DDPU ಪಾಲಾಕ್ಷಪ್ಪ ವರ್ಗಾವಣೆ ರದ್ದಾಗಿದ್ದೇಕೆ..?! ಸಚಿವ ಮಧು ಬಂಗಾರಪ್ಪ “ಆಪ್ತ”ರ ಶ್ರೀರಕ್ಷೆ-ಕೃಪೆನಾ..?

ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಳ್ಳದಿದ್ದರೆ ಅವರ ಇಲಾಖೆಯಲ್ಲಿರಬಹುದಾದ ಕೆಲ ಭ್ರಷ್ಟ ರಿಂದಾಗಿಯೇ ಕೆಟ್ಟ ಹೆಸರು ಪಡೆಯೋದರಲ್ಲಿ ಅನುಮಾನವಿಲ್ಲ. (ಈ ವಿಷಯದ ಬಗ್ಗೆ ಅರಿವಿಲ್ಲದಿದ್ದರೆ…ಅಥವಾ ಅವರ ಗಮನಕ್ಕೆ ಬಾರದೆ ಇದ್ದರೆ ಪರ್ವಾಗಿಲ್ಲ..ಆದರೆ ಗೊತ್ತಿದ್ದರೂ ಸುಮ್ಮನಿದ್ದರೆ ಅದಕ್ಕೆ ಅವರೇ ಅವಕಾಶ ಮಾಡಿಕೊಟ್ಟಂತಲ್ಲವೇ..?) ಏಕೆಂದರೆ ಅವರ ಕಚೇರಿಯಲ್ಲಿರುವ ಕೆಲ “ಆಪ್ತರು-ಅಧಿಕಾರಿ”ಗಳು ಸಚಿವರ ಗಮನಕ್ಕೆ ಬಂದೋ..ಬಾರದೆಯೋ  ಟ್ರಾನ್ಸ್‌ ಫರ್‌‌  ಮಾಡಿಸುವ, ಮಾಡಿದ್ದನ್ನು ಕ್ಯಾನ್ಸಲ್‌ ಮಾಡಿಸುವ, ,ಡೆಪ್ಯುಟೇಷನ್ ಮಾಡುವ ಡೀಲಿಂಗ್‌ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.. ಶಿಕ್ಷಣ ಇಲಾಖೆಯಲ್ಲಿ ಈ ಡೀಲಿಂಗ್‌ … Read more

ಶಿಕ್ಷಣ ಇಲಾಖೆಯ 3 “ದಕ್ಷ” ಅಧಿಕಾರಿಗಳ ದಿಢೀರ್‌ ವರ್ಗಾವಣೆ ..!.

sudden transfer

ದಕ್ಷರು,ಪ್ರಾಮಾಣಿಕರು.. ಶಿಕ್ಷಣ ಇಲಾಖೆಗೆ ಬೇಕಾಗಿಲ್ಲವೇ..? ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೇನೆ ಪ್ರಾಮಾಣಿಕರನ್ನು ಉಳಿಸಿಕೊಳ್ಳುವ ಮನಸ್ಸಿಲ್ಲವೇ..?

PU ಬೋರ್ಡ್”ನ   ಭ್ರಷ್ಟರು-ಮೈಗಳ್ಳರಿಗೆ ಸಿಂಹಸ್ವಪ್ನವಾದ“ಮಿಸ್ಟರ್ ಕ್ಲೀನ್”

ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕಿರಿಯ ಐಎಎಸ್ … Read more

IAS‌ ಸಿಂಧೂ ಬಿ ರೂಪೇಶ್ ಎತ್ತಂಗಡಿ..!-ಕೇಂದ್ರ ಸೇವೆಗೆ ನಿಯೋಜನೆ…!

ಬೆಂಗಳೂರು: ಪಿಯು ಬೋರ್ಡ್ ನ ನಿರ್ದೇಶಕರಾಗಿದ್ದ ಮಹಿಳಾ ಐಎಎಸ್‌ ಅಧಿಕಾರಿ ಸಿಂಧೂ ಬಿ ರೂಪೇಶ್‌ ಅವರನ್ನು ದಿಢೀರ್‌ ವರ್ಗ ಮಾಡಲಾಗಿದೆ.ಇಲಾಖೆ ಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುವ ಅವಕಾಶವಿದ್ದಾಗ್ಯೂ ನಿಷ್ಕ್ರೀಯವಾಗಿದ್ದರೆನ್ನುವ ಆಪಾದನೆ ಹೊತ್ತಿದ್ದ ಐಎಎಸ್ ಅಧಿಕಾರಿ ಸಿಂದೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಿಂಧೂ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.ಅಲ್ಲಿ ಅವರು 5 ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. … Read more

“ವರ್ಗಾವಣೆ” ಲೀಸ್ಟ್ ನಿಂದಲೇ ಹೆಸ್ರು ಡಿಲೀಟ್ ಮಾಡಿಸಿಕೊಂಡ್ ಬಿಟ್ರಾ ddpu ಮನೋಹರ್ ಕೊಳ್ಳಾ..?!

ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ. ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ  ಅಕ್ರಮವಲ್ಲ ಶಿಕ್ಷಣ … Read more