ಬಂಗಾರದ ಬೆಲೆಯ ಭೂಮಿಯಲ್ಲಿ “ಬೃಹತ್‌”  ಕಟ್ಟಡ  ನಿರ್ಮಾಣಕ್ಕೆ BBMP ಅಧಿಕಾರಿಗಳೇ  “ಬೋಗಸ್‌” ದಾಖಲೆ ಸೃಷ್ಟಿಸಿದ್ರಾ..?!

ಬಂಗಾರದ ಬೆಲೆಯ ಭೂಮಿಯಲ್ಲಿ “ಬೃಹತ್‌” ಕಟ್ಟಡ ನಿರ್ಮಾಣಕ್ಕೆ BBMP ಅಧಿಕಾರಿಗಳೇ “ಬೋಗಸ್‌” ದಾಖಲೆ ಸೃಷ್ಟಿಸಿದ್ರಾ..?!

ಸದಾಶಿವನಗರದ  19,346 ಚದರ ಅಡಿ ಭೂಮಿಯಲ್ಲಿ  ಕೋಟ್ಯಾಂತರ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಮಾಲೀಕರೇ ನಕಲಿ ದಾಖಲೆ ಕೊಟ್ರಾ..? ಅಸಲಿ ತಲೆ ಮೇಲೆ ಹೊಡೆದಂಗೆ ಬಿಬಿಎಂಪಿ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿದ್ರಾ..? ಮೇಲ್ನೋಟಕ್ಕೆ ಅಧಿಕಾರಿಗಳ ಶಾಮೀಲು ಶಂಕೆ..? ಸಮಗ್ರ ತನಿಖೆಯಿಂದ ಬಯಲಾಗಬೇಕಿದೆ ಸತ್ಯ..?!

ಸದಾಶಿವನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ. ಮೇಲಾದಿಕಾರಿಗಳ ಆದೇಶದಂತೆ ಕಟ್ಟಡದ ಬಳಿ ಸ್ಥಳ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು
ಸದಾಶಿವನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಬೃಹತ್‌  ಕಟ್ಟಡದ ದೃಶ್ಯ 
ಮೇಲಾದಿಕಾರಿಗಳ ಆದೇಶದಂತೆ ಕಟ್ಟಡದ ಬಳಿ ಸ್ಥಳ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು
ಮೇಲಾದಿಕಾರಿಗಳ ಆದೇಶದಂತೆ ಕಟ್ಟಡದ ಬಳಿ ಸ್ಥಳ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು
ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ
ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ
ಬಿಬಿಎಂಪಿ ನಗರ ಯೋಜನಾ ವಿಭಾಗದ ಎಡಿಟಿಪಿ ನಾರಾಯಣಸ್ವಾಮಿ
 ಎಡಿಟಿಪಿ ನಾರಾಯಣಸ್ವಾಮಿ

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್‌ ಅವರು ನೋಡಲೇಬೇಕಾದ ಸುದ್ದಿಯಿದು. ಪಾಲಿಕೆಯಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ..ಅಧಿಕಾರಿಗಳು ಯಾವ್‌ ರೀತಿ ಕೆಲಸ ಮಾಡುವ ನಿಯಮ ಉಲ್ಲಂಘಿಸ್ತಾರೆ.. ಕರ್ತವ್ಯಲೋಪ ಎಸಗ್ತಾರೆ ಹಾಗೆಯೇ ಪಾಲಿಕೆ ಬೊಕ್ಕಸಕ್ಕೆ ನಷ್ಟವನ್ನು ಉಂಟುಮಾಡುತ್ತಾರೆ ಎನ್ನುವುದಕ್ಕೆ ಇದು ಬೆಸ್ಟ್‌ ಎಕ್ಸಾಂಪಲ್‌ ಎನಿಸುತ್ತದೆ.

ಇದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎನ್ನೋ ಅಕ್ರಮಗಳ ಗೂಡಿನಲ್ಲಿ ನಡೆದಿರುವ ಮತ್ತೊಂದು ಹಗರಣ .ಪಶ್ಚಿಮ ವಲಯದ ವ್ಯಾಪ್ತಿಯಲ್ಲಿ ನಡೆದಿರುವ ಈ ಅಕ್ರಮದಲ್ಲಿ ಮೇಲ್ನೋಟಕ್ಕೆ  ಜಂಟಿ ಆಯುಕ್ತರಿಂದ ಹಿಡಿದು ಅವರ ಕೆಳಹಂತದ ಅಧಿಕಾರಿಗಳ ಶಾಮೀಲಾತಿಯ ಶಂಕೆ ಕಾಡುತ್ತಿದೆ.ಡಿಸಿಎಂ ಡಿಕೆಶಿವಕುಮಾರ್‌ ಅವರಿಂದ ಹಿಡಿದು ಎಲ್ಲರಿಗೂ ದಾಖಲೆ ಸಮೇತ ದೂರು ನೀಡಿದ್ರೂ  ಈವರಗೂ ತಪ್ಪಿತಸ್ಥರ ವಿರುದ್ದ ಕ್ರಮ ಜಾರಿಯಾಗದಿರುವುದು ದೊಡ್ಡ ಅನುಮಾನ ಮೂಡಿಸಿದೆ.

ಬಿಬಿಎಂಪಿ ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್
ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್

ಎರಡು ಸ್ವತ್ತುಗಳ ಖಾತಾವನ್ನ ಒಗ್ಗೂಡಿಸಿದ ಮೇಲೆಯೇ ನಕ್ಷೆಮಂಜೂರಾತಿ ಮಾಡುವುದು ಬಿಬಿಎಂಪಿ ಆಕ್ಟ್‌ ನಲ್ಲಿರುವ ನಿಯಮ. ಎರಡು ಸ್ವತ್ತುಗಳು ಕ್ಲಬ್ಬಿಂಗ್‌ ಆಗದ ಹೊರತು ನಿರ್ಮಾಣಕಾರ್ಯಕ್ಕೆ  ಗ್ರೀನ್ ಸಿಗ್ನಲ್‌ ಕೊಡುವಂಗಿಲ್ಲ.ಇದು ನಮ್ಮ ಬಿಬಿಎಂಪಿಯ ನಗರಯೋಜನೆ ಅಧಿಕಾರಿಗಳಿಗೆ ಗೊತ್ತಿರದ ವಿಚಾರವೇನು ಅಲ್ಲ..ಆದ್ರೆ ಈ ವಿಷಯ ಗೊತ್ತಿದ್ರೂ ಖಾತಾಗಳನ್ನು ಒಗ್ಗೂಡಿಸದೆ   ನಕ್ಷೆ ಮಂಜೂರಾತಿ ಮಾಡಿರುವ,ಅದಕ್ಕಾಗಿ ನಕಲಿ ದಾಖಲೆಗಳನ್ನೇ ಸೃಷ್ಟಿಸಿರುವ  ಪ್ರಕರಣ  ಬೆಳಕಿಗೆ ಬಂದಿದೆ.ಅಂದ್ಹಾಗೆ ಇದು ನಡೆದಿರುವುದು ಬೆಂಗಳೂರಿನ ಅತ್ಯಂತ ಪ್ರತಿಷ್ಟಿತರು ವಾಸವಾಗಿರುವ ಹಾಗೂ ತುಂಡು ಭೂಮಿಗೂ ಬಂಗಾರದ ಬೆಲೆ ಇರುವ ಸದಾಶಿವನಗರ ಎನ್ನುವ ಸಿರಿವಂತರ ಪ್ರದೇಶದಲ್ಲಿ.ಆ

ಆಗಿದ್ದೇನು..?ಸದಾಶಿವನಗರದ ಬಿಬಿಎಂಪಿ ವಾರ್ಡ್‌ 35 ರ ಅರಮನೆ ನಗರದ 9ನೇ ಮುಖ್ಯರಸ್ತೆಯಲ್ಲಿರುವ 19,346 ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಬೃಹತ್‌ ವಾಸಯೋಗ್ಯ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ಅಸಲಿಗೆ ಈ ಕಟ್ಟಡ ನಿರ್ಮಾಣವೇ ಅಕ್ರಮ.ಇದಕ್ಕೆ ಕಾರಣ ಎರಡು ಪ್ರತ್ಯೇಕ ಸ್ವತ್ತುಗಳಿಗೆ ಸಂಬಂಧಿಸಿದ ಖಾತಾ  ಒಗ್ಗೂಡಿಸದೆ ನಕ್ಷೆ ಮಂಜೂರಾತಿ ಮಾಡಲಾಗಿದೆ ಎನ್ನಲಾಗುತ್ತಿರುವುದು.

ಮೇಲ್ಕಂಡ  ಪ್ರದೇಶದಲ್ಲಿ ಎರಡು ಪ್ರತೈೇಕ ಸ್ವತ್ತುಗಳಿವೆ.ಒಂದು  ಸ್ವತ್ತಿನ ಸಂಖ್ಯೆ ( ಪಿಐಡಿ 90-22-32) 18.384 ಚದರ ಅಡಿಯಿದೆ. ಹಾಗೆಯೇ ಇನ್ನೊಂದು ಸ್ವತ್ತು (ಪಿಐಡಿ 99-22-33/2) 962 ಚದರ ಅಡಿಯಿದೆ.(ಸ್ವತ್ತಿನ ನಂಬರ್  32 ಮತ್ತು 33/2) ಈ ಎರಡು ಸ್ವತ್ತುಗಳ ವಿಸ್ತೀರ್ಣ  ಒಟ್ಟು 19,346 ಚದರ ಅಡಿ.ಅಂದ್ಹಾಗೆ ಈ ಸ್ವತ್ತುಗಳು ಬಿಮ್ಲಾದೇವಿ ಬೋತ್ರಾ ಅವರ ಹೆಸರಿನಲ್ಲಿರುತ್ತೆ.

ಈ ಎರಡು ಸ್ವತ್ತುಗಳನ್ನು  ಒಗ್ಗೂಡಿಸುವ ಕಾರ್ಯ ಪಾಲಿಕೆ  ನಿಯಮಗಳ ಆಧಾರದಲ್ಲಿ ನಡೆದಿದ್ದರೆ ಪಾಲಿಕೆ ಬೊಕ್ಕಸಕ್ಕೆ ಸೇಲ್‌ ಡೀಡ್ ಮೇಲೆ ಶೇಕಡಾ 2 ದರದಂತೆ ಲಕ್ಷಾಂತರ ತೆರಿಗೆ ಸಂದಾಯವಾಗುತ್ತಿತ್ತು.ಆದರೆ ಪಾಲಿಕೆ ಅಧಿಕಾರಿಗಳು ಕರ್ತವ್ಯಲೋಪ ಎಸಗುವ ಮೂಲಕ ಅಕ್ರಮವಾಗಿ ಪ್ಲ್ಯಾನ್‌ ಮಂಜೂರು ಮಾಡಿದ್ದಾರಲ್ಲದೇ ಲಕ್ಷಾಂತರ ನಷ್ಟವನ್ನುಉಂಟುಮಾಡಿರುತ್ತಾರೆ.

ನಕ್ಷೆ ಮಂಜೂರಾತಿಗೆ ಸಲ್ಲಿಸಲಾಗಿತ್ತು ಎನ್ನಲಾದ ನಕಲಿ ಎನ್ನಲಾದ ದಾಖಲೆ..ಸಹಾಯಕ ಕಂದಾಯಾಧಿಕಾರಿ ಇದಕ್ಕೆ ಮಾಡಲಾಗಿರುವುದು ನನ್ನ ಸಹಿ ಅಲ್ಲ ಎಂದ ಮೇಲೆ...ಸಹಿ ಹಾಕಿರುವುದು ಯಾರು..? ಇದರ ಸೃಷ್ಟಿಕರ್ತ ಯಾರು..?!
ನಕ್ಷೆ ಮಂಜೂರಾತಿಗೆ ಸಲ್ಲಿಸಲಾಗಿತ್ತು ಎನ್ನಲಾದ ನಕಲಿ ಎನ್ನಲಾದ ದಾಖಲೆ..ಸಹಾಯಕ ಕಂದಾಯಾಧಿಕಾರಿ ಇದಕ್ಕೆ ಮಾಡಲಾಗಿರುವುದು ನನ್ನ ಸಹಿ ಅಲ್ಲ ಎಂದ ಮೇಲೆ…ಸಹಿ ಹಾಕಿರುವುದು ಯಾರು..? ಇದರ ಸೃಷ್ಟಿಕರ್ತ ಯಾರು..?!

ಈ ಸ್ವತ್ತುಗಳನ್ನು ಕ್ಲಬ್ಬಿಂಗ್ ಅಂದರೆ ಒಗ್ಗೂಡಿಸದೆ ಖಾತಾ ಸೃಷ್ಟಿ ಮಾಡಲಾಗಿರುವುದನ್ನು ಸಾಮಾಜಿಕ ಕಾರ್ಯಕರ್ತ ಸಮೃದ್ಧಿ ಭಾರತ ಫೌಂಡೇಷನ್‌ ಪತ್ತೆ ಮಾಡಿ ಜಂಟಿ ಆಯುಕ್ತರಿಗೆ 24-01-2024 ರಂದು  ದೂರು ನೀಡಿದ್ದರು.ಅಷ್ಟೇ ಅಲ್ಲ ಅದೇ ದೂರಿನ ಪ್ರತಿಗಳನ್ನು ಬಿಬಿಎಂಪಿ  ಮುಖ್ಯ ಆಯುಕ್ತರು,ವಲಯ ಆಯುಕ್ತರು,ಆಡಳಿತಾಧಿಕಾರಿಗಳು, ನಗರ ಯೋಜನೆ ನಿರ್ದೇಶಕರಿಗೂ ಸಲ್ಲಿಸಿದ್ದರು.ಅದಷ್ಟೇ ಅಲ್ಲ  ಉಪಮುಖ್ಯಮಂತ್ರಿ ಹಾಗೂ ನಗರ ಉಸ್ತುವಾರಿ ಡಿ.ಕೆ ಶಿವಕುಮಾರ್‌ ಅವರಿಗೂ ಇದೇ ದೂರನ್ನು ಜನತಾದರ್ಶನದಲ್ಲಿ ಸಲ್ಲಿಸಿದ್ದರು.

ದೂರುದಾರ ಮಂಜುನಾಥ್
ದೂರುದಾರ ಮಂಜುನಾಥ್

ದೂರಿನ ಮೇಲಿನ ಆದ ಕ್ರಮ: ಮಂಜುನಾಥ್‌ ಸಲ್ಲಿಸಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ವಲಯ ಆಯುಕ್ತ ದೀಪಕ್‌ ಅವರು 19-01-2024 ರಂದು ಜಂಟಿ ಆಯುಕ್ತ ಯೋಗೇಶ್‌ ಅವರಿಗೆ ಬರೆದ ಪತ್ರದಲ್ಲಿ ಪ್ರಕರಣದಲ್ಲಿ ನಿಯಾಮನುಸಾರ  ಕ್ರಮ ಕೈಗೊಂಡು ದೂರುದಾರರಿಗೆ ಮಾಹಿತಿ ನೀಡುವಂತೆ ಸೂಚಿಸಿದರು. ಆದರೆ ಯೋಗೇಶ್‌   ಓರ್ವ ಐಆರ್‌ ಎಸ್‌ ಅಧಿಕಾರಿ ಆದೇಶಕ್ಕೂ ಕ್ಯಾರೆ ಎನ್ನದೆ ಕಾಲಹರಣ ಮಾಡಿದ್ದು ಬಿಟ್ಟರೆ  ಪ್ರತಿಕ್ರಿಯೆಯನ್ನೂ ನೀಡಲಿಲ್ಲ.ಆದಂತ ಕ್ರಮದ ಬಗ್ಗೆಯೂ ಮಾಹಿತಿ ನೀಡಿಯೇ ಇಲ್ಲ.

ಕೆಂಡಮಂಡಲವಾದ ದೂರುದಾರ ಮಂಜುನಾಥ್‌ ಖುದ್ದು ದೀಪಕ್‌ ಅವರನ್ನು ಭೇಟಿ ಮಾಡಿ ವಿವರಣೆ ಕೇಳಿದಾಗ ಫೋನ್‌ ಮೂಲಕ ಮಾತನಾಡಿ ವಿವರಣೆ ನೀಡುವಂತೆ ಯೋಗೇಶ್‌ ಅವರಿಗೆ ಸೂಚಿಸಿದ್ರು.ಅವರ ಸೂಚನೆ ಮೇರೆಗೆ ಕಾಟಾಚಾರಕ್ಕೆ ಎನ್ನುವಂತೆ 07-02-2024 ರಂದು ಎಡಿಟಿಪಿ ನಾರಾಯಣಸ್ವಾಮಿ ಅವರಿಗೆ ಕಾರಣ ಕೇಳಿ ನೊಟೀಸ್‌ ಜಾರಿ ಮಾಡುತ್ತಾರೆ.ಆಂತರಿಕ ಕಚೇರಿ ಟಿಪ್ಪಣಿಯಲ್ಲಿ,  ಮೇಲ್ನೋಟಕ್ಕೆ  ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ 7 ದಿನಗಳ ಒಳಗೆ ಕಡತ ಮಂಡಿಸಬೇಕು.ಇಲ್ಲದಿದ್ದಲ್ಲಿ ನಿಮ್ಮ ವಿರುದ್ಧವೇ ಕ್ರಮಕೈಗೊಳ್ಳಬೇಕಾಗುತ್ತದೆ ಎಚ್ಚರಿಸಿದ್ರು.

ಅಕ್ರಮ ನಡೆದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಸಮೃದ್ದಿ ಭಾರತಿ ಫೌಂಡೇಷನ್‌ ಮುಖ್ಯಸ್ಥ ಮಂಜುನಾಥ್‌ ಸಲ್ಲಿಸಿದ್ದ ದೂರಿನ ಪ್ರತಿ
ಅಕ್ರಮ ನಡೆದಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಸಮೃದ್ದಿ ಭಾರತಿ ಫೌಂಡೇಷನ್‌ ಮುಖ್ಯಸ್ಥ ಮಂಜುನಾಥ್‌ ಸಲ್ಲಿಸಿದ್ದ ದೂರಿನ ಪ್ರತಿ

ಈ ಕ್ಷಣದವರೆಗೂ ಎಡಿಟಿಪಿ ನಾರಾಯಣಸ್ವಾಮಿ ಅವರಾಗಲಿ ಅವರ ಮೇಲಾಧಿಕಾರಿ ಜಂಟಿ ಆಯುಕ್ತ ಯೋಗೇಶ್‌ ಅವರಾಗಲಿ ಪ್ರಕರಣ ಸಂಬಂಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲ ತಮ್ಮ ಮೇಲಾಧಿಕಾರಿ ವಲಯ ಆಯುಕ್ತ ದೀಪಕ್‌ ಅವರ ಆದೇಶಕ್ಕೂ ಕಿಮ್ಮತ್ತಿನ ಬೆಲೆ ನೀಡದಿರುವುದು ನಿರ್ಲಕ್ಷ್ಯ, ಕರ್ತವ್ಯ ಲೋಪ, ಅಧಿಕಾರ ದುರ್ಬಳಕೆಯನ್ನು ಸಾರಿ ಹೇಳುವಂತಿದೆಯಲ್ಲವೇ.?

ಯೋಗೇಶ್‌ ಅವರ  ಮೀನಾಮೇಷ,ಹಿತಾಸಕ್ತಿಗೆ ಕಾರಣವೇನು..? ಕಣ್ಣಿಗೆ ರಾಚುವಂತೆ  ಅಕ್ರಮ ನಡೆದಿದ್ದ ರೂ ವಲಯದ ಮುಖ್ಯಸ್ಥರಾಗಿ ಜಂಟಿ ಆಯುಕ್ತ ಯೋಗೇಶ್‌ ಸಮರ್ಪಕವಾಗಿ ಕೆಲಸ ಮಾಡಬೇಕಿತ್ತು. ಆದರೆ ಒಟ್ಟಾರೆ ಪ್ರಕರಣದಲ್ಲಿ ಅವರಿಂದ ಅಂಥದ್ದ್ಯಾವುದೇ ನಿರ್ದಾಕ್ಷಿಣ್ಯ ಕ್ರಮ ಜಾರಿಯಾಗದಿರುವುದು ನಾನಾ ಪ್ರಶ್ನೆ ಸೃಷ್ಟಿಸುತ್ತದೆ.ಪ್ಲ್ಯಾನ್‌ ಸ್ಯಾಂಕ್ಷನ್‌ ಮಾಡಿದ ಆದೇಶವನ್ನು ರದ್ದು ಮಾಡಿದ್ದನ್ನು ಬಿಟ್ಟರೆ ಪ್ರಕರಣದಲ್ಲಿ ಭಾಗಿ ಯಾದ ಯಾವುದೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲವಂತೆ.ಕೆಳಹಂತದ ಅಧಿಕಾರಿಗಳ ರಕ್ಷಣೆಗೆ ಏಕೆ ಟೊಂಕ ಕಟ್ಟಿ ನಿಂತಿದ್ದಾರೋ ಗೊತ್ತಾಗ್ತಿಲ್ಲ.ಇದರ ಹಿಂದೆ ಅವರ ಹಿತಾಸಕ್ತಿ ಏನಿದೆಯೋ ಗೊತ್ತಾಗ್ತಿಲ್ಲ. ಬಹುಷಃ ಕೆಳ ಹಂತದ ಅಧಿಕಾರಿಗಳ ವಿರುದ್ಧ ಕ್ರಮವಾದಲ್ಲಿ ನಕ್ಷೆಗೆ  ಅಂತಿಮವಾಗಿ ಅನುಮೋದನೆ ನೀಡಿದ ತಾವೇ ಎಲ್ಲಿ ಖೆಡ್ಡಾಕ್ಕೆ ಬೀಳುತ್ತೇನೋ ಎನ್ನುವ ಅಂಜಿಕೆ-ಆತಂಕದ ಕಾರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೇನೋ ಗೊತ್ತಿಲ್ಲ ಎನ್ನುವುದು ದೂರುದಾರ ಮಂಜುನಾಥ್‌ ಆಪಾದನೆ.

ದೂದುದಾರ ಮಂಜುನಾಥ್‌ ಅವರ ದೂರಿನ ಮೇರೆಗೆ ವಲಯ ಆಯುಕ್ತ ಡಾ.ದೀಪಕ್‌ ಅವರು ಜಂಟಿ ಆಯುಕ್ತ ಯೋಗೇಶ್‌ ಅವರಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಬರೆದ ಆಂತರಿಕ ಟಿಪ್ಪಣಿ ಪತ್ರ
ದೂದುದಾರ ಮಂಜುನಾಥ್‌ ಅವರ ದೂರಿನ ಮೇರೆಗೆ ವಲಯ ಆಯುಕ್ತ ಡಾ.ದೀಪಕ್‌ ಅವರು ಜಂಟಿ ಆಯುಕ್ತ ಯೋಗೇಶ್‌ ಅವರಿಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಬರೆದ ಆಂತರಿಕ ಟಿಪ್ಪಣಿ ಪತ್ರ
ವಲಯ ಆಯುಕ್ತ ಡಾ.ದೀಪಕ್‌ ಅವರ ಸೂಚನೆ ಹಿನ್ನಲೆಯಲ್ಲಿ ಜಂಟಿ ಆಯುಕ್ತ ಯೋಗೇಶ್‌ ನಗರಯೋಜನೆ ಎಡಿಟಿಪಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಬರೆದ ಟಿಪ್ಪಣಿ
ವಲಯ ಆಯುಕ್ತ ಡಾ.ದೀಪಕ್‌ ಅವರ ಸೂಚನೆ ಹಿನ್ನಲೆಯಲ್ಲಿ ಜಂಟಿ ಆಯುಕ್ತ ಯೋಗೇಶ್‌ ನಗರಯೋಜನೆ ಎಡಿಟಿಪಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಬರೆದ ಟಿಪ್ಪಣಿ
ಕಟ್ಟಡ ಮಾಲೀಕರಾದ ಬಿಮ್ಲಾದೇವಿ ಬೋತ್ರ ಅವರ ವಿರುದ್ಧ ಬಿಬಿಎಂಪಿ ಅದಿಕಾರಿಗಳು ಸಲ್ಲಿಸಿದ ದೂರಿನ ಅನ್ವಯ ಸದಾಶಿವನಗರ ಪೊಲೀಸ್‌ ಠಾಣಣೆಯಲ್ಲಿ ದಾಖಲಾದ ಎಫ್‌ ಐಆರ್
ಕಟ್ಟಡ ಮಾಲೀಕರಾದ ಬಿಮ್ಲಾದೇವಿ ಬೋತ್ರ ಅವರ ವಿರುದ್ಧ ಬಿಬಿಎಂಪಿ ಅದಿಕಾರಿಗಳು ಸಲ್ಲಿಸಿದ ದೂರಿನ ಅನ್ವಯ ಸದಾಶಿವನಗರ ಪೊಲೀಸ್‌ ಠಾಣಣೆಯಲ್ಲಿ ದಾಖಲಾದ ಎಫ್‌ ಐಆರ್

ಯಡವಟ್ಟು ಅಧಿಕಾರಿಗಳದ್ದು..ಆದ್ರೆ  ಎಫ್‌ ಐ ಆರ್‌ ದಾಖಲಾಗಿದ್ದು ಸ್ವತ್ತಿನ ಮಾಲೀಕರ ವಿರುದ್ಧ.. ವಿಪರ್ಯಾಸ ಹಾಗೂ ದುರಂತವೇ ಇದು ನೋಡಿ. ಪ್ರಕರಣದಲ್ಲಿ ಅಕ್ರಮ ನಡೆಯೊಕ್ಕೆ ಅಧಿಕಾರಿಗಳೇ ಕಾರಣ ಎನ್ನೋದು ಸಾರಾಸಗಟಾಗಿ ಪ್ರೂವ್‌ ಆಗುವಂತಿದ್ದರೂ ಅಪರಾಧಿ ಸ್ಥಾನದಲ್ಲಿ ನಿಂತಿರೋದು ಸ್ವತ್ತಿನ ಮಾಲೀಕರು. ಸ್ವತ್ತಿನ ಮಾಲೀಕರಾದ 75 ವರ್ಷದ ಶ್ರೀಮತಿ ಭೀಮ್ಲಾ ದೇವಿ ಬೋತ್ರಾ ವಿರುದ್ಧ ಬಿಬಿಎಂಪಿ ಅಧಿಕಾರಿಗಳಾದ ಸಹಾಯಕ ಕಂದಾಯಾಧಿಕಾರಿ( ಮತ್ತಿಕೆರೆ ಉಪ ವಿಭಾಗ)   13-02-2024 ರಂದು ಸದಾಶಿವನಗರ ಪೊಲೀಸ್‌ ಠಾಣೆಗೆ ಸಲ್ಲಿಸಿದ ದೂರಿನ ಮೇಲೆ ಎಫ್‌ ಐಆರ್ (‌ಎಫ್‌ ಐ ಆರ್‌ ನಂ: 0049/2024) ದಾಖಲಿಸಿದ್ದಾರೆ.

ದೂರಿನಲ್ಲಿ “ಕಟ್ಟಡ ಮಾಲೀಕರು ನಕಲಿ ದಾಖಲೆಗಳನ್ನು ಎಡಿಟಿಪಿಗೆ ಸಲ್ಲಿಸಿ ಸತ್ಯವನ್ನು ಮರೆ ಮಾಚಿರುತ್ತಾರೆ. ದಾಖಲಾತಿ ಪರಿಶೀಲನೆ ವೇಳೆ ದಾಖಲೆಗಳೆಲ್ಲವೂ ನಕಲಿ ಎನ್ನುವುದು ಗೊತ್ತಾದ ಹಿನ್ನಲೆಯಲ್ಲಿ ದೂರು ಸಲ್ಲಿಸಿರುತ್ತಿರುವುದಾಗಿ ವಿವರಿಸಿರುತ್ತಾರೆ.

ಸಮಗ್ರ ತನಿಖೆ ನಂತರ ಅಕ್ರಮ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಪಶ್ಚಿಮ ವಲಯ ಎಡಿಟಿಪಿ ನಾರಾಯಣಸ್ವಾಮಿ ನಕ್ಷೆ ರದ್ದು ಮಾಡಿ ಹೊರಡಿಸಿರುವ ಆದೇಶ
ಸಮಗ್ರ ತನಿಖೆ ನಂತರ ಅಕ್ರಮ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆಯಲ್ಲಿ ಪಶ್ಚಿಮ ವಲಯ ಎಡಿಟಿಪಿ ನಾರಾಯಣಸ್ವಾಮಿ ನಕ್ಷೆ ರದ್ದು ಮಾಡಿ ಹೊರಡಿಸಿರುವ ಆದೇಶ
ಎಆರ್‌ ಓ ಪ್ರಸನ್ನಕುಮಾರ್
ಎಆರ್‌ ಓ ಪ್ರಸನ್ನಕುಮಾರ್

ನನ್ನ ಸಹಿಯೇ ಅಲ್ಲ ಎಂದಿದ್ದೇಕೆ ಸಹಾಯಕ ಕಂದಾಯಾಧಿಕಾರಿ ಪ್ರಸನ್ನಕುಮಾರ್:‌ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದೇ ಇಲ್ಲಿ.ಒಟ್ಟಾರೆ ಪ್ರಕರಣದ ಬಗ್ಗೆ ತನಿಖೆ ನಡೆಯಬೇಕೆಂದು ಮಂಜುನಾಥ್‌ ಸಲ್ಲಿಸಿದ ದೂರಿನ ಹಿನ್ನಲೆಯಲ್ಲಿ ಅವರಿಗೆ ನೀಡಲಾದ ದಾಖಲೆಗಳಲ್ಲಿ ಅಕ್ರಮವಾಗಿ ಖಾತೆ ಒಗ್ಗೂಡಿಸಿರುವುದಕ್ಕೆ  ಸಹಾಯಕ ಕಂದಾಯಾಧಿಕಾರಿ ಸಹಿ ಮಾಡಿರುವುದು ಗೊತ್ತಾಗುತ್ತಿದ್ದಂತೆ ಅದರ ಪರಿಶೀಲನೆ ನಡೆಸಿದ್ದಾರೆ. ಸಹಿ ಮಾಡಿದರೆನ್ನಲಾದ ಸಹಾಯಕ ಕಂದಾಯಾಧಿಕಾರಿ ಪ್ರಸನ್ನ ಕುಮಾರ್‌ ಅವರನ್ನು ವಿಚಾರಿಸಿದಾಗ ನಾನು ಯಾವುದೇ ಸಹಿ ಹಾಕಿಲ್ಲ ಎಂದಿದ್ದಾರೆ. ಹಾಗಾದ್ರೆ ಆ ನಕಲಿ ಸಹಿ ಮಾಡಿದವರು ಯಾರು ಎಂದು ಪ್ರಶ್ನಿಸಿದಾಗಲೇ ಇದರ ಹಿಂದೆ ಇರುವ ಸಾಕಷ್ಟು ಅಧಿಕಾರಿಗಳ ಶಾಮೀಲಾತಿಯ ಒಂದೊಂದೇ ವಿಚಾರಗಳು ಬಹಿರಂಗ ವಾಗಲು  ಪ್ರಾರಂಭವಾಗಿವೆ.

ಅಕ್ರಮದಲ್ಲಿ ಪಾಲಿಕೆ ಅಧಿಕಾರಿಗಳೇ ಶಾಮೀಲು..!? :ದಾಖಲೆಗಳೇ ಹೇಳುವಂತೆ ಅಕ್ರಮದಲ್ಲಿ ಎಫ್‌ ಡಿಸಿ ಉಮಾದೇವಿ, ಎಇ ನವೀನ್‌, ಎಡಿಟಿಪಿ ನಾರಾಯಣಸ್ವಾಮಿ, ಜಂಟಿ ಆಯುಕ್ತ ಯೋಗೇಶ್‌ ಅವರು ಶಾಮೀಲಾಗಿರುವುದು ಗೊತ್ತಾಗುತ್ತೆ. ಮಂಜುನಾಥ್‌ ಆಪಾದಿಸುವಂತೆ ಮೇಲ್ಕಂಡ ಪ್ರಕರಣದಲ್ಲಿ ಅಪಾರ ಮೊತ್ತದ  ಭ್ರಷ್ಟಾಚಾರ ನಡೆದಿದೆ.ಅದಷ್ಟೇ ಅಲ್ಲ. ಬಿಬಿಎಂಪಿ ಬೊಕ್ಕಸಕ್ಕೂ ಲಕ್ಷಾಂತರ ತೆರಿಗೆ ವಂಚನೆಯಾಗಿದೆ.

ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾಡಿರುವ ಯಡವಟ್ಟು ಹೀಗಿವೆ:

1-ಖಾತಾ ಒಗ್ಗೂಡಿಸದೆ ನಕ್ಷೆ ಮಂಜೂರು ಮಾಡಿರುವುದು 

2-ಬಿಬಿಎಂಪಿ ಪಶ್ಚಿಮ ವಲಯದ ಕಚೇರಿಯಲ್ಲಿ ಕೆಲಸ ಮಾಡುವ  ಎಫ್‌ ಡಿಸಿ ಉಮಾದೇವಿ ಖಾತಾ ಒಗ್ಗೂಡಿಸದೆ ನಕ್ಷೆ ಮಂಜೂರು ಮಾಡಲಾದ ದಾಖಲೆಗಳನ್ನು ಪರಿಶೀಲಿಸದೆ ಮುಂದಿನ ಕ್ರಮಕ್ಕೆ ಸಲ್ಲಿಸಿದ್ದಾರೆ ಎನ್ನಲಾಗುತ್ತಿರುವುದು.( ನಕ್ಷೆ ಮಂಜೂರಾತಿಗೆ ಅನುಮೋದನೆ ಕೋರಿ 21-06-2023 ರಂದು ಅರ್ಜಿ ಸಲ್ಲಿಕೆ-ಈ ಅರ್ಜಿಗಳು ಈ ಹಿಂದೆ  ತಾಂತ್ರಿಕ ದೋಷಗಳ ಕಾರಣದಿಂದ 6 ಬಾರಿ ತಿರಸ್ಕರಿಸಲ್ಪಟ್ಟಿರುತ್ತದೆ.)

3-ಎಫ್‌ ಡಿಸಿ ಉಮಾದೇವಿ  ಮಂಡಿಸಲಾದ  ದಾಖಲೆಗಳನ್ನು ಮರುಪರಿಶೀಲಿಸಬೇಕಿರುವುದು ಸಹಾಯಕ  ಅಭಿಯಂತರ  ನವೀನ್‌ ಕರ್ತವ್ಯ.ಆದರೆ ಪರಿಶೀಲಿಸುವ ಗೋಜಿಗೆ ಹೋಗದೆ ಮುಂದಿನ ಕ್ರಮಕ್ಕೆ ಸಲ್ಲಿಸಿದ್ದಾರೆ ಎನ್ನಲಾಗಿರುವುದು( 08-12-2023 ರಂದು ಎಡಿಟಿಪಿಗೆ ಶಿಫಾರಸ್ಸು).

4-ನವೀನ್‌ ಮಂಡನೆ ಮಾಡಲಾದ ದಾಖಲೆಗಳು  ಎಡಿಟಿಪಿ ನಾರಾಯಣಪ್ಪ ಅವರ ಲಾಗಿನ್‌ ಗೆ ಬರುತ್ತೆ.ಆ ವೇಳೆ ಸಹಾಯಕ ಕಂದಾಯಾಧಿಕಾರಿಗಳು ಖಾತಾ  ಒಗ್ಗೂಡಿಸಿರುವ ಮಾದರಿಯಲ್ಲೇ ನಕಲಿ ದಾಖಲೆ ಸೃಷ್ಟಿಸಿ ನಕ್ಷೆ ಮಂಜೂರಾತಿಗೆ  ಅನುಮೋದನೆ ಕೋರಿ  ಯೋಗೇಶ್‌  ಲಾಗಿನ್ ಗೆ ಅಪ್‌ ಲೋಡ್‌ ಮಾಡಿದ್ದಾರೆ ಎನ್ನಲಾಗಿರುವುದು.( 08-12-2023 ರಂದು ಎಡಿಟಿಪಿ ನಾರಾಯಣಸ್ವಾಮಿ ಜಂಟಿ ಆಯುಕ್ತರಿಗೆ  ಶಿಫಾರಸ್ಸು)

5- ಹಾಗೆ ಅಪ್‌ ಲೋಡ್‌ ಮಾಡಲಾದ ದಾಖಲೆಗಳನ್ನು ಜವಾಬ್ದಾರಿಯುತ ಅಧಿಕಾರಿಯಾಗಿ  ಜಂಟಿ ಆಯುಕ್ತ ಯೋಗೇಶ್‌ ಸತ್ಯಾಸತ್ಯತೆ ಪರಿಶೀಲಿಸಬೇಕಿತ್ತು.ನಿಯಮದಂತೆ ಸ್ಥಳಕ್ಕೆ ಭೇಟಿ ನೀಡಿ ರೀಶೀಲನೆ ನಡೆಸಿ ಎಲ್ಲವೂ ನಿಯಮಬದ್ದವಾಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಂಡ ಬಳಿಕವೇ ನಕ್ಷೆ ಮಂಜೂರಾತಿಗೆಅನುಮೋದನೆ ನೀಡಬೇಕಿತ್ತು.ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಕ್ಷೆ 12-12-2023 ರಂದು  ಅನುಮೋದನೆ ನೀಡಿದ್ದಾರೆ ಎನ್ನಲಾಗುತ್ತಿರುವುದು.

“ಅಕ್ರಮದ ಸಂಪೂರ್ಣ ಮಾಹಿತಿ ಸಿಕ್ಕಿದೆ..ತನಿಖೆಗೆ ಆದೇಶಿಸುತ್ತೇನೆ: ಈ ಬಗ್ಗೆ ಮಾದ್ಯಮಗಳು  ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗ ಮಂಜುನಾಥ್‌ ಅವರು ಸಲ್ಲಿಸಿರುವ ದೂರಿನ ಮಾಹಿತಿ ನನಗೆ ಸಿಕ್ಕಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿರುವುದು ಅಕ್ಷಮ್ಯ.ಎಲ್ಲಕ್ಕಿಂತ ಪಾಲಿ ಕೆ ಬೊಕ್ಕಸಕ್ಕೆ ಲಕ್ಷಾಂತರ ನಷ್ಟ ಉಂಟುಮಾಡಿ ರುವುದನ್ನು ಸಹಿಸಲಿಕ್ಕೆ ಆಗೊಲ್ಲ.ಈ ಬಗ್ಗೆ ದೀಪಕ್‌ ಜತೆ ಮಾತನಾಡಿ,ಮುಂದಿನ ಶಿಸ್ತುಕ್ರಮಕ್ಕೆ ಸೂಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು” 

ಪ್ಲ್ಯಾನ್‌ ರದ್ದಾದ್ರೂ  ಕಾಮಗಾರಿಗೆ ಬ್ರೇಕ್‌ ಬಿದ್ದಿಲ್ಲವೇಕೆ..?:  ದುರಂತ ಎಂದ್ರೆ ಪ್ಲ್ಯಾನ್‌ ರದ್ದಾದ ಮೇಲೂ ಕಟ್ಟಡ ನಿರ್ಮಾಣ ಕಾಮಗಾರಿ ಅನಿಯಂತ್ರಿತವಾಗಿ ನಡೆಯುತ್ತಲೇ ಇದೆಯಂತೆ.23-02-2024 ರಂದು ಎಡಿಟಿಪಿ ನಾರಾಯಣಸ್ವಾಮಿ  ಕಟ್ಟಡದ ಮಾಲೀಕರಾದ ಶ್ರೀಮತಿ ಬೋತ್ರಾ ಹಾಗೂ ಮತ್ತಿಕೆರೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದು ಕಟ್ಟಡದ ನಕ್ಷೆ ರದ್ದಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.ಅಷ್ಟೇ ಅಲ್ಲ,ಯಾವುದೇ ಕಾಮಗಾರಿ ನಡೆಸದಂತೆ ಸೂಚಿಸಿದ್ದರು.ಆದರೆ ಆದೇಶಕ್ಕೆ ಕಿಮ್ಮತ್ತಿನ ಬೆಲೆ ನೀಡದೆ ಕಾಮಗಾರಿ ಎಂದಿನಂತೆ ನಡೆಯುತ್ತಿದೆ.ಆರಂಭದಲ್ಲಿ ಎಇಇ ಕೆಲಸ ನಿಲ್ಲಿಸಿರುವುದು ಸ್ಪಷ್ಟವಾದ್ರೂ ನಂತರದಲ್ಲಿ ಮುಂದುವರೆದ ಕಾಮಗಾರಿ ಬಗ್ಗೆ ವಿವರಣೆ ಕೇಳಿದ್ರೆ ಎಡಿಟಿಪಿ ಜತೆ ಪತ್ರ ವ್ಯವಹಾರ ಮಾಡುತ್ತಿರುವುದಾಗಿ ಹೇಳುತ್ತಿದ್ದಾರಂತೆ.

ಬಿಬಿಎಂಪಿ ನಗರಯೋಜನೆ( ಪಶ್ಚಿಮ) ವಿಭಾಗದ ಕೆಲವು ಮೂಲಗಳ ಪ್ರಕಾರ ಕೆಲಸ ನಿಲ್ಲಿಸಿ ಎಂದು ನೊಟೀಸ್‌ ನೀಡಿರುವ ಅಧಿಕಾರಿಗಳಿಂದಲೇ ಕೆಲಸ ಮಾಡಲು ಬಿಡಿ ಎನ್ನುವ ಆದೇಶ ನೀಡಲಾಗುತ್ತಿದೆಯಂತೆ.ಮಾಲೀಕರು ಹೊಸದಾಗಿ ಕಟ್ಟಡ ಮಂಜೂರಾತಿ ನಕ್ಷೆಗೆ ಅವರು ಅರ್ಜಿ ಹಾಕ್ಕೊಂಡಿದ್ದಾರೆ.ಹಾಗಾಗಿ ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಡಿ ಎಂದು ಹೇಳುತ್ತಿದ್ದಾರೆನ್ನುವ ಮಾತುಗಳಿವೆ.ಅಧಿಕಾರಿಗಳ ಸುಪರ್ದಿನಲ್ಲೇ ನಿರ್ಮಾಣ ಕಾಮಗಾರಿ ನಡೆಯುತ್ತಿದೆಯೇ ಎನ್ನುವ ಶಂಕೆ ಕಾಡುತ್ತಿದೆ.

ಆದರೆ ಇಲ್ಲಿ ಪ್ರಶ್ನೆ ಇರುವುದು ಕಟ್ಟಡಕ್ಕೆ ನೀಡಲಾಗಿದ್ದ ಪ್ಲ್ಯಾನ್‌ ರದ್ದಾಗಿದೆ.ಅದರ ಹೊರತಾಗಿಯೂ ಕಟ್ಟಡ ಕಾಮಗಾರಿ ನಡೆಯುತ್ತಿದೆ.ಆದರೆ ನಿರ್ಮಾಣ ಹಂತದಲ್ಲಿರುವ  ಕಟ್ಟಡಕ್ಕೆ ಹೊಸದಾಗಿ ನಕ್ಷೆ ಹೇಗೆ ಮಂಜೂರಾತಿ ನೀಡುತ್ತಾರೆ..? ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ..? ಈ ಪ್ರಶ್ನೆಗಳಿಗೆ ವಲಯ ಆಯುಕ್ತ ಡಾ.ದೀಪಕ್‌, ಜಂಟಿ ಆಯುಕ್ತ ಯೋಗೇಶ್‌, ಎಡಿಟಿಪಿ ನಾರಾಯಣಸ್ವಾಮಿ,ಎಇಇ  ಅವರೇ ಉತ್ತರಿಸಬೇಕು..

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *