EXCLUSIVE..”ಸೇಲ್‌” ಗಿದೆಯೇ ‌ಬೆಂಗಳೂರು ದಕ್ಷಿಣ ಡಿಡಿಪಿಯು ಹುದ್ದೆ..? ಮೂವರ ನಡುವೆ ಬಿಗ್‌ ಫೈಟ್…..ಯಾರಾಗಲಿದ್ದಾರೆ ಆ ಲಕ್ಕಿ ಮ್ಯಾನ್..‌!

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಪಿಯು(ಪದವಿಪೂರ್ವ) ಉಪನಿರ್ದೇಶಕ ಮನೋಹರ್‌ ಕೊಳ್ಳಾ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ದೊಡ್ಡ ಮಟ್ಟದ ಪೈಪೋಟಿ ಶುರುವಾಗಿದೆ.. ಇದಕ್ಕಾಗಿ ತುರುಸಿನ ಸ್ಪರ್ದೆ ಯೇ ಏರ್ಪಟ್ಟಿದೆಯಂತೆ.ಶತಾಯಗತಾಯ ಹುದ್ದೆ ಅಲಂಕರಿಸಲೇಬೇಕೆನ್ನುವ ಹಠಕ್ಕೆ ಕೆಲವರು ಬಿದ್ದಿದ್ದಾರಂತೆ.ಇದಕ್ಕಾಗಿ ದೊಡ್ಡವರ ದುಂಬಾಲು ಬಿದ್ದಿದ್ದಾರಂತೆ.ಎಲ್ಲಿ ಡಿಮ್ಯಾಂಡ್‌ ಸೃಷ್ಟಿಯಾಗುತ್ತೋ ಅಲ್ಲಿ ವ್ಯಾಪಾರ ಶುರುವಾಗುತ್ತೆ ಎನ್ನುವಂತೆ ಈ ಹುದ್ದೆಗೂ ಅಮೌಂಟ್‌ ಫಿಕ್ಸ್‌ ಆಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಯಾರು ಹೆಚ್ಚಿನ ಮೊತ್ತಕ್ಕೆ ಬಿಡ್‌ ಮಾಡುತ್ತಾರೋ ಅವರೇ ಆ ಲಕ್ಕಿ ಮ್ಯಾನ್‌ ಆಗಲಿದ್ದಾರೆ ಎನ್ನುವಂತ ವಿಶ್ಲೇಷಣೆಗಳು … Read more

DDPU ಪಾಲಾಕ್ಷಪ್ಪ ವರ್ಗಾವಣೆ ರದ್ದಾಗಿದ್ದೇಕೆ..?! ಸಚಿವ ಮಧು ಬಂಗಾರಪ್ಪ “ಆಪ್ತ”ರ ಶ್ರೀರಕ್ಷೆ-ಕೃಪೆನಾ..?

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಳ್ಳದಿದ್ದರೆ ಅವರ ಇಲಾಖೆಯಲ್ಲಿರಬಹುದಾದ ಕೆಲ ಭ್ರಷ್ಟ ರಿಂದಾಗಿಯೇ ಕೆಟ್ಟ ಹೆಸರು ಪಡೆಯೋದರಲ್ಲಿ ಅನುಮಾನವಿಲ್ಲ. (ಈ ವಿಷಯದ ಬಗ್ಗೆ ಅರಿವಿಲ್ಲದಿದ್ದರೆ…ಅಥವಾ ಅವರ ಗಮನಕ್ಕೆ ಬಾರದೆ ಇದ್ದರೆ ಪರ್ವಾಗಿಲ್ಲ..ಆದರೆ ಗೊತ್ತಿದ್ದರೂ ಸುಮ್ಮನಿದ್ದರೆ ಅದಕ್ಕೆ ಅವರೇ ಅವಕಾಶ ಮಾಡಿಕೊಟ್ಟಂತಲ್ಲವೇ..?) ಏಕೆಂದರೆ ಅವರ ಕಚೇರಿಯಲ್ಲಿರುವ ಕೆಲ “ಆಪ್ತರು-ಅಧಿಕಾರಿ”ಗಳು ಸಚಿವರ ಗಮನಕ್ಕೆ ಬಂದೋ..ಬಾರದೆಯೋ  ಟ್ರಾನ್ಸ್‌ ಫರ್‌‌  ಮಾಡಿಸುವ, ಮಾಡಿದ್ದನ್ನು ಕ್ಯಾನ್ಸಲ್‌ ಮಾಡಿಸುವ, ,ಡೆಪ್ಯುಟೇಷನ್ ಮಾಡುವ ಡೀಲಿಂಗ್‌ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.. ಶಿಕ್ಷಣ ಇಲಾಖೆಯಲ್ಲಿ ಈ ಡೀಲಿಂಗ್‌ … Read more

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more