ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಕೆಎಸ್ ಆರ್ ಟಿಸಿ  ಡ್ರೈವರ್ ಬಲಿ..!?

ಶಿವಮೊಗ್ಗ ಜಿಲ್ಲೆ ಸಾಗರ ಡಿಪೋದ ಶ್ರೀಶೈಲ ಬಿರಾದಾರ್ ಕಿರುಕುಳಕ್ಕೆ ಡ್ರೈವರ್ ನಾಗಪ್ಪ ಬಲಿ..! ಶಿವಮೊಗ್ಗ/ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ರೂ ಅದೆಲ್ಲಕ್ಕಿಂತ ಮೊದಲು ಅಮೂಲಾಗ್ರ ಬದಲಾವಣೆ ಆಗಬೇಕಿರುವುದು ಅಧಿಕಾರಿಗಳ ಆಡಳಿತ ವೈಖರಿ-ಸಿಬ್ಬಂದಿ ಜತೆಗಿನ ವ್ಯವಹಾರದಲ್ಲಿ..ಕೆಳ ಹಂತದ ಸಿಬ್ಬಂದಿಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುವ ಅಧಿಕಾರಿಗಳ ದೌರ್ಜನ್ಯ-ಆಟಾಟೋಪಕ್ಕೆ ಶಿವಮೊಗ್ಗ ವಿಭಾಗೀಯ ಕಚೇರಿಯ ಸಾಗರ ಡಿಪೋದ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ. ಶಿವಮೊಗ್ಗ ವಿಭಾಗೀಯ ಕಚೇರಿಗೆ ಶಿವಮೊಗ್ಗ, ಸಾಗರ,ಶಿಕಾರಿಪುರ, ಭದ್ರಾವತಿ ಸೇರಿದಂತೆ ಐದು … Read more

“ಆರ್ಥಿಕ ಸಂಕಷ್ಟ”ದ ನಡುವೆಯೇ bmtc ಅಧ್ಯಕ್ಷ-ಉಪಾಧ್ಯಕ್ಷರಿಗೆ “ಕಾರ್ ಕ್ರೇಜ್”!

ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವ ಗಾಧೆ ನೆನಪಿಸುತ್ತದೆ ಬಿಎಂಟಿಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹಠಮಾರಿ ಧೋರಣೆ. ಬಿಎಂಟಿಸಿ ಎನ್ನುವ ಸಂಸ್ಥೆ ಮುನ್ನಡೆಸಿಕೊಂಡು ಹೋಗಲು ಖಜಾನೆಯಲ್ಲಿ ಹಣದ ಕೊರತೆ ಬಾಧಿಸುತ್ತಿರುವಾಗಲೇ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಹೊಸ ಹಾಗೂ ದುಬಾರಿ ಕಾರಿನ ಕ್ರೇಜ್ ಶುರುವಾಗಿದೆಯಂತೆ ನೋಡಿ..ತನಗೆ ಐಷಾರಾಮಿ ಹಾಗೂ ದುಬಾರಿ ಬೆಲೆಯ ಕಾರು ಬೇಕೇ, ಬೇಕೆಂದು ಹಠ ಮಾಡಿ ಅಧ್ಯಕ್ಷ ಆರಾಧ್ಯ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ದ್ದಾರಂತೆ.ಅಧ್ಯಕ್ಷರಿಗೆ ಹೊಸ ಕಾರು ಸಿಗುತ್ತಿದ್ದಂತೆ ಉಪಾಧ್ಯಕ್ಷ ನಿಕೇತ್ ಮೌರ್ಯ ಕೂಡ … Read more

“ಸುವರ್ಣ ನ್ಯೂಸ್‌” ನಲ್ಲಿ ಬದಲಾಗ್ತಿದೆಯೇ “ಹೊಣೆಗಾರಿಕೆ”ಯ ಹೆಗಲು..! ಅಜಿತ್‌ ಹನುಮಕ್ಕನವರ್‌ ಸ್ಥಾನಕ್ಕೆ ನೂತನ “ಸಾರಥಿ”…!

ಏಷ್ಯಾ ನೆಟ್‌ ಸುದ್ದಿ ಸಂಸ್ಥೆ(ASIANETNEWS)ಯ ಹೆಮ್ಮೆಯ ಕನ್ನಡದ ವಾಹಿನಿ ಸುವರ್ಣ ನ್ಯೂಸ್‌ (SUVARNA NEWS CHANNEL)ನಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸಲಾರಂಭಿಸಿದೆಯೇ.?  ಬದಲಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಇಂತದ್ದೊಂದು ಅನುಮಾನ ಮೂಡಿಸುತ್ತವೆ..ಬಹುಷಃ 2026ರ ಹೊಸ ವರ್ಷವನ್ನು ಹೊಸ ಮುಖಗಳ ಮೂಲಕವೇ ಆರಂಭಿಸಲು ಚಾನೆಲ್‌ ನ ಆಡಳಿತ ನಿರ್ದರಿಸಿದಂತಿದೆ ಎನ್ನುವ ಮಾತುಗಳು ಅಲ್ಲಿಂದಲೇ ಕೇಳಿಬರಲಾರಂಭಿಸಿವೆ..ನೂತನ ಸಾರಥಿಯ ಹುಡುಕಾಟ ಬಹುತೇಕ ಮುಗಿದಿದೆ ಎನ್ನಲಾಗುತ್ತಿದ್ದು ಎಲ್ಲಾ ನಿರೀಕ್ಷೆಯಂತಾದ್ರೆ  ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌( AJITH HANUMAKKANAVAR) ಸ್ಥಾನದಲ್ಲಿ ಪಲ್ಲಟವಾದ್ರೂ ಆಶ್ಚರ್ಯವಿಲ್ಲವಂತೆ. ಸುವರ್ಣ … Read more

“ಸುವರ್ಣ ಕುಟುಂಬದ “ತಾಯಿ”ಜೀವ ಲಲಿತಮ್ಮ ದುರ್ಮರಣ-ಕಂಬನಿ

ಮೊದಲಿಗೆ ಆ ತಾಯಿ ಸಾವಿಗೆ ಭಾವಪೂರ್ಣ  ಅಶೃತರ್ಪಣ.ಆ ತಾಯಿ ಸಾವಿಗೆ ಕನ್ನಡ ಫ್ಲ್ಯಾಶ್ ನ್ಯೂಸ್ ಕಂಬನಿ ಮಿಡಿಯುತ್ತದೆ.ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ..ಆಕೆಯ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ನೀಡಲಿ..ಅಂದ್ಹಾಗೆ ಇದು ಅನ್ಯಾಯದ ಸಾವೇ ನಿಜ.ಕೆಲಸ ಮುಗಿಸಿಕೊಂಡು ಹೋಗುವಾಗ ಓಕಳಿಪುರಂ ಬಳಿ ಯಮರೂಪದಲ್ಲಿ ಬಂದ ಲಾರಿ ಆ ತಾಯಿಯನ್ನು ಆಪೋಷನ ತೆಗೆದುಕೊಂಡಿದೆ.ಸ್ಥಳದಲ್ಲೇ ಆ ತಾಯಿ ಉಸಿರು ಚೆಲ್ಲಿದ್ದಾರೆ. ಆ ತಾಯಿಯ ಸಾವು ಸುವರ್ಣ ನ್ಯೂಸ್ ಬಳಗವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.ಆ ತಾಯಿಯ ಜತೆ ಇಡೀ … Read more

“ಮಾರ್ಕೆಟ್ ಶೇರ್” ನಲ್ಲಿ ನ್ಯೂಸ್ 18 ಕನ್ನಡ ಸ್ಥಾನ ನಂ. 1 “ಅಬಾಧಿತ” ವಾಗಿದ್ರೂ “ಟಿಆರ್ ಪಿ”ಯಲ್ಲಿ ಟಿವಿ9 ನಂ.1..!

ಬೆಂಗಳೂರು: ನ್ಯೂಸ್ 18 ಕನ್ನಡವನ್ನು ಟಿವಿ9 ಬೀಟ್ ಮಾಡಿ ನಂಬರ್ 1 ಸ್ಥಾನ ಪಡೆದಿದೆ ಎನ್ನುವ ಸುದ್ದಿ ಬರೆದ ಮೇಲೆ ಸಾಕಷ್ಟು ಕರೆಗಳು ಬರಲಾರಂಭಿಸಿವೆ.ಈ ಪೈಕಿ ಕೆಲವು ನಾವು ಬರೆದಿದ್ದೇ ತಪ್ಪು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ರೆ ಇನ್ನು ಕೆಲವು ಟಿಆರ್ ಪಿ ಹಾಗು ಮಾರ್ಕೆಟ್ ಶೇ್ರ್ ಎನ್ನುವ ಎರಡು ಪರಿಕಲ್ಪನೆಗಳ ನಡುವೆ ಇರುವ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡುವ ಸಲಹೆ-ಮಾರ್ಗದರ್ಶನ ನೀಡುವಂತಿತ್ತು.ಎರಡು ಅಭಿಪ್ರಾಯಗಳನ್ನು ಸ್ವಾಗತಿಸುತ್ತಾ ಲೇಖನದ ಬಗ್ಗೆ ಸ್ಪಷ್ಟನೆ ನೀಡಬಯಸುತ್ತೇವೆ. ಎರಡು ಆಯಾಮಗಳಲ್ಲಿ ಚಾನೆಲ್ ನ ರೀಚ್ … Read more

TRP ರೇಸ್ ನಲ್ಲಿ ಮುಗ್ಗರಿಸಿದ “ನ್ಯೂಸ್ 18 ಕನ್ನಡ”-ನಂಬರ್ 1 ಸ್ಥಾನಕ್ಕೆ ಮತ್ತೆ “ಟಿವಿ 9 ಕನ್ನಡ”

ನ್ಯೂಸ್ 18 ಕನ್ನಡ ಸುದ್ದಿ ಮನೆಯಲ್ಲಿ “ನೀರವ ಮೌನ-ನಿರಾಶೆ”- ಆತಂಕ: ಸಿಬ್ಬಂದಿಗೆ ತಪ್ಪಿದ ಪಾರ್ಟಿ ಸಂಭ್ರಮ..ಯಾಕೆ ಗೊತ್ತಾ,..? ಬೆಂಗಳೂರು: ನ್ಯೂಸ್ 18 ಕನ್ನಡ(NEWS 18 KANNADA) ದ ಮನೆಯಲ್ಲಿದ್ದ ಸಂಭ್ರಮ ಮರೆಯಾಗಿದೆ.ಆದರೆ ಟಿವಿ9 (TV KANNADA ) ಮನೆಯಲ್ಲಿ ಅದೇ ಸ್ಥಿತಪ್ರಜ್ಞತೆ..( ಏಕೆಂದರೆ ಟಿವಿ9 ಬಳಗ ಕಳೆದ ವಾರದ ಟಿಆರ್ ಪಿ ರೇಸ್ ನಲ್ಲಿ ಹಿಂದೆ ಬಿದ್ದಾಗ ಸ್ವಲ್ಪ ವಿಚಲಿತವಾಗಿತ್ತಾದ್ರೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. .ಯಾಕಂದ್ರೆ ಇದೆಲ್ಲಾ ಟಿಆರ್ ಪಿ ಗೇಮ್ ಎನ್ನುವುದು ಮ್ಯಾನೇಜ್ಮೆಂಟ್ ಗೆ ಗೊತ್ತಿತ್ತಂತೆ..!) ಮತ್ತೆ … Read more

“ಸುವರ್ಣ”ದಲ್ಲಿ ಬದಲಾವಣೆ “ಕ್ರಾಂತಿ”..!:- ಮ್ಯಾನೇಜ್ಮೆಂಟ್ “ರಂಗಪ್ರವೇಶ”..! ಉಳಿಯೋರು ಯಾರು..?

ಸುವರ್ಣ ನ್ಯೂಸ್(SUVARNA KANNADA NEWS CHANNEL), ಕನ್ನಡದ ಪ್ರತಿಷ್ಟಿತ ನ್ಯೂಸ್ ಚಾನೆಲ್( KANNADA NEWS CHANNELS) ಗಳಲ್ಲೊಂದು.ಆದರೆ ಎಷ್ಟೇ ಶ್ರಮ ಪಟ್ಟರೂ,ಏನೆಲ್ಲಾ ಸಾಹಸ ಮಾಡಿದ್ರೂ,..ಸುದ್ದಿ ಕ್ಷೇತ್ರದಲ್ಲಿ ಘಟಾನುಘಟಿಗಳೆನಿಸಿಕೊಳ್ಳುವ ಪತ್ರಕರ್ತರಿದ್ದರೂ ನಂಬರ್ ಒನ್ ಸ್ಥಾನ ಇಂದಿಗೂ ಅದಕ್ಕೆ  ಗಗನಕುಸುಮ. ಮಾದ್ಯಮ ಲೋಕದ ದಿಗ್ಗಜ ರಾಜೀವ್ ಚಂದ್ರಶೇಖರ್( RAJIV CHANDRASHEKAR) ಮಾಲೀಕತ್ವದ  ಏಷ್ಯಾ ನೆಟ್ (ASIANET NETWORK) ನೆಟ್ವರ್ಕ್ ಚಾನೆಲ್ ಸುಧಾರಣೆ, ಬೆಳವಣಿಗೆಗೆ ಕೋಟಿಗಳನ್ನು ಸುರಿದ್ರೂ ಟಿಆರ್ ಪಿ ( TRP-TELE RATING POINT)ವಿಷಯದಲ್ಲಿ ಟಿವಿ-9(TV9 KANNADA), ಪಬ್ಲಿಕ್ ಟಿವಿ( … Read more

“ನ್ಯೂಸ್‌” ಓದುವಾಗಲೇ “ಸುದ್ದಿಮನೆ”ಯಿಂದ ಆ “ಆಂಕರ್‌” ಹೊರನಡೆದಿದ್ದೇಕೆ ..!?

ಇದು ಸುದ್ದಿಮನೆಯೊಂದರಲ್ಲಿ ಇತ್ತೀಚೆಗೆ ನಡೆದಿರಬಹುದಾದ ವಿಚಿತ್ರ ಹಾಗೂ ಅಪರೂಪದ ಘಟನೆ.. ನ್ಯೂಸ್ ಬುಲೆಟಿನ್ ಮಾಡುವಾಗಲೇ ಆಂಕರ್ ವೊಬ್ಬ ಹೊರನಡೆದಿದ್ದಾನೆ.ಆತ ಕೆಲಸ ಮಾಡುತ್ತಿರುವ ಚಾನೆಲ್ ಹೆಚ್ಚೇನೂ ಪ್ರಚಲಿತದಲ್ಲಿಲ್ಲದ ಕಾರಣಕ್ಕೇನೋ ಅದು ದೊಡ್ಡಮಟ್ಟದ ಸುದ್ದಿಯಾಗಿಲ್ಲ.. ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ನಡೆದಿದ್ದೇನು ಎನ್ನುವುದನ್ನು ವಿವರಿಸಿದ್ದಾನೆ. ಹಾಗೆಯೇ ತನ್ನ ನಿಲುವು- ನಿರ್ದಾರವನ್ನು ಗಟ್ಟಿದ್ವನಿಯಲ್ಲಿ ಸಮರ್ಥಿಸಿಕೊಂಡಿದ್ದಾನೆ. ಸುದ್ದಿಮನೆಗಳಲ್ಲಿ ನಡೆವ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆ ಎರಡರ ಮೇಲೂ ಬೆಳಕು ಚೆಲ್ಲುವಂತ ಜವಾಬ್ದಾರಿಯುತ ಕೆಲಸ ಮಾಡುತ್ತಾ ಬಂದಿರುವ ಕನ್ನಡ ಫ್ಲ್ಯಾಶ್ ನ್ಯೂಸ್ ಗೆ … Read more

“ಸಂಕಷ್ಟ”ದಲ್ಲಿದ್ದ “ನ್ಯೂಸ್ ಫಸ್ಟ್” ಗೆ  ಸಿಕ್ಕೇಬಿಟ್ರಂತೆ “ಹೂಡಿಕೆ”ದಾರರು…! ಇನ್ನಾದ್ರು ನೀಗುತ್ತದಾ “ಮಾದ್ಯಮಮಿತ್ರ”ರ ಬವಣೆ..!

ಬೆಂಗಳೂರು: ಮತ್ತೊಮ್ಮೆ ನ್ಯೂಸ್ ಫಸ್ಟ್ ಬಗ್ಗೆ ಬರೆಯಬೇಕಾಗ್ತಿದೆ…ಅಲ್ಲಿ ಕೆಲಸ ಮಾಡ್ತಿರುವ ಮಾದ್ಯಮ ಸ್ನೇಹಿತರ ದೃಷ್ಟಿಯಲ್ಲಿ ಇದು ಒಂದ್ರೀತಿ ಪಾಸಿಟಿವ್ ಆದಂಥ ಸುದ್ದಿನೇ.(.ಅದನ್ನು ಬೇರೆ ರೀತಿ ಅರ್ಥೈಸುವಂತವರಿಗೆ ನಾವೇನು ಮಾಡ್ಲಿಕ್ಕಾಗೊಲ್ಲ ಬಿಡಿ). ಸಂಬಳ ಸಿಗದೆ ಕಷ್ಟದಲ್ಲಿರುವ ಸ್ನೇಹಿತರ ಪಾಲಿಗೆ ಇದೊಂದು ರೀತಿ ಚೇತೋಹಾರಿಯಾದ ವಿಚಾರ.ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಸಂಕಷ್ಟದಲ್ಲಿದೆ ಎಂದೇ ಬಿಂಬಿಸಲಾಗ್ತಿದ್ದ ಮ್ಯಾನೇಜ್ಮೆಂಟ್ ನ ಬವಣೆಯೂ ಈ ಮೂಲಕ ದೂರವಾಗಿದೆ ಎನ್ನುವುದು ಕೂಡ ಸಮಾಧಾನದ  ವಿಚಾರ..ಇದನ್ನೆಲ್ಲಾ ಹೇಳೊಕ್ಕೆ ಕಾರಣವೂ ಇದೆ..ಚಾನೆಲ್ ನ ಕೆಲವು ವಿಶ್ವಸನೀಯ ಮೂಲಗಳಿಂದ ಕನ್ನಡ ಫ್ಲ್ಯಾಶ್ ನ್ಯೂಸ್ … Read more

ಶಿವಮೊಗ್ಗ ಜಿಲ್ಲಾ ಚೆಸ್ ಚಾಂಪಿಯನ್ ಶಿಪ್  ಗೆದ್ದ ಪತ್ರಕರ್ತ ನಾಗೇಶನಾಯ್ಕ ಪುತ್ರಿ ದೀಪಿಕಾ..

ಶಿವಮೊಗ್ಗ: ನಮ್ಮ ಪತ್ರಕರ್ತರ ಮಕ್ಕಳಲ್ಲೂ ಸಾಧಕರಿಗೇನು ಕೊರತೆಯಿಲ್ಲ.ಆದರೆ ಕಾರ್ಯ ಒತ್ತಡದ ಕಾರಣಕ್ಕೆ ತಮ್ಮ ಮಕ್ಕಳ ಪ್ರತಿಯೊಂದು ಬೆಳವಣಿಗೆ ಮೇಲೆ ಕಣ್ಣು ಹಾಯಿಸೋದು ಸ್ವಲ್ಪ ಕಷ್ಟವೇ..ವಿಪರೀತ ಕೆಲಸಗಳಲ್ಲೇ ಮುಳುಗಿ ಹೋಗಿರುವ ಪತ್ರಕರ್ತರಿಗೆ ತಮ್ಮ ಮಕ್ಕಳು ಬೆಳೆಯೋದು ಗೊತ್ತಾಗುವುದಿಲ್ಲ..ಅವರು ಏನ್ ಸಾಧನೆ ಮಾಡಿದ್ದಾರೆ ಎನ್ನುವುದರ ಮಾಹಿತಿನೇ ಇರದಂಗಾಗಿರುತ್ತದೆ. ಮಕ್ಕಳು ಸಾಧನೆ ಮಾಡಿದ ಸುದ್ದಿ ಕೇಳಿದಾಗ ಹೌದಾ..ಎನ್ನುವ ಸಂತೋಷ-ಅಚ್ಚರಿಯ ಉದ್ಘಾರ ಮಾತ್ರ ಅವರಿಂದ ಹೊರಡುತ್ತದೆ.(ನಮ್ಮ ಹೆಮ್ಮೆಯ ಶಿವಮೊಗ್ಗದ ಪತ್ರಕರ್ತ ಮಿತ್ರರ ಮಕ್ಕಳು ಮಾಡಿರುವ ಸಾಧನೆ ಬೆಳೆಕಿಗೆ ಬಂದಿ್ಲ್ಲ ಅಷ್ಟೆ) ಇದನ್ನೆಲ್ಲಾ ಏಕೆ … Read more