EXCLUSIVE: 3.9 ಕೋಟಿ ಬಿಎಂಟಿಸಿ “ಬಿಡಿಭಾಗ ಹಗರಣ”ಕ್ಕೆ ಇವ್ರೂ ನೈತಿಕ ಹೊಣೆಯಲ್ಲವೇ,..!? ಇವರ ವಿರುದ್ದ ಕ್ರಮ ಏಕಿಲ್ಲ..!?

ಬೆಂಗಳೂರು: ಒಂದಲ್ಲಾ ಎರಡಲ್ಲ ಬರೋಬ್ಬರಿ 3.97 ಕೋಟಿ ಮೊತ್ತದ ಬಿಡಿಭಾಗಗಳ ಹಗರಣ ದೊಡ್ಡ ಸಂಚಲನ ಮೂಡಿಸಿರು ವಾಗಲೇ ಬಹುದೊಡ್ಡ ಚರ್ಚೆ ಹುಟ್ಟುಹಾಕಿರುವ ವಿಷಯದ ಮೇಲೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬೆಳಕು ಚೆಲ್ಲುತ್ತಿದೆ… ಮೊದಲೇ ಮುಳುಗುವ ಹಡಗಿನಂತಾಗಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(BENGALURU METROPOLITAN TRANSPORT)BMTC)ವನ್ನು ಸಂಪೂರ್ಣ ಮುಳುಗಡೆ ಮಾಡುವ ಪ್ರಯತ್ನ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಂಸ್ಥೆಯೊಳಗೆ ಇಲ್ಲದಾಗಿರುವ ಶಿಸ್ತು-ದಕ್ಷತೆ-ಪ್ರಾಮಾಣಿಕತೆ,ಕರ್ತವ್ಯನಿಷ್ಟೆ ಹಾಗೂ ಪಾರದರ್ಶಕತೆ ಕೊರತೆಯಿಂದ ಪರಿಸ್ಥಿತಿ ಮತ್ತಷ್ಟು ಆದ್ವಾನವಾಗುತ್ತಿದೆ. ಆಡಳಿತ ನಡೆಸೋರ, ಶಿಸ್ತನ್ನು ಅನುಷ್ಟಾನಗೊಳಿಸಬೇಕಾದವರ ಜಡತ್ವ-ಉದಾಸೀನತೆ ಮತ್ತು ನಿರ್ಲಕ್ಷ್ಯದಿಂದಲೇ … Read more