“ಸಂಕಷ್ಟ”ದಲ್ಲಿದ್ದ “ನ್ಯೂಸ್ ಫಸ್ಟ್” ಗೆ  ಸಿಕ್ಕೇಬಿಟ್ರಂತೆ “ಹೂಡಿಕೆ”ದಾರರು…! ಇನ್ನಾದ್ರು ನೀಗುತ್ತದಾ “ಮಾದ್ಯಮಮಿತ್ರ”ರ ಬವಣೆ..!

ಬೆಂಗಳೂರು: ಮತ್ತೊಮ್ಮೆ ನ್ಯೂಸ್ ಫಸ್ಟ್ ಬಗ್ಗೆ ಬರೆಯಬೇಕಾಗ್ತಿದೆ…ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮ ಸ್ನೇಹಿತರ ದೃಷ್ಟಿಯಲ್ಲಿ ಇದು ಒಂದ್ರೀತಿ ಪಾಸಿಟಿವ್ ಆದಂಥ ಸುದ್ದಿನೇ.(.ಅದನ್ನು ಬೇರೆ ರೀತಿ ಅರ್ಥೈಸುವಂತವರಿಗೆ ನಾವೇನು ಮಾಡ್ಲಿಕ್ಕಾಗೊಲ್ಲ ಬಿಡಿ). ಸಂಬಳ ಸಿಗದೆ ಕಷ್ಟದಲ್ಲಿರುವ ಸ್ನೇಹಿತರ ಪಾಲಿಗೆ ಇದೊಂದು ರೀತಿ ಚೇತೋಹಾರಿಯಾದ ವಿಚಾರ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಸಂಕಷ್ಟದಲ್ಲಿದೆ ಎಂದೇ ಬಿಂಬಿಸಲಾಗ್ತಿದ್ದ ಮ್ಯಾನೇಜ್ಮೆಂಟ್ ನ ಬವಣೆಯೂ ಈ ಮೂಲಕ ದೂರವಾಗಿದೆ ಎನ್ನುವುದು ಕೂಡ ಸಮಾಧಾನದ  ವಿಚಾರ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ಗಳ ಹೋಲಿಕೆಯಲ್ಲಿ ಸೌಲಭ್ಯ-ಸವಲತ್ತು-ಸಹಕಾರ-ನೆರವು ಸಿಗೋದು ತೀರಾ ಕಡಿಮೆ.ಆದರೂ ಈ ಬೇಸರ-ಅಸಮಾಧಾನ-ನೋವನ್ನೆಲ್ಲಾ ಮರೆತು ಸಂಸ್ಥೆ ವಹಿಸಿದ ಕೆಲಸ ಹಾಗೂ ಫೀಲ್ಡ್ ನಲ್ಲಿ ರಿಪೋರ್ಟರ್ ಹೇಳಿದ ಅಸೈನ್ಮೆಂಟನ್ನು ಶೂಟ್ ಮಾಡಿಕೊಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ರಿಪೋರ್ಟರ್ ಗಳಂತೆ ತಮಗೂ ಎಲ್ಲಾ ರೀತಿಯ ಸ್ಥಾನಮಾನ ಸಿಗಬೇಕೆನ್ನುವ ಮಹದಾಸೆ ಕ್ಯಾಮೆರಾಮನ್ ಗಳಿಗೆ ಇದ್ದರೂ ಅನೇಕ ಕಾರಣಗಳಿಂದ ಅದು … Read more

“ಪಬ್ಲಿಕ್ ಟಿವಿ”ಗೆ ಬಿಗ್ ಶಾಕ್..! “ಪೊಲಿಟಿಕಲ್ ಹೆಡ್” ಬದ್ರುದ್ದೀನ್ ಗುಡ್ ಬೈ.?! ನಿರ್ಗಮನಕ್ಕೆ ಕಾರಣವೇನು..?!

:ವೃತ್ತಿನಿಷ್ಠೆ-ಕಾರ್ಯಕ್ಷಮತೆ”ಗೆ ಮತ್ತೊಂದು ಹೆಸರೇ “ಎಕ್ಸ್ ಕ್ಲ್ಯೂಸಿವ್ ನ್ಯೂಸ್” ಗಳ “ಹೆಡ್ ಕ್ವಾರ್ಟರ್ಸ್” ಬದ್ರುದ್ದೀನ್.. ಬೆಂಗಳೂರು: ಕನ್ನಡ ಪತ್ರಿಕಾರಂಗದಲ್ಲಿ  ಸ್ನೇಹಜೀವಿ-ಅಜಾತಶತೃ ಎಂದೇ ಕರೆಯಿಸಿ ಕೊಳ್ಳುವುದು ತೀರಾ ಕಷ್ಟ… ಕಷ್ಟ ಎನ್ನುವುದಕ್ಕಿಂತ ಅಸಾಧ್ಯವಾದ ಮಾತು.ಆದರೆ ಅದಕ್ಕೆ ಅಪವಾದ ಎನ್ನುವಂತೆ ಹೆಸರು-ವ್ಯಕ್ತಿತ್ವ-ಕೈ.. ಯಾವುದನ್ನೂ ಕೊಳಕು ಮಾಡಿಕೊಳ್ಳದೆ ಸುಮಾರು 30 ವರ್ಷಗಳಿಗಿಂತಲೂ ದೀರ್ಘ ಸಮಯದಿಂದಲೂ ವೃತ್ತಿನಿಷ್ಠೆಯನ್ನುಳಿಸಿಕೊಂಡ ಹಿರಿಯ ಪತ್ರಕರ್ತ  ಬದ್ರುದ್ದೀನ್ ಮಾಣಿ. ಪಬ್ಲಿಕ್ ಟಿವಿಯಲ್ಲಿ 9 ವರ್ಷಗಳಿಂದಲೂ ರಾಜಕೀಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ ಬದ್ರುದ್ದೀನ್ ಸ್ವ ಇಚ್ಛೆಯಿಂದ ನಿವೃತ್ತಿ ಪಡೆದು ಹೊರಬಂದಿದ್ದಾರೆ.ಇದ್ದಷ್ಟು … Read more