ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಓಮರ್ ಅಬ್ದುಲ್ಲಾ!

ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. 370ನೇ ವಿಧಿ ರದ್ದುಪಡಿಸಿ 10 ವರ್ಷದ ನಂತರ ಜಮ್ಮು ಕಾಶ್ಮೀರದಲ್ಲಿ ಹೊಸ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಯಿತು. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಓಮರ್ ಅಬ್ದುಲ್ಲಾ 8 ಶಾಸಕರ ಜೊತೆ ಪ್ರಮಾಣ ವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಿದರು. ಮೈತ್ರಿ ಪಕ್ಷವಾದ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಎಐಸಿಸಿ … Read more

ಬಿಜೆಪಿ ಆಡಳಿತದಲ್ಲಿ 619 ಕೋಮುಗಲಭೆಯ ಕೇಸ್ ವಾಪಸ್: ಕಾಂಗ್ರೆಸ್ ಆರೋಪ

ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ, ಭಜರಂಗದಳ, ಶ್ರೀರಾಮಸೇನೆ ಮತ್ತು ಇತರೆ ಸಂಘಟನೆಗಳ ಕಾರ್ಯಕರ್ತರ ಮೇಲೆ 949 ಕೋಮುಗಲಭೆ ಸಂಬಂಧಿ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ 619 ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಿಪ್ಪ ಆಡಳಿತದಲ್ಲಿ ಅತೀ ಹೆಚ್ಚು 385 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ಸರ್ಕಾರ ನೀಡಿದ ಲಿಖಿತ ಉತ್ತರ … Read more

ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ: ಹೊಸ ಸರ್ಕಾರ ರಚನೆಗೆ ಸಿದ್ಧತೆ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ 10 ವರ್ಷಗಳಿಂದ ಜಾರಿಯಲ್ಲಿದ್ದ ರಾಷ್ಟ್ರಪತಿ ಆಡಳಿತವನ್ನು ಭಾನುವಾರ ಅಂತ್ಯಗೊಂಡಿದೆ. ಇತ್ತೀಚೆಗೆ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ಅಂತ್ಯಗೊಂಡಿದ್ದು, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಬಹುಮತ ಪಡೆದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರಪತಿ ಆಡಳಿತವನ್ನು ವಾಪಸ್ ಪಡೆಯುವ ಬಗ್ಗೆ ಭಾನುವಾರ ಅಧಿಸೂಚನೆ ಹೊರಡಿಸಿದೆ. ಸಂವಿಧಾನದ ನಿಯಮ 239 ಮತ್ತು 239ಎ ಅನ್ವಯ ಕೇಂದ್ರ ಸರ್ಕಾರ ಹೊರಡಿಸಿದ್ದ ಕೇಂದ್ರಾಡಳಿತ ಪ್ರದೇಶದ ಆದೇಶ 2019, ಅಕ್ಟೋಬರ್ 31ರಂದು ರದ್ದಾಗಲಿದೆ. ಆದರೆ … Read more

POLITICAL EXCLUSIVE..”ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ … Read more

ಯಶವಂತಪುರ ಬೈ ಎಲೆಕ್ಷನ್‌ ಕನ್ಫರ್ಮ್….? S.T.ಸೋಮಶೇಖರ್‌ ಪಕ್ಕಾ..ಆದ್ರೆ ಎದುರಾಳಿ ಮೈತ್ರಿ ಅಭ್ಯರ್ಥಿ ಯಾರು…? ಜವರಾಯಿಗೌಡ/ನಿಖಿಲ್‌ ಕುಮಾರಸ್ವಾಮಿನಾ..?!

*3 ಬಾರಿ ಸೋತರೂ ಮತ್ತೊಂದು ಗೆಲುವಿನ ಅವಕಾಶದ ನಿರೀಕ್ಷೆಯಲ್ಲಿ ಜವರಾಯಿಗೌಡ.. *ಜವರಾಯಿಗೌಡರನ್ನೇ ಅಭ್ಯರ್ಥಿಯನ್ನಾಗಿಸಿ ದಳಪತಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ..? *ಜವರಾಯಿಗೌಡರಿಗಿಂತ ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿದ್ದೇವೆ ಎಂದು ಶಾಕ್‌ ಕೊಡ್ತಾರಾ..? *ಬಿಜೆಪಿ ಜವರಾಯಿಗೌಡ ಅವರನ್ನೇ ತಮ್ಮ ಮೈತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳುತ್ತಾ..? *ದಳಪತಿಗಳು ಕೈ ಕೊಟ್ರ ಜವರಾಯಿಗೌಡ ನಿಲುವೇನು..? ಬೇರೆ ಅಭ್ಯರ್ಥಿಯನ್ನು ಒಪ್ಪಿಕೊಳ್ತಾರಾ..? ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಶಾಸಕರು ಪಕ್ಷದ ಸಿದ್ದಾಂತಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಿದ್ದಂತೆ ಆಯಾ ಕ್ಷೇತ್ರ ಗಳಲ್ಲಿ ಬೈ ಎಲೆಕ್ಷನ್ ಆಗೋದು ಪಕ್ಕಾ … Read more

“ಅಡ್ಡಮತದಾನ”ಕ್ಕೆ ಕೋಟ್ಯಾಂತರ ಆಮಿಷ: ಮೈತ್ರಿ ಅಭ್ಯರ್ಥಿ ಸೇರಿ ನಾಲ್ವರ ವಿರುದ್ಧ FIR

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರಿಗೆ ಆಮೀಷ ಒಡ್ಡಲಾಯಿತು ಎನ್ನುವ  ಆರೋಪದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡರು ನೀಡಿದ್ದ ದೂರಿನ ಅನ್ವಯ ರಾಜ್ಯಸಭಾ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ FIR ದಾಖಲಾಗಿದೆ.ವಿಧಾನಸೌಧ ಪೊಲೀಸ್ ಠಾಣೆಯಲ್ಲಿ  ಕೇಸ್ ದಾಖಲಿಸಲಾಗಿದ್ದು ದೂರಿನ ಹಿನ್ನಲೆಯಲ್ಲಿ ಎಫ್ ಐ ಆರ್ ಲಾಡ್ಜ್ ಮಾಡಲಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ  ಪಕ್ಷೇತರ ಶಾಸಕರಿಗೆ ಬಿಜೆಪಿ ಮುಖಂಡರು ಅಡ್ಡಮತದಾನ ಮಾಡೊಕ್ಕೆ ಕೋಟ್ಯಾಂತರ ಆಮಿಷ ಒಡ್ಡಿದ್ದಾರೆ.ಆ ಪೈಕಿ  ಮಾಜಿ ಗೃಹ ಸಚಿವ ಎಂ.ಪಿ ಪ್ರಕಾಶ್ ಪುತ್ರಿ ಹಾಗೂ … Read more