EXCLUSIVE:“ಸಚಿವ”ರು ಹೇಳಿದ್ದರೆನ್ನಲಾದ ಆ 20 ಕೋಟಿ “ಸ್ಕ್ರಾಪ್ “ಹಗರಣ ಯಾವುದು..?ಈ 3.79 ಕೋಟಿಯ ಹಗರಣ ಯಾವುದು..? ಎರಡೂ ಒಂದೆನಾ.? ಅಥವಾ ಪ್ರತ್ಯೇಕನಾ..! ಸ್ಪಷ್ಟನೆ ನೀಡುವವರು ಯಾರು..?


-ಎರಡೂ ಪ್ರತ್ಯೇಕ ಪ್ರಕರಣಗಳಾದ್ರೆ ಆ ೨೦ ಕೋಟಿಯದ್ದೆನ್ನಲಾದ ಹಗರಣ ಯಾವುದು..? ಅದರ ತನಿಖೆಯ ಪ್ರಗತಿ ಏನಾಯ್ತು..? ಯಾರಿಗೆ ಶಿಕ್ಷೆಯಾಯ್ತು..!

-ಅಕ್ರಮದಲ್ಲಿ ದೋಷಿಗಳಾದವರೆಲ್ಲಾ ಸಮಭಾಗಿಗಳಲ್ಲವೇ,,? ಹಾಗಾದ್ರೆ ಅಧಿಕಾರಿಗಳಿಗೊಂದು ನ್ಯಾಯ…ಸಿಬ್ಬಂದಿಗೊಂದು ನ್ಯಾಯವಾದ್ರೆ ಹೇಗೆ..?

-ಖಡಕ್‌ ಐಪಿಎಸ್‌ ಅಬ್ದುಲ್‌ ಅಹಾದ್‌ ಅವರ ಕಚೇರಿಯಿಂದ ಹೊರಬಿದ್ದ ಪ್ರಕಟಣೆಯ ಮೊತ್ತವೇ ಸರಿನಾ..? ಅಥವಾ ದೋಷಪೂರಿತವಾಗಿದೆಯಾ..?

ಬೆಂಗಳೂರು: ಇಲ್ಲಿ ಯಾರು ಹೇಳುತ್ತಿರು ವುದು ಸರಿ..? ಯಾರದು ತಪ್ಪು..?ಯಾರ ಮಾತ ನ್ನು ನಂಬಬೇಕು..ಯಾರ ಮಾತನ್ನು ನಿರ್ಲಕ್ಷ್ಯಿಸಬೇಕು ಎನ್ನುವ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ ಸಧ್ಯಕ್ಕೆ ಸೃಷ್ಟಿಯಾಗಿರುವ ಗೊಂದಲ….ಬಿಎಂಟಿಸಿ ಇತಿಹಾಸದಲ್ಲಿ ನಡೆದಿರುವ ಅಕ್ರಮದಲ್ಲಿ ಒಂದಾಗಿರುವ “ಬಿಡಿಭಾಗ”ಗಳ ಖರೀದಿ ಹಗರಣದ ವಿಷಯದಲ್ಲಿ ಬಿಎಂಟಿಸಿಯೊಳಗೆ  ಒಬ್ಬರ ಹೇಳಿಕೆಗಳು ಇನ್ನೊಬ್ಬರ ಹೇಳಿಕೆಗೆ ವ್ಯತಿರಿಕ್ತ ವಾದಂತೆ ತೋರುತ್ತಿದೆ.ಸಾರಿಗೆ ಸಚಿವ ಭೈರತಿ ಸುರೇಶ್‌ ಅವರು ವಿಧಾನಸಭೆ ಕಲಾಪದ ವೇಳೆ ಹೇಳಿದ್ದರೆನ್ನಲಾದ ಆ 20 ಕೋಟಿ ಹಗರಣ ಯಾವುದು..? ಹಾಗೆಯೇ ಈಗಿನ ಬಿಎಂಟಿಸಿ ಆಡಳಿತ ಹೇಳುತ್ತಿರುವ 3.79 ಕೋಟಿ ಹಗರಣವೇ ಬೇರೆನಾ,,? ಎನ್ನುವ ಪ್ರಶ್ಬೆ ಸೃಷ್ಟಿಯಾಗಿದೆ.ಇದಕ್ಕೆ  ಸ್ಪಷ್ಟನೆ ಕೊಡುವ ಜವಾಬ್ದಾರಿನೂ ಆಡಳಿತ ಮತ್ತು ಭದ್ರತಾ ಹಾಗೂಜಾಗೃತ ವಿಭಾಗದ ಮೇಲಿದೆ.

ಭದ್ರತಾ-ಜಾಗೃತ ವಿಭಾಗದ ನಿರ್ದೇಶಕ ಅಬ್ದುಲ್‌ ಅಹಾದ್‌
ಭದ್ರತಾ-ಜಾಗೃತ ವಿಭಾಗದ ನಿರ್ದೇಶಕ ಅಬ್ದುಲ್‌ ಅಹಾದ್‌

ಸಧ್ಯಕ್ಕೆ ಬಿಎಂಟಿಸಿಯಲ್ಲಿ ಬಿಡಿಭಾಗಗಳ ಹಗರಣದ್ದೇ ಸುದ್ದಿ…21 ಅಧಿಕಾರಿ ಸಿಬ್ಬಂದಿ ಭಾಗಿಯಾಗಿದ್ದಾರೆನ್ನಲಾಗಿರುವ ಹಗರಣ ಸಂಬಂಧ “ಶಿಸ್ತುಕ್ರಮ”ವನ್ನು ಈಗಾಗಲೇ ಜಾರಿ ಮಾಡಲಾಗಿದೆಯಂತೆ. ಆದರೆ  ಅಲ್ಲಿಯೂ ಆಡಳಿತ ಇಬ್ಬಂದಿತನ ಪ್ರದರ್ಶಿಸಿದೆ.ಅಧಿಕಾರಿಗಳನ್ನು ಆರಾಮಾಗಿ ಅಡ್ಡಾಡಿಕೊಂಡಿರಲು ಬಿಟ್ಟು ಸಿಬ್ಬಂದಿಯನ್ನು ಮಾತ್ರ ಅಮಾನತುಗೊಳಿಸಲಾಗಿದೆಯಂತೆ.( ಇದೇ ಪ್ರಕರಣ ಸಂಬಂಧ ಈಗಾಗಲೇ ಹಲವರ ವಿರುದ್ಧ  ನಡೆಯುತ್ತಿರುವ ತನಿಖೆ ಪೂರ್ಣಗೊಂಡು ಅವರಿಗೆ ಸೇವೆಗೆ ಸೇರುವ ಅವಕಾಶ ಸಿಗುವ ಸನ್ನಾಹದಲ್ಲೇ ಅವರ ವಿರುದ್ದ ಎಫ್‌ ಐ ಆರ್‌ ದಾಖಲಿಸಲಾಗಿದೆಯಂತೆ) .ತಪ್ಪು ಎಲ್ಲರಿಂದ ಆಗಿದೆ ಎಂದ ಮೇಲೆ ಅಧಿಕಾರಿಗಳಿಗೊಂದು ನ್ಯಾಯ..ಕೆಳ ಹಂತದ ಸಿಬ್ಬಂದಿಗೆ ಇನ್ನೊಂದು ನ್ಯಾಯ ಎನ್ನುವಂತಾದರೆ ಹೇಗೆ..? ಇದಕ್ಕೆ ಮತ್ತು ಭದ್ರತಾ ಹಾಗೂಜಾಗೃತ ವಿಭಾಗದ ನಿರ್ದೇಶಕರಾದ ಐಪಿಎಸ್‌ ಆಧಿಕಾರಿ ಅಬ್ದುಲ್‌ ಅಹಾದ್‌ ಅವರೇ ಉತ್ತರಿಸಬೇಕಿದೆ.

ಇದಿರಲಿ..ಈಗ ಮುಖ್ಯವಾದ ವಿಷಯಕ್ಕೆ ಬರೋಣ..ಪ್ರಪ್ರಥಮವಾಗಿ ಬಿಎಂಟಿಸಿ ಆಡಳಿತ ಬಿಡಿಭಾಗಗಳ ಖರೀದಿ ಹಗರಣದ ಮೊತ್ತ ಎಷ್ಟೆನ್ನುವು ದನ್ನು ಸ್ಪಷ್ಟಪಡಿಸಬೇಕಿದೆ.ಅದು ಸಚಿವ ಭೈರತಿ ಸುರೇಶ್‌ ಅವರು ಹೇಳಿದ್ದಂತೆ ಆ 20 ಕೋಟಿಗಿಂತ ಅಧಿಕವೋ ಅಥವಾ ಈಗ ಹೇಳಲಾಗುತ್ತಿರುವ 3.79 ಕೋಟಿನೋ..ಇದರಲ್ಲೇ ಗೊಂದಲ ಸೃಷ್ಟಿಸುವ ಕೆಲಸ ನಡೆಯತ್ತಿದೆ..ಏಕೆಂದರೆ ಇದೇ ಹಗರಣದ ವಿಚಾರವಾಗಿ  ಭೈರತಿ ಸುರೇಶ್‌ ಅವರು ಹೇಳಿಕೆ ಕೊಡುವಾಗ 20 ಕೋಟಿ ಹಗರಣವಾಗಿದೆ ಎಂದು ಹೇಳಿದ್ದರ ಬಗ್ಗೆ ಮಾದ್ಯಮಗಳಲ್ಲಿ ವರದಿಯಾಗಿತ್ತು.ಆದರೆ ಈಗ ಅದರ ಮೊತ್ತವನ್ನು 3.79 ಕೋಟಿ ಎನ್ನುತ್ತಿರುವುದು ಗೊಂದಲ ಮೂಡಿಸಿದೆ.ಇದರಲ್ಲಿ ಯಾವುದು ಸತ್ಯ..ಯಾವುದು ಸುಳ್ಳು ಎನ್ನುವುದು ಈಗ ಸ್ಪಷ್ಟವಾಗಬೇಕಿದೆ.

ಬಿಡಿಭಾಗಗಳ ಖರೀದಿಯಲ್ಲಿ ದೋಷಿಗಳಾದ ಬಿಎಂಟಿಸಿ ಸಿಬ್ಬಂದಿ
ಬಿಡಿಭಾಗಗಳ ಖರೀದಿಯಲ್ಲಿ ದೋಷಿಗಳಾದ ಬಿಎಂಟಿಸಿ ಸಿಬ್ಬಂದಿ

ಅಬ್ದುಲ್‌ ಅಹಾದ್‌ ಒಬ್ಬದಕ್ಷ-ಪ್ರಾಮಾಣಿಕ ಅಧಿಕಾರಿ ಎನ್ನುವುದರಲ್ಲಿ ಅನುಮಾನವಿಲ್ಲ.ಹಗರಣದ ವಿಚಾರವಾಗಿ  ಅವರ ವಿಭಾಗದಿಂದ ಹೊರಬಿದ್ದಿದೆ ಎನ್ನಲಾದ ಪ್ರಕಟಣೆ ಅದ್ಹೆಕೋ ಅನುಮಾನ ಮೂಡಿಸುವಂತಿದೆ.ಅವರಿಗೆ ಸಚಿವ ಭೈರತಿ ಸುರೇಶ್‌ ಅವರು ನೀಡಿದ ಹೇಳಿಕೆಯ ಮಾಹಿತಿ ಇರಲಿಲ್ಲವೇ..? ಅಥವಾ ಅವರನ್ನು ಅವರ ಕೆಳ ಹಂತದ ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ರಾ…? ಎನ್ನುವ ಪ್ರಶ್ನೆ ಕಾಡುತ್ತಿದೆ.ಹಗರಣದ ಮೊತ್ತವನ್ನು 20 ಕೋಟಿಯಿಂದ ದಿಢೀರ್‌ 3.79ಕೋಟಿಗೆ ಇಳಿಕೆ ಮಾಡಲಾಯಿತಾ.. ? ಇದು ಮಾಹಿತಿ ಕೊರತೆಯಿಂದ ಆದ ಯಡವಟ್ಟಾ..? ಅಥವಾ ಗೊತ್ತಿದ್ದೇ ಇಂಥದ್ದೊಂದು ಅಚಾತುರ್ಯ ನಡೆದೋಯ್ತಾ ಗೊತ್ತಿಲ್ಲ..ಇದು ಮೊದಲು ಬಗೆಹರಿಯಬೇಕಾದ ಗೊಂದಲವಾಗಿದೆ.

ALSO READ :  ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!
ಸಾರಿಗೆ ಸಚಿವರು ಬಿಡಿಭಾಗಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ವಿಧಾನಸಭೆ ಕಲಾಪದ ವೇಳೆ ನೀಡಿದ್ದ ಉತ್ತರದ ಪ್ತತಿ
ಸಾರಿಗೆ ಸಚಿವರು ಬಿಡಿಭಾಗಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನುವುದರ ಬಗ್ಗೆ ವಿಧಾನಸಭೆ ಕಲಾಪದ ವೇಳೆ ನೀಡಿದ್ದ ಉತ್ತರದ ಪ್ತತಿ
ಬಿಡಿಭಾಗಗಳ ಖರೀದಿಯಲ್ಲಿ ದೋಷಿಗಳಾದ ಬಿಎಂಟಿಸಿ ಸಿಬ್ಬಂದಿ
ಬಿಡಿಭಾಗಗಳ ಖರೀದಿಯಲ್ಲಿ ದೋಷಿಗಳಾದ ಬಿಎಂಟಿಸಿ ಸಿಬ್ಬಂದಿ

ಅಥವಾ..ಅಥವಾ ಸಚಿವ ಭೈರತಿ ಸುರೇಶ್‌ ಅವರು ಹೇಳಿದ ೨೦ ಕೋಟಿ ಹಗರಣವೇ ಬೇರೆನಾ..? ಹಾಗೆಯೇ ೩.೭೯ ಕೋಟಿ ಮೊತ್ತದ ಸ್ಕ್ರಾಪ್‌ ಹಗರಣವೇ ಬೇರೆನಾ..? ಎನ್ನುವ ಗೊಂದಲ ಕೂಡ ಮೂಡಿದೆ.೩.೭೯ ಕೋಟಿ ಹಗರಣವೇ ಬೇರೆ ಎಂದಿಟ್ಟುಕೊಂಡರೆ ಈಗ ಅದರ ಬಗ್ಗೆ ತನಿಖೆ ನಡೆಯತ್ತಿದೆ ಒಳ್ಳೇದು..ಆದರೆ ೨೦ ಕೋಟಿ ಸ್ಕ್ರಾಪ್‌ ಹಗರಣವೇ ಬೇರೆಯಾಗಿದ್ದರೆ ಅದರ ತನಿಖೆ ಎಲ್ಲಿಗೆ  ಬಂತು.ಹೇಗೆ ನಡೆಯುತ್ತಿದೆ..ಅದಕ್ಕೆ ಸಿಕ್ಕ ತಾರ್ಕಿಕ ಅಂತ್ಯ ಏನು ಎನ್ನುವುದರ ಉತ್ತರ ದೊರೆಯಬೇಕಿದೆ.ಎರಡು ಪ್ರತ್ಯೇಕ ಹಗರಣಗಳಾದರೂ ಇಲ್ಲಿ ಗೊಂದಲವಿದೆ..ಅಥವಾ ಒಂದೇ ಪ್ರಕರಣ ಎನ್ನುವುದಾದರೂ ಗೊಂದಲವಿದೆ..ಇದಕ್ಕೆ ಸ್ಪಷ್ಟನೆ ಕೊಡಬೇಕಾದವರು ಯಾರು,..?

ಭದ್ರತಾ ವಿಭಾಗದ ಅಧಿಕಾರಿ ರಮ್ಯ
ಭದ್ರತಾ ವಿಭಾಗದ ಅಧಿಕಾರಿ ರಮ್ಯ

ಹಾಗಾಗಿನೇ ಬಿಎಂಟಿಸಿಯಲ್ಲಿ ನಡೆದಿರುವ ಸ್ಕ್ರಾಪ್‌ ಹಗರಣದ ವಿಚಾರದಲ್ಲಿ  ಯಾರು ಸತ್ಯ ಹೇಳುತ್ತಿ ದ್ದಾರೆ..ಇನ್ನ್ಯಾರು ಸುಳ್ಳು ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ.. ಬಿಡಿಭಾಗಗಳ ಅಕ್ರಮದ ಮೊತ್ತ 3.79 ಕೋಟಿ ಎನ್ನಲಾಗುತ್ತಿದೆ.ಆದರೆ ಇದೇ ವಿಚಾರದಲ್ಲಿ  ಸಚಿವರಾದ ಭೈರತಿ ಸುರೇಶ್‌ ಅವರು  20 ಕೋಟಿಗೂ ಹೆಚ್ಚಿನ ಸ್ಕ್ರಾಪ್‌ ಹಗರಣವಾಗಿದೆ ಎಂದೇಳಿದ್ದರು.

ಬಿಡಿಭಾಗಗಳ ಖರೀದಿಯಲ್ಲಿ ೨೦ ಕೋಟಿಗೂ ಹೆಚ್ಚು ಅಕ್ರಮವಾಗಿದೆ ಎಂದು ಮಾದ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ ಪ್ರತಿ.
ಬಿಡಿಭಾಗಗಳ ಖರೀದಿಯಲ್ಲಿ ೨೦ ಕೋಟಿಗೂ ಹೆಚ್ಚು ಅಕ್ರಮವಾ ಗಿದೆ ಎಂದು ಮಾದ್ಯಮಗಳಲ್ಲಿ ಪ್ರಕಟವಾಗಿದ್ದ ವರದಿ ಪ್ರತಿ.

ಹಾಗಾದ್ರೆ ಇಲ್ಲಿ ಪ್ರಶ್ನೆ ಇರುವುದು ಇಬ್ಬರು ಹೇಳುತ್ತಿರುವುದು ಒಂದೇ ಹಗರಣದ ಬಗ್ಗೆನಾ..? ಅಥವಾ ಪ್ರತ್ಯೇಕ ಪ್ರಕರಣಗಳಾ ಗೊತ್ತಾಗುತ್ತಿಲ್ಲ.ಆದರೆ ಎರಡೂ ಪ್ರಕರಣಗಳಲ್ಲಿ ದೋಷಿಗಳಾಗಿರುವವರು ಒಂದೇ ಆಗಿದ್ದಾರೆ. 20 ಕೋಟಿ ಮೌಲ್ಯದ ಹಗರಣವನ್ನು ಕೇವಲ 3.79 ಕೋಟಿ ಎಂದು ಏಕೆ ಹೇಳಲಾಗುತ್ತಿದೆ..ಬೇಕೆಂತಲೇ ಹಗರಣದ ಮೊತ್ತವನ್ನು ಕಡಿಮೆ ಮಾಡಲಾಗು ತ್ತಿದೆಯಾ..? ಹಾಗೊಮ್ಮೆ ಮಾಡುತ್ತಿರುವುದೇ ಸತ್ಯವಾದ್ರೆ ಯಾಕೆ ಇಂತದ್ದೊಂದು ದುಸ್ಸಾಹಸ  ಮಾಡಲಾಗುತ್ತಿದೆ  ಎನ್ನುವುದಕ್ಕೆ ಭದ್ರತಾ ಮತ್ತು ಜಾಗೃತ ವಿಭಾಗದ ನಿರ್ದೇಶಕರಾದ ಅಬ್ದುಲ್‌ ಅಹಾದ್‌ ಅವರೇ ಉತ್ತರಿಸಬೇಕಾಗಿದೆ.

ಬಿಎಂಟಿಸಿ ವ್ಯವಸ್ಥೆಯ ದಕ್ಷತೆ-ಪ್ರಾಮಾಣಿಕತೆಯನ್ನು ಅನುಮಾನಿಸುವ ಮಟ್ಟದಲ್ಲಿ ನಡೆದಿರುವ ಈ ಹಗರಣದ ಮೊತ್ತದ ಬಗ್ಗೆ ಪ್ರಜ್ಞಾಪೂರ್ವಕ ವಾಗಿಯೇ ಗೊಂದಲ ಮೂಡಿಸಲಾಗುತ್ತಿದೆ ಎನ್ನವುದೇ ಸತ್ಯವಾದ್ರೆ  ಇದನ್ನು ಸಚಿವ ಭೈರತಿ ಸುರೇಶ್‌ ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ. ಇದರ ಬಗ್ಗೆ ಸೂಕ್ತ ತನಿಖೆಗೂ ಆದೇಶಿಸಬೇಕಿದೆ.ಗೊತ್ತಿದ್ದೇ ನಡೆದಿದ್ದರೆ  ಅಬ್ದುಲ್‌ ಅಹಾದ್‌ ಅವರ ಕಚೇರಿ ಮೂಲಕ ಇಂತದ್ದೊಂದು ಗೊಂದಲ ದ ಹೇಳಿಕೆ ಹೊರಬಿದ್ದಿದ್ದೇಕೆ ಎನ್ನುವುದು ಸ್ಪಷ್ಟವಾಗಬೇಕಿದೆ…ಇದೆಲ್ಲದರ ಜತೆಗೆ ತಪ್ಪಿತಸ್ಥರ ವಿಚಾರವಾಗಿ ಅಧಿಕಾರಿಗಳನ್ನು ರಕ್ಷಿಸುವ ಕೆಲಸ  ಏಕಾಗುತ್ತಿದೆ. ಸಿಬ್ಬಂದಿ ವಿರುದ್ದ ಜರುಗಿಸಲಾಗಿರುವ ಶಿಸ್ತು ಕ್ರಮ ಅಧಿಕಾರಿಗಳ ವಿರುದ್ಧವೇಕೆ ಜಾರಿಯಾಗುತ್ತಿಲ್ಲ..ಪ್ರಕರಣದಲ್ಲಿ ಎಲ್ಲರೂ ಸಮ ನಾಗಿ ತಪ್ಪಿತಸ್ಥರಾದ್ರೂ ಶಿಸ್ತುಕ್ರಮ ಸಿಬ್ಬಂದಿ ವಿರುದ್ದ ಮಾತ್ರ ಏಕೆ..!? ಇಂತದ್ದೊಂದು ತಾರತಮ್ಯ  ಏಕೆ ಎನ್ನುವುದಕ್ಕೂ ಸ್ಪಷ್ಟನೆ ನೀಡಬೇಕಿದೆ.


Leave a Comment