ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಪಿಯು(ಪದವಿಪೂರ್ವ) ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದೆ.. ಇದಕ್ಕಾಗಿ ತುರುಸಿನ ಸ್ಪರ್ದೆ ಯೇ ಏರ್ಪಟ್ಟಿದೆಯಂತೆ.ಶತಾಯಗತಾಯ ಹುದ್ದೆ ಅಲಂಕರಿಸಲೇಬೇಕೆನ್ನುವ ಹಠಕ್ಕೆ ಕೆಲವರು ಬಿದ್ದಿದ್ದಾರಂತೆ.ಇದಕ್ಕಾಗಿ ದೊಡ್ಡವರ ದುಂಬಾಲು ಬಿದ್ದಿದ್ದಾರಂತೆ.ಎಲ್ಲಿ ಡಿಮ್ಯಾಂಡ್ ಸೃಷ್ಟಿಯಾಗುತ್ತೋ ಅಲ್ಲಿ ವ್ಯಾಪಾರ ಶುರುವಾಗುತ್ತೆ ಎನ್ನುವಂತೆ ಈ ಹುದ್ದೆಗೂ ಅಮೌಂಟ್ ಫಿಕ್ಸ್ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಾರು ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡುತ್ತಾರೋ ಅವರೇ ಆ ಲಕ್ಕಿ ಮ್ಯಾನ್ ಆಗಲಿದ್ದಾರೆ ಎನ್ನುವಂತ ವಿಶ್ಲೇಷಣೆಗಳು ಶಿಕ್ಷಣ ಇಲಾಖೆ ಕ್ಯಾಂಪಸ್ ನಲ್ಲಿ ಮಾರ್ದನಿಸುತ್ತಿದೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕರ ಹುದ್ದೆ ಏನಾದ್ರೂ ಸೇಲ್ ಗಿದೆಯಾ..? ಈ ಹುದ್ದೆ ವಿಚಾರದಲ್ಲಿ ಕೇಳಿಬರುತ್ತಿರುವ ಮಾತುಗಳು ಹಾಗೂ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದಾಗ ಹೀಗೊಂದು ಅನುಮಾನ ಕಾಡೋದು ಸಹಜ.ಆ ಹುದ್ದೆಗಾಗಿ ದೊಡ್ಡ ಮಟ್ಟದ ಲಾಭಿಯೇ ನಡೆಯುತ್ತಿದೆಯಂತೆ.ಎಲ್ಲಿವರೆಗೆ ಅಂದ್ರೆ, ಸಿಎಂ ಅವರೇ ತಮ್ಮ ಸ್ವಕ್ಷೇತ್ರಕ್ಕೆ ಸೇರಿದವರೊಬ್ಬರನ್ನು ಅಲ್ಲಿಗೆ ತಂದುಕೂರಿಸಬೇಕೆನ್ನುವ ಮಟ್ಟಿಗಿನ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಟ್ಟದಲ್ಲಿ..ಆದ್ರೆ ಇದು ಸತ್ಯವೋ ಅಥವಾ ಸಿಎಂ ಅವರ ಹೆಸರನ್ನು ಕೆಡಿಸಲು ಕೆಲವರು ನಡೆಸುತ್ತಿರುವ ಷಡ್ಯಂತ್ರವೋ ಗೊತ್ತಾಗ್ತಿಲ್ಲ.ಒಂದೊಮ್ಮೆ ಸಿಎಂ ಅವರ ಕ್ಯಾಂಡಿಡೇಟೇ ಅಂತಿಮವಾಗಿ ಡಿಡಿಪಿಯು ಸ್ಥಾನವನ್ನು ಅಲಂಕರಿಸಿದ್ದೇ ಆದಲ್ಲಿ ಈ ಮಾತು ಬಹುಷಃ ಸತ್ಯವೆನಿಸಬಹುದೇನೋ..?
ಪಾಠಶಾಲೆ ಶೈಕ್ಷಣಿಕ ಸೇವಾಸಂಸ್ಥೆ ಸಂಚಾಲಕ ಗಂಗಾಧರ್
“ಬೆಂಗಳೂರು ದಕ್ಷಿಣ DDPU ಎನ್ನುವುದು ಅತೀ ಹೆಚ್ಚು ಕಾಲೇಜುಗಳನ್ನು ಒಳಗೊಂಡ ಶೈಕ್ಷಣಿಕ ಜಿಲ್ಲೆ..ಅದಕ್ಕಿಂತ ಯಾರೇ ಡಿಡಿಪಿಯುಗಳಾದ್ರೂ ಮಾಲಾಮಾಲ್ ಆಗೊಕ್ಕೆ ಹೇಳಿ ಮಾಡಿಸಿದಂಥ ತಾಣ ಎನ್ನುವ ಮಾತೂ ಇದೆ.ಏಕಂದ್ರೆ ಅಷ್ಟೊಂದು ಅಕ್ರಮ-ಭ್ರಷ್ಟಾಚಾರ ಇಲ್ಲಿನ ಕಾಲೇಜುಗಳಿಂದ ಆಗುತ್ತಿದೆ.ಪಾಠಶಾಲೆ ಎನ್ನುವ ಶೈಕ್ಷಣಿಕ ಸ್ವಯಂಸೇವಾಸಂಸ್ಥೇಯ ಸಂಚಾಲಕರಾದ ಗಂಗಾಧರ್ ಅವರೇ ಹೇಳುವಂತೆ 500 ಕ್ಕೂ ಹೆಚ್ಚು ಅನಧೀಕೃತ ಕಾಲೇಜುಗಳಿವೆ.ಈವರೆಗೆ ನಾವೇ ಇದರ ಬಗ್ಗೆ ದಂಡಿ ದಂಡಿ ದೂರು ಕೊಟ್ಟರೂ ಅದರ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಆ ದೂರನ್ನೇ ಇಟ್ಟುಕೊಂಡು ಕಚೇರಿಯಲ್ಲಿರುವ ಕೆಲವು ಅಪ್ರಾಮಾಣಿಕರು ವಸೂಲಿ ಮಾಡುವ ಕಾಯಕ ಶುರುವಿಟ್ಟುಕೊಳ್ಳುತ್ತಿದ್ದಾರೆ.ಯಾರೇ ಡಿಡಿಪಿಯುಗಳಾಗಿ ಬಂದ್ರೂ ಸುಧಾರಿಸುವುದನ್ನು ಮರೆತು,ಈ ಅವ್ಯವಸ್ಥೆಗೆ ಒಗ್ಗಿ ಹೋಗುತ್ತಿದ್ದಾರೆ.ಈ ಹುದ್ದೆಯಲ್ಲಿ ಸಿಕ್ಕಾಪಟ್ಟೆ ಕಮಾಯಿ ಇದೆ ಎಂದೇ ಈ ಸ್ಥಾನಕ್ಕೆ ದೊಡ್ಡ ಮಟ್ಟದ ಬಿಡ್ಡೇ ನಡೆಯುತ್ತದೆ ಎನ್ನುತ್ತಾರೆ”
ಬೆಂಗಳೂರು ಉತ್ತರ ಜಿಲ್ಲೆ ಡಿಡಿಪಿಯು ಪಾಲಾಕ್ಷಪ್ಪ
ಬೆಂಗಳೂರು ದಕ್ಷಿಣ ಜಿಲ್ಲೆ ಹಣ ಮಾಡುವವರಿಗೆ ಅಕ್ಷಯನಿಧಿಯಿದ್ದಂತೆ.ಮೇಯೋರಿಗೆ ಪಂಪಾಸ್ ಹುಲ್ಲುಗಾವಲು ಇದ್ದಂತೆ ಎನ್ನುವ ಮಾತಿದೆ.ಬಂದೋರ ಪೈಕಿ ಬಹುತೇಕರೆಲ್ಲಾ ಹಣ ಮಾಡಿಕೊಂಡು ಹೋಗ್ತಾರಂತೆ.ಹೀಗಾಗಿಯೇ ಈ ಬಾರಿ ಹುದ್ದೆ ತೆರವಾಗಿ ವಾರವಾದರೂ ಯಾರೊಬ್ಬರೂ ನಿಯೋಜನೆಯಾಗಿಲ್ಲ.ನಾಗರಾಜ್ ಎನ್ನುವವರನ್ನು ನಾಮಕಾವಸ್ಥೆಗೆ ನಿಯೋಜಿಸಲಾಗಿದೆಯಂತೆ.ಖಾಯಂ ಆಗಿ ಯಾರನ್ನು ನೇಮಿಸಬೇಕೆನ್ನುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಟ್ಟದಲ್ಲಿ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆಯಂತೆ.ಈಗ ಸಿಎಂ ಅವರೇ ಮದ್ಯಪ್ರವೇಶ ಮಾಡಿ ಈ ಸಮಸ್ಯೆ ಬಗೆಹರಿಸುವ ಸಾಧ್ಯತೆಗಳಿವೆಯಂತೆ ಎನ್ನುವ ಮಾತು ಕೇಳಿಬರುತ್ತಿದೆ.
ಯಾರೇ ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಯುಗಳಾದ್ರೂ ಅವರು ಆ ಹುದ್ದೆಗೆ ಪುಕ್ಕಟೆಯಾಗಿಯಂತೂ ಬರಲು ಸಾಧ್ಯವೇ ಇಲ್ಲವಂತೆ.ಪ್ರತಿಭೆ-ಅರ್ಹತೆ-ಸಾಮರ್ಥ್ಯಗಳೆನ್ನುವುದು ಈ ಸಂದರ್ಭದಲ್ಲಿ ಮಾನದಂಡವಾಗಿಯೇ ಉಳಿದಿಲ್ಲವಂತೆ.ಯಾರು ಹೆಚ್ಚು ಉದಾರಿಯಾಗಲು ಸಿದ್ದವಿದ್ದಾರೋ ಅವರಿಗಷ್ಟೇ ಈ ಹುದ್ದೆ ಸಿಗಲು ಸಾಧ್ಯವಂತೆ.ನಂಬಲಿಕ್ಕೆ ಇದು ವಿಚಿತ್ರವೆನಿಸಿದ್ರೂ ಸತ್ಯವಂತೆ.ಈ ಹುದ್ದೆಗೆ ಈಗಾಗಲೇ ಇಂತಿಷ್ಟು ಫಿಕ್ಸ್ ಆಗಿದೆಯಂತೆ.ಆಕಾಂಕ್ಷಿಗಳಾದವರು ಚೌಕಾಸಿ ಮಾಡುತ್ತಿದ್ದಾರಂತೆ.ಆದರೆ ಫಿಕ್ಸ್ ಆಗಿರುವುದರಲ್ಲಿ ಹೆಚ್ಚಿಸಬಹುದೇ ವಿನಃ ಕಡಿಮೆ ಮಾಡಲಿಕ್ಕೆ ಸಾಧ್ಯವೇ ಇಲ್ಲ ಎನ್ನುವಂತ ಆದೇಶ ಮೇಲಿನವರಿಂದ ಬಂದುಬಿಟ್ಟಿದೆಯಂತೆ.ಮೊದಲು ಇನ್ವೆಸ್ಟ್ ಮಾಡೋಣ,ಆಮೇಲೆ ನೋಡೋಣ ಎಂದು ಆಲೋಚನೆ ಮಾಡುತ್ತಿರುವವರಲ್ಲಿ ಯಾರು ಮೊದಲು ಓಕೆ ಎನ್ತಾರೋ ಅವರಿಗೇನೆ ಈ ಹುದ್ದೆ ಸಿಗಬಹುದು ಎನ್ನುವಂತ ಮಟ್ಟದ ಚರ್ಚೆಗಳು ಇಲಾಖೆ ವಲಯದಲ್ಲಿ ನಡೆಯುತ್ತಿವೆಯಂತೆ.
ಮಂಡ್ಯ ಡಿಡಿಪಿಯು ಪ್ರಸನ್ನ ಕುಮಾರ್
ಅಂದ್ಹಾಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ ದೊರೆತಿರುವ ಮಾಹಿತಿ ಪ್ರಕಾರ ಪ್ರಮುಖವಾಗಿ ಮೂವರು ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಯು ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರಂತೆ.ಆ ಮೂವರ ನಡುವೆ ತುರುಸಿನ ಸ್ಪರ್ದೆ ಏರ್ಪಟ್ಟಿದೆಯಂತೆ. ಈ ಹುದ್ದೆಗೆ ಬರಲೇಬೇಕೆನ್ನುವ ಹಠಕ್ಕೆ ಬಿದ್ದು ಯಾರ್ಯಾರಿಂದ ಲಾಭಿ ಮಾಡಿಸಲು ಸಾಧ್ಯವಾಗುತ್ತೋ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಿಸುವ ಪ್ರಯತ್ನ ಮಾಡುತ್ತಿದ್ದಾರಂತೆ.ಆ ಪೈಕಿ ಮಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಯು ಮೋಹನ್ ಕುಮಾರ್, ಮಂಡ್ಯ ಡಿಡಿಪಿಯು ಆಗಿರುವ ಪ್ರಸನ್ನ ಕುಮಾರ್ ಹಾಗೂ ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಯು ಪಾಲಾಕ್ಷಪ್ಪ ಅವರದು ಮುಖ್ಯವಾಗಿವೆ.
ಇದೆಲ್ಲದರ ನಡುವೆ ಸಿಎಂ ಡಿಕೆ ಶಿವಕುಮಾರ್ ಹೆಸರು ಈ ಪ್ರಕರಣದಲ್ಲಿ ಕೇಳಿಬರಲಾರಂಭಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಡಿಪಿಯು ಮೋಹನ್ ಕುಮಾರ್ ಅವರ ಪರ ಡಿಕೆ ಶಿವಕುಮಾರ್ ಲಾಭಿ ಮಾಡುತ್ತಿದ್ದಾರೆ. ಅವರ ಹೆಸರನ್ನೇ ಫೈನಲ್ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿದೆ.ಒಬ್ಬ ಮುಖ್ಯಮಂತ್ರಿ ಆದವರಿಗೆ ಇದೆಲ್ಲಾ ಕ್ಷುಲ್ಲಕ ವಿಷಯಗಳಲ್ವೇ..? ಅವರೇಕೆ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡ್ತಾರೆ ಎನ್ನುವುದು ಎಂಥಾ ಮೂರ್ಖನು ಅರ್ಥ ಮಾಡಿಕೊಳ್ಳುವ ವಿಷಯ.ಅಂತದ್ದರಲ್ಲಿ ಅವರ ಹೆಸರನ್ನೇಕೆ ತೇಲಿ ಬಿಡಲಾಗ್ತಿದೆ.ಇದು ನಂಬುವಂಥ ವಿಷಯನಾ..? ಎಂಬ ಅನುಮಾನ ಕಾಡೋದು ಸತ್ಯ..
ಅದೆಲ್ಲವನ್ನು ಬದಿಗಿಟ್ಟು ನೋಡಿದರೂ, ಬೆಂಗಳೂರು ದಕ್ಷಿಣ ಜಿಲ್ಲೆಯ ಡಿಡಿಪಿಯು ಹುದ್ದೆಗೆ ನಡೆಯುತ್ತಿರುವ ದೊಡ್ಡಮಟ್ಟದ ಲಾಭಿ ಗಮನಿಸಿದಾಗ ಆ ಹುದ್ದೆ ವಿಷಯವಾಗಿ ನಡೆಯುತ್ತಿರುವ ಚರ್ಚೆ-ವಿಶ್ಲೇಷಣೆ-ವಿದ್ಯಾಮಾನಗಳು ಸತ್ಯ ಇರಬಹುದಾ ಎಂಬ ಗುಮಾನಿ ಹುಟ್ಟುವುದು ಸಹಜ..ಮೂವರ ನಡುವೆ ನಡೆಯುತ್ತಿರುವ ಪೈಪೋಟಿಯಲ್ಲಿ ಒಬ್ಬರ ನೇಮಕ ಅಂತಿಮವಾಗುತ್ತಾ..? ಅಥವಾ ಇವರನ್ನೆಲ್ಲಾ ಬಿಟ್ಟು ಇನ್ನೊಬ್ಬರು ಆಶ್ಚರ್ಯ ಮೂಡಿಸುವಂಥ ರೀತಿಯಲ್ಲಿ ಡಿಡಿಪಿಯು ಹುದ್ದೆಗೆ ಬಂದು ಕೂರುತ್ತಾರಾ..? ಕಾದು ನೋಡಬೇಕಿದೆ.