” pOPಬ್ಯಾನ್” ಎನ್ನೋದೇ “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”
ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.
ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.
ಸಾರಿಗೆ ಹೋರಾಟಗಳ ಇತಿಹಾಸದಲ್ಲಿ ಕರಾಳ ಅಧ್ಯಾಯ- ವೇತನ ಪರಿಷ್ಕರಣೆಯೂ ಇಲ್ಲ:ಬೇಡಿಕೆ ಡಿಕೆಗಳ ಈಡೇರಿಕೆನೂ ಇಲ್ಲ..ಪರಸ್ಪರರ ಮೇಲೆ ದೂರು-ಸಂಘಟನೆಗಳಲ್ಲಿನ ಒಡಕಿಗೆ ಸಿಎಂ ಅಚ್ಚರಿ..ಮಾತುಕತೆ ವೈಫಲ್ಯಕ್ಕೆ ಸಂಘಟನೆಗಳ ನಡುವಿನ ಬಿರುಕು-ಭಿನ್ನಾಭಿಪ್ರಾಯ-ಸಂಘರ್ಷವೇ ಕಾರಣವಾಗಿದ್ದು ದುರಂತ-ದೌರ್ಭಾಗ್ಯಪೂರ್ಣ. ಬೆಂಗಳೂರು: ಸಾರಿಗೆ ಮುಷ್ಕರ ನಡೆಯೋದಾಗ್ಲಿ, ನಡೆದರೂ ಹೆಚ್ಚಿನ ಸಂಖ್ಯೆಯ ಸಾರಿಗೆ ಸಿಬ್ಬಂದಿ ಅದರಲ್ಲಿ ಪಾಲ್ಗೊಳ್ಳುವುದಾಗಲಿ ಬಹುತೇಕ ಡೌಟ್ ಎನಿಸ್ತದೆ.ಮುರಿದುಬಿದ್ದ ಮಾತುಕತೆ, ಹೈಕೋರ್ಟ್ ನ ಕಟ್ಟಪ್ಪಣೆ ಕೂಡ ಇದಕ್ಕೆ ಪ್ರಮುಖ.ಅದೆಲ್ಲವನ್ನು ಮೀರಿ ಮಾತುಕತೆಯ ವೈಫಲ್ಯಕ್ಕೆ ಕಾರಣವಾಯಿತೆನ್ನಲಾದ ಸಂಗತಿಗಳು ಸಾರಿಗೆ ಹೋರಾಟದ ಇತಿಹಾಸದಲ್ಲಿ ಅತ್ಯಂತ ಕೆಟ್ಟದಾಗಿ ನೆನಪಿಸಿಕೊಳ್ಳಬೇಕಾದ ಕ್ಷಣಗಳಾಗಿ … Read more
ಬೆಂಗಳೂರು:ನಾಳೆಯಿಂದ ಸಾರಿಗೆ ಮುಷ್ಕರ ನಡೆಯುತ್ತಾ..? ಸಂಚಾರಿ ನಾಡಿ ಸಾರಿಗೆ ವ್ಯವಸ್ಥೆ ಸ್ಥಬ್ದವಾಗುತ್ತಾ..? 23 ಸಾವಿರ ಬಸ್ ಗಳು ರಸ್ತೆಗಿಳಿಯೊಲ್ವಾ..? 1.2 ಲಕ್ಷ ಸಿಬ್ಬಂದಿ ಕೆಲಸ ಮಾಡೊಲ್ವಾ… ಕೋಟ್ಯಾಂತರ ಗಳಿಕೆ ಖೋತವಾಗುತ್ತಾ..? ಇಷ್ಟೆಲ್ಲಾ ಪ್ರಶ್ನೆಗಳಿಗೆ ಇವತ್ತೆ ಸ್ಪಷ್ಟ ಚಿತ್ರಣ ದೊರೆಯಲಿದೆ.ಈ ನಡುವೆ ಶೇಕಡಾ 25 ರಷ್ಟು ವೇತನ ಪರಿಷ್ಕರಣೆ ಮಾಡಲೇಬೇಕೆನ್ನುವುದು ಸಾರಿಗೆ ಸಂಘಟನೆಗಳ ಬಿಗಿಪಟ್ಟಾಗಿದ್ರೆ ಶೇಕಡಾ 8 ರಿಂದ 10ಕ್ಕೆ ನಾವ್ ರೆಡಿ ಅನ್ತಿದೆಯಂತೆ ಸರ್ಕಾರ..ಇಂದು ಸಂಜೆ-ರಾತ್ರಿವರೆಗೆ ಜಗ್ಗಾಡಿ, ತೂಗಿ ಅಳೆದು ಶೇಕಡಾ 12-13 ಕ್ಕೆ ವೇತನ ಪರಿಷ್ಕರಣೆ … Read more
ಬೆಂಗಳೂರು: ಪಿಯು ಬೋರ್ಡ್ ನ ನಿರ್ದೇಶಕರಾಗಿದ್ದ ಮಹಿಳಾ ಐಎಎಸ್ ಅಧಿಕಾರಿ ಸಿಂಧೂ ಬಿ ರೂಪೇಶ್ ಅವರನ್ನು ದಿಢೀರ್ ವರ್ಗ ಮಾಡಲಾಗಿದೆ.ಇಲಾಖೆ ಯಲ್ಲಿ ಸಾಕಷ್ಟು ಉತ್ತಮ ಕೆಲಸ ಮಾಡುವ ಅವಕಾಶವಿದ್ದಾಗ್ಯೂ ನಿಷ್ಕ್ರೀಯವಾಗಿದ್ದರೆನ್ನುವ ಆಪಾದನೆ ಹೊತ್ತಿದ್ದ ಐಎಎಸ್ ಅಧಿಕಾರಿ ಸಿಂದೂ ಬಿ ರೂಪೇಶ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ.ಸಿಂಧೂ ಅವರನ್ನು ಕೇಂದ್ರ ಸೇವೆಗೆ ನಿಯೋಜನೆ ಮಾಡಲಾಗಿದೆ ಎನ್ನಲಾಗ್ತಿದೆ.ಅಲ್ಲಿ ಅವರು 5 ವರ್ಷಗಳ ಕಾಲ ಕೆಲಸ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. … Read more
ಮೊಬೈಲ್ ನೆಟ್ವರ್ಕ್ ಗೆ ಪರದಾಡುತ್ತಿರುವ ರೋಗಿ ಸಂಬಂಧಿಗಳು-ಇಷ್ಟು ದೊಡ್ಡ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೊಬೈಲ್ ಟವರ್ ಇಲ್ಲ ಎನ್ನಲಾಗುತ್ತಿರುವುದೇ ದುರಾದೃಷ್ಟಕರ. ಬೆಂಗಳೂರು: ಹೇಳಿಕೊಳ್ಳೊಕ್ಕೆ ದೊಡ್ಡ ಹಾಗೂ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆ..ಆದರೆ ರೋಗಿಗಳಿಗೆ ಏನಾದ್ರೂ ಆರೋಗ್ಯ ಸಮಸ್ಯೆಯಾದಲ್ಲಿ,ಏರುಪೇರುಗಳಾದ್ದಲ್ಲಿ ಅದನ್ನು ಸಂಬಂಧಿಗಳಿಗೆ ಸಂವಹನಿಸಲು ಪರದಾಡುವಂತ ಸ್ತಿತಿ ಇದೆ ಎಂದ್ರೆ ಅದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ..ಇದನ್ನು ಕೇಳಿದ್ರೆ ನಿಮ್ಗೆ ಆಶ್ವರ್ಯ ಆಗಬಹುದು..ಹಾಗೆಯೇ ಹೌದಾ..! ಎಂದು ಉಬ್ಬೇರಿಸಿ ಕೇಳಬಹುದು..ಆದ್ರೆ ಇದು ಸತ್ಯ… ಸತ್ಯ..ವಿಕ್ಟೋರಿಯಾ ಕ್ಯಾಂಪಸ್ ನಲ್ಲಿರುವ ಆರೋಗ್ಯ ಕೇಂದ್ರಗಳ ಒಳಗೆ ಮೊಬೈಲ್ ನೆಟ್ವರ್ಕ್ ಗೆ … Read more
ಬೆಂಗಳೂರು: ಇದು ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಯ ಫಲಶ್ರತಿ.. ಕೆಎಸ್ ಆರ್ ಟಿಸಿಯ ನಿಕಟಪೂರ್ವ ಎಂಡಿ ಅನ್ಬುಕುಮಾರ್ ಅವರ ಸಹಿಯನ್ನು ನಕಲು ಮಾಡಿ ಸಾರಿಗೆ ಸಿಬ್ಬಂದಿಯೋರ್ವರಿಗೆ 1,35,000 ರೂ ವಂಚಿಸಿದ್ದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯ ಸಿಬ್ಬಂದಿ ರಿಚರ್ಡ್ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲಾಖೆಯಿಂದ ಕೆಲಸ ಕಳೆದುಕೊಂಡು 7 ವರ್ಷ ವಾಗಿದ್ದ ಶಿವಮೊಗ್ಗ ವಿಭಾಗದ ಸಾಗರ ಡಿಪೋದ ನಾಗರಾಜ್ ಕುಗ್ವೆ ಎನ್ನುವವರಿಗೆ ಮರುನಿಯೋಜನೆ ಮಾಡಿಸಿಕೊಡುತ್ತೇನೆ.ಎಂಡಿ ಅನ್ಬುಕುಮಾರ್ ನನಗೆ ತುಂಬಾ ಕ್ಲೋಸ್..ಅವರಿಂದ ಹೇಳಿಸಿ ಕೆಲಸ ಮಾಡಿಸಿಕೊಡುತ್ತೇನೆ … Read more
ಮಿನಿಸ್ಟರ್ಸ್ ಪ್ರಿಯಾಂಕ್ ಖರ್ಗೆ-ಮಧು ಬಂಗಾರಪ್ಪ ಹೆಸ್ರಲ್ಲೇ “ಅಬೇಧ್ಯ ಕೋಟೆ” ನಿರ್ಮಿಸಿಕೊಂಡಿದ್ದಾರಾ.. ಮನೋಹರ್ ಕೊಳ್ಳಾ..!? ಬೆಂಗಳೂರು: ಮಾತೆತ್ತಿದ್ರೆ ನನಗೆ ಅವ್ರು ಗೊತ್ತು..ಇವ್ರು ಗೊತ್ತು… ಪ್ರಿಯಾಂಕ ಖರ್ಗೆ ನನ್ನ ಗಾಡ್ ಫಾದರ್..ಮಿನಿಸ್ಟರ್ ಮಧು ಬಂಗಾರಪ್ಪ ನನ್ ಜೇಬಲ್ಲಿದ್ದಾರೆ.,ಎಂದೆಲ್ಲಾ ಬಿಲ್ಡಪ್ ಕೊಟ್ಟಿಕೊಂಡು ಅಡ್ಡಾಡುತ್ತಿರುವ ಆಪಾದನೆ ಪದವಿಪೂರ್ವ ಇಲಾಖೆಯ ಬೆಂಗಳೂರು ದಕ್ಷಿಣ ಜಿಲ್ಲೆಯ ಉಪನಿರ್ದೇಶಕ ಮನೋಹರ್ ಕೊಳ್ಳಾ ಅವರ ಮೇಲಿದೆ.ತಾನು ಹೇಳಿದ ಕೆಲಸವನ್ನು ಮಾಡುವ, ಝೀ ಹುಜೂರ್ ಎಂದ್ಹೇಳುವ ಬಕೆಟ್ ಗಿರಾಕಿಗಳನ್ನಷ್ಟೇ ಅಕ್ಕಪಕ್ಕ ಇಟ್ಟುಕೊಂಡಿರುವ ಬಗ್ಗೆ ಇಲಾಖೆ ತುಂಬಾ ಮಾತಿದೆ.ಇಂಥಾ ಮನೋಹರ್ ಕೊಳ್ಳಾ … Read more
ಬೆಂಗಳೂರು:ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಉದ್ಯೋಗಿಗಳ ಕೆಲಸ ಕಸಿದುಕೊಳ್ಳುವ ಪರಂಪರೆ ಮುಂದುವರೆದಿದೆ ಯಂತೆ….ಶೋಭಾ ಮಳವಳ್ಳಿ, ಚಾನೆಲ್ ಮುಖ್ಯಸ್ಥೆಯಾಗಿ ಬಂದ ಮೇಲೆ ನಡೆದ ಮೊದಲ ಬೆಳವಣಿಗೆಯಿದು…ಹಾಗೆಂದು ಇದಕ್ಕೆ ಅವರನ್ನು ದೂಷಿಸುವುದು ನಮ್ಮಉದ್ದೇಶವಲ್ಲ.ಅದು ಸರಿಯೂ ಅಲ್ಲ .ಅಂದ್ಹಾಗೆ ಚಾನೆಲ್ ನಲ್ಲಿ ನಡೆದಿದೆ ಎನ್ನಲಾದ ಉದ್ಯೋಗ ಕಡಿತಕ್ಕೆ, ಮ್ಯಾನೇಜ್ಮೆಂಟ್ ಕೊಟ್ಟಿರುವ ಕಾರಣ ಅನಗತ್ಯ ಸಿಬ್ಬಂದಿಯ ಹೊರೆ.ಹೆಚ್ಚುವರಿ ಸಿಬ್ಬಂದಿಯನ್ನು ಕಡಿತಗೊಳಿಸಲೇಬೇಕಾದ ಕಾರಣಕ್ಕೆ ಸುಮಾರು 10 ಜನರನ್ನು ತೆಗೆಯಲಾಗಿದೆ ಎನ್ನುವ ಸುದ್ದಿ ಬಂದಿದೆ..ಆದರೆ ಆಡಳಿತದ ದಿಢೀರ್ ನಿರ್ದಾರದಿಂದ ಕೆಲಸ ಕಳೆದುಕೊಂಡ ಸಿಬ್ಬಂದಿ ಶಾಕ್ … Read more
ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ. ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ ಅಕ್ರಮವಲ್ಲ ಶಿಕ್ಷಣ … Read more
ಹಿರಿಯ ಹಾಗು ಅನುಭವಿ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಅವರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿದ್ದು ಎಷ್ಟು ಸರಿ.?! ಓದುವ ಮುನ್ನ ಸ್ಷಪ್ಟನೆಗಾಗಿ : ಸುದ್ದಿಮನೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಇಲ್ಲದ ತಗಾದೆ ನಿಮಗೇಕೆ…ಹಾಗೆಯೇ ರಿಪಬ್ಲಿಕ್ ಕನ್ನಡದಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಅಂತದ್ದ್ಯಾವ ಮಹತ್ವ ಕೊಡಬೇಕಿದೆ ಎಂದು ಅನೇಕರು ಪ್ರಶ್ನೆ ಮಾಡಬಹುದು.ಮುಖ್ಯವಾಗಿ ರಿಪಬ್ಲಿಕ್ ಕನ್ನಡದ ಮ್ಯಾನೇಜ್ಮೆಂಟ್ ಇದರ ಬಗ್ಗೆ ಆಕ್ಷೇಪ ಎತ್ತಬಹುದು.ಆದರೆ ಮಾದ್ಯಮ ಕ್ಷೇತ್ರದಲ್ಲಿ ಏನೇ ವ್ಯತ್ಯಾಸವಾದ್ರೂ ಯಾರಿಗೇನೇ ಅನ್ಯಾಯವಾದ್ರೂ ಅದನ್ನು ಕನ್ನಡ ಫ್ಲ್ಯಾಶ್ ನ್ಯೂಸ್ ಪ್ರಕಟಿಸುವುದಲ್ಲದೇ ಅದನ್ನು … Read more