ವಿದ್ಯಾ ಮಲ್ನಾಡ್‌ ಎನ್ನುವ “ಮಾನವಮುಖಿ-ಜೀವಪರ ಕಾಳಜಿ”ಯ “ಗ್ಯಾರಂಟಿ ” ಆಂಕರ್..  

ಡೋಂಟ್‌ ಮಿಸ್‌ ಇಟ್…‌ ಅರಚೋದು..ಅಬ್ಬರಿಸೋದು-ವಿಷಯವನ್ನು ವಿಕೃತಗೊಳಿಸುವುದೇ  ಆಂಕರಿಂಗ್ ಎನ್ನುವ ಲೆಕ್ಕಾಚಾರಕ್ಕೆ ಅಪವಾದದಂತಿದ್ದ  ವಿದ್ಯಾ ಮಲ್ನಾಡ್‌ ನಿರೂಪಣೆ.. ಬೆಂಗಳೂರು:ಇನ್ನೊಬ್ಬರ ಮನೆ-ಸಂಸಾರ, ವೈಯುಕ್ತಿಕ ವಿಷಯವನ್ನೇ ಟಿಆರ್‌ ಪಿ ಗೋಸ್ಕರ ಬಂಡವಾಳವಾ ಗಿಸಿಕೊಂಡು ಬೇಳೆ ಬೇಯಿಸಿಕೊಳ್ಳುವುದೇ ಬಹುತೇಕ  ಮಾದ್ಯಮಗಳ ಕಸುಬಾಗಿ ಹೋಗಿದೆ.ಇದು ಸಾರ್ವಜನಿಕ ವಲಯದಲ್ಲಿ ಮಾದ್ಯಮಗಳ ಬಗ್ಗೆ ಛೀ..ಥೂ ಎಂದು ಉಗಿಯುವ  ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿರುವುದು ದುರಂತ.( ನ್ಯೂಸ್‌ ಚಾನೆಲ್‌ ಗಳಲ್ಲಿ ಬಹುತೇಕ ಇಂಥದ್ದೇ ಮನೆಹಾಳು ಮಾಡುವ ಸುದ್ದಿಗಳೇ ಬರುತ್ತಿರುವುದರಿಂದ ಪಾಪ…ಇದನ್ನು ಬಿಟ್ಟು ಬೇರೆ ನೋಡಬೇಕಾದ ಪರ್ಯಾಯ ಆಯ್ಕೆಯೇ ವೀಕ್ಷಕರಿಗೆ ಸಿಗುತ್ತಿಲ್ಲ). … Read more

80 ಸಾವುಗಳಿಗೆ ಕಾರಣವೇ bMTC ಎಂಡಿ…!ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಖ್ಯಮಂತ್ರಿಗೆ ದೂರು..

ಬೆಂಗಳೂರು: ಬಹುಷಃ ಬೆಂಗಳೂರು ಮಹಾನಗರ ಸಾರಿಗೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತದ್ದೊಂದು ಘಟನೆ ನಡೆದಿದೆ ಎನ್ನಿಸುತ್ತದೆ.ಏಕೆಂದರೆ ನಿಗಮದ ವ್ಯಾಪ್ತಿಯಲ್ಲಿನ ಬೆಳವಣಿಗೆಗಳ ಇತಿಹಾಸದ ಬಗ್ಗೆ ನಮಗಿರುವ ಮಾಹಿತಿ ಪ್ರಕಾರ ಈವರೆಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕರೆನಿಸಿಕೊಂಡ ಯಾರ ಬಗ್ಗೆಯೂ ಮುಖ್ಯಮಂತ್ರಿಗಳ ಮಟ್ಟದಲ್ಲಿ ದೂರು ನೀಡಿದ್ದ ನಿದರ್ಶನಗಳೇ ಇಲ್ಲ.ಆದರೆ ಇದೇ ಮೊದಲ ಬಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ದೂರನ್ನು ಕೊಟ್ಟಿದೆ.ಅಷ್ಟೇ ಅಲ್ಲ. ಬಿಎಂಟಿಸಿ ಎಂಡಿ ವಿರುದ್ಧ ಕ್ರಮ … Read more

“ಸಾರಿಗೆ ಕೂಟ”ದ ಚಂದ್ರು ಅಕ್ಷರಶಃ ಒಂಟಿಯಾದ್ರಾ ..!ಜತೆಗಿದ್ದವರೆಲ್ಲಾ ದೂರ..ದೂರವಾದ್ರಾ..?

-ಬೆಲ್ಲಕ್ಕೆ ನೊಣಗಳಂತೆ ಚಂದ್ರುವನ್ನು ಮುತ್ತಿಕೊಳ್ಳುತ್ತಿದ್ದ ಆ ಸಾರಿಗೆ ಸಿಬ್ಬಂದಿ ಎಲ್ಲೋದರು.? -ಅತಿಯಾದ ಆತ್ಮವಿಶ್ವಾಸಕ್ಕೆ ಬೆಲೆ ತೆತ್ತರಾ ಚಂದ್ರು-ಕಚೇರಿ ಬಾಡಿಗೆ ಕಟ್ಟಲಿಕ್ಕೂ ಪರದಾಡುತ್ತಿದ್ದಾರಾ..? -ನಾಯಕತ್ವದ ಗುಣಗಳಿಗೆ ತಿಲಾಂಜಲಿ ಇಟ್ಟು,ಸಾಮೂಹಿಕ ನಾಯಕತ್ವ ಮರೆತು ಸರ್ವಾಧಿಕಾರಿಯಂತಾಗಿದ್ದಕ್ಕೆ ಆಪ್ತರೇ ಕೊಟ್ಟ ಶಿಕ್ಷೆನಾ ಇದು..?! ಇಂಥಾ ಸ್ಥಿತಿ ಯಾವೊಬ್ಬ ವ್ಯಕ್ತಿಗೂ ಬರಬಾರದು..ಅದರಲ್ಲೂ ಅತೀ ಕಡಿಮೆ ಅವಧಿಯಲ್ಲಿ ರಾತ್ರೋ ರಾತ್ರಿ ದೊಡ್ಡ ಲೀಡರ್‌ ಆಗಿ ಬೆಳೆದು ಹೆಸರು ಮಾಡಿ, ಶ್ರಮಿಕ ಸಮುದಾಯದ ಪ್ರೀತಿಗೆ ಪಾತ್ರವಾಗಿ, ತನ್ನ ಮಾತಿಗೆ ತಲೆ ಬಾಗುವ ಮಟ್ಟದಲ್ಲಿ ಅವರ ಮನಸಿನಲ್ಲಿ ಉಳಿದುಕೊಂಡಿದ್ದ … Read more

ರಾಜ್ ನ್ಯೂಸ್(RAJ NEWS KANNADA) ಕನ್ನಡಕ್ಕೆ ಹಿರಿಯ ಪತ್ರಕರ್ತ ಶ್ರೀಧರ್ ಸಾರಥಿ..

ಬೆಂಗಳೂರು:ಮಾದ್ಯಮ ಕ್ಷೇತ್ರದಲ್ಲಿ ಸಧ್ಯ ಚರ್ಚೆಯಲ್ಲಿರುವ ಅನೇಕ ವಿದ್ಯಾಮಾನಗಳಲ್ಲಿ ರಾಜ್ ಟಿವಿ ಪ್ರಮುಖವಾದುದು ರಾಜ್ ನ್ಯೂಸ್ ಕನ್ನಡದ್ದು.ಅನೇಕ ಕಾರಣಗಳಿಂದ ಹಿಂದಿದ್ದವರ ಕೈಲಿಂದ ಚಾನೆಲ್ ಮತ್ತೊಬ್ಬರ ಕೈ ಗೆ ಜಾರಿದೆ.ಅದರ ಸಾರಥಿ-ದಿಕ್ಸೂಚಿ ಎಲ್ಲವೂ ಕನ್ನಡದ ಹಿರಿಯ ಪತ್ರಕರ್ತ ಶ್ರೀಧರ್ ಎನ್ನಲಾಗ್ತಿದೆ. ತಮಿಳ್ನಾಡು ಮೂಲದ ರಾಜ್ ಟಿವಿ ಕರ್ನಾಟಕದಲ್ಲಿ ಚಾನೆಲ್ ಆರಂಭಿಸಿದಾಗಲೇ ಅದರ ಭವಿಷ್ಯ ನುಡಿಯಲಾಗಿತ್ತು.ಹಮೀದ್ ಪಾಳ್ಯ ಅವರಂಥವ್ರು ಚಾನೆಲ್ ಆರಂಭಿಸಿದರಾದ್ರೂ ಅದರ ಬಗ್ಗೆ ಅವರು ಗಮನ ಹರಿಸಿದ್ದು ಕಡಿಮೆ ಎನ್ನುವ ಮಾತುಗಳಿದ್ವು .ಹಾಗಾಗಿಯೇ ಕನ್ನಡದ ಚಾನೆಲ್ ಗಳಿಗೆ ಪೈಪೋಟಿ ನೀಡುವ … Read more

” pOPಬ್ಯಾನ್” ಎನ್ನೋದೇ  “ಮಹಾಮೋಸ”…!? ಕರ್ನಾಟಕಕ್ಕೆ ಸುಳ್ಳು ಹೇಳ್ತಿದಿರಾ “ಮಿನಿಸ್ಟರ್ ಖಂಡ್ರೆ-ಚೇರ್ಮನ್ ನರೇಂದ್ರಸ್ವಾಮಿ..!”

ಪಿಓಪಿ ಗಣಪತಿಗಳ ಮಾರಾಟ ರಾಜಧಾನಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಗಮನಿಸಿದಾಗ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆನ ಎನ್ನುವ ಗಾಧೆ ನೆನಪಾಗುತ್ತದೆ.

pU ಬೋರ್ಡ್‌ ನೂತನ ನಿರ್ದೇಶಕ ಭರತ್‌ ಎದುರು ದಂಡಿ ದಂಡಿ ಸವಾಲುಗಳು..!

ಹಾಳೆದ್ದು ಹೋಗಿರುವ ಪಿಯು ಬೋರ್ಡ್ ಗೆ  ಕಾಯಕಲ್ಪ-ಲಂಗುಲಗಾಮಿಲ್ಲದಂತಾಗಿರುವ ಇಲಾಖೆಯ ಕೆಲವು ಭ್ರಷ್ಟರ ಅಂದಾದರ್ಬಾರ್-ಅಟ್ಟಹಾಸಕ್ಕೆ  ಕಡಿವಾಣ ಹಾಕುವರಾ..? ಪಿಯು ಬೋರ್ಡ್‌ ಗೆ ನೂತನ ನಿರ್ದೇಶಕರಾಗಿ ಕಿರಿಯ ಐಎಎಸ್‌ ಅಧಿಕಾರಿ ಭರತ್‌ ನಿಯೋಜನೆಗೊಂಡಿದ್ದಾರೆ. ಅನೇಕ ಇಲಾಖೆಗಳಲ್ಲಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿರುವ ಯುವ ಹಾಗೂ ಉತ್ಸಾಹಿ ಐಎಎಸ್‌ ಅಧಿಕಾರಿ ಭರತ್‌ ಅವರನ್ನು ಕನ್ನಡ ಫ್ಲ್ಯಾಶ್‌ ನ್ಯೂಸ್‌ ಹೃತ್ಪೂರ್ವಕವಾಗಿ ಅಭಿನಂದಿಸಿ,ಸ್ವಾಗತಿಸುವುದಲ್ಲದೇ ಹೇಳೋರ್..ಕೇಳೋರ್‌ ಇಲ್ಲದೆ ತಬ್ಬಲಿಭಾವದಿಂದ ಬಳಲುತ್ತಿರುವ ಇಲಾಖೆಯ ಬಗ್ಗೆ ಕಾಳಜಿ ವಹಿಸಿ ಅಗಾಧ ಪ್ರಮಾಣದ ಸುಧಾರಣೆಗೆ ಶ್ರಮಿಸುವಂತೆ ಮನವಿ ಮಾಡುತ್ತದೆ. ಸರ್ಕಾರದಿಂದ … Read more

“ನ್ಯೂಸ್ ಫಸ್ಟ್” ಚಾನೆಲ್ ಗೆ ನಿಜಕ್ಕೂ “ಆರ್ಥಿಕ ಸಂಕಷ್ಟ”ನಾ..? ಬಹುತೇಕ ಸಿಬ್ಬಂದಿಗೆ ತಿಂಗಳುಗಳಿಂದಲೂ “ಸಂಬಳವೇ” ಕೊಟ್ಟಿಲ್ವಂತೆ ಸತ್ಯನಾ..?!

ಮೊನ್ನೆ ಮೊನ್ನೆವರೆಗು ಆರ್ಥಿಕವಾಗಿ ಚೆನ್ನಾಗಿಯೇ ಇದ್ದಂತಿದ್ದ  ಚಾನೆಲ್, ಸಧ್ಯ  ಸುಸ್ಥಿತಿಯಲ್ಲಿಲ್ಲವೋ..? ಅಥವಾ ಸಿಬ್ಬಂದಿಗೆ ಕೊಡುವಷ್ಟು ಆದಾಯ ಬರುತ್ತಿಲ್ಲವೋ..?ಆರ್ಥಿಕವಾಗಿ ಚೆನ್ನಾಗಿದೆ ಎನ್ನುವುದೇ ಸತ್ಯವಾದ್ರೆ,.. ಹಾಗಿದ್ರೆ ಚಾನೆಲ್ ನ ಆದಾಯ ಎಲ್ಲೋಗ್ತಿದೆ..!?    ಬೆಂಗಳೂರು: ಕನ್ನಡದ ಪ್ರಮುಖ ಹಾಗೂ ಪ್ರತಿಷ್ಟಿತ ಸುದ್ದಿವಾಹಿನಿಯೊಂದರ ಬಗ್ಗೆ  ಬರೆಯಲೇಬೇಕಿದೆ ನೋಡಿ… ಬರೆಯಬೇಕೆನ್ನುವ ಯಾವುದೇ ಇರಾದೆ ಇಲ್ಲದಿದ್ದರೂ,  ಅಲ್ಲಿನ ಬಹುಸಂಖ್ಯಾತ ಮಾದ್ಯಮಮಿತ್ರರಿಗೆ ಆಗುತ್ತಿದೆ ಎನ್ನಲಾಗಿರುವ ನೋವು-ಅನ್ಯಾಯದ ಕಾರಣಕ್ಕೆ ಬರೆಯಲೇಬೇಕಿದೆ. ಏಕೆಂದರೆ ಕನ್ನಡ ಫ್ಲ್ಯಾಶ್ ನ್ಯೂಸ್  ಸದಾ  ನೋವುಂಡ-ಅನ್ಯಾಯಕ್ಕೊಳಗಾದ ಮಾದ್ಯಮಿತ್ರರ ಬೆನ್ನಿಗೆ ಇದ್ದೇ ಕೆಲಸ ಮಾಡುತ್ತಿದೆ..ಆ ವಿಷಯದಲ್ಲಿ … Read more

ಮಹಿಳಾ ಉದ್ಯೋಗಿಯ ಅಮ್ಮನನ್ನೇ ಬಲಿ ತೆಗೆದುಕೊಂಡುಬಿಡ್ತಾ ಆ ನ್ಯೂಸ್‌ ಚಾನೆಲ್..?!

*ನನ್ನ ಅಮ್ಮನೇ ಹೋದ್ಮೇಲೆ ನಿಮ್ಮ ಸ್ಯಾಲರಿ ತಗಂಡ್‌ ಏನ್‌ ಮಾಡೋಣ ಬಿಡಿ ಸಾರ್..‌* *ಅನ್ಯಾಯವಾಗಿ ನನ್ನ ಅಮ್ಮನನ್ನು  ಕೊಂದ್‌ ಬಿಟ್ರಲ್ಲಾ ಸಾರ್..!?* *ನ್ಯಾಯಯುತ ದ್ವನಿಯಲ್ಲಿ ಹಕ್ಕಿನ ವೇತನ ಕೇಳಿದ್ದಕ್ಕೆ ಗೇಟ್‌ ಪಾಸ್… ಸಂಬಳ ಕೊಡದೆ ಸತಾವಣೆ..* ಬೆಂಗಳೂರು: ಈ ಸುದ್ದಿ ನಿಜಕ್ಕೂ ಎಂಥಾ ಕಲ್ಲು ಮನಸನ್ನು ಕರೆಗಿಸುತ್ತದೆ…ಸುದ್ದಿ ಮನೆಗಳಲ್ಲಿ ಕೆಲಸ ಮಾಡುವವರನ್ನು ಇಷ್ಟೊಂದು ತಾತ್ಸಾರದಿಂದ ನಡೆಸಿಕೊಳ್ಳಲಾಗುತ್ತಾ..? ತಮಗೆ ಬರಬೇಕಿರೋ ಸಂಬಳಕ್ಕೆ ದ್ವನಿ ಎತ್ತಿದ್ರೆ ಸಂಸ್ಥೆಯಿಂದಲೇ ಗೇಟ್‌ ಪಾಸ್‌ ಕೊಡಲಾಗುತ್ತಾ..? ಕೊನೆಗೆ ಅವರ ಕುಟುಂಬದವರ ಸಾವಿಗೂ  ನೈತಿಕವಾಗಿ ಕಾರಣವಾಗುವಂತ … Read more

1 ವರೆ ವರ್ಷದಲ್ಲಿ 3 ಬಲಿ..! :”ಸೂಸೈಡ್ ಸ್ಪಾಟ್” ಆಗಿಬಿಡ್ತಾ bMTC ಕೇಂದ್ರ ಕಚೇರಿ ಕಟ್ಟಡ..!

ಬೆಂಗಳೂರು: ಬಿಎಂಟಿಸಿ(bengaluru metropolitan transport corporation) ಎಂಡಿ ಆಗಿರುವ ರಾಮಚಂದ್ರನ್ ( managing director ramachandran) ಅವರಿಗೆ ಅವರ ಇಲಾಖೆ ಮೇಲೆ ಹಿಡಿತವಿಲ್ಲವೋ..? ಅಥವಾ ಇಲಾಖೆ ಬಗ್ಗೆನೇ ನಿರ್ಲಕ್ಷ್ಯ ಧೋರಣೆಯೋ, ತಾತ್ಸಾರ ಮನೋಭಾವನೋ ಗೊತ್ತಾಗ್ತಿಲ್ಲ..ಹೀಗೆ ಪ್ರಶ್ನೆ ಮಾಡ್ತಿರೋದು ಬೇರೆ ಯಾರು ಅಲ್ಲ..ಅವರದೇ ಇಲಾಖೆಯಲ್ಲಿ ಕೆಲಸ ಮಾಡ್ತಿರುವ ಸಾರಿಗೆ ಸಿಬ್ಬಂದಿ. ನಿಗಮದ ಕಚೇರಿಗಳನ್ನು ಬಿಟ್ಟುಬಿಡಿ ಅವರದೇ ಕಚೇರಿ ಇರುವ ಶಾಂತಿನಗರದ ಕೇಂದ್ರಕಚೇರಿ ಕಟ್ಟಡ ಭದ್ರತೆ-ಸುರಕ್ಷತೆಯ ಕೊರತೆ ಎದುರಿಸುತ್ತಿವೆ..ಇದಕ್ಕೆ ಸಾಕ್ಷ್ಯ ಏನು ಎನ್ನುವುದನ್ನು ಕೇಳುವುದಾದ್ರೆ ಕನ್ನಡ ಫ್ಲ್ಯಾಶ್ ನ್ಯೂಸ್ ಇದಕ್ಕೆ … Read more

ಸಾರಿಗೆ ಮುಷ್ಕರ ಎಫೆಕ್ಟ್-ನೂರಾರು ಸಿಬ್ಬಂದಿಗೆ ಶಿಸ್ತುಕ್ರಮದ ನೊಟೀಸ್‌ ಜಾರಿ-ಅಮಾನತ್ತು ಪಕ್ಕಾ..!

ಬೆಂಗಳೂರು: ಏನ್‌ ಆಗಬಾರದು ಎಂದುಕೊಂಡಿದ್ವೋ..ಏನ್‌ ಆಗುತ್ತೆ ಎಂದು ಅಂದಾಜಿಸಲಾಗಿತ್ತೋ ಅದೇ ಆಗೋಗಿದೆ.ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತುಕ್ರಮ ಜಾರಿಯಾಗಬಹುದು ಎನ್ನುವ ಅಂದಾಜನ್ನೇನು ಮಾಡಲಾಗಿತ್ತೋ ಅದರ ಪ್ರಕಾರವೇ ಆಗೋಗಿದೆ.ಕಳೆದ ಬಾರಿ ಮುಷ್ಕರದಲ್ಲಿ ಪಾಲ್ಗೊಂಡವರ ವಿರುದ್ದ ಏನೆಲ್ಲಾ ಶಿಸ್ತುಕ್ರಮ ಜಾರಿ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಸರ್ಕಾರ ಮುಷ್ಕರದಲ್ಲಿ ಭಾಗಿಯಾದ ಎಲ್ಲರಿಗೂ ಶಿಸ್ತುಕ್ರಮದ ನೊಟೀಸ್‌ ಜಾರಿ ಮಾಡಿದೆ.ಇದರ ಮುಂದುವರೆದ ಭಾಗವಾಗಿ ಮುಷ್ಕರದಲ್ಲಿ ಭಾಗಿಯಾದ ಎಲ್ಲರೂ ಅಮಾನತ್ತು ಆಗುವುದು ಪಕ್ಕಾ ಎನ್ನುವಂತಾಗಿದೆ. ಸಾರಿಗೆ ಮುಷ್ಕರ ನಡೆಸದಂತೆ ಹೈ ಕೋರ್ಟ್‌ ಮುಷ್ಕರಕ್ಕೆ ನಿರ್ದರಿಸಿದ ದಿನದಂದೇ … Read more