ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಕೆಎಸ್ ಆರ್ ಟಿಸಿ  ಡ್ರೈವರ್ ಬಲಿ..!?

ಶಿವಮೊಗ್ಗ ಜಿಲ್ಲೆ ಸಾಗರ ಡಿಪೋದ ಶ್ರೀಶೈಲ ಬಿರಾದಾರ್ ಕಿರುಕುಳಕ್ಕೆ ಡ್ರೈವರ್ ನಾಗಪ್ಪ ಬಲಿ..! ಶಿವಮೊಗ್ಗ/ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ರೂ ಅದೆಲ್ಲಕ್ಕಿಂತ ಮೊದಲು ಅಮೂಲಾಗ್ರ ಬದಲಾವಣೆ ಆಗಬೇಕಿರುವುದು ಅಧಿಕಾರಿಗಳ ಆಡಳಿತ ವೈಖರಿ-ಸಿಬ್ಬಂದಿ ಜತೆಗಿನ ವ್ಯವಹಾರದಲ್ಲಿ..ಕೆಳ ಹಂತದ ಸಿಬ್ಬಂದಿಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುವ ಅಧಿಕಾರಿಗಳ ದೌರ್ಜನ್ಯ-ಆಟಾಟೋಪಕ್ಕೆ ಶಿವಮೊಗ್ಗ ವಿಭಾಗೀಯ ಕಚೇರಿಯ ಸಾಗರ ಡಿಪೋದ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ. ಶಿವಮೊಗ್ಗ ವಿಭಾಗೀಯ ಕಚೇರಿಗೆ ಶಿವಮೊಗ್ಗ, ಸಾಗರ,ಶಿಕಾರಿಪುರ, ಭದ್ರಾವತಿ ಸೇರಿದಂತೆ ಐದು … Read more

80 ಸಾವುಗಳಿಗೆ ಕಾರಣವೇ bMTC ಎಂಡಿ…!ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಮಂತ್ರಿಗೆ ದೂರು..

ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ … Read more

ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಾನಕ್ಕೆ ಕುತ್ತು..!

ರಾಜ್ಯಪಾಲರಿಗೆ ಸಾಕ್ಷ್ಯ ಸಮೇತ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ(malal mahadeshwara wildlife sanctury) ದ ಹೂಗ್ಯಂ ವನ್ಯಜೀವಿ ವಲಯದ ಮೀಣ್ಯಂ ಪ್ರದೇಶದಲ್ಲಿ ಸಂಭವಿಸಿದ್ದ ತಾಯಿ ಹುಲಿ ಮತ್ತು ಮರಿಗಳ ಅಸಹಜ ಸಾವಿನ ( mother tiger and its cubs un natural death)ಪ್ರಕರಣದ ಅದ್ಹೇಕೋ ಅರಣ್ಯ ಸಚಿವ ಈಶ್ವರ ಖಂಡ್ರೆ ( forest minister eshwar khandre)ಅವರ ಕೊರಳು ಸುತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ. ದುರಂತಕ್ಕೆ … Read more

ತುಮಕೂರಿನಲ್ಲಿ ಬಡಿದಾಡಿಕೊಂಡ ನ್ಯೂಸ್ ಚಾನೆಲ್ ರಿಪೋರ್ಟರ್ಸ್: FIR -ಅರೆಸ್ಟ್

ತುಮಕೂರು:ಸಾರ್ವಜನಿಕವಾಗಿ ಹೊಡೆದಾಡುವವರ ದೃಶ್ಯಗಳನ್ನು ಚಿತ್ರೀಕರಿಸಿ ಸುದ್ದಿ ಮಾಡುವ ವರದಿಗಾರರೇ  ಇವತ್ತು ಪರಸ್ಪರ ಹೊಡೆದಾಡಿಕೊಂಡು ಸುದ್ದಿಯಾಗಿದ್ದಾರೆ.ಈ ಒಂದು ಘಟನೆಗೆ ಸಾಕ್ಷಿಯಾಗಿರೋದುನ ಕಲ್ಪತರ ನಾಡು ತುಮಕೂರು.ಮಾದ್ಯಮ ಕ್ಷೇತ್ರದಲ್ಲಿ ಮುನ್ನಲೆಯಲ್ಲಿರುವ ಎರಡು ನ್ಯೂಸ್ ಚಾನೆಲ್ ಗಳ ವರದಿಗಾರರೇ ಸಾರ್ವಜನಿಕವಾಗಿ ಹೊಡೆದಾಡಿಕೊಂಡಿದ್ದಲ್ಲದೇ ಪರಸ್ಪರನ ಬೈಯ್ದಾಡಿಕೊಂಡಿದ್ದಾರೆನ್ನಲಾಗಿದೆ.ಪಬ್ಲಿಕ್ ಟಿವಿ ತುಮಕೂರು ವರದಿಗಾರ ಮಂಜುನಾಥ್ ವಿರುದ್ದ ಹಲ್ಲೆಗೊಳಗಾದರೆನ್ನಲಾದ ಝೀ ನ್ಯೂಸ್ ಜಿಲ್ಲಾ ವರದಿಗಾರ ಮಂಜುನಾಥ್ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.ಅವರ ದೂರಿನ ಮೇಲೆ  ಎಫ್ ಐಆರ್ ದಾಖಲಿಸಲಾಗಿದ್ದು ಪೊಲೀಸ್ ಇಲಾಖೆಯ ಉನ್ನತ ಮೂಲಗಳ ಪ್ರಕಾರ ಪಬ್ಲಿಕ್ ಟಿವಿ ವರದಿಗಾರ … Read more

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP)ಸಂಘದ ವಿರುದ್ದ FIR

ಕಿರುಕುಳ-ನಿಂದನೆ-ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಅಧ್ಯಕ್ಷರು ಸೇರಿದಂತೆ ಐವರ ವಿರುದ್ದ ಎಫ್ ಐಆರ್ ಬೆಂಗಳೂರು: ಆರ್ಥಿಕ ನೆರವಿನ ನೆವದಲ್ಲಿ ಮೀಟರ್ ಬಡ್ಡಿ ಮಾಫಿಯಾ ನಡೆಸಲಾಗುತ್ತಿದೆ ಎಂಬ ಆಪಾದನೆ ಹೊತ್ತಿದ್ದ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ(SKDRDP) ಅಧ್ಯಕ್ಷರ ವಿರುದ್ದ ಎಫ್ ಐಆರ್ ದಾಖಲಾ ಗಿದೆ. ಸಾಲ ಪಡೆದ ಮಹಿಳೆ ಸಾಲದ ಕಂತು ಪಾವತಿಸಲು ಕೊಂಚ ವಿಳಂಬವಾಗಿದ್ದಕ್ಕೆ ಸಂಘದ ಪದಾಧಿಕಾರಿಗಳು ಸಂತ್ರಸ್ಥೆ ಮನೆಗೆ ತೆರಳಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ  ಸಂತ್ರಸ್ಥೆಯ ಮಗಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪಾದನೆ ಹಿನ್ನಲೆಯಲ್ಲಿ ಸಂಘದ … Read more

BBMP ಡಿಸಿಎಫ್‌ ವಿರುದ್ಧ 15 % ಕಮಿಷನ್‌ ಆರೋಪ-ಡಿಸಿಎಂಗೆ ದೂರು.

18 ಲಕ್ಷ ಬಿಲ್‌ ಗೆ 16 ಪರ್ಸೇಂಟ್‌ ಕಮಿಷನ್‌ ಕೇಳಿದ್ರಂತೆ ಡಿಸಿಎಫ್‌ ಸ್ವಾಮಿ..! ಮಾಡದ ಕೆಲಸಕ್ಕೆ ಬೋಗಸ್‌ ಬಿಲ್‌ ಮಾಡಿಕೊಂಡು ಬಂದಿದ್ರಂತೆ ಶ್ರೀನಿವಾಸ್..!?‌ ಬೆಂಗಳೂರು:ಬಿಬಿಎಂಪಿ ಅರಣ್ಯ ಘಟಕದಲ್ಲಿ ಕಮಿಷನ್‌ ಸುದ್ದಿ ಸದ್ದು ಮಾಡಿದೆ. ಮಳೆಗಾಲದಲ್ಲಿ ಮಾಡಿದ ಕೆಲಸದ ಬಿಲ್‌ ಕೇಳಲು ಹೋದರೆ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಎಲ್‌.ಜಿ. ಸ್ವಾಮಿ ಅವರು ಶೇಕಡಾ 15 ರಷ್ಟು ಕಿಕ್‌ ಬ್ಯಾಕ್‌ ಕೇಳುತ್ತಿದ್ದಾರೆ ಎಂದು ಅರಣ್ಯ ಗುತ್ತಿಗೆದಾರ ಶ್ರೀನಿವಾಸ್‌ ಆಪಾದಿಸಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರಿಗೆ ದೂರು ನೀಡಿದ್ದಾರೆ. … Read more

ಕಾನೂನು ವಿವಿ ಪ್ರಶ್ನೆಪತ್ರಿಕೆ ಸೋರಿಕೆ: ಮೂವರು ಅರೆಸ್ಟ್..

ಬೆಂಗಳೂರು/ಹುಬ್ಬಳ್ಳಿ: ಪರೀಕ್ಷೆಗೂ ಮೊದಲೇ ಕಾನೂನು ವಿವಿಯ ಪ್ರಶ್ನೆ‌ಪತ್ರಿಕೆ ಸೋರಿಕೆ ಕೇಸ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ 23 ರಂದು ನಡೆದ ಕರ್ನಾಟಕ‌ ರಾಜ್ಯ ಕಾನೂನು‌ ವಿಶ್ವವಿದ್ಯಾಲಯದ ಪ್ರಶ್ನೆ‌ಪತ್ರಿಕೆ ಸೋರಿಕೆ ಮಾಡಲಾಗಿದ್ದ ಪ್ರಕರಣ ಸಂಬಂಧ ಜಗದೀಶ್, ವರುಣ್ ಕುಮಾರ್ ಹಾಗು ಡಾ.ನಾಗರಾಜ್ ಎನ್ನುವವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಆನೇಕಲ್ , ಚಿಂತಾಮಣಿ ಮತ್ತು ಕೋಲಾರ ಮೂಲದವರು ಎನ್ನಲಾಗಿದೆ… ಪರೀಕ್ಷೆಗೂ ಮೊದಲೇ ವಾಟ್ಸಾಫ್ ನಲ್ಲಿ ಪ್ರಶ್ನೆ‌ಪತ್ರಿಕೆ ಹರಿದಾಡಿತ್ತೆನ್ನಲಾಗಿದ್ದು ಟೆಲಿಗ್ರಾಂ ಗ್ರೂಪ್ … Read more

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ “ಗೌಡ್ತಿ”ಯರು ಗರಂ: ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಚಾಲೆಂಜ್ ಮೇಲೆ ಚಾಲೆಂಜ್ ಎದುರಾಗುತ್ತಿದೆ.ಒಂದ್ ಮುಗೀತು ಎನ್ನುವಷ್ಟರಲ್ಲಿ ಮತ್ತೊಂದು ಟೆನ್ಷನ್ ಶುರುವಾಗ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರಿಗೆ ತಗಡು ಎಂದು ಸಂಬೋಧಿಸಿದ್ದಕ್ಕೆ ಒಕ್ಕಲಿಗ ಸಮುದಾಯ ತಿರುಗಿಬಿದ್ದ ಘಟನೆ ಬೆನ್ನಲ್ಲೇ  ಇದೀಗ ಗೌಡ್ತಿಯರು ಮಹಿಳೆಯರ ಬಗ್ಗೆ ದರ್ಶನ್ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಪಾದಿಸಿದ್ದಾರೆ.ದರ್ಶನ್ ವಿರುದ್ಧ ಕಠಿಣ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿ  ಮಹಿಳಾ ಆಯೋಗಕ್ಕೆ  ದೂರು ಸಲ್ಲಿಕೆಯಾಗಿದೆ. ನಟ ದರ್ಶನ್ ಗೆ ಮತ್ತೆ ಹೊಸ ಸಂಕಷ್ಟ ಎದುರಾಗಿದೆ.ಸುಮ್ಮನಿರದೆ ಇರುವೆ … Read more

EXCLUSIVE…”BIG-BOSS SEASON-10″ IN TROUBLE.!…“ಬಿಗ್ ಬಾಸ್” ಗೆ” ಶಾಕ್…! “ದೊಡ್ಮನೆ” ಆಟಕ್ಕೆ ಬೀಳುತ್ತಾ ಬ್ರೇಕ್..! ಶೂಟಿಂಗ್ ಸೆಟ್ ವಿವಾದ ವಿರುದ್ಧ ದಾಖಲಾಯ್ತು ದೂರು..

ಕೃಷಿ ಜಮೀನಿನಲ್ಲಿ ವಾಣಿಜ್ಯ ಚಟುವಟಿಕೆ..! ಬಿಗ್ ಬಾಸ್ ಮಾಹಿತಿನೇ DC ಗಿಲ್ವಂತೆ..! ರಾಮೋಹಳ್ಳಿ ಗ್ರಾಪಂನಿಂದಲೂ ನೋ ಪರ್ಮಿಷನ್..!  ಹಣದಾಸೆಗೆ ಸತ್ಯ ಬಚ್ಚಿಟ್ರಾ ಜಮೀನು ಮಾಲೀಕ..! ಬೆಂಗಳೂರು:ಇಂತದ್ದೊಂದು ಆಪಾದನೆ ಸತ್ಯವೇ ಆಗಿ, ಅದು ಪ್ರೂವ್ ಆಗಿದ್ದೇ ಆದಲ್ಲಿ  “ಬಿಗ್ ಬಾಸ್” ನಂತ ಪ್ರತಿಷ್ಟಿತ ಶೋ ಗೆ ಹಿಂದೆಂದೂ ಅಂಟದಿ ದ್ದ ಕಳಂಕವೊಂದು ಮೆತ್ತಿಕೊಳ್ಳುವ ಸಾಧ್ಯತೆ ದಟ್ಟ ವಾಗಿದೆ. ಅಷ್ಟೇ ಅಲ್ಲ,ಬಿಗ್ ಬಾಸ್ ಎನ್ನುವಂತ ವರ್ಣರಂಜಿತ ಶೋನೇ ಸ್ಥಗಿತವಾಗೋ ಆತಂಕವ ನ್ನೂ ಅಲ್ಲಗೆಳೆಯು ವಂತಿಲ್ಲ.ಏಕೆಂದರೆ ಜಿಲ್ಲಾಡಳಿತ ದಿಂದ ಹಿಡಿದು ಗ್ರಾಮ … Read more