ್ತೊಂದಿಲ್ವೇನೋ..? ಅವರಿಗೆ ಕೊನೆಗೂ ನಮ್ಮ ಸಾರಿಗೆ ಸಿಬ್ಬಂದಿಯ ಅಸಲಿತನ ಅರಿವಾಯ್ತಲ್ಲ..ಸಾರಿಗೆ ನಿಗಮಗಳಲ್ಲಿ ಹೀಗೊಂದು ಅಭಿಪ್ರಾಯ ವ್ಯಕ್ತವಾಗ್ತಿದೆ. ಇಡೀ ಸಾರಿಗೆ ಇಲಾಖೆ(TRANSPORT DEPARTMENT)ಯೇ ನನ್ನ ಕುಟುಂಬವಿದ್ದಂತೆ ಎಂದು ಹೇಳಿಕೊಳ್ಳುವ ಸಚಿವರಿಗೆ, ತನ್ನ  ಕುಟುಂಬದ ಸದಸ್ಯರ ಬಗ್ಗೆ ಕನಿಷ್ಟ ಕಾಳಜಿ-ಮಾನವೀಯತೆ ಖಂಡಿತಾ ಇರಬೇಕಿತ್ತು.ಇದೀಗ ಆತ ನಿರಪರಾಧಿ ಸತ್ಯ ಮನವರಿಕೆ ಆದಂತಿದೆ.ಹಾಗಾಗಿ ಆತನ ಸಸ್ಪೆಂಡ್‌ ಆದೇಶ ವಾಪಸ್‌ ಪಡೆಯುವಂತೆ ಆದೇಶಿಸಿದ್ದಾರೆನ್ನುವುದು ವರ್ತಮಾನ.ಆದರೆ  ಈಗ ಚರ್ಚೆ ಆಗುತ್ತಿರುವ ವಿಷಯವೇ ಬೇರೆ..ಉಗುರಿನಲ್ಲಿ ಬಗೆಹರಿಯಬಹುದಾಗಿದ್ದ ಸಮಸ್ಯೆ ನಿವಾರಣೆಗೆ ಸಚಿವ ಭೈರತಿ ಸುರೇಶ್‌ ಕೊಡಲಿ ತೆಗೆದುಕೊಂಡಿದ್ದೆಷ್ಟು ಸರಿ..? ವಾರದವರೆಗೆ  ಮಾದ್ಯಮಗಳು ಕಂಡಕ್ಟರ್‌ ನ ಜನ್ಮವನ್ನೆಲ್ಲಾ ಜಾಲಾಡಿದ ತರುವಾಯ ಅಮಾನತು ವಾಪಸ್‌ ಪಡೆದಿರುವುದು ಸಮಂಜಸವೇ..ನ್ಯಾಯ ಸಮ್ಮತವೇ ಎಂದು ಪ್ರಶ್ನಿಸಲಾಗ್ತಿದೆ.ಬಹುಷಃ ಇಷ್ಟೆಲ್ಲಾ ಅವರು ಮಾಡಿದ್ದು, ಪ್ರಚಾರಕ್ಕಾ..? ಅವರೇ ಹೇಳಬೇಕಿದೆ.

ಅಮಾನತ್ತಾಗಿದ್ದ ಕಂಡಕ್ಟರ್‌ ರಾಮಕೃಷ್ಣ( CONDUCTOR RAMAKRISHNA) ಮತ್ತೆ ಕೆಲಸಕ್ಕೆ ತೆರಳಲಿದ್ದಾರೆ.ಸಚಿವರ ಕೃಮಾದಾನ ದೊರೆತ ನಂತರ ಅಮಾನತು ಆದೇಶ ರದ್ದಾಗಿದೆ ಎನ್ನುವುದು ಸಮಾಧಾನ.ಅವರಿಗೆ ಆದ ಅವಮಾನ-ಮುಜುಗರ-ಮಾನಸಿಕ ಹಿಂಸೆಗೆ ಫುಲ್‌ ಸ್ಟಾಪ್‌ ದೊರೆತಿದೆ. ಈಗಿನ ಡೆವಲಪ್ಮೆಂಟ್‌ ಬಗ್ಗೆ ಹೇಳೊಕ್ಕಿಂತ ಮುನ್ನ ಜುಲೈ 11ರ ರಾತ್ರಿ ನಡೆದಿದ್ದ ಘಟನೆ ಬಗ್ಗೆ ಒಂದು ಅವಲೋಕನ ಮಾಡೋಣ..ಅದು ಜುಲೈ 11ರ  ರಾತ್ರಿ..ಸಮಯ 10 ರಿಂದ 11ರ ಸಮಯ ಇರಬೇಕೆನ್ನಿಸುತ್ತೆ. ಸಚಿವರು ದಿಢೀರ್ ಪರಿಶೀಲನೆಗಾಗಿ ಬಿಎಂಟಿಸಿ ಬಸ್‌ ಒಂದನ್ನು ಮುಸುಕುದಾರಿಯಾಗಿ ಹತ್ತಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ಹೋಗುತ್ತಿದ್ದ ಆ ಬಸ್‌ ನ ಕಂಡಕ್ಟರ್‌ ಆಗಿದ್ದವರು ಟಿ.ಜಿ. ರಾಮಕೃಷ್ಣ.ಎಲ್ಲರಿಗೆ ಟಿಕೆಟ್‌ ಇಶ್ಯೂ ಮಾಡ್ತಾ ಸಚಿವರ ಬಳಿಗೂ ಬಂದಿದ್ದಾನೆ.ಡಿಜಿಟಲ್‌ ಪೇಮೆಂಟ್‌ ಮಾಡಬಹುದಾಗಿದ್ರೂ ಕಂಡಕ್ಟರ್‌ ಕಾರ್ಯಕ್ಷಮತೆ ಪರೀಕ್ಷಿಸಲು ಹಣ ಕೊಟ್ಟು ಚಿಲ್ಲರೆ ಬಗ್ಗೆ ಮಾತನಾಡಿದ್ದಾರೆ. ಅವರು ಕೊಟ್ಟ ಹಣಕ್ಕೆ ಸಚಿವರಿಗೆ ಚಿಲ್ಲರೆ ಇಲ್ಲ ಎಂದಿದ್ದಾನೆ.ಸಚಿವರು ಕೂಲ್‌ ಆಗಿ ಮಾತನಾಡಲು ಯತ್ನಿಸಿದ್ದಾರೆ.ಆದರೆ ಕಂಡಕ್ಟರ್‌ ಗ್ರಹಚಾರ ಕೆಟ್ಟಿತ್ತು ಅನ್ನಿಸುತ್ತೆ ಸ್ವಲ್ಪ ನಿಷ್ಟೂರವಾಗಿ ನಡೆದುಕೊಂಡಿದ್ದಾರೆ. ಆಗ ಮುಸುಕನ್ನು ತೆರೆದು ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಬಿಎಂಟಿಸಿ ಸಂಸ್ಥೆಯು ರಾಮಕೃಷ್ಣ ಅವರನ್ನು ಅಮಾನತುಗೊಳಿಸಿತ್ತು.

ಘಟನೆ ನಡೆದ ಬೆನ್ನಲ್ಲೇ ತನ್ನ ತಪ್ಪಿನ ಅರಿವಾಗಿ  ಕಂಡಕ್ಟರ್​​ ರಾಮಕೃಷ್ಣ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಮಾನವೀಯತೆ ನೆಲೆಯಲ್ಲಿ ಪ್ರಕರಣವನ್ನು ಅವಲೋಕಿಸಿ, ರಾಮಕೃಷ್ಣ ಅವರ ಅಮಾನತು ರದ್ದುಪಡಿಸಿ, ಸಾಮಾನ್ಯ ಕರ್ತವ್ಯಕ್ಕೆ ವಾಪಸ್ಸು ಕಳುಹಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕಂಡಕ್ಟರ್​ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದದು, ಇನ್ನು ಮುಂದೆ ಈ ರೀತಿ ಮಾಡಲ್ಲ ಎಂದು ಕೇಳಿಕೊಂಡಿದ್ದು ಅಮಾನತು ಆದೇಶ ಹಿಂಪಡೆಯಲಾಗಿದೆ ಎನ್ನುವುದು ವರ್ತಮಾನ.ಸಚಿವರು ಮಾನವೀಯತೆ ನೆಲೆಗಟ್ಟಿನಲ್ಲಿ ಅಮಾನತು ಆದೇಶ ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿ,ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಸತ್ಯ..ಆದರೆ ಹೀಗೆ ಮಾಡಿ ಅದಕ್ಕೊಂದು ದೊಡ್ಡ ಮಟ್ಟದ ಪ್ರಚಾರ ಕೊಡಿಸಿ,ಕೊನೆಗೆ ಹೀಗೆ ಅದಕ್ಕೆ ಎಂಡ್‌ ಕೊಟ್ಟಿದ್ದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮೂಡಿದೆ..

ಕಂಡಕ್ಟರ್‌ ರಾಮಕೃಷ್ಣ ಮಾಡಿದ್ದು ಅಂಥಾ ತಪ್ಪಾ..?  (ಅಂದ್ಹಾಗೆ ಇಲ್ಲಿ ರಾಮಕೃಷ್ಣನಿಗೆ ಭಾರೀ ಅನ್ಯಾಯವಾಗಿದೆ..ಆತ ಮಾಡಿದ್ದೇ ಸರಿ, ಸಚಿವ ಭೈರತಿ ಸುರೇಶ್‌ ಮಾಡಿದ್ದು ಸರಿಯಲ್ಲ ಎನ್ನುವುದು ನಮ್ಮ ವಾದ ಅಲ್ಲವೇ ಅಲ್ಲ..ಬಿಎಂಟಿಸಿ ಬಸ್‌ ಗಳಲ್ಲಿ ಜ್ವಲಂತವಾಗಿರುವ ಚಿಲ್ಲರೆ ಸಮಸ್ಯೆಯನ್ನು ಪ್ರಾತಿನಿಧಿಕವಾಗಿ ಇಟ್ಟುಕೊಂಡು ಸಮಸ್ಯೆಗಳ ನಿವಾರಣೆ ಬಗ್ಗೆ ಗಂಭೀರ ಪ್ರಯತ್ನವಾಗಬಹು ದಿತ್ತೇನೋ ಎನ್ನುವುದಷ್ಟೇ ನಮ್ಮ ಕಾಳಜಿ-ಕಳಕಳಿ) . ಎಲ್ಲರಿಗೂ ಗೊತ್ತಿರುವಂತೆ ಎಷ್ಟೇ ತಂತ್ರಜ್ಞಾನ ಕ್ರಾಂತಿಯಾದ್ರೂ ಬಿಎಂಟಿಸಿಯಲ್ಲಿ ಇವತ್ತಿಗೂ ಚಿಲ್ಲರೆ ಸಮಸ್ಯೆ ಬಗೆಹರಿಸ್ಲಿಕ್ಕೆ ಸಾಧ್ಯವಾಗಿಲ್ಲ.ಸಮಸ್ಯೆ ಬಗೆಹರಿಸ್ಲಿಕ್ಕೆ  ಇಲಾಖೆಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ ಎನ್ನುವುದು ಎಷ್ಟು ಸತ್ಯವೋ, ಡಿಜಿಟಲ್‌ ವ್ಯವಸ್ಥೆಯನ್ನು ಇವತ್ತಿಗೂ ಮಾಡಿಕೊಳ್ಳದ ಎಷ್ಟೋ ಪ್ರಯಾಣಿಕರಿದ್ದಾರೆ.ಅವರೆಲ್ಲಾ ನಗದು ಪಾವತಿಯನ್ನೇ ಅವಲಂಭಿಸಿದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ.

ನಿಮಗೆ ನೆನಪಿರಲಿ,ಈಗಲೂ ಚಿಲ್ಲರೆ ಕೊಟ್ಟು ಸಹಕರಿಸಿ ಎನ್ನುವ ಬೋರ್ಡ್‌ ಗಳು ಬಸ್‌ ನಲ್ಲಿವೆ.ಎಷ್ಟೇ ವ್ಯವಸ್ಥೆ ಜಾರಿ ಮಾಡಿದ್ರೂ ಕೆಲವೊಮ್ಮೆ ಆಕಸ್ಮಿಕವಾಗಿ ಘಟನೆಗಳು ನಡೆದುಬಿಡ್ತವೆ.ಜುಲೈ 11 ರ ರಾತ್ರಿಯೂ ಟಿ.ಜಿ ರಾಮಕೃಷ್ಠನ ಗ್ರಹಚಾರ ಕೆಟ್ಟಿತ್ತು ಅನ್ನಿಸುತ್ತದೆ. ಮಾರುವೇಷದಲ್ಲಿದ್ದ ಸಚಿವರನ್ನು ಗಮನಿಸಿಲ್ಲ.ಟಕೆಟ್‌ ಇಶ್ಯೂ ಮಾಡಿದಾಗ ಚಿಲ್ಲರೆ ಕೇಳಿದ್ದಾನೆ.ಸಚಿವರು ಡಿಜಿಟಲ್‌ ಪೇಮೆಂಟ್‌ ನ್ನೇ ಮಾಡಬಹುದಿತ್ತು.ಆದರೆ ಹಣ ಕೊಟ್ಟಾಗ ಸಫಿಷಿಯೆಂಟ್‌ ಚಿಲ್ಲರೆ ಇರಲಿಲ್ಲ.ಚಿಲ್ಲರ ಕೊಟ್ಟು ಸಹಕರಿಸಿ ಎಂದು ತರೇವಾರಿಯಾಗಿ ಹೇಳುವ ನಿಗಮಗಳು ಚಿಲ್ಲರೆ ಕೊಟ್ಟು ಕಳುಹಿಸಬೇಕು.ಇಲ್ಲದ ಚಿಲ್ಲರೆಯನ್ನು ಕಂಡಕ್ಟರ್ಸ್‌ ತಮ್ಮ ಕೈಯಿಂದ ಕೊಡಲಿಕ್ಕೆ ಸಾಧ್ಯನಾ..? ಇದನ್ನು ಸಚಿವ ಭೈರತಿ ಸುರೇಶ್‌ ಅರ್ಥ ಮಾಡಿಕೊಳ್ಳಬೇಕಿತ್ತು.ಚಿಲ್ಲರೆ ಕೊಡದ ಕಂಡಕ್ಟರ್‌ ಜತೆ ವಾಗ್ಯದ್ಧಕ್ಕಿಳಿದಿದ್ದಾರೆ.ಮುಂದೆಲ್ಲಾದ್ರೂ ಚೆಕ್ಕಿಂಗ್‌ ಬಂದ್ರೆ ಸಮಸ್ಯೆ ಆಗುತ್ತೆ ಎಂದು ಆತ ಚಿಲ್ಲರೆ ಇಲ್ಲದಿದ್ದರೆ ಬಸ್‌ ನಿಂದ ಇಳಿರಿ ಎಂದಿದ್ದಾನೆ.ಅಷ್ಟೇ ಆಮೇಲೆ ಆದದ್ದೆಲ್ಲಾ ಇಡೀ ರಾಜ್ಯದ ಜನತೆಗೆ ಗೊತ್ತಿದೆ.ಕಂಡಕ್ಟರ್‌ ಸಸ್ಪೆಂಡ್..ಮಿನಿಸ್ಟರ್‌ ಮಾರನೇ ದಿನ ಹೆಡ್‌ ಲೈನ್ಸ್‌ ಗಳಲ್ಲಿಸ್ಟೋರಿ.

ALSO READ :  ಆರಂಭಕ್ಕೂ ಮುನ್ನವೇ CSKಗೇ ಶಾಕ್‌: ಸ್ಟಾರ್ ಆಟಗಾರ ಔಟ್!

ಆದರೆ ಹೀಗೊಮ್ಮೆ ಆಲೋಚಿಸಿ  ನೋಡಿ, ಅವತ್ತೇನಾದ್ರೂ ರಾಮಕೃಷ್ಣ ಚಿಲ್ಲರೆ ಸಮಸ್ಯೆ ಎಂದಾಗ ಆಯ್ತು ಎಂದು ಇದ್ದಷ್ಟನ್ನು ಪಡೆದು ಚೀಟಿ ಮೇಲೆ ಪೆಂಡಿಂಗ್‌ ಅಮೌಂಟ್‌ ನ್ನು ಗೀಚಿ ಟಿಕೆಟ್‌ ಇಶ್ಯೂ ಮಾಡುವಲ್ಲಿ ನಿರತನಾಗಿ ಆ ರಶ್‌ ಕಾರಣಕ್ಕೆ( ಎಲ್ಲಾ ಟೈಮ್‌ ನಲ್ಲೂ ಹೀಗೆ ಆಗುತ್ತೆ ಎನ್ನೊಲ್ಲ.ಆದರೆ ಕೆಲವು ಕಂಡಕ್ಟರ್ಸ್‌ ಚಿಲ್ಲರೆ ಕೊಡಬೇಕಾಗುತ್ತೆ ಎಂದು ಸ್ಟಾಪ್‌ ಬರ್ತಿದೆ ಎನ್ನುವಾಗಲೇ ಆ ಪ್ರಯಾಣಿಕ ಮುಂದಿದ್ದರೆ ಇವರು ಹಿಂದೆ..ಅವರು ಹಿಂದಿದ್ದರೆ ಇವರು ಮುಂದೆ ಹೋಗಿ ತಪ್ಪಿಸಿಕೊಳ್ಳುವ ಕೆಟ್ಟ ಮನಸ್ಥಿತಿಯ ಕಂಡಕ್ಟರ್ಸ್‌ ಕೂಡ ಇದ್ದಾರೆ) ಟಿಕೆಟ್‌ ಇಶ್ಯೂ ಮಾಡಲು ಹೋಗಿದಿದ್ರೆ ಅದನ್ನು ಕೂಡ ದೊಡ್ಡ ರಾಮಾಯಣ ಮಾಡಿಬಿಡ್ತಿದ್ದರೇನೋ..?ಅಲ್ವಾ ಸಚಿವರೇ ಎಂದು ಬಹುತೇಕ ಸಾರಿಗೆ ಸಿಬ್ಬಂದಿ ಪ್ರಶ್ನಿಸ್ತಿದ್ದಾರೆ.

ಅದು ನಿಜಕ್ಕೂ  ಸಸ್ಪೆಂಡ್‌ ಮಾಡುವಂತ ಇಶ್ಯೂ ಆಗಿತ್ತಾ..? ಪ್ರಶ್ನೆ ಕೇಳಲ್ಪಡುತ್ತಿರುವುದೇ ಹೀಗೆ..ಸಾರಿಗೆ ಸಚಿವರಾಗಿ ಬಂದವರೆಲ್ಲಾ ಕೇವಲ ಭರವಸೆ-ಆಶ್ವಾಸನೆ ಕೊಡುವವರೇ ಆದಾಗ..ಇಲಾಖೆ ಉದ್ದಾರ ಆಗುವುದಾದ್ರೂ ಹೇಗೆ..?ಇಲಾಖೆಯಲ್ಲಿ ಬದಲಾಗಬೇಕಿರುವುದು ಸಾಕಷ್ಟಿದೆ..ಸುಧಾರಣೆ ಆಗಬೇಕಿರುವುದಂತೂ ಅಗಾಧವಾಗಿದೆ.ಅದರ ಕಡೆಗೆ ಸಚಿವರು ಗಮನ ಕೊಡಬೇಕಿತ್ತು..ಅವರಿಗೆ ಇದರ ಅಗತ್ಯ-ತುರ್ತು ಎರಡೂ ಗೊತ್ತಿದೆ.ಅಂದ್ಹಾಗೆ ಅವರು ಸಾರಿಗೆ ಸಿಬ್ಬಂದಿಯ ಕಾರ್ಯವೈಖರಿ-ಕಾರ್ಯಕ್ಷಮತೆ ಪರೀಕ್ಷಿಸುವ ಎಲ್ಲಾ ಶಾಸನಬದ್ಧ ಅಧಿಕಾರವಿದೆ.ಅವರು ಹಾಗೆ ಮಾಡಿದ್ದು ಸೂಪರ್..ಆದರೆ ಪರಿಶೀಲಿಸುವ ಭರಾಟೆಯಲ್ಲಿ ಚೆಕ್ಕಿಂಗ್‌ ಇನ್ಸ್‌ ಪೆಕ್ಟರ್‌ ಗಳಂತೆ ವರ್ತನೆ ಮಾಡಿದ್ದರ ಬಗ್ಗೆ ಅಪಸ್ವರ ಕೇಳಿಬಂದಿತ್ತು.ಚೆಕ್ಕಿಂಗ್‌ ಸಿಬ್ಬಂದಿಯಂತೆ ಲೋಪ ಕಂಡು ಹಿಡಿದು ನೊಟೀಸ್‌ ಇಶ್ಯೂ ಮಾಡುವ ಮಾಮೂಲು ಸಿಸ್ಟಮ್‌ ಗೆ ಬದಲಾಗಿ ಲೋಪ ಪತ್ತೆಯಾದಾಗ ಅದನ್ನು ಅಲ್ಲೇ ತಿಳಿ ಹೇಳುವ,ಅಥವಾ ಎಚ್ಚರಿಕೆ ಕೊಡುವ ಕೆಲಸ ಮಾಡಿದ್ದೇ ಆದಲ್ಲಿ ಅವತ್ತು ಭೈರತಿ ಸುರೇಶ್‌ ಅವ್ರು ಗ್ರೇಟ್‌ ಆಗಿಬಿಡ್ತಿದ್ದರೇನೋ..?  ಅದನ್ನು ಮಾಡದೆ ಲೋಪ ಕಂಡುಬಂದಾಕ್ಷಣ, ತನ್ನನ್ನು ಕೆಳಗಿಳಿಯುವಂತೆ ಸೂಚಿಸಿದನೆನ್ನುವ ಸಿಟ್ಟಿಗೆ( ಆ ಸಮಯದಲ್ಲಿ ಅವರಿಗೆ ತಾನೊಬ್ಬ ಪ್ರಯಾಣಿಕನೆನ್ನುವ ಭಾವನೆ ಇತ್ತೋ ಅಥವಾ ಸಚಿವ ಎನ್ನುವ ಭಾವನೋ ಇತ್ತೋ ಅವರೇ ಹೇಳಬೇಕು)ಆನ್‌ ಸ್ಟಾಟ್‌ ಸಸ್ಪೆಂಡ್‌ ಮಾಡಿದ್ದು ಸರಿನಾ..? ಈ ಬಗ್ಗೆ ಅವರ ಕಾರ್ಯವೈಖರಿ ಚೆಕ್ಕಿಂಗ್‌ ಸಿಬ್ಬಂದಿಯಂತಿತ್ತು ಎಂದು ಟ್ರೋಲ್‌ ಆಗಿದ್ದು ಕೂಡ ಸುಳ್ಳಲ್ಲ.

ಸಸ್ಪೆಂಡ್‌ ಮಾಡುವುದು ಬೇಕಿತ್ತಾ.ಹಾಗೆಯೇ ಆದೇಶ ವಾಪಸ್‌ ತೆಗೆದುಕೊ‍ಳ್ಳುವ ಅವಶ್ಯಕತೆ ಇತ್ತಾ.? ಸ್ಟೋರಿಯಲ್ಲಿ ನಿಜವಾದ ಟ್ವಿಸ್ಟ್‌ ಇರುವುದೇ ಅಲ್ಲಿ ನೋಡಿ.. ನಾನೇನೋ ಮಹಾನ್‌ ಸಾಧನೆ ಮಾಡಿದ್ದೇನೆ..ಯಾರೂ ಪತ್ತೆ ಮಾಡಿರದ ಸಂಗತಿಯೊಂದನ್ನು ಕಂಡುಹಿಡಿದಿದ್ದೇನೆ ಎನ್ನುವ ರೇಂಜ್‌ ನಲ್ಲಿ ಸಚಿವರು ಬಿಲ್ಡಪ್‌ ಕೊಟ್ಟಿದ್ದಲ್ಲದೇ ಸಸ್ಪೆಂಡ್‌ ಮಾಡುವಂತೆ ಆದೇಶಿಸಿ ಹೀರೋಯಿಸಂನ್ನು ಪ್ರದರ್ಶಿಸಿದ್ದರು.ಆದರೆ ಅವತ್ತು ನೆನಪಿರಲಿ ಸಚಿವರೇ ನೀವು ಸಿಬ್ಬಂದಿಯನ್ನು ಸಸ್ಪೆಂಡ್‌ ಮಾಡಿದ್ದನ್ನೇ ಹೆಗ್ಗಳಿಕೆ ಎಂದುಕೊಳ್ತಿದ್ದೀರಿ..ಆದರೆ ಮೂಲದಲ್ಲಿ ಇರುವಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿ ಎಂದು ಸಾರಿಗೆ ಮುಖಂಡ ದಿವಂಗತ ಅನಂತ ಸುಬ್ಬರಾವ್‌ ಅವರ ಪುತ್ರಿ ಜ್ಯೋತಿ ಅವರು ವಿಮರ್ಷಿಸಿದ್ದರು.ಸಾರಿಗೆ ಮುಖಂಡ ಆನಂದ್‌ ಕೂಡ ಇದನ್ನು ಹಾಸ್ಯಾಸ್ಪದ ಎಂದು ಬಣ್ಣಿಸಿದ್ದರು. ಸಚಿವರಿಗೆ ಮಾಡೊಕ್ಕೆ ನೂರು ಕ್ಯಾಮೆ ಇವೆ..ಕೇಳಿದ್ರೆ ನಾವೇ ಹೇಳ್ತೇವೆ ಎಂದು ಅಣಕವಾಡಿದ್ದರು.ಆದ್ರೆ ಇದು ವಾಸ್ತವದಲ್ಲಿ ಸತ್ಯ ಕೂಡ.ಸಸ್ಪೆಂಡ್‌ ಮಾಡಿದ ಮೇಲೆ ಅದರ ಬಗ್ಗೆ ತನಿಖೆ ಕೂಡ ನಡೆದಾಗ ಅಂತಿಮವಾಗಿ ಕಂಡಕ್ಟರ್‌ ರಾಮಕೃಷ್ಣ ಮಾಡಿದ್ದರಲ್ಲಿ ತಪ್ಪಿಲ್ಲ ಎನ್ನುವುದು ಸಾಬೀತಾದಂತಿದೆ.ಹಾಗಾಗಿನೇ ಸಚಿವರು ಸಸ್ಪೆಂಡ್‌ ಆದೇಶ ರದ್ದು ಮಾಡುವಂತೆ ಸೂಚಿಸಿದ್ದಾರೆನ್ನುವುದು ವರ್ತಮಾನ.

ಸಾರಿಗೆ ಸಚಿವರೆ ನಿಮ್ಮ ಕುಟುಂಬದವರನ್ನು ಮನುಷ್ಯರಂತೆ ನೋಡಿ…. ಆದರೆ ಪ್ರಶ್ನೆ ಇರುವುದು ಇಲ್ಲಿ ಕಂಡಕ್ಟರ್‌ ರಾಮಕೃಷ್ಣ ಅವರ ಆತ್ಮಾಭಿಮಾನ-ಆತ್ಮಗೌರವದ್ದು.ಎಲ್ಲರೆದುರು ಸಸ್ಪೆಂಡ್‌ ಮಾಡಿ ಆದೇಶ ಹೊರಡಿಸಿದ  ಸನ್ನಿವೇಶದಲ್ಲಿ ಆತನಿಗೆ ಆಗಿರಬಹುದಾದ ಮುಜುಗರ-ನಾಚಿಕೆ-ಅವಮಾನದ ಬಗ್ಗೆ ಸಚಿವರು ಆಲೋಚಿಸಿದ್ದಾರಾ..ಅವರ ಕುಟುಂಬ-ಸಂಬಂಧಿಕರು-ಸಹದ್ಯೋಗಿ-ಪರಿಚಯಸ್ಥರ ವಲಯದಲ್ಲಿ ಅವತ್ತು ರಾಜ್ಯಾದ್ಯಂತ ಸುದ್ದಿಯಾದ ಆ ಘಟನೆಯಿಂದ ಅವರಿಗೆ ಆಗಿರಬಹುದಾದ ಮಾನಸಿಕ ಕಿರಿಕಿರಿ ಎಷ್ಟಿರಬಹುದೆನ್ನುವ ಅಂದಾಜು ಸಚಿವರಿಗೆ ಇದೆಯಾ..? ಸಾರಿಗೆ ಸಿಬ್ಬಂದಿ ಯಾರೇ ಸಚಿವರಾಗಲಿ ಅವರಿಂದ ಮೊದಲು ತಮ್ಮನ್ನು ಮನುಷ್ಯರಂತೆ ನೋಡಿ ಸರ್‌ ಎಂದು ನಿರೀಕ್ಷೆ ಮಾಡುತ್ತಾರೆ.ಆದರೆ ಸಾರಿಗೆ ಸಿಬ್ಬಂದಿಯ ದುರಾದೃಷ್ಟ ಎನ್ನಿಸುತ್ತೆ,ಬಹುತೇಕ ಅಂಥವರು ಬರಲೇ ಇಲ್ಲ.. ತನ್ನ ತಪ್ಪಿಲ್ಲ ಎನ್ನುವ ಸತ್ಯ ಸಚಿವರಿಗೆ ಈಗಲಾದ್ರೂ ಮನವರಿಕೆ ಆಯ್ತಲ್ಲ ಎಂದು ರಾಮಕೃಷ್ಣ ಅವರು ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ ಇದರಿಂದ ನಿಜವಾಗ್ಲೂ ಅವಮಾನ- ಮುಜುಗರ ಆಗಬೇಕಿರುವುದು ಖುದ್ದು ಸಾರಿಗೆ ಸಚಿವರಿಗೆ..ಅಲ್ವಾ..! ಇನ್ನಾದ್ರೂ ನೂರಾರು ಸಮಸ್ಯೆಗಳಲ್ಲಿ ಸಿಲುಕಿ ಜರ್ಝರಿತವಾಗಿರುವ ಸಾರಿಗೆ ಇಲಾಖೆ ಅವ್ಯವಸ್ಥೆ ಸರಿಪಡಿಸುವತ್ತ ಸಚಿವ ಭೈರತಿ ಸುರೇಶ್‌ ಗಮನ ಹರಿಸಬೇಕೆನ್ನುವುದು ಸಾರಿಗೆ ಎಕ್ಸ್‌ ಪ್ರೆಸ್‌ ನ ಆಶಯ.

 

 

 


Leave a Comment