ಎಐ ಶೃಂಗಸಭೆಯಲ್ಲಿ ಹೈಡ್ರಾಮಾ: ಅರೆಬೆತ್ತಲೆ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು!

youth congress

ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಎಐ ಇಂಪ್ಯಾಕ್ಟ್ ಶೃಂಗಸಭೆಯ ಅಂತಿಮ ದಿನವಾದ ಇಂದು, ಭಾರತ್ ಮಂಟಪದ ಆವರಣದೊಳಗೆ ಭಾರಿ ನಾಟಕೀಯ ಬೆಳವಣಿಗೆಗಳು ನಡೆದವು.

25ನೇ ವಯಸ್ಸಿಗೆ ಸಿವಿಲ್ ಜಡ್ಜ್: ಶಿರಸಿಯ ಸುಮಂತ್ ಐತಿಹಾಸಿಕ ಸಾಧನೆ!

sumanth manjunath naik

ಭೂಮಿಯ ಮೇಲಿನ ಅತ್ಯಂತ ಬೆಲೆಬಾಳುವ ಆಸ್ತಿ ಇದ್ದರೆ ಅದು ‘ವಿದ್ಯೆ’ ಮಾತ್ರ. ಯಾರು ಎಷ್ಟೇ ಕದ್ದರೂ ಕರಗದ, ಹಂಚಿದಷ್ಟು ಹೆಚ್ಚಾಗುವ ಈ ಜ್ಞಾನಭಂಡಾರ.

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಹಿಂದೂಗಳಿಗೆ ಮುಸ್ಲಿಂ-ಕ್ರಿಶ್ಚಿಯನ್  ಹಬ್ಬಗಳಂದು ರಜೆ….! ಮುಸ್ಲಿಂರಿಗೆ ಹಿಂದೂ-ಕ್ರಿಶ್ಚಿಯನ್‌ ಹಬ್ಬಗಳಂದು ರಜೆ….! ಇದೆಂಥಾ ವ್ಯವಸ್ಥೆ… ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ  ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ  ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ. … Read more

“ಆರ್ಥಿಕ ಸಂಕಷ್ಟ”ದ ನಡುವೆಯೇ bmtc ಅಧ್ಯಕ್ಷ-ಉಪಾಧ್ಯಕ್ಷರಿಗೆ “ಕಾರ್ ಕ್ರೇಜ್”!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more

BDA BIG SCAM: 524 ಕೋಟಿ ಬಿಡಿಎ ಅಕ್ರಮ:ತನಿಖೆಗೆ ಕ್ಯಾಪ್ಟನ್ ಮಣಿವಣ್ಣನ್ ರಿಂದ ಸಮಿತಿ ರಚನೆ, ಅಧಿಕಾರಿಗಳಿಗೆ “ಢವ ಢವ”..

ಬೆಂಗಳೂರು: ಬಿಡಿಎ ನಲ್ಲಿ ಭಾರೀ ಸದ್ದು ಮಾಡಿದ್ದ 524 ಕೋಟಿ ಅಕ್ರಮದ ತನಿಖೆಗೆ ಕೊನೆಗೂ ಸಮಿತಿ ರಚನೆಯಾಗಿದೆ. ಎಂಜಿನಿಯರಿಂಗ್ ಮೆಂಬರ್ ಶಾಂತರಾಜಣ್ಣ,ಅಭಿಯಂತರರರಾದ ಅಶೋಕ್,ಅಶೋಕ್ ಭಾಗಿ ಹಾಗೂ ಪರಶುರಾಮಪ್ಪ ಅವರ ವಿರುದ್ಧ ಕೇಳಿಬಂದಿದ್ದ ಆಪಾದನೆಗೆ ಸಂಬಂಧಿಸಿದಂತೆ ಕಮಿಷನರ್ ಕ್ಯಾಪ್ಟನ್ ಮಣಿವಣ್ಣನ್ ತನಿಖಾ ಸಮಿತಿಯೊಂದನ್ನು ರಚಿಸಿ ಆದೇಶ ಹೊರಡಿಸಿದ್ದಾರೆ. ನಿವೃತ್ತ ನ್ಯಾಯಾಧೀಶರಾದ ನಿಯಾಜ್ ಅಹಮದ್ ಅವರನ್ನೊಳಗೊಂಡ ಸಮಿತಿ 8 ವಾರದೊಳಗೆ ತನಿಖಾ ವರದಿಯನ್ನು ತಮಗೆ ಸಲ್ಲಿಸುವಂತೆ ಉಪಕಾರ್ಯದರ್ಶಿಗಳು ಸೂಚಿಸಿದ್ದಾರೆ.ಸಾಮಾಜಿಕ ಕಾರ್ಯಕರ್ತ ಶರತ್  ಬಾಬು  ಅವರ ಹೋರಾಟಕ್ಕೆ ಈ ಮೂಲಕ ಆರಂಭಿಕ … Read more

“ಸುವರ್ಣ ನ್ಯೂಸ್‌” ನಲ್ಲಿ ಬದಲಾಗ್ತಿದೆಯೇ “ಹೊಣೆಗಾರಿಕೆ”ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ “ಸಾರಥಿ”…!

ಏಷ್ಯಾ ನೆಟ್‌ ಸುದ್ದಿ ಸಂಸ್ಥೆ(ASIANETNEWS)ಯ ಹೆಮ್ಮೆಯ ಕನ್ನಡದ ವಾಹಿನಿ ಸುವರ್ಣ ನ್ಯೂಸ್‌ (SUVARNA NEWS CHANNEL)ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಾರಂಭಿಸಿದೆಯೇ.?  ಬದಲಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಇಂತದ್ದೊಂದು ಅನುಮಾನ ಮೂಡಿಸುತ್ತವೆ..ಬಹುಷಃ 2026ರ ಹೊಸ ವರ್ಷವನ್ನು ಹೊಸ ಮುಖಗಳ ಮೂಲಕವೇ ಆರಂಭಿಸಲು ಚಾನೆಲ್‌ ನ ಆಡಳಿತ ನಿರ್ದರಿಸಿದಂತಿದೆ ಎನ್ನುವ ಮಾತುಗಳು ಅಲ್ಲಿಂದಲೇ ಕೇಳಿಬರಲಾರಂಭಿಸಿವೆ..ನೂತನ ಸಾರಥಿಯ ಹುಡುಕಾಟ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ  ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌( AJITH HANUMAKKANAVAR) ಸ್ಥಾನದಲ್ಲಿ ಪಲ್ಲಟವಾದ್ರೂ ಆಶ್ಚರ್ಯವಿಲ್ಲವಂತೆ. ಸುವರ್ಣ … Read more

TRP ರೇಸ್ ನಲ್ಲಿ ಮುಗ್ಗರಿಸಿದ “ನ್ಯೂಸ್ 18 ಕನ್ನಡ”-ನಂಬರ್ 1 ಸ್ಥಾನಕ್ಕೆ ಮತ್ತೆ “ಟಿವಿ 9 ಕನ್ನಡ”

ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..? ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ … Read more

“ನ್ಯೂಸ್‌ 18” ಕನ್ನಡದ ಹೊಡೆತಕ್ಕೆ “ಪತರು”ಗುಟ್ಟಿದ “ಟಿವಿ-9” ಕನ್ನಡ..

–ಟಿವಿ-9 ಕನ್ನಡಕ್ಕೆ ಮುಖಭಂಗ-ಮರ್ಮಾಘಾತ-ಅಪಮಾನ; ಅಹಂ-ಅತಿಯಾದ ಆತ್ಮವಿಶ್ವಾಸ-ನಿರ್ಲಕ್ಷ್ಯ-ಸ್ವಯಂಕೃತಾಪರಾಧಕ್ಕೆ ಬೆಲೆ ತೆತ್ತಿತಾ..! –ಇದು ಟಿವಿ-9 ಕನ್ನಡದ ಅಧಃಪತನದ ಮುನ್ಸೂಚನೆಯೇ..? ಎಚ್ಚರಿಕೆಯ ಕರೆಗಂಟೆಯೇ..? –ಕೆಲವು “ಬ್ರಹಸ್ಪತಿ”ಗಳ “ಕಪಿಮು‍ಷ್ಠಿ”ಗೆ ಸಿಲುಕಿ ನಲುಗುತ್ತಿದೆಯೇ ಟಿವಿ9 ಕನ್ನಡ ಸಾಮ್ರಾಜ್ಯ..!?   –ಟಿವಿ 9 ಕನ್ನಡದ ಸೃಷ್ಟಿಕರ್ತ ಮಹೇಂದ್ರ ಮಿಶ್ರಾ ಇದ್ದಿದ್ದರೆ ಹೀಗಾಗುತ್ತಿತ್ತೇ..? ಇದು ಒಂದು ಚಾನೆಲ್‌ ಗೆ ಸಂಭ್ರಮವಾದ್ರೆ..ಇನ್ನೊಂದು ಚಾನೆಲ್‌ ಗೆ ಎಚ್ಚರಿಕೆಯ ಕರೆಗಂಟೆ ಎನ್ನಬಹುದೇನೋ..?ತನ್ನ ಮನೆ ಕೋಳಿ ಕೂಗಿ ದರೇನೆ ಬೆಳಗಾಗುವುದು ಎನ್ನುವ ಗಾಧೆ ಮಾತಿನಂತೆ ತಾನ್‌ ಏನ್‌ ಸುದ್ದಿ ಕೊಟ್ರೂ ಜನ ನೋಡ್ತಾರೆ..ನಂಬ್ತಾರೆ..ಎಂಬ … Read more

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

ಸುವರ್ಣ ನ್ಯೂಸ್(SUVARNA KANNADA NEWS CHANNEL), ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್( KANNADA NEWS CHANNELS) ಗಳಲ್ಲೊಂದು.ಆದರೆ ಎಷ್ಟೇ ಶ್ರಮ ಪಟ್ಟರೂ,ಏನೆಲ್ಲಾ ಸಾಹಸ ಮಾಡಿದ್ರೂ,..ಸುದ್ದಿ ಕ್ಷೇತ್ರದಲ್ಲಿ ಘಟಾನುಘಟಿಗಳೆನಿಸಿಕೊಳ್ಳುವ ಪತ್ರಕರ್ತರಿದ್ದರೂ ನಂಬರ್ ಒನ್ ಸ್ಥಾನ ಇಂದಿಗೂ ಅದಕ್ಕೆ  ಗಗನಕುಸುಮ. ಮಾದ್ಯಮ ಲೋಕದ ದಿಗ್ಗಜ ರಾಜೀವ್ ಚಂದ್ರಶೇಖರ್( RAJIV CHANDRASHEKAR) ಮಾಲೀಕತ್ವದ  ಏಷ್ಯಾ ನೆಟ್ (ASIANET NETWORK) ನೆಟ್ವರ್ಕ್ ಚಾನೆಲ್ ಸುಧಾರಣೆ, ಬೆಳವಣಿಗೆಗೆ ಕೋಟಿಗಳನ್ನು ಸುರಿದ್ರೂ ಟಿಆರ್ ಪಿ ( TRP-TELE RATING POINT)ವಿಷಯದಲ್ಲಿ ಟಿವಿ-9(TV9 KANNADA), ಪಬ್ಲಿಕ್ ಟಿವಿ( … Read more

“ನ್ಯೂಸ್‌” ಓದುವಾಗಲೇ “ಸುದ್ದಿಮನೆ”ಯಿಂದ ಆ “ಆಂಕರ್‌” ಹೊರನಡೆದಿದ್ದೇಕೆ ..!?

ಇದು ಸುದ್ದಿಮನೆಯೊಂದರಲ್ಲಿ ಇತ್ತೀಚೆಗೆ ನಡೆದಿರಬಹುದಾದ ವಿಚಿತ್ರ ಹಾಗೂ ಅಪರೂಪದ ಘಟನೆ.. ನ್ಯೂಸ್ ಬುಲೆಟಿನ್ ಮಾಡುವಾಗಲೇ ಆಂಕರ್ ವೊಬ್ಬ ಹೊರನಡೆದಿದ್ದಾನೆ.ಆತ ಕೆಲಸ ಮಾಡುತ್ತಿರುವ ಚಾನೆಲ್ ಹೆಚ್ಚೇನೂ ಪ್ರಚಲಿತದಲ್ಲಿಲ್ಲದ ಕಾರಣಕ್ಕೇನೋ ಅದು ದೊಡ್ಡಮಟ್ಟದ ಸುದ್ದಿಯಾಗಿಲ್ಲ.. ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾನೆ. ಹಾಗೆಯೇ ತನ್ನ ನಿಲುವು- ನಿರ್ದಾರವನ್ನು ಗಟ್ಟಿದ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ. ಸುದ್ದಿಮನೆಗಳಲ್ಲಿ ನಡೆವ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆ ಎರಡರ ಮೇಲೂ ಬೆಳಕು ಚೆಲ್ಲುವಂತ ಜವಾಬ್ದಾರಿಯುತ ಕೆಲಸ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ … Read more