“ನ್ಯೂಸ್‌ 18” ಕನ್ನಡ ಚಾನೆಲ್‌ ಹಿಂದಿಕ್ಕಿ ನಂಬರ್‌ 1 ಪಟ್ಟಕ್ಕೇರಿದ “ಕರ್ನಾಟಕ TV”..


ಸುದ್ದಿಗಳನ್ನು ವೀಕ್ಷಿಸುವ ಕನ್ನಡದ ವೀಕ್ಷಕರ ಮನಸ್ಥಿತಿ ಬದಲಾಗಿದೆಯೇ..? ಅಥವಾ ಅಪ್ಪ ಹಾಕಿದ ಆಲದ ಮರ ಎನ್ನುವಂತೆ  ಹಾಗೆಯೇ ಇದೆಯಾ..? ಸುದ್ದಿಯಲ್ಲಿನ ವಿಶ್ವಾಸಾರ್ಹತೆಯ ವಿಚಾರಕ್ಕೆ ಬಂದರೆ ಇವತ್ತಿಗೂ  ನ್ಯೂಸ್‌ ಚಾನೆಲ್‌ ಗಳನ್ನೇ  ಹೆಚ್ಚೆಚ್ಚು  ಅವಲಂಭಿಸಿದ್ದಾರೋ ಅಥವಾ ನ್ಯೂಸ್‌ ಚಾನೆಲ್‌ ಗಳಿಗಿಂತ ವೇಗವಾಗಿ,ಅಷ್ಟೇ ಅಲ್ಲ ಅದಕ್ಕಿಂತ ಹೆಚ್ಚು ವಿಶ್ವಾಸಾರ್ಹವಾಗಿ ನೀಡುವ ಡಿಜಿಟಲ್‌ ಮೀಡಿಯಾಗಳತ್ತ ಜಾರಿದ್ದಾರೆಯೇ..? ಇಂತದ್ದೊಂದು ಪ್ರಶ್ನೆಗೆ ವೀಕ್ಷಕರು ಉತ್ತರವನ್ನು ಕಂಡುಕೊಂಡು ಎಷ್ಟೋ ದಿನಗಳಾಗಿವೆ ಎನ್ನುವುದಕ್ಕೆ ವೀಕ್ಷಕರ ಆದ್ಯತೆ-ಪ್ರಾತಿನಿಧ್ಯತೆಯಲ್ಲಿ ಆಗಿರುವ ಗಮನಾರ್ಹ ಬದಲಾವಣೆಗಳೇ ಸಾಕ್ಷಿಇದನ್ನು ಹೇಳೊಕ್ಕೆ ಕಾರಣವೂ ಇದೆ.

ನ್ಯೂಸ್‌ ಚಾನೆಲ್‌ ಗಳನ್ನು ಹಿಂದಿಕ್ಕುವ ಮಟ್ಟಕ್ಕೆ ಇವತ್ತು ಡಿಜಿಟಲ್‌ ಮೀಡಿಯಾಗಳು ಬೆಳೆದಿವೆ ಎನ್ನುವುದು  ಗಮನಿಸಿಬೇಕಾದ ವಿಚಾರ.ಇದಕ್ಕೆ ಉತ್ತಮ ನಿದರ್ಶನ ಸುದ್ದಿಗಳನ್ನು ನೀಡುವ ವಿಷಯದಲ್ಲಿ ತನ್ನದೇ ಆದ ವಿಶೇಷತೆ ಮೂಡಿಸಿರುವ ಪತ್ರಕರ್ತ ಮಿತ್ರ ಶಿವು ಬೆಸಗರಹಳ್ಳಿ ಮಾಲೀಕತ್ವದ ಕರ್ನಾಟಕ ನ್ಯೂಸ್‌ ಡಿಜಿಟಲ್‌ ಮೀಡಿಯಾ.ಫೇಸ್‌ ಬುಕ್‌ ವೀಕ್ಷಣೆಯಲ್ಲಿ ಕನ್ನಡದ ಪ್ರತಿಷ್ಟಿತ ನ್ಯೂಸ್‌ ಚಾನೆಲ್‌ ಗಳನ್ನೆಲ್ಲಾ ಹಿಂದಿಕ್ಕಿರುವ ಸಾಧನೆ ಮಾಡಿದೆ ಕರ್ನಾಟಕ ನ್ಯೂಸ್‌ ಟಿವಿ.ಅದಕ್ಕಾಗಿ ಮೊದಲು ಇಡೀ ಕರ್ನಾಟಕ ಟಿವಿ ತಂಡಕ್ಕೆ ಶುಭಾಷಯ ಹಾಗೂ ಅಭಿನಂದನೆ.

ಫೇಸ್‌ ಬುಕ್‌ ವೀಕ್ಷಣೆಯಲ್ಲಿ ಎಲ್ಲಾ ನ್ಯೂಸ್‌ ಚಾನೆಲ್‌ ಗಳನ್ನು ಹಿಂದಿಕ್ಕಿ ನಾವೇ ನಂಬರ್‌ 1 ಎಂದು ಕನ್ನಡದ ಪ್ರತಿಷ್ಟಿತ ನ್ಯೂಸ್‌ 18 ಕನ್ನಡ ಸುದ್ದಿ ಹಾಕಿಕೊಂಡಿತ್ತು.ಆದರೆ ಸಂಜೆ ಹೊತ್ತಿಗೆ ಕರ್ನಾಟಕ ಟಿವಿಯ ಮುಖ್ಯಸ್ಥರಾದ ಶಿವು ಬೆಸಗರಹಳ್ಳಿ ಅವರು ಅವರಲ್ಲ ನಾವೇ ನಂಬರ್‌ 1 ಎನ್ನುವ ಪೋಸ್ಟ್‌ ಒಂದನ್ನು ಹಾಕಿಕೊಂಡಿದ್ದರು.ನ್ಯೂಸ್‌ 18 ಕನ್ನಡದ ಸಂಪಾದಕೀಯ ಮಂಡಳಿ ಸೆಪ್ಟೆಂಬರ್‌ 1 ರಿಂದ ಸೆಪ್ಟೆಂಬರ್‌ 30 ರ ಅವಧಿಯಲ್ಲಿ ಕರ್ನಾಟಕದ ಪ್ರೇಕ್ಷಕರು ತಮ್ಮ  ಫೇಸ್‌ ಬುಕ್‌ ನ್ನು ಹೆಚ್ಚೆಚ್ಚು ವೀಕ್ಷಿಸಿದ್ದಾರೆ ಎಂದು ಘೋಷಿಸಿಕೊಂಡಿತ್ತು.

ಅದರ ಪ್ರಕಾರವೇ ಸೆಪ್ಟೆಂಬರ್‌ ತಿಂಗಳಲ್ಲಿ ನ್ಯೂಸ್‌ 18 ಕನ್ನಡದ ಫೇಸ್‌ ಬುಕ್‌ ನ್ನು 65 ಮಿಲಿಯನ್‌ ನಷ್ಟು ಅಂದರೆ 6 ಕೋಟಿ 50 ಲಕ್ಷದಷ್ಟು ಜನ ವೀಕ್ಷಿಸಿದ್ದಾರೆ ಎಂದು ಕ್ಲೈಮ್‌ ಮಾಡಿಕೊಂಡಿದ್ದರು. ಇದು  ಕನ್ನಡದ ಸಾರ್ವಕಾಲಿಕ ನಂಬರ್‌ 1( ಪ್ರೇಕ್ಷಕರ ಮನಸ್ತಿತಿಯ ಪ್ರಕಾರ) ಟಿವಿ9 ಕನ್ನಡದ ಹೋಲಿಕೆಯಲ್ಲಿ 2 ಕೋಟಿಗಿಂತಲೂ ಹೆಚ್ಚೆನ್ನುವುದು ಗಮನಾರ್ಹ.ಅಂದರೆ ಟಿವಿ 9 ಕನ್ನಡದ ಫೇಸ್‌ ಬುಕ್‌ ಪೇಜ್‌ ನ್ನು 4 ಕೋಟಿ 50  ಲಕ್ಷ ವೀಕ್ಷಿಸಿದ್ದಾರೆನ್ನುವುದು ಅದರ ತಾತ್ಪಾರ್ಯ. ನ್ಯೂಸ್ ಚಾನೆಲ್‌ ಗಳು ಹೆಚ್ಚೆಚ್ಚು ಡಿಜಿಟಲ್‌ ನತ್ತ ಹೊರಳುತ್ತಿರುವ ಸನ್ನಿವೇಶದಲ್ಲಿ ನ್ಯೂಸ್‌ 18  ಕನ್ನಡದ ಸಾಧನೆಯೇನು ಕಡಿಮೆಯೇನಲ್ಲ..ಅದು ಗಮನಾರ್ಹವಾದುದೇ..

ಆದರೆ  ಹೆಚ್ಚು ಅಚ್ಚರಿ ಮೂಡಿಸಿದ್ದು ಸಂಜೆ ವೇಳೆಗೆ ಕರ್ನಾಟಕ ಟಿವಿ ಮುಖ್ಯಸ್ಥರಾದ  ಶಿವು ಬೆಸಗರಹಳ್ಳಿ ಅವರು ತಮ್ಮ ಫೇಸ್‌ ಬುಕ್‌ ನಲ್ಲಿ ಹಾಕಿಕೊಂಡ ಆ ಒಂದು  ಪೋಸ್ಟರ್‌. ಒಂದು ಕ್ಷಣ ಇದು ನಮ್ಮನ್ನು ದಂಗುಬಡಿಸಿದ್ದು ಸತ್ಯ.ಇದು ಕೇವಲ ನಮಗೊಬ್ಬರಿಗೇ ಅಲ್ಲ ಎಂಥವರನ್ನು ಒಂದು ಕ್ಷಣ ಅಚ್ಚರಿಗೊಳಪಡಿಸುವಂತದ್ದೆ..ಏಕೆಂದರೆ ಅವರ ಪೋಸ್ಟ್‌ ಪ್ರಕಾರ ಫೇಸ್‌ ಬುಕ್‌ ವೀಕ್ಷಣೆಯಲ್ಲಿ ನ್ಯೂಸ್‌ 18 ಕನ್ನಡ ನಂಬರ್‌ 1  ಅಲ್ಲ..ನಾವೇ ನಂಬರ್‌ 1 ಎನ್ನುವುದು ಅದರ ಹೈಲೈಟ್.ಶಿವು ಅವರ ಪೇಜ್‌ ನಲ್ಲಿ ಹಾಕಲಾಗಿದ್ದ ಪೋಸ್ಟರ್‌ ಪ್ರಕಾರವೇ ಸೆಪ್ಟೆಂಬರ್‌ ತಿಂಗಳಲ್ಲಿ ನ್ಯೂಸ್‌ 18 ಕನ್ನಡದ ಪೇಸ್‌ ಬುಕ್‌ ವೀಕ್ಷಣೆ 65 ಮಿಲಿಯನ್‌ ನಷ್ಟಿದ್ರೆ ಕರ್ನಾಟಕ ಟಿವಿಯ ವೀಕ್ಷಣೆ 6 ಕೋಟಿ ಲಕ್ಷದ 50ಲಕ್ಷದ  35 ಸಾವಿರ.ಅಂದ್ರೆ  ನ್ಯೂಸ್‌ 1 ಕನ್ನಡಕ್ಕಿಂತ 35  ಸಾವಿರದಷ್ಟು ಹೆಚ್ಚಿನ ವೀಕ್ಷಣೆ ಕರ್ನಾಟಕ ಟಿವಿ ಪಡೆದುಕೊಂಡಿದೆ ಎನ್ನುವಂತಾಯ್ತು. ಕೇಳುವವರಿಗೆ ಇದು ಆಶ್ಚರ್ಯ ಎನಿಸಬಹುದು..ಸಾಧ್ಯವಾ ಎಂದು ಪ್ರಶ್ನೆ ಮೂಡಬಹುದು.ಆದರೆ ಇದು ಸತ್ಯ ಎನ್ನುತ್ತಾರೆ ಶಿವು ಬೆಸಗರಹಳ್ಳಿ..ಈ ವಿಷಯವಾಗಿ ಅವರನ್ನು ಮಾತನಾಡಿಸಿದಾಗ ಹೌದು ಇದು ಸತ್ಯ ಎಂದ್ಹೇಳಿದರು.

ALSO READ :  ನ್ಯೂಯಾರ್ಕ್ ಗೆ ಹೊರಟ್ಟಿದ್ದ 239 ಪ್ರಯಾಣಿಕರಿದ್ದ ವಿಮಾನ ದೆಹಲಿಗೆ ಮಾರ್ಗ ಬದಲಾವಣೆ!

ಫೇಸ್ ಬುಕ್‌ ಎನ್ನುವುದು ಇವತ್ತು ಡಿಜಿಟಲ್‌ ಮೀಡಿಯಾದ ಪ್ರಬಲ ಹಾಗೂ ಪರಿಣಾಮಕಾರಿಯಾದ ಮಾದ್ಯಮ. ಎಲ್ಲಾ ನ್ಯೂಸ್‌ ಚಾನೆಲ್‌ ಗಳು ತಮ್ಮ ಸ್ಯಾಟಲೈಟ್‌ ನಲ್ಲಿ ಸುದ್ದಿಗಳನ್ನು ಮೊದಲು ಏರ್‌ ಮಾಡುವುದಕ್ಕಿಂತ ಮುನ್ನ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಮಾಡುವ ಮಟ್ಟಕ್ಕೆ ಬಂದು ನಿಂತಿವೆ.ಟಿವಿಗಳ ಮುಂದೆ ಕೂತು ಸುದ್ದಿಗಳನ್ನು ನೋಡುವಷ್ಟು ಪುರುಸೊತ್ತು-ಆಸಕ್ತಿ ಎರಡೂ ಜನರಿಗೆ ಇಲ್ಲವಾಗಿದೆ.ಹಾಗಾಗಿಯೇ ಇವತ್ತು ಮೊಬೈಲ್‌ ನ ಡಿಜಿಟಲ್ ಫ್ಲಾಟ್‌ ಫಾರ್ಮ್‌ ನತ್ತ ಶಿಫ್ಟ್‌ ಆಗಿದ್ದಾರೆ. ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಒಳ್ಳೆಯ ಬೆಳವಣಿಗೆ ಎಂದರೂ ತಪ್ಪಾಗದು.ಈ ಹಿನ್ನಲೆಯಲ್ಲಿ ನೋಡವುದಾದರೆ ನ್ಯೂಸ್‌ ೧೮  ಕನ್ನಡವನ್ನು ಹಿಂದಿಕ್ಕಿ ಕರ್ನಾಟಕ ಟಿವಿ ಮಾಡಿದೆ ಎನ್ನುವ ಸಾಧನೆ ನಿಜಕ್ಕೂ ಗಮನಾರ್ಹ.

ಒಂದು ಡಿಜಿಟಲ್‌ ಚಾನೆಲ್‌ ಉಳಿದೆಲ್ಲಾ ನ್ಯೂಸ್‌ ಚಾನೆಲ್‌ ಗಳನ್ನು ಹಿಂದಿಕ್ಕಿ ಒಂದು ಮಹತ್ವದ ಸಾಧನೆ ಮಾಡುತ್ತದೆ ಎಂದರೆ ಡಿಜಿಟಲ್‌ ಚಾನೆಲ್‌ ಗಳು ಸ್ಯಾಟಲೈಟ್‌ ಚಾನೆಲ್‌ ಗಳಿಗಿಂತ ತಾವೇನು ಕಡಿಮೆಯಿಲ್ಲ ಎನ್ನುವುದನ್ನು ಪ್ರೂವ್‌ ಮಾಡಿದಂತೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ.ಉಳಿದ ಡಿಜಿಟಲ್‌ ಚಾನೆಲ್‌ ಗಳಿಗೂ ಈ ಬೆಳವಣಿಗೆ  ಸ್ಪೂರ್ತಿದಾಯಕ ಕೂಡ.ಈ ಕಾರಣಕ್ಕಾಗಿ ಶಿವು ಬೆಸಗರಹಳ್ಳಿ ಮತ್ತು ಅವರ ಕರ್ನಾಟಕ ಟಿವಿ ತಂಡಕ್ಕೆ ಅಭಿನಂದನೆ ಸಲ್ಲಿಸಲೇಬೇಕಾಗುತ್ತದೆ.ಹಾಗೆಂದು ನ್ಯೂಸ್‌ ೧೮ ಕನ್ನಡದ ಸಾಧನೆ ಡಮ್ಮಿ ಮಾಡುವಂತದ್ದು ಎಂದಲ್ಲ,ಟಿವಿ೯ ಕನ್ನಡ, ಪಬ್ಲಿಕ್‌ ಟಿವಿ, ಸುವರ್ನ ನ್ಯೂಸ್‌ ನಂಥ ಚಾನೆಲ್‌ ಗಳನ್ನು ಹಿಂದಿಕ್ಕಿ ಅದು ಮಾಡಿರುವ ಸಾಧನೆಯೂ ಕಡಿಮೆಯೇನಲ್ಲ..


Leave a Comment