ಶಿವಮೊಗ್ಗ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್  ಗೆದ್ದ ಪತ್ರಕರ್ತ ನಾಗೇಶನಾಯ್ಕ ಪುತ್ರಿ ದೀಪಿಕಾ..

ಶಿವಮೊಗ್ಗ: ನಮ್ಮ ಪತ್ರಕರ್ತರ ಮಕ್ಕಳಲ್ಲೂ ಸಾಧಕರಿಗೇನು ಕೊರತೆಯಿಲ್ಲ.ಆದರೆ ಕಾರ್ಯ ಒತ್ತಡದ ಕಾರಣಕ್ಕೆ ತಮ್ಮ ಮಕ್ಕಳ ಪ್ರತಿಯೊಂದು ಬೆಳವಣಿಗೆ ಮೇಲೆ ಕಣ್ಣು ಹಾಯಿಸೋದು ಸ್ವಲ್ಪ ಕಷ್ಟವೇ..ವಿಪರೀತ ಕೆಲಸಗಳಲ್ಲೇ ಮುಳುಗಿ ಹೋಗಿರುವ ಪತ್ರಕರ್ತರಿಗೆ ತಮ್ಮ ಮಕ್ಕಳು ಬೆಳೆಯೋದು ಗೊತ್ತಾಗುವುದಿಲ್ಲ..ಅವರು ಏನ್ ಸಾಧನೆ ಮಾಡಿದ್ದಾರೆ ಎನ್ನುವುದರ ಮಾಹಿತಿನೇ ಇರದಂಗಾಗಿರುತ್ತದೆ. ಮಕ್ಕಳು ಸಾಧನೆ ಮಾಡಿದ ಸುದ್ದಿ ಕೇಳಿದಾಗ ಹೌದಾ..ಎನ್ನುವ ಸಂತೋಷ-ಅಚ್ಚರಿಯ ಉದ್ಘಾರ ಮಾತ್ರ ಅವರಿಂದ ಹೊರಡುತ್ತದೆ.(ನಮ್ಮ ಹೆಮ್ಮೆಯ ಶಿವಮೊಗ್ಗದ ಪತ್ರಕರ್ತ ಮಿತ್ರರ ಮಕ್ಕಳು ಮಾಡಿರುವ ಸಾಧನೆ ಬೆಳೆಕಿಗೆ ಬಂದಿ್ಲ್ಲ ಅಷ್ಟೆ) ಇದನ್ನೆಲ್ಲಾ ಏಕೆ … Read more

ನವೆಂಬರ್ 09 ಕ್ಕೆ ಪತ್ರಕರ್ತರ ಸಂಘದ ಎಲೆಕ್ಷನ್: ಅಖಾಡದಲ್ಲಿ “ತಂತ್ರ-ಕುತಂತ್ರ-ರಣತಂತ್ರ”

ಬೆಂಗಳೂರು: ಪತ್ರಕರ್ತರ ಕ್ಷೇಮಾಭಿವೃದ್ಧಿ ಮತ್ತು ಕಾಳಜಿ,ಒಳಿತಿಗೆ ಏನ್ ಕೆಲಸ ಮಾಡದಿದ್ರೂ ಪರ್ವಾಗಿಲ್ಲ.ನಿರ್ದಿಷ್ಟ ಅವಧಿ ಚುನಾವಣೆ ಹತ್ತಿರವಾಗ್ತಿದ್ದಂಗೆ ಪತ್ರಕರ್ತರ ಸಂಘದಲ್ಲಿ ಚಟುವಟಿಕೆ ಬಿರುಸುಗೊಳ್ಳುತ್ತವೆ. ಅದೇ ರೀತಿ ನವೆಂಬರ್ 9 ರಂದು( 09-11-2025) ನಡೆಯಲಿರುವ ರಾಜ್ಯವ್ಯಾಪಿ ಚುನಾವಣೆ ಕಣ ಕೂಡ ಯಾವುದೇ ರಾಜಕೀಯ ಚುನಾವಣೆಗಿಂತ ಭಿನ್ನವಾಗಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಘಟಕವಾರು ಚುನಾವಣೆಗೆ ಅಂತಿಮ ಹಂತದ ಸಿದ್ದತೆಗಳು ಪೂರ್ಣಗೊಂಡಿವೆ.ಪತ್ರಕರ್ತರು ಅಧಿಕಾರದ ಚುಕ್ಕಾಣಿ ಹಿಡಿಯೊಕ್ಕೆ ಎಲ್ಲಾ ರೀತಿಯ ತಂತ್ರ-ಕುತಂತ್ರಗಾರಿಕೆ, ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಎಲ್ಲಾ ಘಟಕಗಳದ್ದು ಒಂದು ಕೈಯಾದ್ರೆ ಬೆಂಗಳೂರು ನಗರ … Read more

ಏನಾಗ್ತಿದೆ ಅರ್ನಾಬ್‌ ಮಹತ್ವಾಕಾಂಕ್ಷೆಯ “ರಿಪಬ್ಲಿಕ್‌ ಕನ್ನಡ”ದಲ್ಲಿ..!?  “ಅನಿಶ್ಚಿತತೆ”ಯ ಕಾರ್ಮೋಡ ಕವಿದಿರುವುದೇಕೆ..!?

ಕಾರ್ಯಒತ್ತಡಕ್ಕೆ ಸಿಲುಕಿ ತತ್ತರಿಸುತ್ತಿರುವ ಸಿಬ್ಬಂದಿ..?!-ಬೇರೆ ಚಾನೆಲ್‌ ಗಳಿಗೆ ಆಂಕರ್ಸ್‌,ರಿಪೋರ್ಟರ್ಸ್‌ ಗಳ ವಲಸೆ..!? -ಮುಖ್ಯಸ್ಥೆ ಶೋಭಾ ಸ್ಥಾನಕ್ಕೆ ಕುತ್ತು..!? ಬೆಂಗಳೂರು: ರಾಷ್ಟ್ರೀಯವಾದಿ ಪತ್ರಕರ್ತ, ಜರ್ನಲಿಸಂನ ಗ್ರಾಮರನ್ನೇ ಬದಲಿಸಿದ ಮಾದ್ಯಮ ಜಗತ್ತಿನ ದಿಗ್ಗಜ ಅರ್ನಾಬ್‌ ಗೋಸ್ವಾಮಿ ಮಾಲೀಕತ್ವದ ರಿಪಬ್ಲಿಕ್‌ ಕನ್ನಡ ಮತ್ತೆ ಸುದ್ದಿಯಲ್ಲಿದೆ.ಆ ಚಾನೆಲ್‌ ಬಗ್ಗೆ ಮತ್ತೆ ಬರೆಯಲೇಬೇಕಾದ ಸನ್ನಿವೇಶ ಎದುರಾಗಿದೆ.ಇದಕ್ಕೆ ಕಾರಣ ಚಾನೆಲ್‌ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.ಕೈ ತುಂಬಾ ಸಂಬಳ ಪಡೆಯುತ್ತಿದ್ದ ಆಂಕರ್ಸ್‌ ಮತ್ತು ರಿಪೋರ್ಟರ್ಸ್‌ ಗಳ ವಲಸೆ… ಚಾನೆಲ್‌ ನಲ್ಲಿ ಆವರಿಸಿರುವ ಅನಿಶ್ಚಿತತೆಯ ಕಾರ್ಮೋಡ..ಗಣನೀಯ ಪ್ರಮಾಣದಲ್ಲಿ ಆಗಿರುವ … Read more

ಪತ್ರಿಕಾ “ಸಂಪಾದಕ”ನಿಗೆ ಪ್ರಭಾವಿ “ವೈದ್ಯ”ನ ಬೆಂಬಲಿಗ ರಿಂದ “ಜೀವಬೆದರಿಕೆ..! “-ಮನೆಗೆ ತೆರಳಿ “ಆಮಿಷ-ಅವಾಜ್”!  

ಬೆಂಗಳೂರು:ತಪ್ಪು ಯಾರೇ ಮಾಡಲಿ.. ಅದನ್ನು ಎಷ್ಟೇ ಪ್ರಭಾವಿಗಳೆನಿಸಿಕೊಂಡವರು ಮಾಡಲಿ, ಅದಕ್ಕೆ ಶಿಕ್ಷೆ ಆಗಲೇಬೇಕೆನ್ನುತ್ತದೆ ನಮ್ಮ ನೆಲದ ಕಾನೂನು. ಆದರೆ ಬೆಂಗಳೂರಿನ ಅತ್ಯಂತ “ಪ್ರಭಾವಿ” ವೈದ್ಯರೊಬ್ಬರ ವೈದ್ಯಕೀಯ “ಅಕ್ರಮ..! “ದ  ವಿರುದ್ಧ ಸಮರ ಸಾರಿರುವ ಬೆಂಗಳೂರಿನ ಪತ್ರಿಕಾ ಸಂಪಾದಕನ ವಿಷಯದಲ್ಲಿ ಹಾಗೆ ಆಗಿಯೇ ಇಲ್ಲ. ವೈದ್ಯನ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯಕ್ಕೆ ಹತ್ತಿರವಾಗಿದ್ದರೂ ಧೀರ್ಘಾವಧಿಯಿಂದಲೂ ಅವರನ್ನು ರಕ್ಷಿಸುವ ಕೆಲಸ ನಡೆಯುತ್ತಲೇ ಬಂದಿದೆ. ಅಷ್ಟೇ ಅಲ್ಲ, ಕಾನೂನಾತ್ಮಕ ಸಮರ ಸಾರಿರುವ ಪತ್ರಿಕಾ ಸಂಪಾದಕನಿಗೆ ಆ ವೈದ್ಯನ ಬೆಂಬಲಿಗರೆಂದು ಹೇಳಿಕೊಂಡ ಕೆಲವ್ರು … Read more

“ನ್ಯೂಸ್‌ ಫಸ್ಟ್‌” 5 ನೇ ಹುಟ್ಟುಹಬ್ಬದಂದೇ   ಮತ್ತೊಂದು “ಚಾನೆಲ್‌” ಘೋಷಣೆ..

ಸರಳ ಸಮಾರಂಭದಲ್ಲಿ ಸಿಬ್ಬಂದಿ ಮುಂದೆ ರವಿಕುಮಾರ್-ಮಾರುತಿ ಜೋಡಿಯಿಂದ ಮಹತ್ವದ ಘೋಷಣೆ.. ಕನ್ನಡದ ಜನಪ್ರಿಯ ನ್ಯೂಸ್‌ ಚಾನೆಲ್‌ ಗಳಲ್ಲಿ ಒಂದಾದ ನ್ಯೂಸ್‌ ಫಸ್ಟ್‌ ಮೊನ್ನೆ 5ನೇ ಹುಟ್ಟುಹಬ್ಬ ಆಚರಿಸಿಕೊಂಡಿದೆ. ಚಾನೆಲ್‌ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಒಂದು ಚಾನೆಲ್‌ 5 ವರ್ಷ ಪೂರೈಸುವುದು ಸಾಧನೆಯೇ ಸರಿ..ಈ ಹಿನ್ನಲೆಯಲ್ಲಿ ಕನ್ನಡ ಪತ್ರಿಕೋದ್ಯಮದ ಜೋಡೆತ್ತುಗಳಾದ ಮಾರುತಿ-ರವಿಕುಮಾರ್‌ ಬಳಗಕ್ಕೆ ಕನ್ನಡ ಫ್ಲ್ಯಾಶ್‌ ನ್ಯೂಸ್‌ ಬಳಗದಿಂದ ಅಭಿನಂದನೆ ಹಾಗೂ ಶುಭಾಷಯ ( ನಮ್ಮ ಬರವಣಿಗೆಯ ನೈತಿಕತೆ ಮತ್ತು ವಿಶ್ವಾಸಾರ್ಹತೆ ಪ್ರಶ್ನಿಸಿ ಮಾತನಾಡುವವರಿಗೆ ನಮ್ಮದೊಂದು  ಸ್ಪಷ್ಟನೆ … Read more

ವಿದ್ಯಾ ಮಲ್ನಾಡ್‌ ಎನ್ನುವ “ಮಾನವಮುಖಿ-ಜೀವಪರ ಕಾಳಜಿ”ಯ “ಗ್ಯಾರಂಟಿ ” ಆಂಕರ್..  

ಡೋಂಟ್‌ ಮಿಸ್‌ ಇಟ್…‌ ಅರಚೋದು..ಅಬ್ಬರಿಸೋದು-ವಿಷಯವನ್ನು ವಿಕೃತಗೊಳಿಸುವುದೇ  ಆಂಕರಿಂಗ್ ಎನ್ನುವ ಲೆಕ್ಕಾಚಾರಕ್ಕೆ ಅಪವಾದದಂತಿದ್ದ  ವಿದ್ಯಾ ಮಲ್ನಾಡ್‌ ನಿರೂಪಣೆ.. ಬೆಂಗಳೂರು:ಇನ್ನೊಬ್ಬರ ಮನೆ-ಸಂಸಾರ, ವೈಯುಕ್ತಿಕ ವಿಷಯವನ್ನೇ ಟಿಆರ್‌ ಪಿ ಗೋಸ್ಕರ ಬಂಡವಾಳವಾ ಗಿಸಿಕೊಂಡು ಬೇಳೆ ಬೇಯಿಸಿಕೊಳ್ಳುವುದೇ ಬಹುತೇಕ  ಮಾದ್ಯಮಗಳ ಕಸುಬಾಗಿ ಹೋಗಿದೆ.ಇದು ಸಾರ್ವಜನಿಕ ವಲಯದಲ್ಲಿ ಮಾದ್ಯಮಗಳ ಬಗ್ಗೆ ಛೀ..ಥೂ ಎಂದು ಉಗಿಯುವ  ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತ.( ನ್ಯೂಸ್‌ ಚಾನೆಲ್‌ ಗಳಲ್ಲಿ ಬಹುತೇಕ ಇಂಥದ್ದೇ ಮನೆಹಾಳು ಮಾಡುವ ಸುದ್ದಿಗಳೇ ಬರುತ್ತಿರುವುದರಿಂದ ಪಾಪ…ಇದನ್ನು ಬಿಟ್ಟು ಬೇರೆ ನೋಡಬೇಕಾದ ಪರ್ಯಾಯ ಆಯ್ಕೆಯೇ ವೀಕ್ಷಕರಿಗೆ ಸಿಗುತ್ತಿಲ್ಲ). … Read more

ರಾಜ್ ನ್ಯೂಸ್(RAJ NEWS KANNADA) ಕನ್ನಡಕ್ಕೆ ಹಿರಿಯ ಪತ್ರಕರ್ತ ಶ್ರೀಧರ್ ಸಾರಥಿ..

ಬೆಂಗಳೂರು:ಮಾದ್ಯಮ ಕ್ಷೇತ್ರದಲ್ಲಿ ಸಧ್ಯ ಚರ್ಚೆಯಲ್ಲಿರುವ ಅನೇಕ ವಿದ್ಯಾಮಾನಗಳಲ್ಲಿ ರಾಜ್ ಟಿವಿ ಪ್ರಮುಖವಾದುದು ರಾಜ್ ನ್ಯೂಸ್ ಕನ್ನಡದ್ದು.ಅನೇಕ ಕಾರಣಗಳಿಂದ ಹಿಂದಿದ್ದವರ ಕೈಲಿಂದ ಚಾನೆಲ್ ಮತ್ತೊಬ್ಬರ ಕೈ ಗೆ ಜಾರಿದೆ.ಅದರ ಸಾರಥಿ-ದಿಕ್ಸೂಚಿ ಎಲ್ಲವೂ ಕನ್ನಡದ ಹಿರಿಯ ಪತ್ರಕರ್ತ ಶ್ರೀಧರ್ ಎನ್ನಲಾಗ್ತಿದೆ. ತಮಿಳ್ನಾಡು ಮೂಲದ ರಾಜ್ ಟಿವಿ ಕರ್ನಾಟಕದಲ್ಲಿ ಚಾನೆಲ್ ಆರಂಭಿಸಿದಾಗಲೇ ಅದರ ಭವಿಷ್ಯ ನುಡಿಯಲಾಗಿತ್ತು.ಹಮೀದ್ ಪಾಳ್ಯ ಅವರಂಥವ್ರು ಚಾನೆಲ್ ಆರಂಭಿಸಿದರಾದ್ರೂ ಅದರ ಬಗ್ಗೆ ಅವರು ಗಮನ ಹರಿಸಿದ್ದು ಕಡಿಮೆ ಎನ್ನುವ ಮಾತುಗಳಿದ್ವು .ಹಾಗಾಗಿಯೇ ಕನ್ನಡದ ಚಾನೆಲ್ ಗಳಿಗೆ ಪೈಪೋಟಿ ನೀಡುವ … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more

“ರಿಪಬ್ಲಿಕ್ ಕನ್ನಡ”ದಲ್ಲಿ ಮತ್ತೆ  ಉದ್ಯೋಗ ಕಡಿತ..! ಮತ್ತಷ್ಟು ಉದ್ಯೋಗಿಗಳಿಗೂ  ಕೆಲಸ ಕಳೆದುಕೊಳ್ಳುವ ಆತಂಕ.!

ಬೆಂಗಳೂರು:ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನಲ್ಲಿ  ಉದ್ಯೋಗಿಗಳ ಕೆಲಸ ಕಸಿದುಕೊಳ್ಳುವ  ಪರಂಪರೆ ಮುಂದುವರೆದಿದೆ ಯಂತೆ….ಶೋಭಾ ಮಳವಳ್ಳಿ, ಚಾನೆಲ್ ಮುಖ್ಯಸ್ಥೆಯಾಗಿ ಬಂದ ಮೇಲೆ ನಡೆದ ಮೊದಲ ಬೆಳವಣಿಗೆಯಿದು…ಹಾಗೆಂದು ಇದಕ್ಕೆ ಅವರನ್ನು ದೂಷಿಸುವುದು ನಮ್ಮಉದ್ದೇಶವಲ್ಲ.ಅದು  ಸರಿಯೂ ಅಲ್ಲ .ಅಂದ್ಹಾಗೆ  ಚಾನೆಲ್ ನಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ಕಡಿತಕ್ಕೆ, ಮ್ಯಾನೇಜ್ಮೆಂಟ್  ಕೊಟ್ಟಿರುವ ಕಾರಣ ಅನಗತ್ಯ ಸಿಬ್ಬಂದಿಯ ಹೊರೆ.ಹೆಚ್ಚುವರಿ ಸಿಬ್ಬಂದಿಯನ್ನು  ಕಡಿತಗೊಳಿಸಲೇಬೇಕಾದ ಕಾರಣಕ್ಕೆ ಸುಮಾರು 10 ಜನರನ್ನು ತೆಗೆಯಲಾಗಿದೆ ಎನ್ನುವ ಸುದ್ದಿ ಬಂದಿದೆ..ಆದರೆ ಆಡಳಿತದ ದಿಢೀರ್ ನಿರ್ದಾರದಿಂದ ಕೆಲಸ ಕಳೆದುಕೊಂಡ ಸಿಬ್ಬಂದಿ ಶಾಕ್ … Read more

“ಅವಮಾನ”ದಿಂದಲೇ “ರಿಪಬ್ಲಿಕ್ ಕನ್ನಡ”ದಿಂದ ಸ್ಟಾರ್ ಆಂಕರ್ ಜಯಪ್ರಕಾಶ್ ಶೆಟ್ಟಿ ಹೊರನಡೆದ್ರಾ.?!

ಹಿರಿಯ ಹಾಗು ಅನುಭವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿದ್ದು ಎಷ್ಟು ಸರಿ.?! ಓದುವ ಮುನ್ನ ಸ್ಷಪ್ಟನೆಗಾಗಿ : ಸುದ್ದಿಮನೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಇಲ್ಲದ ತಗಾದೆ ನಿಮಗೇಕೆ…ಹಾಗೆಯೇ ರಿಪಬ್ಲಿಕ್ ಕನ್ನಡದಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಅಂತದ್ದ್ಯಾವ ಮಹತ್ವ ಕೊಡಬೇಕಿದೆ ಎಂದು ಅನೇಕರು ಪ್ರಶ್ನೆ ಮಾಡಬಹುದು.ಮುಖ್ಯವಾಗಿ ರಿಪಬ್ಲಿಕ್ ಕನ್ನಡದ ಮ್ಯಾನೇಜ್ಮೆಂಟ್ ಇದರ ಬಗ್ಗೆ ಆಕ್ಷೇಪ ಎತ್ತಬಹುದು.ಆದರೆ ಮಾದ್ಯಮ ಕ್ಷೇತ್ರದಲ್ಲಿ ಏನೇ ವ್ಯತ್ಯಾಸವಾದ್ರೂ ಯಾರಿಗೇನೇ ಅನ್ಯಾಯವಾದ್ರೂ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸುವುದಲ್ಲದೇ ಅದನ್ನು … Read more