ಬಿಎಂಟಿಸಿ ಸಿಬ್ಬಂದಿ ಯೂನಿಫಾರ್ಮ್ ಗೆ ಪುಡಿಗಾಸು..!

ಊಟಕ್ಕಿಲ್ಲದ ಉಪ್ಪಿನಕಾಯಿ,… ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ..ಆನೆ ಬಾಯಿಗೆ ಹಪ್ಪಳ..ಎನ್ನುವ ಗಾಧೆಗಳನ್ನು ನೆನಪಿಸುವಂತಿದೆ ಬಿಎಂಟಿಸಿ ಆಡಳಿತದ ಧೋರಣೆ.ಕಾರ್ಮಿಕ ಸಿಬ್ಬಂಧಿಯ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಕಾರ್ಯಕ್ರಮ ಹಾಗೂ ಯೋಜನೆಗಳು ಅವರ ಪ್ರಯೋಜನಕ್ಕೆ ಬಾರದಂತಾಗ್ತಿದೆ..ಇದಕ್ಕೆ ಸಾಕ್ಷಿಯಾಗುತ್ತಾ ಬಂದಿರುವುದು ಸಮವಸ್ತ್ರದ ಯೋಜನೆ.ದುರಂತ ಎಂದ್ರೆ ಈ ಬಾರಿಯೂ ಆ ಅಮಾನವೀಯ ಪರಂಪರೆ ಮುಂದುವರೆದಿದೆ. ಜಗತ್ತಿಗೆ ಜಗತ್ತೇ ಬದಲಾಗುತ್ತಿದೆ.ನಮ್ಮ ಜೀವನಶೈಲಿಗಳು ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ರೂಪಾಂತರಗೊಳ್ಳುತ್ತಿವೆ.ಹಾಗೆಯೇ ನಾವು ಬಳಸುತ್ತಿದ್ದ ಎಲ್ಲಾ ವಸ್ತುಗಳ ದರವೂ ದುಬಾರಿಯಾಗುತ್ತಿದೆ.ಆದರೆ ಎಲ್ಲಾ ಬದಲಾದರೂ ಬಿಎಂಟಿಸಿಯ ಆಡಳಿತದ ಮನಸ್ಥಿತಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ … Read more

“eV ಬಸ್‌” ಡ್ರೈವರ್‌ ಗಳಿಗೆ “ಗೇಟ್‌ ಪಾಸ್”..! “ಕಿಲ್ಲರ್‌” ಕಳಂಕ ತೊಡೆದುಕೊಳ್ಳಲು “ಪ್ಲ್ಯಾನ್‌”.!

ಸಚಿವ್ರೇ..!ನಿಮ್ಮೆ ಕಾಳಜಿ ಇದ್ರೆ ಮೊದಲು ಹಾಗೆ ಮಾಡಿ… ಬೆಂಗಳೂರು: ಅಪಘಾತಗಳ ಕಾರಣಕ್ಕೆ BMTC (bengaluru metopolitan transport corporatio)ಗೆ ಮೊದಲೆಲ್ಲಾ “ಕಿಲ್ಲರ್‌” ಎನ್ನುವ ಕಳಂಕ ಮೆಟ್ಟಿಕೊಳ್ತಿತ್ತು..ಅದನ್ನು ಸರಿಪಡಿಸುವ ಸಾಕಷ್ಟು ಕೆಲಸಗಳನ್ನು ನಿಗಮದ ಮಾಡಿದ ಕಾರಣಕ್ಕೇನೋ ಗೊತ್ತಿಲ್ಲ, ಅಪಘಾತಗಳ ಸಂಖ್ಯೆ ಕಡ್ಮೆಯಾಯ್ತು..ಸಾಯೋರ ಪ್ರಮಾಣ ವೂ ಕ್ಷೀಣಿಸ್ತು.ಆದರೆ ಕೆಲ ವರ್ಷಗಳ ಈಚೆಗೆ ನಡೀತಿರೋ ಅಪಘಾತಗಳು-ಅದಕ್ಕೆ ಕಾರಣವಾಗ್ತಿರುವ ಸಂಗತಿಗಳನ್ನು ಗಮನಿಸಿದ್ರೆ ಆತಂಕವಾಗುತ್ತೆ..ಕಿಲ್ಲರ್‌ ಎನ್ನುವ ಹಣೆಪಟ್ಟಿ ಮತ್ತೆ ಅಂಟಿಸಿಕೊಳ್ಳೊಕ್ಕೆ ನಿಗಮನೇ ಪ್ರಯತ್ನಿಸ್ತಿದೆಯಾ ಎನ್ನುವ ಶಂಕೆ ಕಾಡ್ತಿದೆ.ಇದಕ್ಕೆ ಕಾರಣ ಇವಿ ಬಸ್‌ ಗಳಿಂದಾಗುತ್ತಿರುವ ಅಪಘಾತ … Read more

“ಅಕ್ರಮ”ದ ವಿರುದ್ಧ ಸಿಡಿದೆದ್ದ “ದಕ್ಷ-ಖಡಕ್” ಅಧಿಕಾರಿ “ಲೇಡಿ ಸಿಂಗಂ” ಆಶಾ ಪರ್ವಿನ್ ಎತ್ತಂಗಡಿ..?!

ವಿಕ್ಟೋರಿಯಾ ಆಸ್ಪತ್ರೆ “ನೆಫ್ರೋ ಯುರಾಲಜಿ” ಡೈರೆಕ್ಟರ್ ಡಾ.ಶಿವಲಿಂಗಯ್ಯ ಕರ್ಮಕಾಂಡ ಬಯಲಿಗೆಳೆದಿದ್ದಕ್ಕೆ ವರ್ಗಾವಣೆ ಬಹುಮಾನ..! ಬೆಂಗಳೂರು: ರಾಜ್ಯದ ಅಡಳಿತ ನಿಜಕ್ಕೂ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಬರ ಎದುರಿಸುತ್ತಿದೆ ..ಅದರಲ್ಲೂ ಆಯಕಟ್ಟಿನ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವ “ಐಎಎಸ್-ಕೆಎಎಸ್” ನಂತ ಅಧಿಕಾರಿಗಳಲ್ಲಿ ಬಹುತೇಕ ರು ಭ್ರಷ್ಟರಾಗಿರುವ ಸಂಕಷ್ಟದ ಸನ್ನಿವೇಶದಲ್ಲಿ ಬೆರಳೆಣಿಕೆಯ ಅಧಿಕಾರಿಗಳು ನಮ್ಮ ನಡುವಿದ್ದಾರೆ ನ್ನು ವುದು ಸಮಾಧಾನದ ಸಂಗತಿ.ಆದರೆ ದುರಂತದ ಸಂಗತಿ ಏನಪ್ಪಾ ಅಂದ್ರೆ ಇಂಥಾ ಬೆರಳೆಣಿಕೆಯ ಅಧಿಕಾ ರಿಗಳಿಗೂ ಕೂಡ ಕೆಲಸ ಮಾಡಲಿಕ್ಕಾಗದಂಥ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸ … Read more

ಏನಾಗ್ತಿದೆ ಅರ್ನಾಬ್‌ ಮಹತ್ವಾಕಾಂಕ್ಷೆಯ “ರಿಪಬ್ಲಿಕ್‌ ಕನ್ನಡ”ದಲ್ಲಿ..!?  “ಅನಿಶ್ಚಿತತೆ”ಯ ಕಾರ್ಮೋಡ ಕವಿದಿರುವುದೇಕೆ..!?

ಕಾರ್ಯಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿರುವ ಸಿಬ್ಬಂದಿ..?!-ಬೇರೆ ಚಾನೆಲ್‌ ಗಳಿಗೆ ಆಂಕರ್ಸ್‌,ರಿಪೋರ್ಟರ್ಸ್‌ ಗಳ ವಲಸೆ..!? -ಮುಖ್ಯಸ್ಥೆ ಶೋಭಾ ಸ್ಥಾನಕ್ಕೆ ಕುತ್ತು..!? ಬೆಂಗಳೂರು: ರಾಷ್ಟ್ರೀಯವಾದಿ ಪತ್ರಕರ್ತ, ಜರ್ನಲಿಸಂನ ಗ್ರಾಮರನ್ನೇ ಬದಲಿಸಿದ ಮಾದ್ಯಮ ಜಗತ್ತಿನ ದಿಗ್ಗಜ ಅರ್ನಾಬ್‌ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್‌ ಕನ್ನಡ ಮತ್ತೆ ಸುದ್ದಿಯಲ್ಲಿದೆ.ಆ ಚಾನೆಲ್‌ ಬಗ್ಗೆ ಮತ್ತೆ ಬರೆಯಲೇಬೇಕಾದ ಸನ್ನಿವೇಶ ಎದುರಾಗಿದೆ.ಇದಕ್ಕೆ ಕಾರಣ ಚಾನೆಲ್‌ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.ಕೈ ತುಂಬಾ ಸಂಬಳ ಪಡೆಯುತ್ತಿದ್ದ ಆಂಕರ್ಸ್‌ ಮತ್ತು ರಿಪೋರ್ಟರ್ಸ್‌ ಗಳ ವಲಸೆ… ಚಾನೆಲ್‌ ನಲ್ಲಿ ಆವರಿಸಿರುವ ಅನಿಶ್ಚಿತತೆಯ ಕಾರ್ಮೋಡ..ಗಣನೀಯ ಪ್ರಮಾಣದಲ್ಲಿ ಆಗಿರುವ … Read more

CRICKET NEWS..DHRUV JUREL STORY.. ಟೀಮ್ ಇಂಡಿಯಾದ “ಧ್ರುವ” ನಕ್ಷತ್ರ “ಜುರೇಲ್” ಹಿಂದಿದೆ ಅಮ್ಮನ ತ್ಯಾಗ.. ಅಪ್ಪನ ಶಿಸ್ತು..!

heart touching story… ಒಂದು ಚಿನ್ನದ ನೆಕ್ಲೆಸ್.. ಮಗನ ಭವಿಷ್ಯವನ್ನೇ ಬಂಗಾರವನ್ನಾಗಿಸಿದ ನೈಜ ಕಥೆ..! ಸುಮಾರು 11 ವರುಷಗಳ ಹಿಂದೆ… 13 ವರ್ಷದ ಬಾಲಕ ಒಂದು ಸಾಧಾರಣ ಮೊತ್ತದ ಕ್ರಿಕೆಟ್ ಬ್ಯಾಟ್ ಮತ್ತು ಕಿಟ್‍ಗಾಗಿ ಅಪ್ಪ- ಅಮ್ಮನ ಜೊತೆ ಹಠ ಮಾತ್ರವಲ್ಲ.. ರಂಪಾಟವನ್ನೇ ಮಾಡಿದ್ದ. ನಾನು ಕ್ರಿಕೆಟ್ ಆಡಬೇಕು.. ನನಗೆ ಬ್ಯಾಟ್ ಬೇಕು ಎಂದು ಕಿರುಚಾಡುತ್ತಿದ್ದ ಮಗನ ಮೇಲೆ ತಾಳ್ಮೆ ಕಳೆದುಕೊಂಡ ಅಪ್ಪ ಸರಿಯಾಗಿಯೇ ಪೆಟ್ಟು ಕೊಟ್ಟಿದ್ದ. ಇದರಿಂದ ಇನ್ನಷ್ಟು ಸಿಟ್ಟು ಮಾಡಿಕೊಂಡ ಆ ಬಾಲಕ ಸೀದಾ … Read more

ಸವಾಲುಗಳ ನಡುವೆ ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕ..

ಉತ್ಸಾಹಿ ಅಧ್ಯಕ್ಷ ನಿಕೇತ್ ಮೌರ್ಯ, ಹತ್ತರ ಸಾಲಿನಲ್ಲಿ ಹನ್ನೊಂದನೆಯ ಅಧ್ಯಕ್ಷ ರಾಗುಳಿಯದಿದ್ರೆ ಸಾಕು..! ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಕಾಂಗ್ರೆಸ್ ನ ಯುವ ನಾಯಕ,ಪ್ರಖರ ವಾಗ್ಮಿ,ಅತ್ಯುತ್ತಮ ಸಂಘಟನೆಕಾರ ನಿಕೇತ್ ರಾಜ್ ಮೌರ್ಯ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಬಿಎಂಟಿಸಿ ಅತ್ಯಂತ ಸಂಕಷ್ಟದಲ್ಲಿರುವ ಸನ್ನಿವೇಶದಲ್ಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಅವರಿಗೆ ಶುಭಾಷಯ ಕೋರುತ್ತಾ ನೂತನ ಅಧ್ಯಕ್ಷ ನಿಕೇತ್ ಅವರ ಮುಂದೆ ಇರುವ ದಂಡಿ ಸವಾಲುಗಳ ಮೇಲೆ ಕನ್ನಡ ಫ್ಲ್ಯಾಶ್ ನ್ಯೂಸ್ ಬೆಳಕು ಚೆಲ್ಲುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿಯೋಜನೆಯಿಂದ ನಿಗಮಕ್ಕೆ … Read more

PU ಬೋರ್ಡ್”ನ   ಭ್ರಷ್ಟರು-ಮೈಗಳ್ಳರಿಗೆ ಸಿಂಹಸ್ವಪ್ನವಾದ“ಮಿಸ್ಟರ್ ಕ್ಲೀನ್”

ಪದವಿಪೂರ್ವ ಶಿಕ್ಷಣ ಮಂಡಳಿ( ಪಿಯು ಬೋರ್ಡ್)ಗೆ ಮಿಸ್ಟರ್ ಕ್ಲೀನ್ ಎಂದೇ ಖ್ಯಾತಿ ಪಡೆದಿರುವ ಕಿರಿಯ ಐಎಎಸ್ ಅಧಿಕಾರಿ ಭರತ್ ಎಂಟ್ರಿ ಕೊಟ್ಟ ಮೇಲೆ ಭ್ರಷ್ಟರು-ಮೈಗಳ್ಳರು-ಇಲಾಖೆ ಕೊಡುವ ಸಂಬಳಕ್ಕೆ ನೀಯತ್ತಿಲ್ಲದೆ ಅಕ್ರಮಗಳಲ್ಲಿ ಭಾಗಿಯಾದವರ ಎದೆಯಲ್ಲಿ ನಡುಕ ಸೃಷ್ಟಿಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿರುವ ಖಡಕ್ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಕಾರ್ಯನಿರ್ವಹಣೆಗೆ ವೇಗ ದೊರೆತಿದೆ.ಯಾವೊಬ್ಬ ಅಧಿಕಾರಿಯ ನಿರೀಕ್ಷೆಯಲ್ಲಿ ಅವರಿದ್ದರೋ ಅಂತದ್ದೇ ಅಧಿಕಾರಿಯ ಸ್ವರೂಪದಲ್ಲಿ ಭರತ್ ಸಿಕ್ಕಿದ್ದಾರೆ ಎಂದೇ ಶಿಕ್ಷಣ ಇಲಾಖೆ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ. ಕಿರಿಯ ಐಎಎಸ್ … Read more

“ನ್ಯೂಸ್‌ ಫಸ್ಟ್‌” 5 ನೇ ಹುಟ್ಟುಹಬ್ಬದಂದೇ   ಮತ್ತೊಂದು “ಚಾನೆಲ್‌” ಘೋಷಣೆ..

ಸರಳ ಸಮಾರಂಭದಲ್ಲಿ ಸಿಬ್ಬಂದಿ ಮುಂದೆ ರವಿಕುಮಾರ್-ಮಾರುತಿ ಜೋಡಿಯಿಂದ ಮಹತ್ವದ ಘೋಷಣೆ.. ಕನ್ನಡದ ಜನಪ್ರಿಯ ನ್ಯೂಸ್‌ ಚಾನೆಲ್‌ ಗಳಲ್ಲಿ ಒಂದಾದ ನ್ಯೂಸ್‌ ಫಸ್ಟ್‌ ಮೊನ್ನೆ 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಚಾನೆಲ್‌ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಂದು ಚಾನೆಲ್‌ 5 ವರ್ಷ ಪೂರೈಸುವುದು ಸಾಧನೆಯೇ ಸರಿ..ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೋದ್ಯಮದ ಜೋಡೆತ್ತುಗಳಾದ ಮಾರುತಿ-ರವಿಕುಮಾರ್‌ ಬಳಗಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬಳಗದಿಂದ ಅಭಿನಂದನೆ ಹಾಗೂ ಶುಭಾಷಯ ( ನಮ್ಮ ಬರವಣಿಗೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸಿ ಮಾತನಾಡುವವರಿಗೆ ನಮ್ಮದೊಂದು  ಸ್ಪಷ್ಟನೆ … Read more

ವಿದ್ಯಾ ಮಲ್ನಾಡ್‌ ಎನ್ನುವ “ಮಾನವಮುಖಿ-ಜೀವಪರ ಕಾಳಜಿ”ಯ “ಗ್ಯಾರಂಟಿ ” ಆಂಕರ್..  

ಡೋಂಟ್‌ ಮಿಸ್‌ ಇಟ್…‌ ಅರಚೋದು..ಅಬ್ಬರಿಸೋದು-ವಿಷಯವನ್ನು ವಿಕೃತಗೊಳಿಸುವುದೇ  ಆಂಕರಿಂಗ್ ಎನ್ನುವ ಲೆಕ್ಕಾಚಾರಕ್ಕೆ ಅಪವಾದದಂತಿದ್ದ  ವಿದ್ಯಾ ಮಲ್ನಾಡ್‌ ನಿರೂಪಣೆ.. ಬೆಂಗಳೂರು:ಇನ್ನೊಬ್ಬರ ಮನೆ-ಸಂಸಾರ, ವೈಯುಕ್ತಿಕ ವಿಷಯವನ್ನೇ ಟಿಆರ್‌ ಪಿ ಗೋಸ್ಕರ ಬಂಡವಾಳವಾ ಗಿಸಿಕೊಂಡು ಬೇಳೆ ಬೇಯಿಸಿಕೊಳ್ಳುವುದೇ ಬಹುತೇಕ  ಮಾದ್ಯಮಗಳ ಕಸುಬಾಗಿ ಹೋಗಿದೆ.ಇದು ಸಾರ್ವಜನಿಕ ವಲಯದಲ್ಲಿ ಮಾದ್ಯಮಗಳ ಬಗ್ಗೆ ಛೀ..ಥೂ ಎಂದು ಉಗಿಯುವ  ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತ.( ನ್ಯೂಸ್‌ ಚಾನೆಲ್‌ ಗಳಲ್ಲಿ ಬಹುತೇಕ ಇಂಥದ್ದೇ ಮನೆಹಾಳು ಮಾಡುವ ಸುದ್ದಿಗಳೇ ಬರುತ್ತಿರುವುದರಿಂದ ಪಾಪ…ಇದನ್ನು ಬಿಟ್ಟು ಬೇರೆ ನೋಡಬೇಕಾದ ಪರ್ಯಾಯ ಆಯ್ಕೆಯೇ ವೀಕ್ಷಕರಿಗೆ ಸಿಗುತ್ತಿಲ್ಲ). … Read more

80 ಸಾವುಗಳಿಗೆ ಕಾರಣವೇ bMTC ಎಂಡಿ…!ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಮಂತ್ರಿಗೆ ದೂರು..

ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ … Read more