ಮಹಿಳೆಯರಿಗೆ “ಶಕ್ತಿ” ಪ್ರಯಾಣ ಇನ್ನೂ ಅನಾಯಾಸ.. “ಆಧಾರ್” ಓರಿಜಿನಲ್ಲೇ ಬೇಕೆಂತಿಲ್ಲ… ಮೊಬೈಲ್‌ ನಲ್ಲಿ‌ ತೋರಿಸಿದ್ರೂ ಪರ್ವಾಗಿಲ್ಲ..

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಮತ್ತಷ್ಟು ಸ್ಮಾರ್ಟ್..ಸರಳ..ಪರಿಣಾಮಕಾರಿ ಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಪ್ರಯಾಣ ಮಾಡೊಕ್ಕೆ ಮಹಿಳೆಯರು ಒರಿಜಿನಲ್‌ ಆದ ದಾಖಲೆಯನ್ನೇ ತೋರಿಸಬೇಕೆಂದು ಸಾರಿಗೆ ಸಿಬ್ಬಂದಿ ಹಠ ಮಾಡುತ್ತಿದ್ದಾರೆನ್ನುವ ವ್ಯಾಪಕ ದೂರುಗಳ ಹಿನ್ನಲೆಯಲ್ಲಿ ಇನ್ಮುಂದೆ ದಾಖಲೆಗಳು ಕೈಲಿದ್ದರೆ ಮಾತ್ರ ದಾಖಲೆಗಳಲ್ಲ, ಮೊಬೈಲ್‌ ನಲ್ಲಿದ್ದರೂ ಅವನ್ನು ಪರಿಗಣಿಸಬೇಕೆಂದು ಅಧೀಕೃತವಾಗಿ ಆದೇಶ ಹೊರಡಿಸಿದ್ದಾರೆ.ಇದು ಮಹಿಳಾ ಪ್ರಯಾಣಿಕರಿಗಷ್ಟೇ ಅಲ್ಲ, ಕಂಡಕ್ಟರ್ಸ್‌ ಗೂ ಅನುಕೂಲವಾಗಲಿದೆ. ಶಕ್ತಿ ಯೋಜನೆಯ ಸದುಪಯೋಗ ಎಲ್ಲರಿಗೂ ಸಿಗಬೇಕು.ಯೋಜನೆ ಫಲಾನುಭವಿಗಳಿಗೆ ಎಲ್ಲಿಯೂ ಅಸಮಾಧಾನ-ಅತೃಪ್ತಿ ಆಗಬಾರದು.ಸರ್ಕಾರದ ಬಗ್ಗೆ ಅಪಸ್ವರ … Read more

“ಪ್ರಯಾಣಿಕ”ನ ಸಾವಿಗೆ ಆ ಇಬ್ರು “ಡ್ರೈವರ್ಸ್” ಗಳು ಮಾತ್ರ “ಕಾರಣ”ನಾ.?! ಇದ್ರಲ್ಲಿ “ಅಧಿಕಾರಿ”ಗಳ “ಹೊಣೆ”ನೇ ಇಲ್ವಾ..!?

ಅಪಘಾತದಲ್ಲಿ ಕೈ ಕಳೆದುಕೊಂಡು, ತೀವ್ರರಕ್ತಸ್ರಾವದಿಂದ ಮೃತಪಟ್ಟವನ ಸಾವಿಗೆ, ಶಿವಮೊಗ್ಗ ವಿಭಾಗದ ವಿಜಯ್ ಕುಮಾರ್ , ದಿನೇಶ್ ಕುಮಾರ್  “ನಿರ್ಲಕ್ಷ್ಯ”ವೂ ಕಾರಣವಲ್ವೇ..?! ಬೆಂಗಳೂರು/ಶಿವಮೊಗ್ಗ:ಇದಕ್ಕಿಂತ ದೊಡ್ಡ ದುರಂತ ಹಾಗೂ ವಿಪರ್ಯಾಸ ಇನ್ನೊಂದಿರಲಾರದೇನೋ..? ಅಪಘಾತದಲ್ಲಿ ಪ್ರಯಾಣಿಕನೊಬ್ಬ ಕೈ ಕಳೆದುಕೊಂಡು ಚಿಕಿತ್ಸೆ ಕೊರತೆಯಿಂದ ಪ್ರಾಣಬಿಟ್ಟ ಕಾರಣಕ್ಕೆ ಚಾಲಕರಿಬ್ಬರು ಅಮಾನತ್ತಾಗಿದ್ದಾರೆ.ಆದರೆ ಪ್ರಯಾಣಿಕನ ಜೀವ ಹೋಗ್ಲಿಕ್ಕೆ ನೈತಿಕವಾಗಿ ಕಾರಣಕರ್ತರಾದ ಅಧಿಕಾರಿಗಳು ಮಾತ್ರ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ.ದುರಂತ ಸಂಭವಿಸಿದಾಗ ಸಂತ್ರಸ್ಥರ ಕ್ಷೇಮ-ಕಲ್ಯಾಣಗಳೆರೆ ಡೂ ಅಧಿಕಾರಿಗಳ ಹೊಣೆಯಾಗಿರುತ್ತೆಂದು ಗೊತ್ತಿದ್ರೂ ಸಾರಿಗೆ ಆಡಳಿತ ಮಾತ್ರ, ಅಧಿಕಾರಿಗಳು ಮಾಡಿದ್ದೇ ಸರಿ ಎನ್ನುವಂತೆ ಸುಮ್ಮನಿರುವುದು … Read more

“ಪ್ರಾಣ ಬಿಟ್ಟೇವು…ಮುಷ್ಕರ ಕೈ ಬಿಡೆವು” ಇಂದಿನಿಂದ ಸಾರಿಗೆ ಸಿಬ್ಬಂದಿಯಿಂದ “ಅಮರಣಾಂತ ಉಪವಾಸ ಸತ್ಯಾಗ್ರಹ”…

ಬೆಂಗಳೂರು: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದೆರೆಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿಗೆ ನಿನ್ನೆ ಆದ ಕಹಿ ಅನುಭವ ಅಕ್ಷರಶಃ ರೊಚ್ಚಿಗೆಬ್ಬಿಸಿದೆ.ಈ ಹಿನ್ನಲೆಯಲ್ಲಿ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವಂತೆ ಮಾಡಿದೆ.ಸಾರಿಗೆ ಕೂಟ ಸೇರಿದಂತೆ ಸಮಾನಮನಸ್ಕ ಸಂಘಟನೆಗಳು ಹೋರಾಟಕ್ಕೆ ಕೈ ಜೋಡಿಸಿವೆ.ಇದರಿಂದ ಹೋರಾಟ ಮತ್ತಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಫ್ರೀಡಂ ಪಾರ್ಕ್‌ ನಲ್ಲಿ ಕಳೆದೆರೆಡು ದಿನಗಳಿಂದ ಸಾರಿಗೆ ಸಿಬ್ಬಂದಿ ತಮ್ಮ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು.ನಿನ್ನೆ ಇದ್ದಕ್ಕಿದ್ದಂತೆ ಆಗಮಿಸಿದ ಉಪ್ಪಾರ ಪೇಟೆ ಪೊಲೀಸರು … Read more

ಸಿಂ ಅಂಕಲ್, ನಮ್ಗೆ ಶಾಲೆಗೆ ಹೋಗ್ಲಿಕ್ಕೆ ಬಸ್ ಬಿಡಿಸಿ.ಶಾಲಾ ಬಾಲಕಿಯಿಂದ ಮುಖ್ಯಮಂತ್ರಿಗೆ ಭಾವನಾತ್ಮಕ ಮನವಿ

 ಬೆಂಗಳೂರಿನ ಹೊರವಲಯದಿಂದ ಅದೆಷ್ಟೋ ಪ್ರದೇಶಗಳಿಗೆ ಇನ್ನೂ BMTC ಬಸ್ ಇಲ್ಲವಂತೆ..? ಬೆಂಗಳೂರು: ಇದು ನಿಜಕ್ಕೂ ಮನಕಲಕುವ ಸುದ್ದಿ.ಓದುವ ಹಂಬಲ ಬೆಟ್ಟದಷ್ಟಿದ್ದರೂ ಸರಿಯಾದ ಸಾರಿಗೆ ವ್ಯವಸ್ಥೆಯಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿನಿಯೋರ್ವಳು ತನ್ನಂತದ್ದೇ ಸಮಸ್ಯೆ ಎದುರಿಸುತ್ತಿರುವ ಹತ್ತಾರು ಮಕ್ಕಳ ಸಮಸ್ಯೆ ಬಗೆಹರಿಸಿಕೊಡಿ ಎಂದು ಮಾನ್ಯ ಮುಖ್ಯಮಂತ್ರಿ, ಬಿಎಂಟಿಸಿ ಎಂಡಿಗೆ ಬರೆದಿರುವ ವಿದ್ಯಾರ್ಥಿ ಕಾಳಜಿಯ ಪತ್ರ ಬರೆದಿರುವ ಸ್ಟೋರಿ. ಇದು ಏಕೆ ಬಹುಮುಖ್ಯ ಎನಿಸುತ್ತೆ ಎಂದ್ರೆ ಬಿಎಂಟಿಸಿ ಬಸ್ ಸೌಕರ್ಯ ಇದ್ದ ಹೊರತಾಗ್ಯೂ ಈ ಭಾಗಕ್ಕೆ ಮಾತ್ರ ಬಸ್ ಸೌಕರ್ಯ ಕಲ್ಪಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ … Read more

ಮಾರ್ಚ್ 4ಕ್ಕೆ ಮುನ್ನವೇ ಪ್ರತಿಭಟನೆ: ಸಾರಿಗೆ ಕೂಟದ ಚಂದ್ರುಗೆ, ಜಂಟಿ ಕ್ರಿಯಾಸಮಿತಿ ಅನಂತಸುಬ್ಬರಾವ್ ತಿರುಗೇಟು

ಬೆಂಗಳೂರು: ಮಾರ್ಚ್ 4ಕ್ಕೆ ಸಾರಿಗೆ ಪ್ರತಿಭಟನೆ ಬಗ್ಗೆ ಈಗಾಗಲೇ ಸಾರಿಗೆ ಕೂಟದ ಅಧ್ಯಕ್ಷ ಚಂದ್ರಶೇಖರ್ ಹೇಳಿಕೆ ಕೊಟ್ಟಾಗಿದೆ.ಪ್ರೆಸ್ ಮೀಟೂ ಮಾಡಾಗಿದೆ. ಸಾರಿಗೆ ಸಂಘಟನೆಗಳನ್ನು ಕರೆಯಿಸಿ ಮಾತನಾಡುತ್ತಿರುವ ಮ್ಯಾನೇಜ್ನೆಂಟ್ ನಮ್ಮನ್ನು ಮಾತುಕತೆಗೆ ಆಹ್ವಾನಿಸಿಲ್ಲ ಎನ್ನುವ ಬೇಸರವೂ ಮಾರ್ಚ್ 4 ಪ್ರತಿಭಟನೆ ನಿರ್ದಾರಕ್ಕೆ ಕಾರಣ ಎನ್ನಲಾಗುತ್ತಿದೆ. ಸಾರಿಗೆ ಕೂಟ  ಹಾಗೂ ಬೆಂಬಲಿತ ಸಂಘಟನೆಗಳು ಇದನ್ನು ಬೆಂಬಲಿಸಿವೆ ಕೂಡ.ಆದರೆ ಸಾರಿಗೆ ಹೋರಾಟಗಳಲ್ಲಿ ದಶಕಗಳಷ್ಟು ಅನುಭವ ಇರುವ ಅನಂತಸುಬ್ಬರಾವ್ ಅವರಂಥ ಹಿರಿಯರಿಗೆ ಸಾರಿಗೆ ಕೂಟದ ನಿಲುವು-ಧೋರಣೆ ಬೇಸರ ಮೂಡಿಸಿರಬಹುದೆನಿಸುತ್ತಿದೆ. ಹಾಗಾಗಿನೇ ಮಾರ್ಚ್ 4 … Read more

BMTC ಪತ್ತಿನ ಸಹಕಾರ ಸಂಘದ ಚುನಾವಣೆ…”ಹಣ-ಹೆಂಡ-ಬಾಡು-ಗಿಫ್ಟ್…ಅಬ್ಬರ..!? ಲಾಡ್ಜ್ ಗಳಲ್ಲೇ ಬೀಡುಬಿಟ್ಟಿರುವ ಕೆಲವು “ಆಕಾಂಕ್ಷಿ”ಗಳು..!?

ಕೆಲವು ಉಮೇದುವಾರರಿಂದ ಮತದಾರ ಮನವೊಲಿಕೆಗೆ ಲಕ್ಷಗಳಲ್ಲಿ ಖರ್ಚು.! ಬೆಂಗಳೂರು: ನಾಳೆ( ಫೆಬ್ರವರಿ 11) ಇಷ್ಟೊತ್ತಿಗಾಗ್ಲೇ ಬಿಎಂಟಿಸಿ ಪತ್ತಿನ ಸಹಕಾರ ಸಂಘದ ಚುನಾವಣೆ ಮುಗಿದೋಗಿರುತ್ತದೆ. ಸಂಜೆ ವೇಳೆಗೆ ಪತ್ತಿನ ಸಹಕಾರ ಸಂಘದ ಮೇಲೆ ಯಾರು ಸ್ಪಷ್ಟವಾಗಿ ಹಿಡಿತ ಸಾಧಿಸಿರುತ್ತಾರೆನ್ನೋದು ಕೂಡ ನಿಕ್ಕಿಯಾಗಿರು ತ್ತದೆ.ಇದರ ಹೊರತಾಗಿ  ಕೆಲವು ಬೆಳವಣಿಗೆ ಗಮನಿಸಿದ್ರೆ ಯಾವುದೇ ರಾಜಕೀಯ ಚುನಾವಣೆಗೆ ಭಿನ್ನವಾಗಿರದ ರೇಂಜ್ನಲ್ಲಿ ಚುನಾವಣೆ ನಡೆಯುತ್ತಿದೆ.ಎಲ್ಲಾ ಚುನಾವಣೆಗಳಂತೆ ಇಲ್ಲಿಯೂ ಮತದಾರರ ಓಲೈಕೆಗೆ ಹಣ-ಹೆಂಡ-ಬಾಡು-ಗಿಫ್ಟು…ಎಲ್ಲಾ ಚಲಾವಣೆಯಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯ … Read more

ಇದೆಂಥಾ ಅನ್ಯಾಯ… ರಾಮಚಂದ್ರನ್ ಸರ್…!? ಕಳಂಕಿತರ ವಿರುದ್ಧ ಶಿಸ್ತುಕ್ರಮ ಜಾರಿ ಆಗೋದಿಲ್ವೇ..?!

ಬೆಂಗಳೂರು: ನೂತನ ಎಂಡಿ ರಾಮಚಂದ್ರನ್ ಅವರಂತ ಸಭ್ಯ…ಸಂಭಾವಿತ ಅಧಿಕಾರಿಯನ್ನು ಬಿಎಂಟಿಸಿ ಯಲ್ಲಿರುವ ಕೆಲವು ಅದಕ್ಷ-ಅಪ್ರಾಮಾಣಿಕ-ನಿಷ್ಪ್ರಯೋಜಕ ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡ್ತಿದಾರಾ..? ಅಧಿಕಾರಿಗಳ ವಿರುದ್ದ ಎಂತದ್ದೇ ಗಂಭೀರ ಆಪಾದನೆ ಬಂದ್ರೂ ಅವರನ್ನು ಶಿಕ್ಷೆಯಿಂದ ತಪ್ಪಿಸುವಂತ ಕೆಲಸ ಮಾಡುತ್ತಿರುವ ಕೆಲವರು ಅವರ ಸುತ್ತಮುತ್ತ ಇದ್ದಾರಾ.?…ಕನ್ನಡ ಫ್ಲ್ಯಾಶ್ ನ್ಯೂಸ್ ತುಂಬಾ ಜವಾಬ್ದಾರಿಯಿಂದಲೇ ಹೀಗೊಂದು ಮಾತನ್ನು ಅತ್ಯಂತ ವಿಷಾದದಿಂದ ಹೇಳಬೇಕಾಗಿ ಬಂದಿದೆ.ಇದಕ್ಕೆ ಕಾರಣ  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಮೊದಲಿಂದಲೂ  ಮುಂದುವರೆದಿರುವ ಗೊಂದಲಮಯ ವಾತಾವರಣ ನೂತನ ಎಂಡಿ ರಾಮಚಂದ್ರನ್ ಅವರ … Read more

“ಕಳಂಕಿತ” ಅಧಿಕಾರಿ ನಾಗರಾಜಮೂರ್ತಿ ಬೆನ್ನಿಗೆ ನಿಂತಿರುವುದೇಕೆ BMTC ಆಡಳಿತ..?!

ಅಕ್ರಮ ಕಣ್ಣಿಗೆ ರಾಚುವಂತಿದ್ರೂ  ಡಿ ಸಿ.ನಾಗರಾಜಮೂರ್ತಿ ವಿರುದ್ದ ಕ್ರಮವೇಕಿಲ್ಲ…?! BMTCಯಲ್ಲಿ  ಇದೆಂಥಾ ಅನ್ಯಾಯ..!? ಕ್ಷುಲ್ಲಕ ತಪ್ಪೆಸಗಿದ್ರೆ ಸಿಬ್ಬಂದಿಗೆ ಸಸ್ಪೆಂಡ್-ಡಿಸ್ಮಿಸ್.. ಗಂಭೀರ ಆಪಾದನೆಯಿದ್ರೂ ಕ್ಷಮಾದಾನ..?! ಬೆಂಗಳೂರು: ಬಿಎಂಟಿಸಿ ಆಡಳಿತದ ಕಾರ್ಮಿಕ ವಿರೋಧಿ ಧೋರಣೆ ಮತ್ತೆ ಸಾಬೀತಾಗಿದೆ.ನಮ್ಮ ಬೆಂಬಲ-ಸಹಕಾರ ಯಾವತ್ತಿದ್ರೂ ಅಧಿಕಾರಿಗಳಿಗೇ ವಿನಃ ,ಕೆಳಹಂತದ ಸಿಬ್ಬಂದಿಗಲ್ಲ. ಅಧಿಕಾರಿಗಳು ಕಣ್ಣಿಗೆ ರಾಚುವಂತ ಗಂಭೀರ ಸ್ವರೂಪದ ತಪ್ಪು ಮಾಡಿದ್ರೂ ಅವರನ್ನು ರಕ್ಷಿಸುವುದೇ ನಮ್ಮ ಮೂಲಮಂತ್ರ.ಹಾಗೆಯೇ ಕೆಳಹಂತದ ಸಿಬ್ಬಂದಿ ಕ್ಷುಲ್ಲಕ ಎನಿಸುವಂತ ತಪ್ಪೆಸಗಿದ್ರೂ ನಮಗದು ಗಂಭೀರ.ಅವರನ್ನು ಅಮಾನತುಗೊಳಿಸದೆ ಬಿಡೋ ಪ್ರಶ್ನೆಯೇ ಇಲ್ಲ ಎನ್ನುವಂತ ಆಡಳಿತದ … Read more

EXCLUSIVE…BMTC ಲಾಕ್‌ಡೌನ್‌ “ಗೋಲ್ಮಾಲ್‌”ಮುಖ್ಯಲೆಕ್ಕಾಧಿಕಾರಿ SUSPEND…ಬಾಡಿಗೆ ವಿನಾಯ್ತಿ” ಹಗರಣದಲ್ಲಿ ಲೆಕ್ಕ ವಿಭಾಗದ ಇನ್ನಷ್ಟು ಅಧಿಕಾರಿ-ಸಿಬ್ಬಂದಿಗೂ ಸಂಕಷ್ಟ..!?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ಯಲ್ಲಿ ನಡೆದಿತೆನ್ನಲಾದ ಮತ್ತೊಂದು ಭಾರೀ ಭ್ರಷ್ಟಾ ಚಾರ ಪ್ರಕರಣದಲ್ಲಿ ಆರ್ಥಿಕ ವಿಭಾಗದ ಮುಖ್ಯಾಧಿಕಾರಿಯವರ “ತಲೆದಂಡ”ವಾಗಿದೆ ಎನ್ನುವ ಸ್ಪೋಟಕ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಅದೇ ವಿಭಾಗದ ಇನ್ನಷ್ಟು ಅಧಿಕಾರಿ ಸಿಬ್ಬಂದಿ ವಿರುದ್ದವೂ ಕಠಿಣ ಕ್ರಮಕ್ಕೆ ಆದೇಶವಾಗಿದೆ ಯಂತೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ವಿ ಪ್ರಸಾದ್‌ ಅವರ ಆದೇಶದ ಮೇರೆಗೆ ಈ ಮಹತ್ವದ ಆದೇಶ ಹೊರಬಿ ದ್ದಿದೆ ಎನ್ನುವ ಸ್ಪೋಟಕ ಮಾಹಿತಿ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಗೆ  ಲಭಿಸಿದೆ. ಲಾಕ್‌ … Read more

3 ಸಾರಿಗೆ ನಿಗಮಗಳ ನೂತನ ಅಧ್ಯಕ್ಷರಿಗೆ ನೂರು ಸವಾಲು…-ದಾರಿ ತುಂಬೆಲ್ಲಾ ಮುಳ್ಳು…-ಅವ್ಯವಸ್ಥೆ ಸರಿಯಾದರೆ ಮಾತ್ರ ಉದ್ದಾರ…-ಶ್ರಮಿಕರ ಬದುಕೂ ಹಸನು…

ಬೆಂಗಳೂರು: ಮೊದಲಿಗೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳಿಗೆ ನೂತನ  ಅಧ್ಯಕ್ಷರಾಗಿ ನೇಮಕಗೊಂಡಿ ರುವ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶ್ರೀನಿವಾಸ್,ಆನೇಕಲ್ ವಿಧಾನ ಸಭಾ ಕ್ಷೇತ್ರದ ಶಿವಣ್ಣ ಮತ್ತು ಬೆಳಗಾಂ ಜಿಲ್ಲೆ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸ್ತೇವೆ..ನೀವು ಇರುವಷ್ಟು ದಿನಗಳಲ್ಲಿ ಎಲ್ಲವೂ ಚೆನ್ನಾಗಿ ನಡೆದು ಸಮಸ್ಯೆಗಳಿಂದ  ತುಂಬಿತುಳುಕುತ್ತಿರುವ ನಿಗಮಗಳಿಗೆ ಚೈತನ್ಯ-ಪುನಶ್ಚೇತನ ಸಿಗುವಂತಾಗಲಿ.. ನೂತನ ಅಧ್ಯಕ್ಷರು, ಬಂದ ಪುಟ್ಟ ಹೋದ ಪುಟ್ಟರಂತಾಗದಿರಲಿ.. ಶಕ್ತಿ ಯೋಜನೆ ಸಮರ್ಪಕ ನಿರ್ವಹಣೆ … Read more