29 ಪತ್ರಕರ್ತರಿಗೆ “ಪ್ರೆಸ್‌ಕ್ಲಬ್ ಜೀವಮಾನ ಸಾಧನೆ” ಪ್ರಶಸ್ತಿ:ಡಿಸೆಂಬರ್ 31 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ   ಕಾರ್ಯಕ್ರಮ  ಉದ್ಘಾಟನೆ-ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರಿಂದ  ಪ್ರಶಸ್ತಿ ಪ್ರಧಾನ  

ಬೆಂಗಳೂರು:ಪ್ರತಿ ವರ್ಷದಂತೆ ಈ ಬಾರಿಯೂ  ಪ್ರೆಸ್‌ಕ್ಲಬ್ ಆಫ್ ಬೆಂಗಳೂರು  ತನ್ನ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.ಹಾಗೆಯೇ ಪತ್ರಿಕೋದ್ಯಮದಲ್ಲಿ  ಗಣನೀಯ ಸಾಧನೆ ಮಾಡಿದ ಪತ್ರಕರ್ತರನ್ನು ಗೌರವಿಸುವ ಸಂಪ್ರದಾಯ ಮುಂದುವರೆಸಿದೆ. ಈ ಪೈಕಿ   ಕಾಂಗ್ರೆಸ್  ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಚುನಾವಣಾ ಚಾಣಕ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ  ಡಿ.ಕೆ. ಶಿವಕುಮಾರ್ ಅವರನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಹಾಗೆಯೇ  ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗೆ ಹಿರಿಯ ರಾಜಕಾರಣಿ ಶಾಸಕ ಹಾಗೂ ಮಾಜಿ ಸಚಿವ ಶ್ರೀ ಶಾಮನೂರು ಶಿವಶಂಕರಪ್ಪ  ಪ್ರೆಸ್‌ಕ್ಲಬ್ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದರ ಜತೆಗೆ ಪತ್ರಿಕಾರಂಗದಲ್ಲಿ ಸುದ್ದಿಮನೆ ಒಳಗೆ ಕುಳಿತು ಮಾಡುವಷ್ಟೇ ಪರಿಶ್ರಮವನ್ನು ಪತ್ರಿಕೆಗಳು ಪ್ರತಿಯೋರ್ವರ ಮನೆ-ಮನಗಳನ್ನು ತಲುಪುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವ ಪತ್ರಿಕಾ ವಿತರಕರಿಗೆ ಇದೇ ಮೊದಲ ಬಾರಿಗೆ  ಅಪಘಾತವಿಮೆ ಯೋಜನೆ ಪ್ರಕಟಿಸಿದ ಕಾರ್ಮಿಕ ಸಚಿವ  ಸಂತೊಷ್ ಲಾಡ್ ಹಾಗೂ ಏಷ್ಯಾ ಬ್ಯಾಸ್ಕೇಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ ಡಾ. ಕೆ. ಗೋವಿಂದರಾಜು ಅವರಿಗೆ ಪ್ರೆಸ್‌ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ.

ಡಿಸೆಂಬರ್ 31 ರಂದು ಬೆಳಗ್ಗೆ 11:30ಕ್ಕೆ ಪ್ರೆಸ್‌ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು  ಉದ್ಘಾಟಿಸಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ಜಮೀರ್ ಅಹಮದ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ

ಇನ್ನುಳಿದಂತೆ ಮಾದ್ಯಮ ಕ್ಷೇತ್ರದಲ್ಲಿ  ಅಪ್ರತಿಮ ಸೇವೆ ಸಲ್ಲಿಸಿರುವ 29 ಪತ್ರಕರ್ತರನ್ನು  ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಈ ಬಾರಿ ಮೇಲ್ಕಂಡ ಪ್ರಶಸ್ತಿಗೆ ಭಾಜನರಾದ ಪತ್ರಕರ್ತರ ವಿವರ ಕೆಳಕಂಡಂತಿದೆ.

1. ಸದಾಶಿವ ಶೆಣೈ. ಕೆ

2. ಆರ್. ಶಂಕರ್

3. ಡಾ. ಕೂಡ್ಲಿ ಗುರುರಾಜ್

4. ಕೆ.ಕೆ ಮೂರ್ತಿ (ಕಂ.ಕ ಮೂರ್ತಿ)

5. ನಾಗರಾಜ. ಎಂ (ಪ್ರಜಾವಾಣಿ)

6. ರೂಪಾ ಆರ್. ರಾವ್

7. ಸತೀಶ್‌ಕುಮಾರ್ ಬಿ.ಎಸ್

8. ರಾಕೇಶ್ ಪ್ರಕಾಶ್ (ಟೈಮ್ಸ್ ಆಫ್ ಇಂಡಿಯಾ)

9. ರಮೇಶ್ ಬಿ.ಎನ್ (ಅಭಿಮನ್ಯು)

10. ಕಿರಣ್ ಹೆಚ್.ವಿ

11. ಚನ್ನಕೃಷ್ಣ ಪಿ.ಕೆ

12. ವಿಜಯ್‌ಕುಮಾರ್ ಮಲಗಿಹಾಳ್

13. ಮನೋಜ್‌ಕುಮಾರ್

14. ಮುತ್ತು. ಪಿ

15. ಶ್ರೀಕಂಠ ಶರ್ಮ. ಆರ್

16. ಸಿದ್ದೇಶ್‌ಕುಮಾರ್ ಹೆಚ್.ಪಿ

17. ಅಫ್ಶಾನ್ ಯಾಸ್ಮಿನ್

18. ಚಂದ್ರಶೇಖರ್. ಎಂ

19. ಭಾಸ್ಕರ್ ಕೆ.ಎಸ್

20. ಸುಭಾಷ್ ಹೂಗಾರ್

21. ಪ್ರಸನ್ನಕುಮಾರ್ ಲೂಯಿಸ್

22. ಶಂಕರೇಗೌಡ ಹೆಚ್.ಡಿ

23. ಜನಾರ್ಧನಾಚಾರಿ ಕೆ.ಎಸ್

24. ಲಿಂಗರಾಜು ಡಿ. ನೊಣವಿನಕೆರೆ

25. ಮೋಹನ್‌ರಾವ್ ಸಾವಂತ್. ಜಿ

26. ಅನಂತರಾಮು ಸಂಕ್ಲಾಪುರ್. ಎಲ್

27. ಕೌಶಿಕ್. ಆರ್ (ಸ್ಪೋರ್ಟ್ಸ್)

28. ಲಕ್ಷ್ಮಿ ಸಾಗರ ಸ್ವಾಮಿಗೌಡ

29. ಚಿದಾನಂದ ಪಟೇಲ್

 

Spread the love

Leave a Reply

Your email address will not be published. Required fields are marked *