ಜೀವ ಬೆದರಿಕೆಯಿದೆ, ರಕ್ಷಣೆ ಕೊಡಿ! ಪೊಲೀಸ್ ಕಮಿಷನರ್‌ಗೆ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮನವಿ

ಬೆಂಗಳೂರು: ನನಗೆ ಜೀವ ಬೆದರಿಕೆ ಇದೆ..ನನಗೆ ಅಭಿಮಾನಿಗಳು ಹೆಚ್ಚಾಗಿರುವಷ್ಟೇ ನನ್ನ ಏಳಿಗೆ-ನೇರವಂತಿಕೆ ಸಹಿಸದೆ ಸಾಕಷ್ಟು ಶತೃಗಳು ಹುಟ್ಟಿಕೊಂಡಿದ್ದಾರೆ.ಹಾಗಾಗಿ ನನಗೆ ಸೂಕ್ತ ಭದ್ರತೆ ಬೇಕು ಎಂದು ಬಿಗ್ ಬಾಸ್ ಸ್ಪರ್ದಿ ಜಗದೀಶ್ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಜಗದೀಶ್ ಅವರು, ಅನ್ಯಾಯದ ವಿರುದ್ಧ ಮೊದಲಿಂದಲು ಹೋರಾಡುತ್ತಿರುವವನು ನಾನು..ನನ್ನ ಮೇಲೆ ಸಾಕಷ್ಟು ಹಲ್ಲೆ ಯತ್ನ ನಡೆದಿವೆ.ನನ್ನ ಮೇಲಿನ ದ್ವೇಷಕ್ಕೆ ನನ್ನ ಮಗನ  ಮೇಲೂ ಹಲ್ಲೆ … Read more

ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಅಣ್ಣ-ತಂಗಿ: ಮೃತರ ಕುಟಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದ ಡಿಸಿಎಂ ಡಿಕೆ ಶಿವಕುಮಾರ್!

ಕೆಂಗೇರಿ ಕೆರೆಯಲ್ಲಿ ಆಡಲು ಹೋಗಿ ಮುಳುಗಿ ಮೃತಪಟ್ಟಿದ್ದ ಅಣ್ಣ-ತಂಗಿಯ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಡಿಸಿಎಂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಅಣ್ಣ ಶ್ರೀನಿವಾಸ್ (13) ತಂಗಿ ಮಹಾಲಕ್ಷ್ಮೀ (11) ಕೆರೆಗೆ ನೀರಲು ಹೋಗಿದ್ದರು. ಈ ವೇಳೆ ಕೆರೆಯ ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದರು. ಭಾರೀ ಮಳೆಯಿಂದಾಗಿ ತುಂಬಿ ಹರಿಯತ್ತಿದ್ದ ಕೆರೆ ಬಳಿ ಹೋಗಿದ್ದ ಅಣ್ಣ-ತಂಗಿ ನಾಪತ್ತೆಯಾಗಿರುವ ಸುದ್ದಿ ತಿಳಿದ ಕೂಡಲೇ … Read more

ಸರ್ಕಾರಿ ಕಚೇರಿಗೆ ಬಂದು ಗಾಂಜಾ ಹೊಡೆಯಲು ಬೆಂಕಿಪೊಟ್ಟಣ ಕೇಳಿದ ವಿದ್ಯಾರ್ಥಿಗಳು!

ಅಬಕಾರಿ ಇಲಾಖೆಯ ಕಚೇರಿಗೆ ತೆರಳಿದ ವಿದ್ಯಾರ್ಥಿಗಳ ಗುಂಪು ಗಾಂಜಾ ತುಂಬಿದ ಬೀಡಿ ಸೇದಲು ಬೆಂಕಿಪೊಟ್ಟಣ ಕೇಳಿದ ಘಟನೆ ವಿದ್ಯಾವಂತರ ನಾಡು ಕೇರಳದಲ್ಲಿ ನಡೆದಿದೆ. ಆದಿಮಲೈ ಜಿಲ್ಲೆಯ ತ್ರಿಶೂರ್ ನ ಶಾಲೆಯ ವಿದ್ಯಾರ್ಥಿಗಳು ಗಾಂಜಾ ಹೊಡೆಯಲು ಕಾಲೇಜಿಗೆ ಚಕ್ಕರ್ ಹೊಡೆದು ತಿರುಗುತ್ತಿದ್ದರು. ಈ ವೇಳೆ ಗಾಂಜಾ ಮತ್ತಿನಲ್ಲಿ ಆಯತಪ್ಪಿ ಅಬಕಾರಿ ಇಲಾಖೆ ಕಚೇರಿಗೆ ಬಂದು ಗಾಂಜಾ ತುಂಬಿದ ಬೀಡಿ ಸೇದಲು ಬೆಂಕಿಪೊಟ್ಟಣ ಕೇಳಿದ್ದಾರೆ. ಗಾಂಜಾ ಮತ್ತಿನಲ್ಲಿ ಯಾವುದೋ ಅಂಗಡಿ ಎಂದು ಭಾವಿಸಿದ ವಿದ್ಯಾರ್ಥಿಗಳು ಅಬಕಾರಿ ಇಲಾಖೆ ಕಚೇರಿಗೆ ಬಂದು … Read more

ವಿಜಯನಗರ: ಕಲುಷಿತ ನೀರು ಸೇವಿಸಿ 5 ಮಂದಿ ಸಾವು, 50 ಮಂದಿ ಅಸ್ವಸ್ಥ

ಕಲುಷಿತ ನೀರು ಸೇವಿಸಿ 8 ತಿಂಗಳ ಹಸುಗೂಸು ಸೇರಿ 5 ಮಂದಿ ಮೃತಪಟ್ಟ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದೆ. ಹರಪ್ಪನಹಳ್ಳಿ ತಾಲ್ಲೂಕಿನ ಟಿ ತುಂಬಿಗೇರೆ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಗ್ರಾಮದ ನಿವಾಸಿಗಳಾದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು 8 ತಿಂಗಳ ಗಂಡು ಮಗು ಮೃತಪಟ್ಟಿದ್ದಾರೆ. ಕಲುಷಿತ ನೀರು ಸೇವನೆಯಿಂದ ಗ್ರಾಮದ ಐವತ್ತಕ್ಕೂ ಹೆಚ್ಚು ಜನರು ಭೇದಿಯಿಂದ ಬಳಲುತ್ತಿದ್ದು, ಒಂದೇ ದಿನ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ವಾರ … Read more

ಕೆಜಿಎಫ್-3 ತುಂಬಾ ದೊಡ್ಡದಾಗಿ ಬರಲಿದೆ: ಸಿಹಿಸುದ್ದಿ ನೀಡಿದ ಯಶ್!

ಕೆಜಿಎಫ್-3 ಖಂಡಿತ ಬರುತ್ತೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ನಟ ಯಶ್ ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದ್ದಾರೆ. ಕೆಜಿಎಫ್, ಕೆಜಿಎಫ್-2 ಯಶಸ್ಸಿನ ನಂತರ ಯಶ್ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರೆ, ಪ್ರಶಾಂತ್ ನೀಲ್ ಕೂಡ ಹಲವು ಚಿತ್ರಗಳಲ್ಲಿ ಬ್ಯೂಸಿ ಆಗಿದ್ದರು. ಇದರಿಂದ ಕೆಜಿಎಫ್-3 ಚಿತ್ರದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಹಾಲಿವುಡ್ ಸಿನಿಮಾಗಳ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಯಶ್, ಕೆಜಿಎಫ್-3 ಚಿತ್ರದ ಕುರಿತು ಅಪ್ ಡೇಟ್ ನೀಡಿದ್ದು, ಕೆಜಿಎಫ್-3 ಚಿತ್ರದ … Read more

ಸಿ.ಪಿ. ಯೋಗೇಶ್ವರ್ ಹೆಸರು ಫೈನಲ್ ಆದ ಮೇಲೂ, ಡಿಕೆಶಿ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಿದ್ದೇಕೆ..?!

ಬೆಂಗಳೂರು: ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿದ್ದಾಗಿದೆ.ಅವರನ್ನೇ ಕಣಕ್ಕಿಳಿಸುವುದು ಕೂಡ ನಿಕ್ಕಿಯಾಗಿದೆ.ಹೀಗಿದ್ರೂ ಇಬ್ಬರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿರುವುದು ಸಾಕಷ್ಟು ಅಚ್ಚರಿ-ಅನುಮಾನ ಮೂಡಿಸಿದೆ. ಯೋಗೇಶ್ವರ್ ಬಿಟ್ಟು ಹೈಕಮಾಂಡ್ ಗೆ ಕಳುಹಿಸಿರಬಹುದಾದ ಮತ್ತೊಂದು ಹೆಸ್ರು ಯಾರದು..? ಎನ್ನುವುದೇ ಈಗ ಮಿಲಿಯನ್ ಡಾಲರ್ ಪ್ರಶ್ನೆ. ಮೊನ್ನೆ ಮೊನ್ನೆಯವರೆಗೂ ಡಿಕೆ ಬ್ರದರ್ಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಸಿಕ್ಕಾಪಟ್ಟೆ ಬೈಯ್ಯುತ್ತಿದ್ದವರು ಸಿ.ಪಿ ಯೋಗೇಶ್ವರ್. ಬಿಜೆಪಿ ಟಿಕೆಟ್ ಕೊಡುವುದಾಗಿ ಹೇಳಿದ್ರೂ..ಜೆಡಿಎಸ್ ನೀವೇ ಸ್ಪರ್ದಿಸಿ ಎಂದು ಅಂಗಲಾಚಿದ್ರೂ ನಿಮ್ ಸಹವಾಸವೇ … Read more

ಚೆನ್ನಪಟ್ಟಣ ಉಪಸಮರ-2024: ಸಿ.ಪಿ ಯೋಗೇಶ್ವರ್ ಎದುರು ಕಣಕ್ಕಿಳಿಯಲು ನಿಖಿಲ್ ಹಿಂದೇಟು..?! ಲೆಕ್ಕಾಚಾರ ಕೆಳಗಾಗಿ ಸೋತರೆ “ಐರನ್ ಲೆಗ್” ಕಳಂಕ ಹೊತ್ತುಕೊಳ್ಳುವ ಆತಂಕ..?!

ಚನ್ನಪಟ್ಟಣ: ಬೊಂಬೆಗಳ ನಗರಿ ಚನ್ನಪಟ್ಟಣದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಿಗದಿಯಾಗಿರುವ ಡೆಡ್ ಲೈನ್ ಮುಗಿಯೊಕ್ಕೆ  ಕೆಲ ಗಂಟೆಗಳಷ್ಟೇ ಬಾಕಿ ಇದೆ.ಆದ್ರೂ ಅಖಾಡದಲ್ಲಿ ಏನಾಗಲಿದೆ ಎನ್ನೋದು ಗೊತ್ತಾಗುತ್ತಲೇ ಇಲ್ಲ.ಎಲ್ಲವೂ ಅಚ್ಚರಿ-ನಿಗೂಢದಂತೆ ಕಾಣಿಸುತ್ತದೆ.ನಿನ್ನೆಯವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸಿ.ಪಿ ಯೋಗೇಶ್ವರ್ ನಿನ್ನೆ ರಾತ್ರಿ ಕೈ ಸೇರುವ ಮುನ್ಸೂಚನೆ ನೀಡಿ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಮುಖಂಡರ ನೇತೃತ್ವದಲ್ಲಿ ಕೈ ಸೇರಿದ್ದಾಗಿದೆ.ಕಾಂಗ್ರೆಸ್ ನಿಂದಲೇ ಸ್ಪರ್ದಿಸ್ತಾರೆನ್ನುವ ಮಾತುಗಳು ಬಲವಾಗಿವೆ.ಆದರೆ ಕಡೇ ಕ್ಷಣದಲ್ಲಿ ಏನಾಗುತ್ತದೋ ಗೊತ್ತಾಗುತ್ತಿಲ್ಲ. ಸ್ಪರ್ದೆ ಮಾಡೋದಿದ್ರೆ ಅದು ಕೇವಲ ಬಿಜೆಪಿಯಿಂದ … Read more

ದೇಶದ 10 ಕಡೆ ಪರಮಾಣು ವಿದ್ಯುತ್ ಸ್ಥಾವರ: ಕೇಂದ್ರದ ಮಹತ್ವದ ನಿರ್ಧಾರ

ದೇಶದಲ್ಲಿ ಕನಿಷ್ಠ 10 ಪರಮಾಣು ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಗುಜರಾತ್ ನಲ್ಲಿ ಕನಿಷ್ಠ 2 ಪರಮಾಣು ಸ್ಥಾವರ ವಿದ್ಯುತ್ ವಾಣಿಜ್ಯ ಬಳಕೆಗೆ ಉತ್ಪಾದನೆ ಆರಂಭಿಸಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ. ಗುಜರಾತ್, ರಾಜಸ್ಥಾನ್, ಮತ್ತು ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪರಮಾಣು ಸ್ಥಾವರ ಸ್ಥಾಪನೆ ಮಾಡಲಾಗುತ್ತಿದೆ. 700 ಮೆ.ವ್ಯಾ. ಸಾಮರ್ಥ್ಯದ ಸ್ಥಾವರಗಳು ಮುಂದಿನ ಕೆಲವು ವರ್ಷಗಳಲ್ಲಿ ಕಾರ್ಯಾರಂಭಿಸಲಿವೆ ಎಂದು ಸಮಿತಿ ಹೇಳಿದೆ. ಹವಾಮಾನ ವೈಪರಿತ್ಯ ಕುರಿತು ಪರಿಸರ, … Read more

ಆಸ್ಟ್ರೇಲಿಯಾ ಸರಣಿಗೆ ಭಾರತ ಎ ತಂಡ ಪ್ರಕಟ: ಋತುರಾಜ್ ಗೆ ನಾಯಕ ಪಟ್ಟ!

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ 15 ಸದಸ್ಯರ ಭಾರತ `ಎ’ ತಂಡ ಪ್ರಕಟಿಸಿರುವ ಬಿಸಿಸಿಐ, ಋತುರಾಜ್ ಗಾಯಕ್ವಾಡ್ ಅವರನ್ನು ನಾಯಕರನ್ನಾಗಿ ಆಯ್ಕೆಮಾಡಲಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಆಸ್ಟ್ರೇಲಿಯಾದಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಸೋಮವಾರ ಭಾರತ ಎ ತಂಡವನ್ನು ಪ್ರಕಟಿಸಿತು. ಇಶಾನ್ ಕಿಶನ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಭಾರತ ಎ ತಂಡ ಋತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸಾಯಿ ಸುದರ್ಶನ್, ನಿತಿಶ್ ಕುಮಾರ್ ರೆಡ್ಡಿ, ದೇವದತ್ ಪಡಿಕ್ಕಲ್, ರಿಕ್ಕಿ ಭುವಿ, ಬಾಬಾ … Read more

14 ಲಕ್ಷ ಅನರ್ಹ ಪಡಿತರ ಚೀಟಿ ರದ್ದು: ಸಚಿವ ಕೆಎಚ್ ಮುನಿಯಪ್ಪ

ರಾಜ್ಯದಲ್ಲಿ ಸುಮಾರು 14 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದ್ದು, ಈಗಾಗಲೇ 3.64 ಲಕ್ಷ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಸರ್ಕಾರಿ ನೌಕರರ 2,964 ಅನರ್ಹ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 4.35 ಕೋಟಿ ಫಲಾನುಭವಿಗಳು 1.51 ಕೋಟಿ ಪಡಿತರ ಕಾರ್ಡ್ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಅಹರ್ನತೆಗೆ ಮಾನದಂಡವೇನು? 6 ತಿಂಗಳವರೆಗೆ ಪಡಿತರ ಪಡೆಯದಿರುವವರು, ಒಂದು ವರ್ಷದವರೆಗೆ ನೇರ ನಗದು … Read more