advertise here

Search

EXCLUSIVE…BMTC ಲಾಕ್‌ಡೌನ್‌ “ಗೋಲ್ಮಾಲ್‌”ಮುಖ್ಯಲೆಕ್ಕಾಧಿಕಾರಿ SUSPEND…ಬಾಡಿಗೆ ವಿನಾಯ್ತಿ” ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?


ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯಲ್ಲಿ ನಡೆದಿತೆನ್ನಲಾದ ಮತ್ತೊಂದು ಭಾರೀ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರ್ಥಿಕ ವಿಭಾಗದ ಮುಖ್ಯಾಧಿಕಾರಿಯವರ “ತಲೆದಂಡ”ವಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಅದೇ ವಿಭಾಗದ ಇನ್ನಷ್ಟು ಅಧಿಕಾರಿ ಸಿಬ್ಬಂದಿ ವಿರುದ್ದವೂ ಕಠಿಣ ಕ್ರಮಕ್ಕೆ ಆದೇಶವಾಗಿದೆ ಯಂತೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ ಪ್ರಸಾದ್‌ ಅವರ ಆದೇಶದ ಮೇರೆಗೆ ಈ ಮಹತ್ವದ ಆದೇಶ ಹೊರಬಿ ದ್ದಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ  ಲಭಿಸಿದೆ.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪ್ರಸಾದ್
ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಪ್ರಸಾದ್

ಲಾಕ್‌ ಡೌನ್‌ ವೇಳೆ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯ್ತಿ ನೀಡುವ ವಿಚಾರದಲ್ಲಿ 16 ಕೋಟಿ ಹಗರಣ ನಡೆದಿದ್ದು ಎಲ್ಲರಿ ಗೂ ಗೊತ್ತಿರೋದೆ.ಆ ಪ್ರಕರಣ ಸಂಬಂಧ ವಾಣಿಜ್ಯ ವಿಭಾಗದ 7 ಅಧಿಕಾರಿ-ಸಿಬ್ಬಂದಿ ವಿರುದ್ಧ ಎಫ್‌ ಐ ಆರ್‌ ದಾಖಲಾಗಿತ್ತು. ಇದು ಬಿಎಂಟಿಸಿ ಇತಿಹಾಸದಲ್ಲೇ ಭಾರೀ ದೊಡ್ಡ ಸುದ್ದಿಯನ್ನು ಮಾಡಿತ್ತಲ್ಲದೇ ಎಂಡಿ ಸತ್ಯವತಿ ಹಾಗೂ ರಮ್ಯ ಬಗ್ಗೆ ಹೊಗಳಿ ಕೆ ಮಾತು ಕೇಳಿಬರೊಕ್ಕೆ ಕಾರಣವಾಗಿತ್ತು.ಆ ಪ್ರಕರಣದ ಬಗ್ಗೆ ಸುಧೀರ್ಘ ವಿಚಾರಣೆ ಪ್ರಗತಿಯಲ್ಲಿದೆ.

ಈ ಪ್ರಕರಣ ಇನ್ನೂ ಹಸಿ ಹಸಿ ಇರುವಾಗಲೇ ಅದೇ ಲಾಕ್‌ ಡೌನ್‌ ಟೈಮ್ನಲ್ಲಿ ನಡೆದಿದ್ದ ಮತ್ತೊಂದು ಹಗರಣವನ್ನು ಸತ್ಯವತಿ ಅವರು ಹೊರತೆಗೆದಿದ್ದರಂತೆ.ಆ ಹಗರಣದಲ್ಲಿ ವಾಣಿಜ್ಯ ವಿಭಾಗದವರ ಬದಲು ಹಣಕಾಸು ವಿಭಾಗದ ಅಧಿಕಾರಿ-ಸಿಬ್ಬಂದಿ ಶಾಮೀಲಾಗಿರುವುದನ್ನು ಅವರು ಪತ್ತೆ ಮಾಡಿದ್ದರಂತೆ.ಅದು ಕೂಡ ಸುಮಾರು 6-8 ಕೋಟಿಯಷ್ಟು ಬೃಹತ್‌ ಹಗರಣ ಎನ್ನಲಾಗಿದ್ದು ಈ  ಪ್ರಕರಣದಲ್ಲಿಯೂ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಆರ್ಥಿಕ ವಿಭಾಗದ ಅಧಿಕಾರಿಗಳು ಬಾಡಿಗೆ ವಿನಾಯ್ತಿ ನೀಡಿರುವುದನ್ನು ಸತ್ಯವತಿ ಅವರು ಪತ್ತೆ ಮಾಡಿದ್ದರಂತೆ.

ಬಿಎಂಟಿಸಿ ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್‌ ಖುದ್ದೂಸ್
ಬಿಎಂಟಿಸಿ ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್‌ ಖುದ್ದೂಸ್
ಲೆಕ್ಕಪತ್ರ ವಿಭಾಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದ ಹಿಂದಿನ ಎಂಡಿ ಸತ್ಯವತಿ
ಲೆಕ್ಕಪತ್ರ ವಿಭಾಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದ ಹಿಂದಿನ ಎಂಡಿ ಸತ್ಯವತಿ

“ಎಂಪ್ಯಾನಲ್‌” ಅಂದ್ರೆ ಬಿಎಂಟಿಸಿ ವ್ಯಾಪ್ತಿಯಲ್ಲಿ  ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ವಹಿವಾಟುದಾರರಿಗೆ ಲಾಕ್‌ ಡೌನ್‌ ಟೈಮ್ನಲ್ಲಿ ಅವರು ಸಂಸ್ಥೆಗೆ ಪಾವತಿಸಬೇಕಿದ್ದ ಶುಲ್ಕವನ್ನು ಆರ್ಥಿಕ ನಷ್ಟದ ಕಾರಣಕ್ಕೆ ಮತ್ತೆ ವಹಿವಾಟುದಾರರಿಗೆ ಹಿಂಪಾವ ತಿಸುವ “ಕ್ರೆಡಿಟ್‌ ನೋಟ್”‌ ಅಡಿಯಲ್ಲಿ ಲೆಕ್ಕಪತ್ರ ವಿಭಾಗದ ಅಧಿಕಾರಿ ಸಿಬ್ಬಂದಿ ಅಕ್ರಮ ಎಸಗಿದ್ದಾರೆ.ತನ್ನ ಗಮನಕ್ಕೆ ತಾರದೆ ಕ್ರೆಡಿಟ್‌ ನೋಟ್‌ ನೀಡಿ 6-8 ಕೋಟಿ ವಂಚನೆ ಮಾಡಿದ್ದಾರೆ ಎಂದು ಸತ್ಯವತಿ ಅವರು ಪ್ರಧಾನ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು.

ALSO READ :  ರಜನಿಕಾಂತ್ `ವೆಟ್ಟಿಯಾನ್’: ಮೊದಲ ದಿನವೇ 30 ಕೋಟಿ ಗಳಿಕೆ!

ಲಾಕ್ ‍‍‍ಡೌನ್‌ ನ್ನೇ ನೆಪ ಮಾಡಿಕೊಂಡು ವಾಣಿಜ್ಯ ವಿಭಾಗದ ಅಧಿಕಾರಿಗಳು ನಡೆಸಿದ ಮಾದರಿಯಲ್ಲೇ ಆರ್ಥಿಕ ವಿಭಾಗದ ಅಧಿ ಕಾರಿ-ಸಿಬ್ಬಂದಿ ಮತ್ತೊಂದು ಹಗರಣ ಎಸಗಿರುವುದನ್ನು ಪತ್ತೆ ಮಾಡಿ ಅದರ ಬಗ್ಗೆ ಸಂಪೂರ್ಣವಾದ ವಿವರವನ್ನು ಎಳೆಎಳೆ ಯಾಗಿ  ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಅವರಿಗೆ  ಪತ್ರದ ಮೂಲಕ ತಿಳಿಸಿದ್ದ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯವತಿ ಮೇಡಮ್‌ ಮುಖ್ಯಾಧಿಕಾರಿ ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದರೆನ್ನಲಾದ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದರು.

ಸತ್ಯವತಿ ಅವರು ಲೆಕ್ಕಪತ್ರ ವಿಭಾಗದವರಿಂದ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ತಮಗೆ ಪತ್ರ ಬರೆದು ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದನ್ನು ಸಾರಿಗೆ ಇಲಾಖೆ ಪ್ರಧಾನಕಾರ್ಯದರ್ಶಿ ಪ್ರಸಾದ್‌ ಅವರೇ  ಮಾದ್ಯಮ ಗಳ ಮುಂದೆ ಒಪ್ಪಿಕೊಂಡಿದ್ದರು.ಅಷ್ಟೇ ಅಲ್ಲ ಸಚಿವರಿಗೆ ಆ ಪತ್ರವನ್ನು ರವಾನಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಯೂ ಹೇಳಿದ್ರು.ಮಾದ್ಯಮಗಳಿಗೆ ಮಾಹಿತಿ ನೀಡಿದ ಮೂರ್ನಾಲ್ಕು ದಿನಗಳಲ್ಲೇ  ಲೆಕ್ಕಪತ್ರ ವಿಭಾಗದ ಹೆಡೆಮುರಿ ಕಟ್ಟುವ ಕೆಲಸ ಮಾಡಿ ನಿಬ್ಬೆರಗಾಗುವಂತೆ ಮಾಡಿದ್ದಾರೆ.

6-8 ಕೋಟಿಯಷ್ಟು ಹಗರಣವನ್ನು ಬಯಲಿಗೆಳೆದ ಸತ್ಯವತಿ ಅವರ ದಕ್ಷತೆ ಬೆನ್ನಲ್ಲಿ ಮಾದ್ಯಮಗಳು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರನ್ನು ಈ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದ್ದವು.ಕೆಲ ನಿಮಿಷಗಳ ಮುಂದೆ ಮಾಹಿತಿ ಅನ್ವಯ ಎಂಡಿ ಸತ್ಯ ವತಿ ಅವರ ವರದಿ ಮೇರೆಗೆ ಎಲ್ಲಾ ಅಂಶಗಳನ್ನುಕೂಲಂಕುಷವಾಗಿ ಪರಿಗಣಿಸಿದ ಬಳಿಕ ಪ್ರಸಾದ್‌ ಅವರು ಬಿಎಂಟಿಸಿ ಆಡಳಿತ ಕ್ಕೆ ಲೆಕ್ಕಪತ್ರ ವಿಭಾಗದ ಮುಖ್ಯಾಧಿಕಾರಿಗಳು ಸೇರಿದಂತೆ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಇತರೆ ಅಧಿಕಾರಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ  ಸೂಚಿಸಿದ್ದಾರೆ ಎನ್ನಲಾಗಿದೆ.

ಲಾಕ್‌ ಡೌನ್ ಸಮಯವನ್ನು ಬಿಎಂಟಿಸಿಯ ಕೆಲವು ಅಪ್ರಮಾಣಿಕ ಅಧಿಕಾರಿ ಸಿಬ್ಬಂದಿ ಹೇಗೆಲ್ಲಾ ಮಿಸ್ಯೂಸ್‌ ಮಾಡಿಕೊಂಡ ರೆನ್ನುವುದು ಕೊನೆಗೂ ಬಯಲಾಗಿದೆ.ಆದ್ರೆ ನಮಗೆ ಎನ್ನಿಸುವ ವಿಚಾರ ಎಂದ್ರೆ ಅಕ್ರಮ ನಡೆಸಿರುವವರ ಅಂದಾದರ್ಬಾರ್‌ ಇಷ್ಟಕ್ಕೆ ನಿಂತಂತೆ ಕಾಣುತ್ತಿಲ್ಲ..ಇದರ ಆಳವನ್ನು ಇನ್ನಷ್ಟು ಅಗೆದರೆ ಮೀನುಗಳು ಜತೆ ತಿಮಿಂಗಲಗಳೂ ಹೊರಬರುವ ಸಾ‍ಧ್ಯ ತೆಗಳಿವೆ.ನೂತನ ಎಂಡಿ ರಾಮಚಂದ್ರನ್‌ ಅವರು ಈ ಕೆಲಸಕ್ಕೆ ಕೈ ಹಾಕುವಂತಾಗಲಿ.


Political News

ಅಕ್ರಮ ಖಾತಾ ವರ್ಗಾವಣೆ ಆರೋಪಕ್ಕೆ ತುತ್ತಾದ AC ದುರ್ಗಶ್ರೀ,ತಹಸೀಲ್ದಾರ್ ವಿಭಾ ರಾಠೋಡ್ ವಿರುದ್ಧ ಮತ್ತೆರೆಡು ದೂರು…ಸಾಕ್ಷ್ಯವಿದ್ರೂ ಕ್ರಮ ಕೈಗೊಳ್ಳದೆ ಸಚಿವ ಕೃಷ್ಣ ಭೈರೇಗೌಡ ಮೌನ..?!

DCM ಆಪ್ತ ಬಿ.ಎಸ್ .ಪ್ರಹ್ಲಾದ್ ಕಚೇರಿ ಮೇಲೆ ಇ.ಡಿ ರೇಡ್ ಗೆ ಬೆಚ್ಚಿಬಿದ್ದ ಭ್ರಷ್ಟರು: ನಿಟ್ಟುಸಿರು ಬಿಟ್ಟ ಸಂತ್ರಸ್ಥ ಅಧಿಕಾರಿ ಸಿಬ್ಬಂದಿ..

ಪೋಡಿ ಇಲ್ಲ,ಪ್ರತ್ಯೇಕ ಸರ್ವೆ ಸ್ಕೆಚ್ ಆಗಿಲ್ಲ-ಸರ್ವೆ ನಂಬರ್ ಕೊಟ್ಟಿಲ್ಲ, GPA ಮೇಲೆ ಖಾಸಗಿ ಬಿಲ್ಡರ್ಸ್ ಗೆ ಎಸಿ, ತಹಸೀಲ್ದಾರ್ ರಿಂದ ಖಾತಾ ವರ್ಗಾವಣೆ.!

ಬಣ್ಣಗಳಲ್ಲಿ ಲೀನವಾದ Btv ಮೇಕಪ್‌ಮ್ಯಾನ್‌ ಚೇತನ್

Exclusive: ಅಕ್ರಮ-ಅವ್ಯವಸ್ಥೆಯ ಗೂಡಾಯ್ತಾ ಪಿಯು ಇಲಾಖೆ? ಏನ್ ಮಾಡುತ್ತಿದ್ದೀರಾ ಶಿಕ್ಷಣ ಸಚಿವರೇ!?

BMTC ಸಿಬ್ಬಂದಿಯಿಂದಲೇ ಬಸ್ ಕ್ಲೀನಿಂಗ್.. ಸ್ವಚ್ಛತೆಗೆಂದೇ ಕೊಟ್ಟ ಟೆಂಡರ್ ಹಣ ಎಲ್ಲೋಯ್ತು!?

Sahyadri science College alumni meet: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಮಹಾಸಮಾಗಮಕ್ಕೆ ಮುಹೂರ್ತ ಫಿಕ್ಸ್

Puneeth rajkumar award: ನ್ಯೂಸ್ ಚಾನೆಲ್‌ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಕ್ಯಾಮೆರಾಮನ್ ಮಿತ್ರರಿಗೆ ಪುನೀತ್ ರಾಜ್‌ಕುಮಾರ್ ಪ್ರಶಸ್ತಿ

Scroll to Top