
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚೆತ್ತುಕೊಳ್ಳದಿದ್ದರೆ ಅವರ ಇಲಾಖೆಯಲ್ಲಿರಬಹುದಾದ ಕೆಲ ಭ್ರಷ್ಟ ರಿಂದಾಗಿಯೇ ಕೆಟ್ಟ ಹೆಸರು ಪಡೆಯೋದರಲ್ಲಿ ಅನುಮಾನವಿಲ್ಲ. (ಈ ವಿಷಯದ ಬಗ್ಗೆ ಅರಿವಿಲ್ಲದಿದ್ದರೆ…ಅಥವಾ ಅವರ ಗಮನಕ್ಕೆ ಬಾರದೆ ಇದ್ದರೆ ಪರ್ವಾಗಿಲ್ಲ..ಆದರೆ ಗೊತ್ತಿದ್ದರೂ ಸುಮ್ಮನಿದ್ದರೆ ಅದಕ್ಕೆ ಅವರೇ ಅವಕಾಶ ಮಾಡಿಕೊಟ್ಟಂತಲ್ಲವೇ..?) ಏಕೆಂದರೆ ಅವರ ಕಚೇರಿಯಲ್ಲಿರುವ ಕೆಲ “ಆಪ್ತರು-ಅಧಿಕಾರಿ”ಗಳು ಸಚಿವರ ಗಮನಕ್ಕೆ ಬಂದೋ..ಬಾರದೆಯೋ ಟ್ರಾನ್ಸ್ ಫರ್ ಮಾಡಿಸುವ, ಮಾಡಿದ್ದನ್ನು ಕ್ಯಾನ್ಸಲ್ ಮಾಡಿಸುವ, ,ಡೆಪ್ಯುಟೇಷನ್ ಮಾಡುವ ಡೀಲಿಂಗ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.. ಶಿಕ್ಷಣ ಇಲಾಖೆಯಲ್ಲಿ ಈ ಡೀಲಿಂಗ್ ಅಪವಾದ ಕೇಳಿಬರುತ್ತಿರುವುದೇನು ಮೊದಲೇನಲ್ಲ,ಆದರೆ ಬೇರೆ ಸರ್ಕಾರಗಳ, ಬೇರೆ ಶಿಕ್ಷಣ ಸಚಿವರ ಅವಧಿಯಲ್ಲಿ ಕೇಳಿಬರದಷ್ಟು ಪ್ರಮಾಣದಲ್ಲಿ ಇಲ್ಲಿ ಅಕ್ರಮ-ಭ್ರಷ್ಟಾಚಾರ ನಡೆಯುತ್ತಿರುವ ಮಾತುಗಳು ಕೇಳಿ ಬರುತ್ತಿವೆ ಎನ್ನುವುದೇ ಗಂಭೀರವಾದ ಸಂಗತಿ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಬೇಕಾದ್ರೆ, ಇದನ್ನು ಎಚ್ಚರಿಕೆ ಎಂದು ಬೇಕಾದ್ರೂ ಭಾವಿಸಲಿ,ಅಥವಾ ತಿಳಿವಿನ ಮಾತು ಎಂದಾದ್ರೂ ತಿಳಿದುಕೊಳ್ಳಲ್ಲಿ,ಆದ್ರೆ ಪರಿಸ್ತಿತಿ ಹೀಗೆಯೇ ಮುಂದುವರೆದರೆ ಈಗಾಗ್ಲೇ ಅಲ್ಪಸ್ವಲ್ಪ ಉಳಿದಿರುವ ಒಳ್ಳೆಯ ಹೆಸರನ್ನೂ ಕಳೆದುಕೊಳ್ಳಬಹುದೆನ್ನಿಸುತ್ತಿದೆ. ಎಲ್ಲಾ ಅಧಿಕಾರವನ್ನು ತಮ್ಮ ಕೆಲ ಆಪ್ತರಿಗೆ ಬಿಟ್ಟುಕೊಟ್ಟು ಆರಾಮಾಗಿ ಇರುವಂತಿದೆ ಮಧು ಬಂಗಾರಪ್ಪ ಅವರು. ಹಾಗಾಗಿನೇ ಅವರು ಕೊಟ್ಟ ಸಲಿಗೆ-ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರವಾಗಿ ಮಾಡಿಕೊಂಡು ಇದಕ್ಕಾಗಿ ಅವರ ಹೆಸರನ್ನೇ ಅಡವಿಟ್ಟು ಅದೇ ಆಪ್ತರು ಇಲಾಖೆಯನ್ನು ಡೀಲಿಂಗ್ ಅಡ್ಡೆಯಾಗಿ ಮಾಡಿಕೊಂಡಿದ್ದಾರೆನ್ನುವ ಮಾತಿದೆ.ದುರಂತ ಏನ್ ಗೊತ್ತಾ, ಇದೆಲ್ಲಾ ಸಚಿವರಿಗೆ ಗೊತ್ತಿಲ್ಲ ಎಂದೇನಿಲ್ಲ..ಅವರಿಗೂ ಇದರ ಬಗ್ಗೆ ಮಾಹಿತಿ ಇದೆ..ಸಾಲದ್ದಕ್ಕೆ ಅನೇಕ ದೂರುಗಳು ಬಂದಿವೆ..ಆದರೆ ಇಲಾಖೆಯ ಕೆಲವು ವಿಚಾರಗಳ ಬಗ್ಗೆ ಇವತ್ತಿಗೂ ಮಾಹಿತಿ ಇರದ ಸಚಿವ ಮಧು ಬಂಗಾರಪ್ಪ ಅವರ ತಲೆಯನ್ನೇ ಆಪ್ತರು ಹಾಳು ಮಾಡಿಬಿಟ್ಟಿದ್ದಾರಂತೆ. ನಿಮ್ ಪಾಡಿಗೆ ನೀವು ಇದ್ದುಬಿಡಿ ಸಾರ್..ನಾವು ಎಲ್ಲಾ ನೋಡಿಕೊಳ್ಳುತ್ತೇವೆ ಎನ್ನುವ ಮಟ್ಟದಲ್ಲಿ ಇಲಾಖೆಯನ್ನು ಮ್ಯಾನೇಜ್ ಮಾಡ್ತಿದ್ದಾರಂತೆ ಎನ್ನೋದು ಆ ಇಲಾಖೆಯ ಈ ಭ್ರಷ್ಟಚಾರದ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಕೆಲವರ ಅಭಿಪ್ರಾಯ.

ಶಿಕ್ಷಣ ಇಲಾಖೆ ಡೀಲಿಂಗ್ ಅಡ್ಡೆಯಾಗಿದೆ..ಟ್ರಾನ್ಸ್ ಫರ್ ಎನ್ನುವುದು ಸರ್ಕಾರದ ಕೇವಲ ಒಂದು ಪ್ರಕ್ರಿಯೆ.ಆದರೆ ಅದರಲ್ಲಿ ಲಾಭ ಮಾಡಿಕೊಳ್ತಿರೋರೇ ಬೇರೆ.ಅಂದರೆ ಸಚಿವರ ಕಾರ್ಯಾಲಯದ ಆಪ್ತರಂತೆ..ಏರಿಯಾದ ಮೇಲೆ, ಶಾಲಾ ಕಾಲೇಜುಗಳ ಸ್ತಿತಿಗತಿಯ ಮೇಲೆ( ಹಣದ ಹರಿವು ಚೆನ್ನಾಗಿ ಇರುವ ಶಾಲಾ,ಕಾಲೇಜ್ ಗಳು) ಟ್ರಾನ್ಸ್ ಫರ್ ಗಳು ಡಿಸೈಡ್ ಆಗ್ತಿವೆಯಂತೆ.ಯಾರು ಹೆಚ್ಚು ಹಣ ಕೊಡ್ತಾರೋ ಅವರಿಗೆ ಆಯಕಟ್ಟಿನ ಶಾಲಾ-ಕಾಲೇಜುಗಳ ಹುದ್ದೆಗಳು, ಏನೂ ಕೊಡಲಿಕ್ಕಾಗದವರಿಗೆ ನೀರು ನೆರಳಿಲ್ಲದ ಕಡೆ ವರ್ಗಾವಣೆಯಂತೆ.ಇದರ ನಡುವೆ ಹಣದ ಥೈಲಿ ಹಿಡಿದುಕೊಂಡು ಬಂದರೆ ಅಂಥವರ ಟ್ರಾನ್ಸ್ ಫರ್ರೇ ಕ್ಯಾನ್ಸಲ್..ಬೆಂಗಳೂರು ಉತ್ತರ ಡಿಡಿಪಿಯು ಪಾಲಾಕ್ಷಪ್ಪ ಅವರ ವರ್ಗಾವಣೆ ರದ್ದತಿ ಪ್ರಕರಣದಲ್ಲಿ ಇಂತದ್ದೊಂದು ಆಪಾದನೆ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ.
ಬೆಂಗಳೂರು ಉತ್ತರ ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಪಾಲಾಕ್ಷಪ್ಪ ಅವರ ವರ್ಗಾವಣೆ ಹಾಗೂ ನಂತರದ ದಿಢೀರ್ ವರ್ಗಾವಣೆ ವಿಚಾರದಲ್ಲಿ ದೊಡ್ಡ ಮಟ್ಟದ “ ವ್ಯವಹಾರ” ಶಿಕ್ಷಣ ಸಚಿವರ ಕೆಲ “ಆಪ್ತ”ರ ಮಟ್ಟದಲ್ಲಿ ನಡೆದಿದೆ ಎನ್ನುವ ಆಪಾದನೆ ಕೇಳಿಬಂದಿದೆ. ಬೆಂಗಳೂರು ಉತ್ತರದ ಡಿಡಿಪಿಯು ಆಗಿ ಅದಿಕಾರ ವಹಿಸಿಕೊಂಡ ಮೇಲೆ ಅವರು ಇಲಾಖೆ ಉದ್ದಾರ ಮಾಡೋ ಕೆಲಸ ಮಾಡಿದ್ದಕ್ಕಿಂತ , ಕಳೆದೊಂದು ವರ್ಷದ ಹಿಂದೆ ಇಲ್ಲಿ ಪೋಸ್ಟಿಂಗ್ ಹಾಕಿಸಿಕೊಳ್ಳಲು ಮಾಡಿದ್ದರೆನ್ನಲಾದ ಖರ್ಚನ್ನು ಹೇಗೆ ಬಡ್ಡಿ ಸಮೇತ ವಸೂಲಿ ಮಾಡಬೇಕೆನ್ನುವ ಆಲೋಚನೆಗೆ ಬಿದ್ದಂತೆ “ದುಡಿ”ದಿದ್ದೇ ಹೆಚ್ಚಂತೆ.ಇದನ್ನು ಅವರು ತಮ್ಮ ಆಪ್ತರ ಬಳಿಯೇ ಎಷ್ಟೋ ಬಾರಿ ಹೇಳಿಕೊಂಡಿರುವುದಂಟಂತೆ.ಅವರ ಬಗ್ಗೆ ಇಲಾಖೆಯಲ್ಲಿ ಇರುವ ಮಾತುಗಳು ಕೂಡ ಅಷ್ಟಕ್ಕಷ್ಟೆ.. ತಮಗಿದೆ ಎನ್ನಲಾಗುವ ಅನಾರೋಗ್ಯವನ್ನೇ ಮುಂದಿಟ್ಟುಕೊಂಡು ಎಲ್ಲರಿಂದ ಅನುಕಂಪೆ, ಸಹಾನುಭೂತಿ ಪಡೆದುಕೊಳ್ಳುತ್ತಿದ್ದಾರಂತೆ.ಹಾಗಂತ ತಮ್ಮ ಮಟ್ಟದಲ್ಲಿ ಮಾಡಿಕೊಳ್ಳಬೇಕಿರುವುದನ್ನು ಮಾಡಿಕೊಳ್ಳೋದ್ರಲ್ಲಿ ಸ್ವಲ್ಪವೂ ಹಿಂದೆ ಬಿದ್ದಿಲ್ಲವಂತೆ.

ಕುಲದೀಪ್, ಶ್ರೀಶಾಂತ್, ಶಫೀಕ್ ಅಹಮದ್ ವಿಷಯದಲ್ಲೂ ಇದೇ ಕಥೆ.. ವರ್ಗಾವಣೆ ರದ್ದು ದಂಧೆಯಲ್ಲಿ ಕೇಳಿ ಬರುತ್ತಿರುವುದು ಕೇವಲ ಡಿಡಿಪಿಯು ಪಾಲಾಕ್ಷಪ್ಪ ಬೆಂಗಳೂರು ಉತ್ತರ ಜಿಲ್ಲೆ ಕಚೇರಿಯಲ್ಲಿ ಸೆಕ್ಷನ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಕುಲದೀಪ್ ಕೂಡ ವರ್ಗಾವಣೆಯನ್ನು ರದ್ದು ಮಾಡಿಸಿಕೊಂಡಿದ್ದಾರೆನ್ನುವ ಮಾತಿದೆ. ಅನೇಕ ವರ್ಷಗಳಿಂದ ಒಂದೇ ಕಚೇರಿಯಲ್ಲಿ ಗೂಟಾ ಹೊಡೆದುಕೊಂಡಿರುವ ಕುಲದೀಪ್ ಅವರಂಥವರನ್ನು ಟ್ರಾನ್ಸ್ ಫರ್ ನ ಮೊದಲ ಲೀಸ್ಟ್ ನಲ್ಲೇ ಟಾರ್ಗೆಟ್ ಮಾಡಬೇಕಿದ್ದರೂ ಮಾಡಿರುವ ಅದಕ್ಕೆ ಆಧ್ಯತೆಯನ್ನೇ ಕೊಟ್ಟಿಲ್ಲ. ತಮಗೆ ಸಲ್ಲಿಸಬೇಕಿರುವುದನ್ನು ತಲುಪಿಸಿದರೆನ್ನುವ ಏಕೈಕ ಕಾರಣಕ್ಕೆ ವರ್ಗಾವಣೆ ಆದೇಶವನ್ನೇ ರದ್ದು ಮಾಡಿ ಮತ್ತದೇ ಕಚೇರಿಯಲ್ಲಿ ಅಂದಾದರ್ಬಾರ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರಂತೆ ಸಚಿವರ ಆಪ್ತರು.ಪರಿಸ್ತಿತಿ ಹೀಗಿದ್ದರೆ ಇಲಾಖೆ ಹೇಗೆ ಉದ್ದಾರವಾಗಬಲ್ಲದು ಹೇಳಿ..? ಕುಲದೀಪ್ ರಂತೆಯೇ ಸೆಕ್ಷನ್ ಆಫೀಸರ್ ಹಾಗೂ ಕೇಸ್ ವರ್ಕರ್ ಆಗಿರುವ ಶ್ರೀಶಾಂತ್, ಸ್ಯಾಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಶಫೀಕ್ ಅಹಮದ್ ಇವರೆಲ್ಲಾ ಅನೇಕ ವರ್ಷಗಳಿಂದ ಗೂಟಾ ಹೊಡೆದುಕೊಂಡು ಅಂದಾದರ್ಬಾರ್ ಮಾಡುತ್ತಿದ್ದರೂ ಅವರನ್ನು ಮುಟ್ಟುವ ಗೋಜಿಗೇನೇ ಇಲಾಖೆ ಹೋಗಿಲ್ಲ ಎಂದರೆ ಶಿಕ್ಷಣ ಇಲಾಖೆಗೆ ಎಂಥಾ ದುರ್ಗತಿ ಬಂತಪ್ಪಾ ಎನಿಸುತ್ತಿದೆ.ಸಮರ್ಥರು, ಅರ್ಹರು, ಪ್ರಾಮಾಣಿಕರು ಯೋಗ್ಯರನ್ನು ಅಗತ್ಯವಿರುವೆಡೆ ಹಾಕಿ ಇಲಾಖೆಯನ್ನು ಉದ್ದಾರ ಮಾಡಿ, ಕುಸಿಯುತ್ತಿರುವ ಶಿಕ್ಷಣದ ಗುಣಮಟ್ಟ ಸುಧಾರಿಸುವ ಕೆಲಸ ಮಾಡಬೇಕಾದ ಸಚಿವರ ಕೆಲ ಆಪ್ತರು., ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಕುಳಿತುಕೊಂಡು ಡೀಲಿಂಗ್ ವ್ಯವಹಾರ ಮಾಡುತ್ತಿದ್ದಾರೆನ್ನುವುದು ನಾಚಿಕೆಗೇಡು ಹಾಗೂ ಶೋಚನೀಯ ಅಷ್ಟೇ ಅಲ್ಲ ಆತಂಕಕಾರಿ ಕೂಡ. ಟ್ರಾನ್ಸ್ ಫರ್ರೇ ಇಲ್ಲದೆ ಕೆಲಸ ಮಾಡುತ್ತಿರುವ ಕುಲದೀಪ್,ಶಫಿಕ್ ಅಹಮದ್,ಶೇಷಾದ್ರಿ ಅವರುಗಳ ಕರ್ಮಕಾಂಡದ ಸ್ಟೋರಿಯನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಎಳೆಎಳೆಯಾಗಿ ಬಿಡಿಸಿಡಲಿದೆ.
ದೊಡ್ಡ ಸಂಖ್ಯೆಯ ಶಾಲಾ-ಕಾಲೇಜುಗಳಿರುವ ಬೆಂಗಳೂರು ಉತ್ತರದಲ್ಲಿ ಪಾಲಾಕ್ಷಪ್ಪ ಭಾರೀ “ಬೇಟೆ”ಯನ್ನೇ ಮಾಡುತ್ತಿದ್ದಾರಂತೆ.ಅವರ ನಿರೀಕ್ಷೆಗೆ ತಕ್ಕಂತ ದುಡಿಮೆಯ “ಫಲ”ವನ್ನೂ ದಕ್ಕಿಸಿಕೊಂಡಿದ್ದಾರಂತೆ.ಇಲ್ಲದಿದ್ದಲ್ಲಿ ಅವರು ತಮ್ಮ ವರ್ಗಾವಣೆಯನ್ನು ರದ್ದು ಮಾಡಿಸಿಕೊಳ್ಳೊಕ್ಕೆ ದುಂಬಾಲು ಬೀಳುತ್ತಿರಲಿಲ್ಲ..ಅವರಿವರ ಕಾಲಿಡಿಯುತ್ತಿರಲಿಲ್ಲ. ಸೇವೆಗೆಂದೇ ಬಂದಿದ್ದರೆ ಅವರು ಸರ್ಕಾರ ಯಾವುದೇ ಸ್ಥಳದಲ್ಲಿ ವರ್ಗ ಮಾಡಿದ್ರೂ ಅಲ್ಲಿ ಹೋಗಿ ಕೆಲಸ ಮಾಡಬೇಕಿತ್ತಲ್ವಾ..? ಆದರೆ ವರ್ಗವಾದ ಸ್ಥಳದಲ್ಲಿ ಹೋಗೋದಿಲ್ಲ ಎಂದು ಸಣ್ಣ ಮಕ್ಕಳಂತೆ ರಚ್ಚೆ ಹಿಡಿದಿದ್ದೇಕೆ..? ವರ್ಗಾವಣೆ ರದ್ದು ಮಾಡಿಸಿಕೊಳ್ಳೊಕ್ಕೆ ಎಂಥಾ ನಿರ್ದಾರಕ್ಕೂ ಸಿದ್ದ ಎಂದು ಹೇಳಿ,ಶಿಕ್ಷಣ ಸಚಿವರ ಆಪ್ತರ ಕೈ ಕಾಲಿಡಿದು ಅವರಿಗೆ ತಲುಪಬೇಕಾದ ಪ್ರಸಾದವನ್ನು ತಲುಪಿಸಿ ವರ್ಗಾವಣೆ ರದ್ದು ಮಾಡಿಸಿಕೊಂಡು ಬಂದಿದ್ದಾರೆನ್ನುವುದು ಮಲ್ಲೇಶ್ವರಂನಲ್ಲಿರುವ ಅವರ ಕಚೇರಿ ಕ್ಯಾಂಪಸ್ ನಲ್ಲಿ ಮಾರ್ದನಿಸಲಾರಂಭಿಸಿದೆ.
ಹೌದು..ಪಾಲಾಕ್ಷಪ್ಪ ಅವರಿಗೆ ಆಗಿದ್ದನ್ನೆಲಾದ ವರ್ಗಾವಣೆಯನ್ನು ಶಿಕ್ಷಣ ಇಲಾಖೆ ಅವರ ಕಾರ್ಯದಕ್ಷತೆ ಗಮನಿಸಿ ರದ್ದು ಮಾಡಿತಾ..? ಅವರ ಸೇವೆ ಬೆಂಗಳೂರು ಉತ್ತರಕ್ಕೆ ಬೇಕೇ ಬೇಕು ಎಂದು ಯಾರಾದ್ರೂ ಹೋರಾಟ ಮಾಡಿದ್ದಕ್ಕೆ ಮಣಿದು ರದ್ದು ಮಾಡಿತಾ..? ಹೋಗ್ಲಿಅನಾರೋಗ್ಯದ ಕಾರಣಕ್ಕೆ ರದ್ದು ಮಾಡಿತಾ.? ಎಂದು ಆಲೋಚಿಸಿದ್ರೆ ನೋ ಚಾನ್ಸ್ ಎನ್ನುವ ಉತ್ತರ ದೊರೆಯುತ್ತದೆ. ಬಂದ ದಿನಗಳಿಂದಲೂ ಪಾಲಾಕ್ಷಪ್ಪ ಇಲಾಖೆಗೋಸ್ಕರ ಕೆಲಸ ಮಾಡಿದ್ದಕ್ಕಿಂತ ಸ್ವಂತಕ್ಕಾಗಿ ದುಡಿದಿದ್ದೇ ಹೆಚ್ಚಂತೆ. ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದೇ ಹೆಚ್ಚಂತೆ..? ಸಪ್ರೈಸ್ ಇನ್ಸ್ ಪೆಕ್ಷನ್ ಮತ್ತು ವಿಸಿಟ್ ಎನ್ನುವ ನೆಪದಲ್ಲಿ ಶಾಲಾ-ಕಾಲೇಜುಗಳಿಗೆ ಭೇಟಿ ಕೊಟ್ಟು ಅವರ ಜೀವ ತೆಗೆದಿದ್ದೇ ಹೆಚ್ಚಂತೆ. ತಮ್ಮ ಕೆಲಸ ಆಗುವವರೆಗೂ ಅವರನ್ನು ಬೆನ್ನುಬಿಡದೆ ಕಾಡಿದ್ದೇ ಹೆಚ್ಚಂತೆ ಎನ್ನುವ ದಂಡಿ ದಂಡಿ ಆಪಾದನೆಗಳಿವೆ.ಇಲಾಖೆ ಮಟ್ಟಕ್ಕೂ ಅನೇಕ ಶಾಲಾ,ಕಾಲೇಜುಗಳವರು ಪಾಲಾಕ್ಷಪ್ಪ ವಿರುದ್ದ ದೂರನ್ನು ಕೂಡ ನೀಡಿದ್ರಂತೆ.ಆದರೆ ಯಾರನ್ನು ಎಲ್ಲೆಲ್ಲಿ ಮ್ಯಾನೇಜ್ ಮಾಡಬೇಕೆನ್ನುವುದನ್ನು ಚೆನ್ನಾಗಿ ಅರಿತಿರುವ ಪಾಲಾ ಕ್ಷಪ್ಪ ಈ ದೂರುಗಳ ಹಿನ್ನಲೆಯಲ್ಲಿ ಆಗಬೇಕಾದ ವಿಚಾರಣೆ-ಕಠಿಣ ಕ್ರಮದಿಂದ ನುಣುಚಿಕೊಳ್ಳುತ್ತಲೇ ಬಂದರಂತೆ. ಅಂದ್ಜಾಗೆ ತಮ್ಮ ಮೇಲೆ ನೇತಾಡುತ್ತಲೇ ಬಂದ ಶಿಸ್ತುಕ್ರಮ ಎನ್ನುವ ತೂಗುಗತ್ತಿಯಿಂದ ತಪ್ಪಿಸಿಕೊಳ್ಳೊಕ್ಕೆ ಪಾಲಾಕ್ಷಪ್ಪ ಯಾರ್ಯಾರಿಗೆ ಏನೇನ್ ಸಲ್ಲಬೇಕೋ ಅದನ್ನು ಒಪ್ಪಿಸಿದ್ದಾರೆನ್ನುವುದು ಕೂಡ ಅವರ ಮೇಲಿರುವ ಮತ್ತೊಂದು ಆಪಾದನೆ.
ಬೆಂಗಳೂರು ಉತ್ತರವೇ ಬೇಕು ಎಂದು ಹಠ ಹಿಡಿದಿದ್ದೇಕೆ..?! ಬೇರೆಡೆ ವರ್ಗವಾದರೂ, ಬೆಂಗಳೂರು ಉತ್ತರ ಜಿಲ್ಲೆ ಬೇಕೇ ಬೇಕು ಎಂದು ಪಾಲಾಕ್ಷಪ್ಪ ಹಠ ಹಿಡಿದಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ. ಸರ್ಕಾರ ಕೊಡುವ ಸಂಬಳದಲ್ಲೇ ಜೀವನ ನಡೆಸುತ್ತೇನೆ ಎನ್ನುವ ಮನಸ್ಥಿತಿ ಅವರಿಗೆ ಇದ್ದಿದ್ದೇ ಆದಲ್ಲಿ ಅವರು ಸರ್ಕಾರ ಹಾಕುವ ಜಾಗದಲ್ಲಿ ಕೆಲಸ ಮಾಡಬೇಕಿತ್ತಲ್ವಾ..? ಯಾಕೆ ಹಾಗೆ ಮಾಡಲಿಲ್ಲ.. ಅವರಿವರ ಮೂಲಕ ಸಚಿವರ ಕಚೇರಿಯ ಆಪ್ತರ ಸಂಪರ್ಕ ಪಡೆದು ತಮ್ಮ ಉದ್ದೇಶ ಈಡೇರಿಸಿಕೊಂಡಿದ್ದರ ಹಿಂದೆ ಏನೆಲ್ಲಾ ನಡೆದಿರಬಹುದೆನ್ನುವುದನ್ನು ಎಂಥಾ ಮೂರ್ಖ ಬೇಕಾದ್ರೂ ಅಂದಾಜು ಹಾಕಬಲ್ಲ.
ಸಚಿವ ಮಧು ಬಂಗಾರಪ್ಪ ಅವ್ರೇ,ಬದ್ಧತೆಯಿದ್ದರೆ ರದ್ದಾಗಿರುವ ಪಾಲಾಕ್ಷಪ್ಪ ವರ್ಗಾವಣೆಯನ್ನು ಯಥಾಸ್ತಿತಿಗೆ ತಂದು ವರ್ಗಾವಣೆ ಮಾಡಲಾಗಿದ್ದ ಸ್ಥಳಕ್ಕೆ ಹೋಗಿ ಡ್ಯೂಟಿ ರಿಪೊರ್ಟ್ ಮಾಡಿಕೊಳ್ಳು ವಂತೆ ಆದೇಶಿಸ್ತಿರಾ ಎನ್ನುವ ಕೂಗು ಕೂಡ ಎಲ್ಲೆಡೆ ಕೇಳಿಬರುತ್ತಿದೆ.ಏಕೆಂದರೆ ಪಾಲಾಕ್ಷಪ್ಪ ಅವರ ವಿಷಯದಲ್ಲಿ ಶಿಕ್ಷಣ ಸಚಿವರ ಇಲಾಖೆಯ ಆಪ್ತರು ತೋರಿಸಿದಷ್ಟೇ ಕಾಳಜಿ.ಮುತುವರ್ಜಿಯನ್ನು ಪಾಪ, ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರಾಮಾಣಿಕರು, ದಕ್ಷರ ವಿಷಯದಲ್ಲಿ ಏಕೆ ತೋರಿಸುತ್ತಿಲ್ಲ ಎನ್ನುವುದೇ ದೌರ್ಭಾಗ್ಯಪೂರ್ಣ.ನಿರ್ದಿಷ್ಟ ಹಾಗೂ ಸಕಾರಣಗಳಿದ್ದರೂ ತಮಗಾಗಿರುವ ವರ್ಗಾವಣೆ ರದ್ದು ಮಾಡಿಸಿಕೊಳ್ಳಲಿಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ ಏಕೆ..? ಪಾಲಾಕ್ಷಪ್ಪ ವಿಚಾರದಲ್ಲಿ ಒಂದ್ ನೀತಿ, ಉಳಿದವರ ವಿಚಾರದಲ್ಲಿ ಇನ್ನೊಂದು ರೀತಿಯ ಇನ್ನೊಂದು ನೀತಿಯನ್ನು ಅನುಸರಿಸುತ್ತಿರು ವುದೇಕೆ..? ಇದಕ್ಕೆ ಸಚಿವ ಮಧುಬಂಗಾರಪ್ಪ ಅವರೇ ಉತ್ತರ ಕೊಡಬೇಕಿದೆ. ಇಲಾಖೆಯನ್ನು ಡೀಲಿಂಗ್ ಅಡ್ಡೆಯಾಗಿ ಮಾಡಿಕೊಂಡಿರುವ ಅವರ ಕಚೇರಿಯ ಕೆಲ ಆಪ್ತರಿಗೆ ಮೂಗುದಾರ ಹಾಕುವ ಕೆಲಸ ಮಾಡದೆ ಹೋದಲ್ಲಿ,ಇಲಾಖೆಗೆ ಕೆಟ್ಟ ಹೆಸರಷ್ಟೇ ಅಲ್ಲ, ಅವರಿಂದಲೇ ಅವರ ಮಾನ ಹರಾಜಾಗುವುದರಲ್ಲಿ ಅನುಮಾನವೇ ಇಲ್ಲ..
