“ಪ್ರಾಣ ಬಿಟ್ಟೇವು…ಮುಷ್ಕರ ಕೈ ಬಿಡೆವು” ಇಂದಿನಿಂದ ಸಾರಿಗೆ ಸಿಬ್ಬಂದಿಯಿಂದ “ಅಮರಣಾಂತ ಉಪವಾಸ ಸತ್ಯಾಗ್ರಹ”…
ಬೆಂಗಳೂರು: ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದೆರೆಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾರಿಗೆ ಸಿಬ್ಬಂದಿಗೆ ನಿನ್ನೆ ಆದ ಕಹಿ ಅನುಭವ ಅಕ್ಷರಶಃ ರೊಚ್ಚಿಗೆಬ್ಬಿಸಿದೆ.ಈ ಹಿನ್ನಲೆಯಲ್ಲಿ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವಂತೆ ಮಾಡಿದೆ.ಸಾರಿಗೆ ಕೂಟ ಸೇರಿದಂತೆ ಸಮಾನಮನಸ್ಕ ಸಂಘಟನೆಗಳು ಹೋರಾಟಕ್ಕೆ ಕೈ ಜೋಡಿಸಿವೆ.ಇದರಿಂದ ಹೋರಾಟ ಮತ್ತಷ್ಟು ಉಗ್ರಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಫ್ರೀಡಂ ಪಾರ್ಕ್ ನಲ್ಲಿ ಕಳೆದೆರೆಡು ದಿನಗಳಿಂದ ಸಾರಿಗೆ ಸಿಬ್ಬಂದಿ ತಮ್ಮ ಅನೇಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು.ನಿನ್ನೆ ಇದ್ದಕ್ಕಿದ್ದಂತೆ ಆಗಮಿಸಿದ ಉಪ್ಪಾರ ಪೇಟೆ ಪೊಲೀಸರು … Read more