ನ್ಯಾಯಮೂರ್ತಿ ಪ್ರಸನ್ನ ವರಾಳೆ ಅವರ ಅಂತಃಕರಣಕ್ಕೆ ಕರುನಾಡು ಮೆಚ್ಚುಗೆ

ಬೆಂಗಳೂರು: ಹೈ ಕೋರ್ಟ್ ನಲ್ಲಿ ಇಂಥಾ ಘಟನೆಗಳು ನಡೆಯುವುದು ಅಪರೂಪ ಇರಬೇಕು.ಅಂತದ್ದೇ ಒಂದು ಘಟನೆಗೆ ಹೈ ಕೋರ್ಟ್ ನಲ್ಲಿ ನಡೆದ ಕಲಾಪವೇ ಸಾಕ್ಷಿ.ಮಲಗುಂಡಿಯಲ್ಲಿ ಜನರನ್ನು ಇಳಿಸಿ ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿರುವ ಬಗ್ಗೆ ಮಾದ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮೇರೆಗೆ ನಡೆಯುತ್ತಿದ್ದ ಕಲಾಪದ ವೇಳೆ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ. ನ್ಯಾಯಮೂರ್ತಿಗಳಾದ ಪ್ರಸನ್ನ ವರಾಳೆ ಅವರು ಕಲಾಪದ ವೇಳೆ ಗದ್ಗಿತರಾದ ಎಂದು ಮಾದ್ಯಮಗಳು ಮಾಡಿದ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನ್ಯಾಯಮೂರ್ತಿ ಕೃಷ್ಣದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠದಲ್ಲಿ ಕಲಾಪ ನಡೆಯುವಾಗ ಅಪರೂಪದ ಪ್ರಸಂಗ ನಡೆದಿದೆ ಎನ್ನುವುದು ಮಾದ್ಯಮಗಳಲ್ಲಿ ವರದಿಯಾಗಿದೆ.ಹಣ ಕೊಟ್ಟರೆ ಯಂತ್ರಗಳಲ್ಲಿ ಮಲವನ್ನು ಸ್ವಚ್ಛಗೊಳಿಸುವ ವ್ಯವಸ್ಥೆಗಳಿವೆ.ಹಾಗಿರುವಾಗ ಕೆಲ ಸಾವಿರ ಉಳಿಸಲಿಕ್ಕಾಗಿ ಜನ ಅಮಾಯಕರನ್ನು ಮಲಗುಂಡಿಗೆ ಇಳಿಸುವುದು ಅಮಾನುಷವಲ್ಲವೇ.? ಇವತ್ತಿನ ಕಾಲಘಟ್ಟದಲ್ಲೂ ಇಂಥದ್ದೊಂದು ಅಮಾನುಷ ವ್ಯವಸ್ಥೆ ಇದೆ ಎಂದರೆ ಆಶ್ವರ್ಯದೊಂದಿಗೆ ಆತಂಕ ಉಂಟಾಗುತ್ತದೆ ಎಂದು ವರಾಳೆ ಅಭಿಪ್ರಾಯಿಸಿದರು.

ಕಲಾಪ ನಡೆಯುತ್ತಿದ್ದ  ವೇಳೆ ಒಂದು ಹಂತದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗ  ವರಾಳೆ ಗದ್ಗಿತರಾದರು.ಮಲಗುಂಡಿ ಸ್ವಚ್ಛತೆ ಘಟನೆ ಅವರನ್ನು ತುಂಬಾ ಕಾಡಿದೆ.ಇಂಥಾ ಕೃತ್ಯಕ್ಕೆ ಅಮಾಯಕರನ್ನು ಬಳಸಿಕೊಳ್ಳುವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸದರೆನ್ನುವ ಸಂಗತಿಗಳು ಮಾದ್ಯಮಗಳಲ್ಲಿ ವರದಿಯಾಗಿದೆ.

ಕೋರ್ಟ್ ನಲ್ಲಿ ಕಲಾಪ ನಡೆಯುವಾಗ,ತೀರ್ಪು ಕೊಡುವಾಗ ಅನೇಕ ನ್ಯಾಯಮೂರ್ತಿಗಳು ಅತ್ತಿರುವುದುಂಟು,ಭಾವೋದ್ವೇಗಕ್ಕೆ ಒಳಗಾಗಿರುವುದುಂಟು.ಅಸಹನೆಯಿಂದ ಆಕ್ರೋಶ ವ್ಯಕ್ತಪಡಿಸಿರುವಂಥ ಘಟನೆಗಳು ನಡೆದಿವೆ.ಇದರ ನಡುವೆ ನ್ಯಾಯಮೂರ್ತಿ ವರಾಳೆ ಅವರು ಗದ್ಗದಿತರಾದೆನ್ನುವ ಸಂಗತಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ಅವರ ಅಂತಃಕರಣಕ್ಕೆ ಎಲ್ಲರೂ ಅಭಿಮಾನ ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *