“ರಿಪಬ್ಲಿಕ್ ಕನ್ನಡ”ಕ್ಕೆ ಹಿರಿಯ ಪತ್ರಕರ್ತ ಶಿವಶಂಕರ್ ಎಂಟ್ರಿ.. ಗರಿಗೆದರಿದ “ಮರುಹುಟ್ಟಿ”ನ ನಿರೀಕ್ಷೆ..
ನಾವಿಕನಿಲ್ಲದ ದೋಣಿಯಂತಾಗಿದ್ದ ರಿಪಬ್ಲಿಕ್ ಕನ್ನಡ(republic tv)ಕ್ಕೆ ಸಮರ್ಥ ಸಾರಥಿ ಸಿಕ್ಕಿದ್ದಾರೆಂದು ಅನ್ನಿಸುತ್ತೆ.ಟಿವಿ೯ ಕನ್ನಡ ಚಾನೆಲ್ ಸ್ಥಾಪಕರಲ್ಲೊಬ್ಬರಾಗಿದ್ದ ಹಿರಿಯ ಪತ್ರಕರ್ತ ಶಿವಶಂಕರ್( senior journalist shivashankar) ರಿಪಬ್ಲಿಕ್ ಕನ್ನಡದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದಾರೆ.ನಿನ್ನೆ ಅಂದರೆ ಏಪ್ರಿಲ್ ೨ ರಂದು ಅಧಿಕಾರ ವಹಿಸಿಕೊಂಡಿರುವ ಶಿವಶಂಕರ್ ಮೇಲೆ ಮೊಣಭಾರದ ಜವಾಬ್ದಾರಿಗಳಿವೆ…ಆತ್ಮಸ್ಥೈರ್ಯಕ್ಕೆ ಸವಾಲೆಸೆಯುವ ಮಟ್ಟಿಗಿನ ಗಂಭೀರ ಸವಾಲುಗಳಿರುವುದಂತೂ ಸತ್ಯ..ಏಕೆಂದರೆ ಶೂನ್ಯದಿಂದ ಚಾನೆಲ್ ನ್ನು ಕಟ್ಟಿ ಬೆಳೆಸಬೇಕಾದ ಸ್ಥಿತಿಯಲ್ಲಿದೆ ರಿಪಬ್ಲಿಕ್ ಕನ್ನಡದ ಸಧ್ಯದ ಸ್ಥಿತಿ.ಹಾಗಾಗಿ ಶಿವಶಂಕರ್ ಅವರ ಪಯಣ ಅಂದುಕೊಂಡಷ್ಟು ಸಲೀಸಾಗಿಯಂತೂ ಇಲ್ಲ. ಶಿವಶಂಕರ್ ಕನ್ನಡ … Read more