“ಅವರಿಬ್ಬರು” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ “ಯಶಸ್ವಿ”ನಾ.?!

***ಆ “ಸುನಾಮಿ- ಸುಂಟರಗಾಳಿ” ಒಂದಾದ್ರೆ ಆಗಸ್ಟ್ 5 ರ ಸಾರಿಗೆ ಮುಷ್ಕರ ಸಕ್ಸೆಸ್   ಪಕ್ಕಾ  ಅಂತೆ..!?*** ***ಮುನಿಸು ಮರೆತು, ಸ್ವಪ್ರತಿಷ್ಟೆ ಬದಿಗಿಟ್ಟು ಅನಂತ ಸುಬ್ಬರಾವ್- ಚಂದ್ರಶೇಖರ್ ಒಂದಾದ್ರೆ ಗೆಲುವು ಗ್ಯಾರಂಟಿ ಅಂತೆ..!***  ***ಮುಷ್ಕರದ  ಯಶಸ್ಸು-ವೈಫಲ್ಯ ಅವಲಂಭಿಸಿರೋದೇ ಸಾರಿಗೆ “ಕೂಟ-ಜಂಟಿಕ್ರಿಯಾಸಮಿತಿ” ಮೇಲೆ ಒಂದಾದ್ರಂತೆ..!***   ಬೆಂಗಳೂರು:ತಮ್ಮ ನ್ಯಾಯಯುತ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಆಗಸ್ಟ್ 5 ರಿಂದ ರಾಜ್ಯಾದ್ಯಂತ ಸಾರಿಗೆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಬಾಧಿತಗೊಳಿ ಸುವಂತ ನಿರ್ದಾರಕ್ಕೆ ಬಂದಿದ್ದಾರೆ ಸಾರಿಗೆ ಸಿಬ್ಬಂದಿ.ಇದರ ಝಲಕ್ ಎನ್ನುವಂತೆ ನಿನ್ನೆ ಅಂದರೆ ಬುಧವಾರ( 30-07-2025) … Read more

ವಿಕ್ಟೋರಿಯಾ ಆಸ್ಪತ್ರೆ (VICTORIA HOSPITAL CAMPUS) ಕ್ಯಾಂಪಸ್ ನಲ್ಲಿ “ಮೊಬೈಲ್”  ನಾಟ್ ರೀಚಬಲ್(MOBILE NETWORK PROBLEM)..?!

ಮೊಬೈಲ್ ನೆಟ್ವರ್ಕ್ ಗೆ ಪರದಾಡುತ್ತಿರುವ ರೋಗಿ ಸಂಬಂಧಿಗಳು-ಇಷ್ಟು ದೊಡ್ಡ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಮೊಬೈಲ್ ಟವರ್ ಇಲ್ಲ ಎನ್ನಲಾಗುತ್ತಿರುವುದೇ ದುರಾದೃಷ್ಟಕರ. ಬೆಂಗಳೂರು: ಹೇಳಿಕೊಳ್ಳೊಕ್ಕೆ ದೊಡ್ಡ ಹಾಗೂ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆ..ಆದರೆ ರೋಗಿಗಳಿಗೆ ಏನಾದ್ರೂ ಆರೋಗ್ಯ ಸಮಸ್ಯೆಯಾದಲ್ಲಿ,ಏರುಪೇರುಗಳಾದ್ದಲ್ಲಿ ಅದನ್ನು ಸಂಬಂಧಿಗಳಿಗೆ ಸಂವಹನಿಸಲು ಪರದಾಡುವಂತ ಸ್ತಿತಿ ಇದೆ ಎಂದ್ರೆ ಅದಕ್ಕೆ ಏನನ್ನಬೇಕೋ ಗೊತ್ತಾಗ್ತಿಲ್ಲ..ಇದನ್ನು ಕೇಳಿದ್ರೆ ನಿಮ್ಗೆ ಆಶ್ವರ್ಯ ಆಗಬಹುದು..ಹಾಗೆಯೇ ಹೌದಾ..! ಎಂದು ಉಬ್ಬೇರಿಸಿ ಕೇಳಬಹುದು..ಆದ್ರೆ ಇದು ಸತ್ಯ… ಸತ್ಯ..ವಿಕ್ಟೋರಿಯಾ ಕ್ಯಾಂಪಸ್ ನಲ್ಲಿರುವ ಆರೋಗ್ಯ ಕೇಂದ್ರಗಳ ಒಳಗೆ ಮೊಬೈಲ್ ನೆಟ್ವರ್ಕ್ ಗೆ … Read more

ಬಿಗ್ ಇಂಪ್ಯಾಕ್ಟ್..kSRTC ಎಂಡಿ ಸಹಿ ನಕಲು ಮಾಡಿದ್ದಾತ ಸಸ್ಪೆಂಡ್…

ಬೆಂಗಳೂರು: ಇದು ಕನ್ನಡ ಫ್ಲ್ಯಾಶ್ ನ್ಯೂಸ್ ವರದಿಯ ಫಲಶ್ರತಿ.. ಕೆಎಸ್ ಆರ್ ಟಿಸಿಯ ನಿಕಟಪೂರ್ವ ಎಂಡಿ ಅನ್ಬುಕುಮಾರ್ ಅವರ ಸಹಿಯನ್ನು ನಕಲು ಮಾಡಿ ಸಾರಿಗೆ ಸಿಬ್ಬಂದಿಯೋರ್ವರಿಗೆ 1,35,000 ರೂ ವಂಚಿಸಿದ್ದ ಕೆಎಸ್ ಆರ್ ಟಿಸಿ ಕೇಂದ್ರ ಕಚೇರಿಯ ಸಿಬ್ಬಂದಿ ರಿಚರ್ಡ್ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲಾಖೆಯಿಂದ ಕೆಲಸ ಕಳೆದುಕೊಂಡು 7 ವರ್ಷ ವಾಗಿದ್ದ ಶಿವಮೊಗ್ಗ ವಿಭಾಗದ ಸಾಗರ ಡಿಪೋದ ನಾಗರಾಜ್ ಕುಗ್ವೆ ಎನ್ನುವವರಿಗೆ ಮರುನಿಯೋಜನೆ ಮಾಡಿಸಿಕೊಡುತ್ತೇನೆ.ಎಂಡಿ ಅನ್ಬುಕುಮಾರ್ ನನಗೆ ತುಂಬಾ ಕ್ಲೋಸ್..ಅವರಿಂದ ಹೇಳಿಸಿ ಕೆಲಸ ಮಾಡಿಸಿಕೊಡುತ್ತೇನೆ … Read more

“ಸೆಂಚುರಿ ಕ್ಲಬ್ ಇನ್ಮುಂದೆ ಸಾರ್ವಜನಿಕ ಪ್ರಾಧಿಕಾರ” ಹೈ ಕೋರ್ಟ್ ಘೋಷಣೆ

ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನದೊಳಗೆ ಇರುವ ಶತಮಾನೋತ್ಸವ ಕ್ಲಬ್ ಅಥವಾ century clu ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿದೆ.ಕ್ಲಬ್ ನೊಳಗೆ ನಡೆಯುತ್ತಿದ್ದ ವ್ಯವಹಾರ-ಆರ್ಥಿಕ ವಹಿವಾಟು ಸೇರಿದಂತೆ ಆಡಳಿತ ಮಂಡಳಿಯೊಳಗೇ ಇತ್ಯರ್ಥವಾಗುತ್ತಿದ್ದ ಸಾಕಷ್ಟು ಗೌಪ್ಯ ಮಾಹಿತಿಗಳು ಇನ್ಮುಂದೆ ಸಾರ್ವಜನಿಕವಾಗಿ ಲಭ್ಯವಾಗಲಿವೆ.ಕ್ಲಬ್ ಆಡಳಿತ ಮಂಡಳಿ ಕೂಡ ಯಾವುದೇ ಮಾಹಿತಿಯನ್ನು ನಿರಾಕರಿಸುವಂತಿಲ್ಲ. ಸೆಂಚುರಿ ಕ್ಲಬ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಜುಲೈ 8 ರಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅಧ್ಯಕ್ಷತೆಯ ಪೀಠವು,ತನ್ನ ಮಹತ್ವದ ತೀರ್ಪಿನಲ್ಲಿ, ಕರ್ನಾಟಕ ಮಾಹಿತಿ ಆಯೋಗದ … Read more

“ಅಧಿಕಾರಿ”ಗಳು ಕೆಲಸ ಬಿಟ್ಟು ರಸ್ತೆಗಿಳಿದ್ರೆ ಮಾತ್ರ “ಇವ್ರು” ಬಸ್ ಓಡಿಸೊಲ್ಲವಂತೆ!

****ಸಾರಿಗೆ ಮುಷ್ಕರದ ನಿರ್ದಾರಕ್ಕೆ ಹೊಸ ಟ್ವಿಸ್ಟ್: ಅಧಿಕಾರಿಗಳಿಗೆ ಸವಾಲೆಸೆದ ಸಾರಿಗೆ ಸಿಬ್ಬಂದಿ ****ಸಾರಿಗೆ ಸಿಬ್ಬಂದಿ ಜತೆ ಅಧಿಕಾರಿ ವರ್ಗ ಕೈ ಜೋಡಿಸಿದ್ರೆ ಇತಿಹಾಸ ನಿರ್ಮಾಣ ಪಕ್ಕಾ ****ಪ್ರತಿ ಮುಷ್ಕರಕ್ಕು ಪ್ರಚೋದನೆ ಕೊಟ್ಟು, ಒಳಗೆ ಕುಳಿತುಕೊಳ್ಳುವ ಅಧಿಕಾರಿ ವರ್ಗಕ್ಕೆ ಸಿಬ್ಬಂದಿ ಠಕ್ಕರ್ ****ಒಳ್ಳೇದಾದ್ರೆ ಇಬ್ಬರಿಗೂ ಆಗಲಿ..ಕೆಟ್ಟದಾದ್ರೂ ಇಬ್ಬರಿಗೂ ಆಗಲಿ..ಪ್ರತಿಫಲ ನಿಮ್ಗೆ-ಶಿಕ್ಷೆ ಭಾಗ್ಯ ನಮಗೆ ಮಾತ್ರ ಏಕೆ..? ಬೆಂಗಳೂರು:ಪ್ರತಿ ಬಾರಿ  ಮುಷ್ಕರ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಳ್ಳೋದು ನಾವು..ಸೇಫ್ ಆಗೋದು ಅಧಿಕಾರಿಗಳಾ..? ಇದ್ಯಾವ ಸೀಮೆಯ ನ್ಯಾಯ.ಇನ್ಮುಂದೆ ಹಾಗೆ ನಡೆಯೊಕ್ಕೆ ನಾವು ಬಿಡೊಲ್ಲ..ನಮಗೆ … Read more

ಗಾಯಕ ಜೋಗಿಲ ಸಿದ್ದರಾಜುಗೆ ಜಾತಿನಿಂದನೆ ಮಾಡಿದ್ರಾ ಗಾಯತ್ರಿ..!

ಬೆಂಗಳೂರು: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕರಾದ ಗಾಯತ್ರಿ ಅವರ ಮೇಲೆ ಜಾತಿನಿಂದನೆ ಆರೋಪ ಕೇಳಿಬಂದಿದೆ. ಜನಪದ ಗಾಯಕ ಜೋಗಿಲ ಸಿದ್ದರಾಜು ಅವರು ಸಲ್ಲಿಸಿದ ದೂರಿನ ಮೇಲೆ ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜನಪದ ಗಾಯಕರಾಗಿರುವ  ಜೋಗಿಲ ಸಿದ್ಧರಾಜು  ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ವಿವಿಧ ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದರು. ಕಳೆದ ಮೂರು ವರ್ಷದಿಂದ ಅವರು ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಹಣ ಸಂದಾಯವಾಗಬೇಕಿತ್ತು ಈ ಹಿನ್ನಲೆಯಲ್ಲಿ ಇದೇ ಜುಲೈ 11 ರಂದು ಸಂಭಾವನೆಯ ಹಣ … Read more

ಎಲೆನ್ (allen) ಅಕ್ರಮದ ಸಕ್ರಮಕ್ಕೆ ಮುಂದಾಯ್ತಾ ಶಿಕ್ಷಣ ಇಲಾಖೆ..? ಕ್ರಮಕ್ಕೆ ಶಿಫಾರಸ್ಸು ಮಾಡಿದ್ದ  ಡಿಡಿಪಿಯು(ddpu) ಮನೋಹರ್  ಕೊಳ್ಳಾ “ಯೂ ಟರ್ನ್” ಹಿಂದಿದ್ಯಾ “ಮೆಗಾ ಪ್ಲ್ಯಾನ್”-“ಬಿಗ್ ಡೀಲ್”..!?

ಬೆಂಗಳೂರು : ಹೀಗೆ ಖಂಡಿತಾ ಆಗದಿರಲಿ..ಒಂದೊಮ್ಮೆ ಆದರೆ ಇದಕ್ಕಿಂತ ದೊಡ್ಡ ಶೈಕ್ಷಣಿಕ ದುರಂತ ಮತ್ತೊಂದಿರಲಾರದೇನೋ..? ಏಕಂದ್ರೆ ಅಂತಹದೊಂದು ಅಕ್ರಮವನ್ನು ಸಕ್ರಮಗೊಳಿಸುವ ಕೆಲಸ ಮಲ್ಲೇಶ್ವರಂ ನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.ದೊಡ್ಡ ಮೊತ್ತದ ಹಣದ ವ್ಯವಹಾರವೊಂದು ಸಕ್ಸೆಸ್ ಆಗುವ ಲಕ್ಷಣ ಗೋಚರಿಸುತ್ತಿದೆ ಹಾಗೇನಾದ್ರೂ ಹಾಗಿಬಿಟ್ಟರೆ ಶಿಕ್ಷಣ ಇಲಾಖೆಯೇ ತಲೆತಗ್ಗಿಸುವ ಸನ್ನಿವೇಶವೊಂದು ಸೃಷ್ಟಿಯಾದಂತಾಗಿಬಿಡುತ್ತದೆ. ಯೆಸ್…ಶೈಕ್ಷಣಿಕ ಅಕ್ರಮವೊಂದನ್ನು ಸಕ್ರಮಗೊಳಿಸುವ ಮೆಗಾ ಪ್ಲ್ಯಾನ್, ಪಿಯು ಮಂಡಳಿ ಕಾರಿಡಾರ್ ನಲ್ಲಿ ನಡೆಯುತ್ತಿದೆ ಎನ್ನುವ ಆಪಾದನೆ ಕೇಳಿಬಂದಿದೆ.ಅದು ಅಂತಿಂಥ  ಅಕ್ರಮವಲ್ಲ ಶಿಕ್ಷಣ … Read more

ಬೆಂಗಳೂರು ವೀಡಿಯೋ ಜರ್ನಲಿಸ್ಟ್ ಗಳ ಫೋಟೋಗ್ರಫಿ ಜಾಕೆಟ್ ಅನಾವರಣ..

ಬೆಂಗಳೂರು: ಎಲ್ಲಾ ಹವಾಮಾನಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡುವ ನಮ್ಮ ವೀಡಿಯೋ ಜರ್ನಲಿಸ್ಟ್ ( ಮುಂಚೆಯೆಲ್ಲಾ ಕ್ಯಾಮೆರಾಮನ್ ಗಳನ್ನು ಈ ರೀತಿ ಗೌರವಯುತವಾಗಿ ಕರೆಯುತ್ತಿರಲಿಲ್ಲ) ಗಳಿಗೆ ರಿಪೋರ್ಟರ್ ಗಳ ಹೋಲಿಕೆಯಲ್ಲಿ ಸೌಲಭ್ಯ-ಸವಲತ್ತು-ಸಹಕಾರ-ನೆರವು ಸಿಗೋದು ತೀರಾ ಕಡಿಮೆ.ಆದರೂ ಈ ಬೇಸರ-ಅಸಮಾಧಾನ-ನೋವನ್ನೆಲ್ಲಾ ಮರೆತು ಸಂಸ್ಥೆ ವಹಿಸಿದ ಕೆಲಸ ಹಾಗೂ ಫೀಲ್ಡ್ ನಲ್ಲಿ ರಿಪೋರ್ಟರ್ ಹೇಳಿದ ಅಸೈನ್ಮೆಂಟನ್ನು ಶೂಟ್ ಮಾಡಿಕೊಡುವ ಕೆಲಸ ಮಾಡುತ್ತಾ ಬಂದಿದ್ದಾರೆ.ರಿಪೋರ್ಟರ್ ಗಳಂತೆ ತಮಗೂ ಎಲ್ಲಾ ರೀತಿಯ ಸ್ಥಾನಮಾನ ಸಿಗಬೇಕೆನ್ನುವ ಮಹದಾಸೆ ಕ್ಯಾಮೆರಾಮನ್ ಗಳಿಗೆ ಇದ್ದರೂ ಅನೇಕ ಕಾರಣಗಳಿಂದ ಅದು … Read more

EXCLUSIVE….. ಯಾವ ಕ್ಷಣದಲ್ಲೂ ಎಲೆನ್‌ (ALLEN) ಟ್ಯೂಷನ್‌ ಸೆಂಟರ್ಸ್‌ ಗಳಿಗೆ ಬೀಗ..?!

ಅಲೆನ್‌ ಕೆರಿಯರ್‌ ಇನ್ಸಿಟ್ಯೂಟ್‌  ನ ಬ್ರಹ್ಮಾಂಡ ಶೈಕ್ಷಣಿಕ ಅಕ್ರಮ ಬಯಲು- ಎಲ್ಲಾ ಸೆಂಟರ್ಸ್‌ ಮುಚ್ಚುವಂತೆ ಶಿಕ್ಷಣ ಇಲಾಖೆಯಿಂದ ಖಡಕ್‌ ಆದೇಶ- ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ಸರ್ಕಾರದ ಮಟ್ಟದಲ್ಲಿ ತೀವ್ರ ಲಾಭಿ..!.. ಎಲೆನ್ ಕೆರಿಯರ್ ಇನ್ಸಿಟ್ಯೂಟ್ … ಈ ಹೆಸರು ಕೇಳದಿರೋರೇ ಕಡಿಮೆ  ಬಿಡಿ..ನಿಮ್ಮ ಮಕ್ಕಳನ್ನು ಡಾಕ್ಟರ್ಸ್.ಎಂಜಿನಿಯರ್ಸ್‌ ಮಾಡಿಸುತ್ತೇವೆ ಎಂದು ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ಕೊಟ್ಟು ಪೋಷಕರು-ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಸನ್ನಿ ಸೃಷ್ಟಿಸಿದ ಸಂಸ್ಥೆ.ಮಕ್ಕಳ ಭವಿಷ್ಯದ ಬಗ್ಗೆ  ಬಣ್ಣ ಬಣ್ಣದ ಕನಸುಗಳನ್ನು ಬಿತ್ತಿ, ಪ್ರತಿ ವಿದ್ಯಾರ್ಥಿಯಿಂದಲೂ ಲಕ್ಷಾಂತರ … Read more

“ರಿಪಬ್ಲಿಕ್ ಕನ್ನಡ”ದ ಮುಖ್ಯಸ್ಥರ ಹುದ್ದೆಯನ್ನು  ಅಜಿತ್ ಹನುಮಕ್ಕನವರ್  ನಿರಾಕರಿಸಿದ್ದೇಕೆ..? “ಸುವರ್ಣ”ದಲ್ಲಿಯೇ “ಶೋಭಾ” ಉಳಿಯಲಿಲ್ಲ ಏಕೆ.?!

ರಿಪಬ್ಲಿಕ್ ಕನ್ನಡದ ಪ್ರಸ್ತಾವನೆಗೆ ಮೊದಲೆಲ್ಲಾ ಒಪ್ಪಿಗೆ ಸೂಚಿಸಿದ್ದ ಅಜಿತ್ ಕೊನೇ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದೇಕೆ..?ಅಜಿತ್ ನಿರ್ಗಮನದಿಂದ ಮುನ್ನಲೆಗೆ ಬಂದಿದ್ದ ಶೋಭಾ ಹೆಸರನ್ನು ಸುವರ್ಣ ಮ್ಯಾನೇಜ್ಮೆಂಟ್ ಪರಿಗಣಿಸಲಿಲ್ಲವೇಕೆ..?.. ಬೆಂಗಳೂರು: ವಿಷಯದ ಬಗ್ಗೆ ವಿವರಣೆ ಕೊಡುವ ಮುನ್ನ ಎರಡು ಪ್ರಮುಖ ವಿಷಯಗಳನ್ನು ಮೊದಲೇ ಹೇಳಿ ಅವರನ್ನು ಅಭಿನಂದಿಸುತ್ತದೆ ಕನ್ನಡ ಫ್ಲ್ಯಾಶ್ ನ್ಯೂಸ್. ರಿಪಬ್ಲಿಕ್ ಕನ್ನಡ ನ್ಯೂಸ್ ಚಾನೆಲ್ ನ ಮುಖ್ಯಸ್ಥೆಯಾಗಿ ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ನೇಮಕಗೊಂಡಿದ್ದಾರೆ.ಇನ್ನೊಂದೆಡೆ ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿಯ ಅಂಗಪತ್ರಿಕೆ ಸುಧಾ ವಾರಪತ್ರಿಕೆಯ ಮುಖ್ಯಸ್ಥರಾಗಿ … Read more