ಪಿಯು ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರನ್ನೇ ದಾರಿ ತಪ್ಪಿಸುವ, ತಪ್ಪೆಸಗುವಂತೆ ಪ್ರಚೋದಿಸುವ ಹಿತಾಸಕ್ತಿಗಳಿವೆಯಾ?

ನಿಜಕ್ಕೂ ದುರ್ಬಳಕೆ ಆಗುತ್ತಿದೆಯಾ.. ದಕ್ಷ-ಪ್ರಾಮಾಣಿಕ ಐಎಎಸ್ ಅಧಿಕಾರಿ ಸಿಂಧೂ ರೂಪೇಶ್ ಅವರ ಒಳ್ಳೆಯತನ? ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಲ್ಲೇಶ್ವರಂ 18ನೇ ತಿರುವಿನಲ್ಲಿರುವ  ಪದವಿ ಪೂರ್ವ ಶಿಕ್ಷಣ ಇಲಾಖೆ (DEPARTMENT OF SCHOOL EDUCATION-PRE UNIVERSITY) ಗೆ  ಶೈಕ್ಷಣಿಕವಾಗಿ ತನ್ನದೇ ಆದ ಹಿನ್ನಲೆಯಿದೆ.ಭವ್ಯ ಇತಿಹಾಸವಿದೆ. ನಿರ್ದೇಶಕರಾಗಿ ಬರುವ ಅಧಿಕಾರಿಗಳು ತಮ್ಮದೇ ಕನಸು-ಆಶಯ-ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಲೇ ಬಂದಿದ್ದಾರೆ.ಶೈಕ್ಷಣಿಕವಾಗಿ ಅನುಕೂಲವಾಗಬಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬಲ್ಲ  ಒಂದಷ್ಟು ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ.ಅದೇ ನಿಟ್ಟಿನಲ್ಲಿ ಈಗಿನ ನಿರ್ದೇಶಕರ ಪ್ರಯತ್ನ ಮುಂದುವರೆದಿದ್ದರೂ ಅವರನ್ನು … Read more

ದಸರಾ ನಂದಿಧ್ವಜದ ಮಹಾದೇವಣ್ಣರನ್ನು ಮರೆತೇ ಬಿಡ್ತಾ ಸರ್ಕಾರ? ಜೀವನ್ಮರಣ ಹೋರಾಟದಲ್ಲಿ ಮಹದೇವಣ್ಣ

ಬೆಂಗಳೂರು/ಮೈಸೂರು: ವಿಶ್ವಪ್ರಸಿದ್ದ ದಸರಾ ಹಬ್ಬ(WORLDFAMOUS MYSORE DASARA)ಕ್ಕೆ ಚಾಲನೆ ದೊರೆಯುವುದೇ ಸಾಂಪ್ರದಾಯಿಕ ನಂದಿದ್ವಜ( NANDIDWAJA POOJE)ದ ಪೂಜೆ ಮೂಲಕ.ದೇವರ ಮೇಲೆ ಹೂವು ತಪ್ಪುತ್ತೋ ಇಲ್ಲವೋ ಗೊತ್ತಿಲ್ಲ,ಆದ್ರೆ ಈ ಸಂಪ್ರದಾಯ ಮಾತ್ರ ಯಾವ  ವರ್ಷವೂ ತಪ್ಪಿಲ್ಲ.ಇಂತದ್ದೊಂದು ಪೂಜಾ ಕೈಂಕರ್ಯವನ್ನು ಮಾಡುತ್ತಾ ಬಂದಿರುವ ಕುಟುಂಬ ಮೈಸೂರಿನಲ್ಲಿದೆ.ಆ ಕುಟುಂಬದ ಮುಖ್ಯಪ್ರಾಣವೇ ಮಹಾದೇವಣ್ಣ. .ಅಲ್ಲಲಾ ನಂದಿದ್ವಜದ ಮಹಾದೇವಣ್ಣ..(NANDIDWAJA MAHADEVANNA) ಅನೇಕ ದಶಕಗಳಿಂದ ವಂಶಪಾರಂಪರ್ಯವಾಗಿ ಈ ಸಂಪ್ರದಾಯ ನಡೆಸುತ್ತಾ ಬಂದಿರುವ ಇದೇ ಮಹಾದೇವಣ್ಣರನ್ನು ಸರ್ಕಾರ ಮರೆತೇ ಬಿಟ್ಟಿದೆ.ಅವರು ನಾಡಿಗೆ ಮಾಡುತ್ತಿರುವ ಕಲಾಸೇವೆಯನ್ನು ಗುರುತಿಸಿಯೇ ಇಲ್ಲ..ಸಧ್ಯ … Read more